ಸ್ಯಾಂಡಲ್‌ವುಡ್‌ನ‌ಲ್ಲಿ ತುಳುವರ ಕೆಮರಾ, ಆ್ಯಕ್ಷನ್‌, ಸ್ಟಾರ್ಟ್‌..!


Team Udayavani, Mar 27, 2017, 2:37 AM IST

Arjun-Weds-26-3.jpg

ಕೋಸ್ಟಲ್‌ವುಡ್‌ ಶೈನಿಂಗ್‌ನಲ್ಲಿದೆ. ಇಲ್ಲಿನ ಒಂದೊಂದು ಸಿನೆಮಾಗಳು ಒಂದೊಂದು ರೂಪದಲ್ಲಿ ಸುದ್ದಿಯಾಗುತ್ತಿದೆ. ವಿಶೇಷವೆಂದರೆ ಕೋಸ್ಟಲ್‌ವುಡ್‌ ಸಿನೆಮಾಗಳು ಸ್ಯಾಂಡಲ್‌ವುಡ್‌ನ‌ಲ್ಲೂ ಚರ್ಚೆಗೆ ವೇದಿಕೆ ಒದಗಿಸುತ್ತಿದೆ. ಹೀಗಾಗಿಯೇ ಇಲ್ಲಿನ ಸಿನೆಮಾ ನಿರ್ದೇಶಕರಿಗೆ ಸ್ಯಾಂಡಲ್‌ವುಡ್‌ ಆಫರ್‌ಗಳು ಭರ್ಜರಿಯಾಗಿ ಸಿಗುತ್ತಿವೆ. ಕರಾವಳಿ ಭಾಗದಲ್ಲಿ ವಿಭಿನ್ನ ಟೈಟಲ್‌ಗ‌ಳ ಮೂಲಕ ಸೃಷ್ಟಿಯಾಗುತ್ತಿರುವ ತುಳು ಸಿನೆಮಾಗಳು ತುಳುವೇತರರಲ್ಲಿ ಕುತೂಹಲ ಮೂಡಿಸಿವೆೆ. ಅವರನ್ನು ಇತ್ತ ಆಕರ್ಷಿಸುವಂತೆ ಮಾಡಿದೆ. ಕೆಲವು ನಿರ್ಮಾಪಕರು ತುಳು ಚಿತ್ರ ನಿರ್ಮಾಣಕ್ಕೂ ಮುಂದಾಗಿದ್ದಾರೆ. ಇದರ ಮಧ್ಯೆ ತುಳುವರನ್ನೇ ಆಯ್ಕೆ ಮಾಡಿ ಅವರ ನಿರ್ದೇಶನದಲ್ಲಿಯೇ ಕನ್ನಡ ಸಿನೆಮಾ ಮಾಡಲು ನಿರ್ಮಾಪಕರ ದೊಡ್ಡ ತಂಡ ಸ್ಯಾಂಡಲ್‌ವುಡ್‌ನ‌ಲ್ಲಿ ಸಿದ್ಧವಾಗಿದೆ.

‘ಷಟರ್‌ದುಳಯಿ’ ಚಿತ್ರ ನಿರ್ದೇಶಕ ಶಶಿಕಾಂತ್‌ ಗಟ್ಟಿ ಕನ್ನಡದಲ್ಲಿ ‘ಎಕ್ಕ ರಾಜ ರಾಣಿ’ ಎಂಬ ಸಿನೆಮಾ ನಿರ್ದೇಶಿಸುತ್ತಿದ್ದಾರೆ. ‘ಮಾರ್ನೆಮಿ’ಯ ಮಿಥುನ್‌ ಸುವರ್ಣ ‘ರೂಟ್‌ ನಂ.3’ ಎಂಬ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ‘ಗುಡ್ಡೆದ ಭೂತ’ದ ಮೂಲಕ ಅಚ್ಚರಿ ಮೂಡಿಸಿದ ಸಂದೀಪ್‌ ‘ನಾನು ಮತ್ತು ನನ್ನ ದೇವರು’ ಎಂಬ ಮಕ್ಕಳ ಸಿನೆಮಾದಲ್ಲಿ ತಲ್ಲೀನರಾಗಿದ್ದಾರೆ. ‘ರಂಬಾರೊಟ್ಟಿ’, ‘ತೊಟ್ಟಿಲ್‌’ ಚಿತ್ರದ ಪ್ರಜ್ವಲ್‌ ಕೂಡ ಕನ್ನಡ ಸಿನೆಮಾ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಎಕ್ಕಸಕ’ ಮೂಲಕ ಸ್ಟಾರ್‌ ಗಿರಿ ಪಡೆದು, ‘ಪಿಲಿಬೈಲ್‌ ಯಮುನಕ್ಕ’ ಮೂಲಕ ಎವರ್‌ಗ್ರೀನ್‌ ಸ್ಟಾರ್‌ ಮಾನ್ಯತೆ ಗಳಿಸಿದ ಸೂರಜ್‌ ಶೆಟ್ಟಿ ಸ್ಯಾಂಡಲ್‌ವುಡ್‌ ಲೋಕದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 

ಈಗಾಗಲೇ ಕನ್ನಡ ಚಿತ್ರದ ನಿರ್ಮಾಪಕರು ಇವರ ಜತೆಗೆ ಒಂದು ಹಂತದ ಮಾತುಕತೆ ನಡೆಸಿದ್ದು, ಅಂತಿಮ ನಿರ್ಧಾರ ಆಗಿಲ್ಲ. ‘ಚಾಲಿಪೋಲಿಲು’ ಚಿತ್ರದ ನಿರ್ದೇಶಕ ವೀರೇಂದ್ರ ಶೆಟ್ಟಿಯವರೂ ಕನ್ನಡ ಚಿತ್ರದ ಸಿದ್ಧತೆಯಲ್ಲಿದ್ದಾರಂತೆ.! ಈ ಮಧ್ಯೆ ಕನ್ನಡದ ನಿರ್ದೇಶಕರು ಕೂಡ ತುಳುವಿನತ್ತ ಬರಲಾರಂಭಿಸಿದ್ದಾರೆ. ಹಿಂದಿನಿಂದಲೂ ಈ ಪರಿಪಾಠ ಇತ್ತಾದರೂ, ಈಗ ಸ್ವಲ್ಪ ಅಧಿಕವೇ ಇದೆ. ಇನ್ನೇನು ಕೆಲವೇ ದಿನದಲ್ಲಿ ತೆರೆ ಕಾಣುವ ‘ಚಾಪ್ಟರ್‌’ ಚಿತ್ರದ ನಿರ್ದೇಶಕ ಮೋಹನ್‌ ಭಟ್ಕಳ್‌, ‘ಕಟಪಾಡಿ ಕಟ್ಟಪ್ಪೆ’ ನಿರ್ದೇಶಕ ಚೇತನ್‌ ಕುಮಾರ್‌, ‘ಸುಗ್ಗಿ’ ಚಿತ್ರದ ಎಸ್‌.ರಾಜು ಕೋಸ್ಟಲ್‌ವುಡ್‌ಗೆ ಬಂದವರು. 

ಕಲೆ ಒಂದು ಧರ್ಮ. ಧರ್ಮದ ಮೂಲಕ ಕಲೆ ಎಂಬ ವಿಶಿಷ್ಟ ಗ್ರಹಿಕೆಯ ಮಂದಿಯ ನಡುವೆ ನಡೆಯುವ ಮನೋಜ್ಞ ಕಥಾನಕ ‘ಮದಿಪು’ ಚಿತ್ರ ಈಗಾಗಲೇ ಸ್ಯಾಂಡಲ್‌ವುಡ್‌ನ‌ಲ್ಲಿ ಗಮನಸೆಳೆದಿದೆ. ಶೀಘ್ರದಲ್ಲಿಯೇ ಬಿಡುಗಡೆಯಾಗುವ ಈ ಚಿತ್ರ ಈಗಾಗಲೇ ಸ್ಯಾಂಡಲ್‌ವುಡ್‌ ಶ್ರೇಷ್ಠ ಕಲಾವಿದರ ಮೂಲಕ ಮೆಚ್ಚುಗೆ ಪಡೆದು, ಕನ್ನಡದಲ್ಲೂ ಅವತರಿಸುವ ಸೂಚನೆ ದೊರಕಿದೆ. ಖ್ಯಾತ ನಿರ್ದೇಶಕ ಚೇತನ್‌ ಮುಂಡಾಡಿ ಈ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೆಸರು ಪಡೆದಿದ್ದಾರೆ. ‘ಚಾವಡಿ’ ಎನ್ನುವ ಸಿನೆಮಾ ಇವರ ಕೈಯಲ್ಲಿದೆ. 

ಮಂಗಳೂರು ಬಂದರ್‌ನಲ್ಲಿ ‘ನಿಶ್ಶಬ್ದ’
ಡೇಂಜರ್‌ ಝೋನ್‌ ಚಿತ್ರದ ಮೂಲಕ ಹಾರರ್‌ ಕಥೆ ಕಟ್ಟಿಕೊಟ್ಟ ದೇವರಾಜ್‌ ಕುಮಾರ್‌ ಈಗ ಮಂಗಳೂರಿನ ರೂಪ್‌ ಶೆಟ್ಟಿ ಮೂಲಕ ಇನ್ನೊಂದು ಕನ್ನಡ ಚಿತ್ರದ ಬ್ಯುಸಿಯಲ್ಲಿದ್ದಾರೆ. ‘ನಿಶ್ಶಬ್ದ-2’ ಚಿತ್ರ ಫಟಾಫಟ್‌ ಶೂಟಿಂಗ್‌ ಪೂರ್ಣಗೊಳಿಸುತ್ತಿದೆ. ಮಂಗಳೂರು, ಬೆಂಗಳೂರು ಸಹಿತ ಬೇರೆ ಬೇರೆ ಭಾಗದಲ್ಲಿ ಚಿತ್ರದ ಶೂಟಿಂಗ್‌ ಲೋಕೇಶನ್‌ಗಳು ಇವೆ. ಅದರಲ್ಲೂ ವಿಲನ್‌ಗಳ ಜತೆ ಕಾದಾಡುವ ಒಂದು ಸೀನ್‌ ಮಂಗಳೂರಿನ ಜನನಿಬಿಡ ಬಂದರ್‌ನಲ್ಲಿ ಇತ್ತೀಚೆಗೆ ನಡೆದಿದೆ.

‘ಪತ್ತನಾಜೆಡ್‌ ಪತ್ತ್ ಪೋಂಡು’
‘ಪತ್ತನಾಜೆಡ್‌ ಪತ್ತ್ ಪೋಂಡಲ, ಬಿತ್ತ್ ಕೊಡಿಪುಂಡು ಎಂಚನಾ.. ಮಿತ್ತ ಲೋಕೋದ ಸೊತ್ತು ಭೂಮಿಡ್‌, ಗತ್ತ್ಡೇ ನಿಲೆ ಆಪುಂಡು…’ ಈ ಪದಗಳಲ್ಲಿ ಹಿಡಿದಿಡುವ ಈ ಗಟ್ಟಿ ಮುಟ್ಟಾದ ಹಾಡು ತುಳು ಚಿತ್ರ ಜಗತ್ತಿನಲ್ಲಿ ಹೊಸ ಸಾಧ್ಯತೆಗಳನ್ನು ಬರೆದಂತಿದೆ. ಬಿಡುಗಡೆಗೆ ಸಿದ್ಧವಾಗಿರುವ ‘ಪತ್ತನಾಜೆ’ ತುಳು ಚಿತ್ರದ ಟೈಟಲ್‌ ಸಾಂಗ್‌ ಇದು. ಬರೆದವರು ಕವಿ- ಸಾಹಿತಿ- ಪ್ರಾಧ್ಯಾಪಕ ಭಾಸ್ಕರ್‌ ರೈ ಕುಕ್ಕುವಳ್ಳಿ. ತೋನ್ಸೆ ವಿಜಯ್‌ ಕುಮಾರ್‌ ಶೆಟ್ಟಿಯವರ ಸಾರಥ್ಯದ ಈ ಚಿತ್ರದ ಹಾಡನ್ನು ಅಜಯ್‌ ವಾರಿಯರ್‌ ಹಾಡಿದ್ದಾರೆ. ವಿ. ಮನೋಹರ್‌ ಸಂಗೀತ, ಕೋಕಿಲ ವಿಜಯ್‌ ಅವರ ಸಂಯೋಜನೆ ಇದೆ. ಕುಕ್ಕುವಳ್ಳಿ ಬರೆದ ‘ಭಾವರಂಗಿತ ಪದೊತ ಪುತೊ§ಳಿ’ ಹಾಡನ್ನು ಪಟ್ಲ ಸತೀಶ್‌ ಶೆಟ್ಟಿ ಹಾಡಿದ್ದಾರೆ.

– ದಿನೇಶ್‌ ಇರಾ

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.