ಶಿರಸಿ ಮಾರಿಕಾಂಬೆಯ ವೈಭವದ ತಾಣ


Team Udayavani, Oct 31, 2019, 4:02 AM IST

e-14

ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳವಾದ ಶಿರಸಿಯ ಮಾರಿಕಾಂಬಾ ದೇವಸ್ಥಾನ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು. ದೈವಿಕ ಶಕ್ತಿಯುಳ್ಳ ಈ ಕ್ಷೇತ್ರ ಅಷ್ಟೇ ಪಾರಂಪಾರಿಕ ಐತಿಹ್ಯವನ್ನು ಹೊಂದಿದೆ. ಶಿರಸಿಯ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪುನೀತರಾಗಿ ತಮ್ಮ ಅನುಭವ ಸಹಿತ ಕ್ಷೇತ್ರದ ಪೌರಾಣಿಕ ಹಿನ್ನೆಲೆಯನ್ನು ಈ ಲೇಖನದಲ್ಲಿ ನೋಡಬಹುದಾಗಿದೆ.

ಮಳೆಗಾಲದ ಚಳಿ ವಾತಾವರಣಕ್ಕೆ ಮನೆಯಿಂದ ಹೊರಕ್ಕೆ ಕಾಲಿಡದ ಹಿತೈಷಿಗಳನ್ನ ಒಟ್ಟುಗೂಡಿಸಿ ಬಸ್ಸು ಹತ್ತಿದ್ದು ಮಾರಿಕಾಂಬಾ ಸನ್ನಿಧಿಗೆ.. ಪ್ರವಾಸದ ಮುಖ್ಯ ಉದ್ದೇಶ ಮಾರಿಕಾಂಬಾ ದರ್ಶನದೊಂದಿಗೆ ಜೋಗದ ವೈಯ್ನಾರವನ್ನು ಕಣ್ತುಂಬಿಕೊಳ್ಳುವುದಾಗಿತ್ತು. ನಮ್ಮ ತಂಡವೂ ಶಿರಸಿ ಮೂಕಾಂಬಿಕಾ ದೇವಸ್ಥಾನ ಕಣ್ತುಂಬಿಕೊಳ್ಳಲು ಹೊರಟಿತು.

ಶಿರಸಿಯನ್ನು ತಲುಪಿದ ಕೂಡಲೇ ನಮ್ಮಲ್ಲೊಂದು ಭಕ್ತಿ-ಭಾವ ಮೈದೆಳೆಯುವಂದತೂ ಸತ್ಯ. ನಮ್ಮ ತಂಡವೂ ಎಲ್ಲ ಸಿದ್ಧತೆಗಳೊಂದಿಗೆ ದೇವಸ್ಥಾನದೆಡೆಗೆ ಹೊರಟೆವು. ಶಿರಸಿಯ ಹಿನ್ನೆಲೆಯತ್ತ ನೊಡುವುದಾದರೆ, ಶ್ರೀ ಮಾರಿಕಾಂಬಾ ದೇವಾಲಯವು ಕರ್ನಾಟಕದ ಪ್ರಸಿದ್ಧ ಹಿಂದೂ ದೇವಾಲಯಗಳಲ್ಲಿ ಒಂದು. ಮಲೆನಾಡ ತಪ್ಪಲಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ, ಶಿರಸಿಯಿಂದ ಬನವಾಸಿಗೆ ಹೋಗುವ ರಸ್ತೆಯ ಬಲಭಾಗದಲ್ಲಿ ಈ ದೇವಾಲಯವಿದೆ. ಈ ದೇವಾಲಯದ ಪ್ರವೇಶದ್ವಾರದ ಎರಡೂ ಕಡೆಗಳಲ್ಲಿ ದೊಡ್ಡದಾದ ಆನೆಗಳ ಶಿಲ್ಪಗಳಿವೆ. ದೇವಾಲಯದ ಒಳ ಪ್ರವೇಶಿಸುತ್ತಿದ್ದಂತೆಯೇ ವಿಶಾಲವಾದ ಸಭಾಭವನವಿದೆ.

ಸಭಾಭವನದ ಗೋಡೆಗಳ ಮೇಲೆ ವರ್ಣರಂಜಿತ ಚಿತ್ರಗಳಿವೆ. ಪ್ರಶಾಂತ ವಾತಾವರಣ ಮನಸ್ಸನ್ನು ಮುದಗೊಳಿಸುತ್ತದೆ. ಮುಂದೆ ಸಾಗಿದರೆ ದೇವಿಯ ಗರ್ಭಗುಡಿ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಸರ್ವಾಲಂಕೃತ ಭೂಷಿತಳಾದ ಶ್ರೀ ಮಾರಿಕಾಂಬಾ ದೇವಿಯ ವಿಗ್ರಹ, ದೇವಾಲಯದ ಸೌಂದರ್ಯ, ಘಂಟೆ-ಜಾಗಟೆಗಳ ಸದ್ದಿಗೆ ಪ್ರತಿಯೊಬ್ಬ ಭಕ್ತನ ಮನಸ್ಸು ಭಕ್ತಿಯಿಂದ ಮೈಪುಳಕ ಗೊಳ್ಳುತ್ತದೆ. 1688ರಲ್ಲಿ ಶ್ರೀ ಮಾರಿಕಾಂಬಾ ದೇವಿಯ ದೇವಸ್ಥಾನವನ್ನು ನಿರ್ಮಿಸಲಾಯಿತು.  ಈ ದೇವಾಲಯದ ಅರ್ಚಕರು ವಿಶ್ವಕರ್ಮದವರಂತೆ. ಈ ಮಾರಿಕಾಂಬಾ ದೇವಿಯು ದುರ್ಗಾದೇವಿಯ ಇನ್ನೊಂದು ಅವತಾರ ಎಂಬುವುದೇ ವಿಶೇಷ. ಕೆಂಪು ಚಂದನದ ಕಲ್ಪನೆಯಿಂದ ಕಡೆದ ಅಷ್ಟಭುಜವುಳ್ಳ ಏಳು ಅಡಿ ಎತ್ತರದ ಕಲಾಪೂರ್ಣ ವಿಗ್ರಹ, ಕೆಂಪು ಮೈಬಣ್ಣ, ಮಂದಹಾಸದ ಮುಖಾರವಿಂದ, ಶಕ್ತಿ ಮತ್ತು ಹಸ್ತದಲ್ಲಿರುವ ಎಲ್ಲ ಆಯುಧಗಳಿಂದಲೂ ದೇವಿ ಪರಿಭೂಷಿತಳು. ಬಲಮುರಿ ಶಂಖವೂ ಮಾರಿಕಾಂಬೆಯ ಬಲಹಸ್ತವೊಂದರದಲ್ಲಿದೆ. ಶಿರಸಿಯ ಧಾರ್ಮಿಕ ಪಂಗಡವರು, ಶಿರಸಿಯ ವೈಭವಕ್ಕೆ ಮತ್ತು ಸಂಪನ್ಮೂಲಕ್ಕೆ ತಾಯಿಯ ಬಲಮುರಿ ದರ್ಶನವೇ ಕಾರಣವೆಂದು ಬಲವಾಗಿ ನಂಬಿದ್ದಾರೆ. ಮೈಸೂರಿನ ಭವಾನಿ, ಕೊಲ್ಲೂರಿನ ಮೂಕಾಂಬಿಕೆ, ಶಿರಸಿಯ ಮಾರಿಕಾಂಬೆ ಇವರೆಲ್ಲಾ ಅಕ್ಕ-ತಂಗಿಯರೆಂದು ಬಣ್ಣಿಸುವುದುಂಟು. ಕರ್ನಾಟಕದ ಎಲ್ಲ ಮಾರಿಯಮ್ಮಗಳ ಹಿರಿಯ ಸಹೋ ದರಿಯಾದ ಈ ದೇವಿಯ ದೇವಾಲಯವನ್ನು “ದೊಡ್ಡಮ್ಮನ ದೇವಸ್ಥಾನ’ ಎಂದು ಕೂಡ ಕರೆಯುತ್ತಾರೆ.

ರಾಜ್ಯದ ಅತಿದೊಡ್ಡ ಜಾತ್ರೆಯೆಂಬ ಹೆಗ್ಗಳಿಕೆ 
ಶಿರಸಿಯ ಮಾರಿಕಾಂಬೆ ಜಾತ್ರೆ ಎರಡು ವರ್ಷಗಳಿಗೊಮ್ಮೆ ವಿಜೃಂಭಣೆಯಿಂದ ನಡೆಯುತ್ತದೆ. ಶಿರಸಿ ಮಾರಿಕಾಂಬಾ ಜಾತ್ರೆ ಅಥವಾ ಶಿರಸಿ ಮಾರಿಜಾತ್ರೆ ಅಥವಾ ಶಿರಸಿ ಮಾರೆಮ್ಮನವರ ಜಾತ್ರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ. ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ನಡೆಯುತ್ತದೆ. ಮುನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದು ಬರುತ್ತಿರುವ 9 ದಿನಗಳ ಈ ಜಾತ್ರೆಯನ್ನು ಕರ್ನಾಟಕದ ಅತಿ ದೊಡ್ಡ ಜಾತ್ರೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

ಈ ಜಾತ್ರೆಗೆ ದೇಶದ ಮೂಲೆ-ಮೂಲೆ ಗಳಿಂದ ಭಕ್ತಸಾಗರ ಹರಿದು ಬರುತ್ತದೆ. ಜಾನಪದ ಕಲೆಗಳ ಪ್ರದರ್ಶನಗಳು, ರಸ್ತೆಯ ಬದಿಗಳಲ್ಲಿ ಬಗೆ ಬಗೆಯ ಅಂಗಡಿ ಮುಗ್ಗಟ್ಟುಗಳು, ಝಗ-ಝಗಿಸುವ ದೀಪದ ಅಲಂಕಾರಗಳು ಜಾತ್ರೆಯ ಸೊಬಗನ್ನು ಹೆಚ್ಚಿಸುತ್ತವೆ. ಮೊದಲು ಜಾತ್ರೆಯ ಸಂದರ್ಭ ದಲ್ಲಿ ಕೋಣನ ಬಲಿಕೊಡುವ ಪದ್ಧತಿಯು ಜಾರಿಯಲ್ಲಿತ್ತು.

ಇಷ್ಟೆಲ್ಲಾ ಸಂಪೂರ್ಣ ಹಿನ್ನೆ°ಲೆ ಬುರುಡೆಯಲ್ಲಿ ಅಚ್ಚಾಗುತ್ತಿದ್ದಂತೆಯೇ ಜೋಗದ ಭೋರ್ಗರೆವ ಜಲ ರಸಧಾರೆ ಮುದದಿಂದ ಸ್ವಾಗತಿಸುತ್ತಿತ್ತು.. ಮಳೆಯ ಆರಂಭದ ಹಂತದಿಂದಾಗಿ ಜೋಗ ತುಂಬಿ ಹರಿಯುತ್ತಿದ್ದುರಿಂದ ಕೆಳಗಡೆಯ ಯಾಣಕ್ಕೆ ಪ್ರಯಾಣ ಅಸಾಧ್ಯವಾಗಿತ್ತು. ಆದರೂ ಮೇಲಿನ ಹಂತದಲ್ಲೇ ಮನೋ ರಂಜಿಸಿ, ಜೋಗವನ್ನ ಕಣ್ತುಂಬಿ ಕೊಂಡೆವು.

ಗಾಂಧೀಜಿಯಿಂದ ಅಹಿಂಸಾ ಪಾಠ
1933ರ ವೇಳೆ ಮಹಾತ್ಮಾ ಗಾಂಧಿ  ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಭೇಟಿ ನೀಡಿರುವ ಉÉಲೇಖಯಿದೆ. ಅನಂತರ ಗಾಂಧೀಜಿಯವರ ಅನುಯಾಯಿಗಳು ಜನಸಾಮಾನ್ಯರಿಗೆ ಅಹಿಂಸಾ ತತ್ತÌಗಳನ್ನು ಬೋಧಿಸಿ ಅವರ ಮೂಢನಂಬಿಕೆಗಳನ್ನು ತೊಡೆದು ಹಾಕಿ ಹಿಂಸಾತ್ಮಕವಾದ ಈ ಪ್ರಾಣಿಬಲಿಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾದರು ಎಂದು ಹೇಳಲಾಗುತ್ತದೆ. ಒಟ್ಟಿನಲ್ಲಿ ಈಗ ಜಾತ್ರೆಯ ಸಂದರ್ಭದಲ್ಲಿ ಕೋಣನ ಬಲಿಕೊಡುವ ಪದ್ಧತಿಯನ್ನು ನಿಷೇಧಿಸಲಾಗಿದೆ. ಶ್ರೀ ಮಾರಿಕಾಂಬಾ ದೇವಿಯ ದೇವಾಲಯದ ಸುತ್ತಲು ಗೋಡೆಗಳ ಮೇಲೆ ಹಿಂದಿನ ಕಾಲದ ಸುಂದರ ವರ್ಣಚಿತ್ರಗಳು, ರಾಮಾಯಣ ಮಹಾಭಾರತದ ಘಟನೆಗಳನ್ನು ವರ್ಣಿಸುವ ಚಿತ್ರಗಳು, ಶಿರಸಿಯ ಜಾತ್ರೆ, ಜಾತ್ರೆಯ ಸೊಬಗು ಪ್ರತಿಯೊಬ್ಬರ ಮನಸಿನಲ್ಲಿಯೂ ಅಚ್ಚಳಿಯದೇ ಉಳಿಯುವಂತದ್ದಾಗಿದೆ. ಒಟ್ಟಿನಲ್ಲಿ ಇಲ್ಲಿನ ಸೊಬಗು ಸೌಂದರ್ಯ ವರ್ಣಿಸಲು ಅಸಾಧ್ಯವಾದುದು.

ರೂಟ್‌ ಮ್ಯಾಪ್‌
1 ಮಂಗಳೂರಿನಿಂದ ಉಡುಪಿ- ಕುಂದಾಪುರ ಮಾರ್ಗವಾಗಿ 260 ಕಿ.ಮೀ. ದೂರದಲ್ಲಿ ಶಿರಸಿಯಿದೆ.
2 ರಾ.ಹೆ. ಆಗಿರುವುದರಿಂದ ಎಲ್ಲ ಸೌಲಭ್ಯಗಳು ದೊರೆಯುತ್ತವೆ.
3 ಶ್ರೀ ಕ್ಷೇತ್ರ ಶಿರಸಿ ಮೂಕಾಂಬಿಕಾ ದೇವ ಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಸಿಗುತ್ತದೆ.
4 ಜೋಗಫಾಲ್ಸ್‌, ಯಾಣ ಇವು ಹತ್ತಿರದ ಸ್ಥಳಗಳು.

-  ಗಣೇಶ್‌ ಪವಾರ್‌, ಮಂಗಳೂರು

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.