ಏರ್‌ ಕೂಲರ್‌ ಈಗ ಬಿಸಿ ಮಸಾಲೆದೋಸೆ


Team Udayavani, Mar 13, 2017, 3:15 PM IST

Cooler-15-3.jpg

ಬೇಸಗೆ ಬಂದಾಕ್ಷಣ ತಂಪು ಗಾಳಿಯ ಹುಡುಕಾಟ ಆರಂಭವಾಗುತ್ತದೆ. ಫ್ಯಾನ್‌ ಗಾಳಿ ಮಧ್ಯಾಹ್ನದ ವೇಳೆಗೆ ಬಿಸಿಗಾಳಿ ನೀಡುತ್ತದೆ.  ಎಸಿ ದುಬಾರಿ ಮಾತ್ರವಲ್ಲ  ಇದಕ್ಕಾಗಿ ವಿದ್ಯುತ್‌ ಕೂಡ ಸಾಕಷ್ಟು ಹೆಚ್ಚು ಖರ್ಚಾಗುತ್ತದೆ. ಹೀಗಾಗಿ ಹೆಚ್ಚಿನವರ ಆಯ್ಕೆ ಏರ್‌ಕೂಲರ್‌ಗಳು. ತಂಪಾದ, ಪರಿಶುದ್ಧ ಗಾಳಿಯೊಂದಿಗೆ ನಿರ್ವಹಣೆಯೂ ಸುಲಭ.

ದಿನ ಕಳೆದಂತೆ ಬಿಸಿಲಿನ ತಾಪ ಅಧಿಕಗೊಳ್ಳುತ್ತಿದ್ದು, ಇದರಿಂದ ಪಾರಾಗಲು ಜನ ವಿಧ ವಿಧದ ಪ್ಲ್ಯಾನ್‌ಗಳನ್ನು ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಎಸಿ, ಫ್ಯಾನ್‌, ಏರ್‌ಕೂಲರ್‌ಗಳು ದಿನದಿಂದ ದಿನಕ್ಕೆ ಬೇಡಿಕೆ ಪಡೆದುಕೊಳ್ಳುತ್ತಿವೆ. ಬಹುತೇಕ ಕಡೆಗಳಲ್ಲಿ ಫ್ಯಾನ್‌ಗಳಿಗೆ ಬೇಡಿಕೆ ಇದ್ದರೂ, ಅದರ ಜತೆ ಏರ್‌ಕೂಲರ್‌ಗಳೂ ಬೇಡಿಕೆ ಹೆಚ್ಚಿಸಿಕೊಂಡಿವೆ. ಫ್ಯಾನ್‌ಗಳಿಗಿಂತ ಏರ್‌ಕೂಲರ್‌ಗಳು ಹೆಚ್ಚು ತಂಪು ಗಾಳಿ ನೀಡುತ್ತಿರುವುದರಿಂದ ಜನರು ಇಂತಹ ಕೂಲರ್‌ಗಳನ್ನು ಖರೀದಿಸಲು ಇಚ್ಛಿಸುತ್ತಾರೆ. ಇದಕ್ಕಿಂತ ಎಸಿ ಹೆಚ್ಚಿನ ತಂಪನ್ನು ನೀಡಿದರೂ, ಅದು ದುಬಾರಿ ಮತ್ತು ತೆರೆದ ಪ್ರದೇಶಗಳಿಗೆ ಅನ್ವಯವಾಗದ ಹಿನ್ನೆಲೆಯಲ್ಲಿ ಕೂಲರ್‌ಗಳಿಗೆ ಬೇಡಿಕೆ ಇದೆ. ಕೂಲರ್‌ಗಳನ್ನು ಖರೀದಿಸುವಾಗ ಅದರ ನಿರ್ವಹಣೆಯ ಕುರಿತು ಕೂಡ ಚಿಂತಿಸಬೇಕಾಗುತ್ತದೆ. ನಾವು ಸಾಮಾನ್ಯವಾಗಿ ಫ್ಯಾನ್‌ಗಳನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ. ಗಾಳಿಯ ಉದ್ದೇಶದ ಜತೆಗೆ ಸೊಳ್ಳೆಯನ್ನು ದೂರ ಮಾಡುವುದಕ್ಕಾಗಿ ಎಲ್ಲಾ ಕಾಲದಲ್ಲೂ ಫ್ಯಾನ್‌ ಬಳಕೆಯಾಗುತ್ತದೆ. ಹೀಗಾಗಿ ಹೆಚ್ಚು ನಿರ್ವಹಣೆಯ ಅಗತ್ಯವಿರುವುದಿಲ್ಲ. ಆದರೆ ಕೂಲರ್‌ಗಳನ್ನು ಹೆಚ್ಚಾಗಿ ಬೇಸಗೆಯಲ್ಲಿ ಉಪಯೋಗಿಸಿ ಬಳಿಕ ಹಾಗೇ ಇಡುವುದರಿಂದ ನಿರ್ವಹಣೆಯ ಕುರಿತು ಕಾಳಜಿ ವಹಿಸಬೇಕು.

2 ವಿಧದಲ್ಲಿ ಉಪಯೋಗ
ಏರ್‌ಕೂಲರ್‌ಗಳನ್ನು ನೀರು ಹಾಕಿ ಅಥವಾ ನೀರು ಹಾಕದೆಯೂ ಉಪಯೋಗಿಸಬಹುದು. ನೀರಿನ ಬದಲು ಐಸ್‌ ಹಾಕಿಯೂ ಉಪಯೋಗಿಸುತ್ತಾರೆ. ಐಸ್‌ ಹಾಕಿದಾಗ ಹೆಚ್ಚು ತಂಪಾದ ಗಾಳಿ ಬರುತ್ತದೆ. ಯಾವುದೂ ಹಾಕದಿದ್ದರೆ ಕೇವಲ ಗಾಳಿ ಮಾತ್ರ ಬರುತ್ತದೆ. ನೀರು ಹಾಕುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದರೆ ಕೂಲರ್‌ಗಳಲ್ಲಿ ಹೆಚ್ಚಾಗಿ ಗೇಜ್‌ಗಳಿರುತ್ತವೆ. ಅದನ್ನು ನೋಡಿಕೊಂಡು ಹೈಗಿಂತ ಸ್ವಲ್ಪ ಕಡಿಮೆ ನೀರು ಹಾಕಿದರೆ ಉತ್ತಮ. ಇಲ್ಲದೇ ಇದ್ದಲ್ಲಿ ಓವರ್‌ ಫ್ಲೋ ಆಗುವ ಸಾಧ್ಯತೆ ಇರುತ್ತದೆ. ಓವರ್‌ ಫ್ಲೋ ಆದರೂ ಅದು ಪ್ಲಾಸ್ಟಿಕ್‌ ಕವರ್‌ನ ಮೇಲೆ ಬೀಳುವುದರಿಂದ ಯಾವುದೇ ತೊಂದರೆ ಇರುವುದಿಲ್ಲ. ಜತೆಗೆ ಇದರ ಮೋಟಾರ್‌ ನೀರಿನಲ್ಲೇ ಇರುವುದರಿಂದ ಶಾಕ್‌ ಹೊಡೆಯುವ ಸಾಧ್ಯತೆಯೂ ಇಲ್ಲ. 

ನಿರ್ವಹಣೆ ಹೇಗೆ?
ಕೂಲರ್‌ಗಳ ನಿರ್ವಹಣೆಯ ಕುರಿತು ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಇವುಗಳಿಗೆ ಧೂಳು ಹೆಚ್ಚು ತೊಂದರೆ ನೀಡುವುದರಿಂದ ಧೂಳನ್ನು ತೆಗೆಯುವ ಕೆಲಸ ಮಾಡಬೇಕಾಗುತ್ತದೆ. ಮುಖ್ಯವಾಗಿ ಏರ್‌ಕೂಲರ್‌ನಲ್ಲಿ ಅನಿಕೋಮ್‌ ಎಂಬ ಪಾರ್ಟ್‌ ಬರುತ್ತದೆ. ಇದನ್ನು ಕನಿಷ್ಠ 15 ದಿನಗಳಿಗೊಮ್ಮೆ ಶುಚಿ ಮಾಡುತ್ತಿರಬೇಕು. ಇಲ್ಲದೇ ಇದ್ದಲ್ಲಿ ದುರ್ವಾಸನೆ ಬರುವ ಸಾಧ್ಯತೆ ಇದೆ. ಅದನ್ನು ಕೂಲರ್‌ನಿಂದ ಹೊರ ತೆಗೆದು ಫ್ರೆಝರ್‌ನಿಂದ ನೀರು ಹಾಕಿದಾಗ ಅದರಲ್ಲಿರುವ ಧೂಳು ಹೋಗುತ್ತದೆ. ಇಲ್ಲದೇ ಇದ್ದಲ್ಲಿ ನೀರಿನಲ್ಲಿ ಹಾಕಿಟ್ಟರೂ ಯಾವುದೇ ತೊಂದರೆ ಇರುವುದಿಲ್ಲ. ನೀರು ಹಾಕಿ ಬ್ರಶ್‌ನಿಂದ ಉಜ್ಜಿದರೂ ಕೊಳೆ ಹೋಗುತ್ತದೆ. ನೀರಿನಲ್ಲಿ ತೊಳೆದ ಬಳಿಕ ಬಿಸಿಲಿನಲ್ಲಿ ಒಣಗಿಸಿ ಮತ್ತೆ ಉಪಯೋಗಿಸಬೇಕು. ಹೀಗೆ ಮಾಡಿದಾಗ ಹೆಚ್ಚಿನ ಯಾವುದೇ ರೀತಿಯ ತೊಂದರೆ ಕಂಡುಬರುವುದಿಲ್ಲ. ಉಳಿದ ಸಮಸ್ಯೆಗಳಿಗೆ ಕಂಪೆನಿ ಗ್ಯಾರಂಟಿ ಹಾಗೂ ಸರ್ವೀಸ್‌ ಕೂಡ ಇದೆ.

ವೆರೈಟಿಗಳು ಹೇಗಿವೆ?
ಕೂಲರ್‌ಗಳಲ್ಲಿ ಸಾಕಷ್ಟು ವೆರೈಟಿಗಳನ್ನು ಕಾಣಬಹುದು. ಕಂಪೆನಿಗೆ ಅನುಗುಣವಾಗಿ ಅದರ ಮಾಡೆಲ್‌ಗ‌ಳು ಬದಲಾಗುತ್ತವೆ. ಎಲ್ಲ ಕಂಪೆನಿಗಳು ಕೂಡ ತಮ್ಮದೇ ಆದ ಮಾಡೆಲ್‌ಗ‌ಳಲ್ಲಿ ಕೂಲರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ. ಕೆಲವೊಂದು ಹೆಚ್ಚು ಉದ್ದವಿದ್ದು, ದೂರದವರೆಗೆ ತಂಪು ಗಾಳಿ ನೀಡಿದರೆ, ಇನ್ನು ಕೆಲವು ಅಗಲವಾಗಿದ್ದು, ಹೆಚ್ಚು ಅಗಲಕ್ಕೆ ಗಾಳಿ ನೀಡುತ್ತವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಎಲ್ಲ ಕಂಪೆನಿಗಳ ಸುಮಾರು 3,500 ರೂ.ಗಳಿಂದ 10,000 ರೂ.ಗಳವರೆಗಿನ ಕೂಲರ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದು ನೈಸರ್ಗಿಕ ಗಾಳಿಯ ಅನುಭವವನ್ನು ನೀಡುತ್ತಿರುವುದರಿಂದ ಜನರು ಇಷ್ಟ ಪಡುತ್ತಾರೆ. 

ನಿರ್ವಹಣೆ ಅಗತ್ಯ
ಫ್ಯಾನ್‌ಗಳಲ್ಲಿ ಬಿಸಿ ಗಾಳಿ ಬರುತ್ತದೆ. ಆದರೆ ಕೂಲರ್‌ನ ಮುಂದೆ ಕೂತಾಗ ಮರದಡಿಯಲ್ಲಿ ಕೂತ ಅನುಭವವಾಗುತ್ತದೆ. ಹೀಗಾಗಿ ಜನ ಅದನ್ನು ಹೆಚ್ಚು ಇಷ್ಟಪಡುತ್ತಾರೆ. ಸೂಕ್ತ ರೀತಿ ನಿರ್ವಹಣೆ ಮಾಡುವುದರಿಂದ ಯಾವುದೇ ತೊಂದರೆ ಬರುವುದಿಲ್ಲ. ನಿರ್ವಹಣೆ ಮಾಡದೇ ಇದ್ದರೆ ಗಾಳಿಯಲ್ಲಿ ದುರ್ವಾಸನೆ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಏರ್‌ಕೂಲರ್‌ ತಂತ್ರಜ್ಞರಾದ ಶ್ರೀನಿವಾಸ್‌ ಮೊಯಿಲಿ ಕುಡುಪು.

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.