ತುಳುನಾಡಿನ ವೀರ ಪುರುಷರ ತಾಯಿಯ ಕಥೆ ಈಗ ಸಿನೆಮಾ!
Team Udayavani, Jan 3, 2019, 7:02 AM IST
ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ ಕಥೆ ಈಗ ಸಿನೆಮಾ ರೂಪದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸೂರ್ಯೋದಯ ಪೆರಂಪಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ತುಳುನಾಡಿನ ಜನಪದ ಮಹಾಕಾವ್ಯವಾದ ಬೈದೆರ್ಲ ಪಾಡ್ದನದ ಬಗ್ಗೆ ಅಧ್ಯಯನ ಮಾಡಿದ್ದ ನಿರ್ದೇಶಕರು, ಹತ್ತು ವರ್ಷಗಳ ಹಿಂದೆಯೇ ‘ವಿದ್ಯಾಕ್ರಾಂತಿಯ ವೀರರು ಕೋಟಿ ಚೆನ್ನಯರು’ ಎಂಬ ಕೃತಿ ರಚಿಸಿದ್ದರು. ಹಾಗೆಯೇ ತುಳುನಾಡಿನಲ್ಲಿ ಆರಾಧನೆಗೊಳ್ಳುತ್ತಿರುವ ಗರಡಿ ಆಲಯಗಳನ್ನು ನಿರ್ಮಿಸುವ ಬಗ್ಗೆಯೂ ಈ ಮೊದಲು ಟೆಲಿ ಸಿನೆಮಾ ಮಾಡಿದ್ದರು. ಈ ಸಿನೆಮಾಕ್ಕಾಗಿ 500 ವರ್ಷಗಳ ಹಿಂದಿನ ಕಾಲವನ್ನು ಸೃಜಿಸಲಾಗಿದೆ. ಅಂದಿನ ಕಾಲದಲ್ಲಿದ್ದ ಸನ್ನಿವೇಶವನ್ನು ಕಟ್ಟಿಕೊಡಲಾಗಿದೆ. ಆಗಿನ ಸಂದರ್ಭಕ್ಕೆ ಸರಿಹೊಂದುವ ಭವ್ಯ ಮನೆಗಳ ಸೆಟ್‌ಗಳನ್ನು ನಿರ್ಮಿಸಿ, ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳ ಓರಣಗಳನ್ನು, ತುಳುನಾಡಿನ ಅಗೋಚರ ಸಂಪ್ರದಾಯಗಳ ಕಟ್ಟುಪಾಡುಗಳನ್ನು ಈ ಚಿತ್ರದಲ್ಲಿ ಬಿಂಬಿಸಲಾಗಿದೆ.
ದೇವರಾಜ್ ಪಾಲನ್, ರಾಜ್‌ಕೃಷ್ಣ, ಅಮಿತ್‌ರಾವ್ ಅವರ ಸಹನಿರ್ದೇಶನ ಹಾಗೂ ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗ್ಡೆ ಬಿಜ್ರಿ ಅವರು ನಿರ್ಮಾಣ ಜವಾಬ್ದಾರಿ ವಹಿಸಿದ್ದಾರೆ. ಕಲಾವತಿ ದಯಾನಂದ್ ಅವರ ಜತೆಗೆ ಸೂರ್ಯೋದಯ್ ಪೆರಂಪಳ್ಳಿ,ಲಹರಿ ಕೋಟ್ಯಾನ್, ಸುರೇಶ್ ಸಾಲ್ಯಾನ್, ಕಾಲೇಶ್ ಹಿನ್ನೆಲೆ ಗಾಯನವಿದೆ.
ತುಳುವ ಮಣ್ಣಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ವೀರರಾದ ‘ಕೋಟಿ ಚೆನ್ನಯ’ರ ತಾಯಿ ‘ದೇಯಿ ಬೈದ್ಯೆತಿ’ಯ ಜೀವನಗಾಥೆಯನ್ನು ಸಿನೆಮಾದಲ್ಲಿ ತೋರಿಸಲಾಗಿದೆ. ಸಂಶೋಧಕರಾದ ಬನ್ನಂಜೆ ಬಾಬು ಅಮೀನ್, ದಾಮೋದರ್ ಕಲ್ಮಾಡಿ, ಡಾ|ಗಣನಾಥ್ ಶೆಟ್ಟಿ ಎಕ್ಕಾರ್, ಚೆಲುವಾರಾಜ್ ಪೆರಂಪಳ್ಳಿ, ಬಾಬು ಶಿವಪೂಜಾರಿ ಮುಂಬಯಿಯವರ ಖ್ಯಾತ ಸಂಶೋಧಕರ ಆಲೋಚನೆಗಳನ್ನು ಈ ಸಿನೆಮಾದಲ್ಲಿ ಪ್ರತಿಬಿಂಬಿಸಲಾಗಿದೆ. 2 ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ಸಿನೆಮಾ ತಂಡದ ಶ್ರಮ ಕೆಲವೇ ದಿನದಲ್ಲಿ ಪ್ರತಿಧ್ವನಿಸಲಿದೆ.
ಕನ್ನಡ, ತಮಿಳು, ತುಳು ಚಿತ್ರರಂಗದಲ್ಲಿ ಸುಮಾರು 25 ವರ್ಷಗಳ ಕಾಲ ದುಡಿದಿರುವ ಸೂರ್ಯೋದಯ್ ಪೆರಂಪಳ್ಳಿ ನಿರ್ದೇಶನದ ಚೊಚ್ಚಲ ಚಲನಚಿತ್ರ ಇದು. ಭಾಸ್ಕರ್ ರಾವ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ರವಿ ಸುವರ್ಣ ಮತ್ತು ಹರೀಶ್ ಪೂಜಾರಿ ಕುಕ್ಕುಂಜೆ ಅವರ ಛಾಯಾಗ್ರಹಣ, ಮೋಹನ್ ಎಲ್. ಸಂಕಲನ ಮಾಡಿದ್ದಾರೆ. ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಕಲಾ ನಿರ್ದೇಶಕರು. ಉಮೇಶ್ ಪೂಜಾರಿ ಬೆಳ್ತಂಗಡಿ ಸಹನಿರ್ಮಾಪಕರು.
ಸೀತಾ ಕೋಟೆ, ಚೇತನ್ ರೈ ಮಾಣಿ, ಸೌಜನ್ಯಾ ಹೆಗ್ಡೆ, ಅಮಿತ್ ರಾವ್, ಎಂ.ಕೆ. ಮಠ, ಪ್ರಕಾಶ್ ಧರ್ಮನಗರ, ಅಶ್ವಿನಿ ಕೋಟ್ಯಾನ್, ಕಾಜೋಲ್ ಕುಂದರ್, ಪ್ರವೀಣ್ ಶೆಟ್ಟಿ, ವಿಜಯ್ ಕುಮಾರ್, ಸುನಿಲ್ ನೆಲ್ಲಿಗುಡ್ಡೆ, ಲಕ್ಷ್ಮಣ್ ಮಲ್ಲೂರ್, ಸುನಿಲ್ ಪಲ್ಲಮಜಲು, ಎಚ್.ಕೆ. ನಯನಾಡು, ಸುನೀತಾ ಎಕ್ಕೂರ್, ಮಂಜುಭಾಷಿನಿ, ಕಿರ್ಲೋಸ್ಕರ್ ಸತ್ಯನಾರಾಯಣ್, ಸುಜಾತಾ ಶೆಟ್ಟಿ, ಮೋನಿಕಾ ಆಂಡ್ರದೆ, ನಾಗರಾಜ್ ವರ್ಕಾಡಿ, ಸುನಿಲ್ ಪಲ್ಲಮಜಲ್, ಭಾಸ್ಕರ್ ಮಣಿಪಾಲ್, ಎಂ. ಸುಬ್ರಹ್ಮಣ್ಯ ಪೈ, ಸೂರ್ಯೋದಯ್, ಪವಿತ್ರಾ ಶೆಟ್ಟಿ ಕಟಪಾಡಿ, ಇಡ್ಲಿ ರಾಜ, ಶ್ರೀನಾಥ್ ವಶಿಷ್ಟ, ತಾರನಾಥ್ ಸುರತ್ಕಲ್, ಪ್ರಕಾಶ್ ಭಟ್ ಪಡುಬೆಳ್ಳೆ, ಆನಂದ್, ಸಂಗೀತ, ರಾಜೇಶ್ ಸೈಲಾರ್ಕ್, ಯಶಸ್ಸ್ ಸೂರ್ಯ, ಶ್ರೇಜಲ್ ಪೂಜಾರಿ, ಸಮೃದ್ಧಿ ಪ್ರಕಾಶ್ ಭಟ್, ವರ್ಷ ಸಿ. ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.