ವಾಷಿಂಗ್ ಮೆಷಿನ್ : ನಿರ್ವಹಣೆ ಸರಿಯಾಗಿದ್ದರೆ ಸಮಸ್ಯೆಯಿಲ್ಲ
Team Udayavani, Feb 15, 2017, 11:40 AM IST
ಯಂತ್ರಗಳ ಬಳಕೆಯಲ್ಲಿ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು ದುಬಾರಿ ಖರ್ಚನ್ನೇ ಮಾಡಿಸುತ್ತದೆ. ವಾಷಿಂಗ್ ಮೆಷಿನ್ ನಿರ್ವಹಣೆಯನ್ನು ಅರಿಯದಿದ್ದರೆ ದುಬಾರಿ ದಂಡ
ತೆರಬೇಕಾದೀತು. ಹೀಗಾಗಿ ಬಳಸುವ ಮುನ್ನ ತಿಳಿದುಕೊಳ್ಳಿ.
ಪ್ರಾಚೀನ ಕಾಲದಲ್ಲಿ ಹೊಗೆಯಿಂದ ಉಜ್ಜಿ ಬಟ್ಟೆಗಳನ್ನು ಶುಚಿಗೊಳಿಸುತ್ತಿದ್ದರಂತೆ. ಬಳಿಕ ನಮ್ಮ ಹಿರಿಯರು ನದಿ ದಡದ ಕಲ್ಲಿನಲ್ಲಿ ಬಟ್ಟೆಯನ್ನು ಒಗೆಯುತ್ತಿದ್ದರು. ಸ್ವಲ್ಪ ಸಮಯದ ಬಳಿಕ ಬಟ್ಟೆ ಒಗೆಯುವ ಕಲ್ಲುಗಳು ಮನೆಯಂಗಳಕ್ಕೆ ಬಂದವು. ಕೆಲವು ವರ್ಷಗಳ ಹಿಂದೆ ಅದೇ ಬಟ್ಟೆ ಒಗೆಯುವ ಕಲ್ಲು ಮನೆಯೊಳಗೂ ಬಂತು. ಆದರೆ ಈಗ ಕೈಯಿಂದ ಬಟ್ಟೆ ಒಗೆಯುವ ತಾಪತ್ರಯವೇ ಇಲ್ಲ ಯಾಕೆಂದರೆ ಬಟ್ಟೆಗಳನ್ನು ತೊಳೆಯಲು ವಾಷಿಂಗ್ ಮೆಷಿನ್ ಬಂದಿದೆ. ಬೇಗನೆ ಬಟ್ಟೆ ಶುಚಿಯಾಗಿ ಹೊರಗೆ ಬರುತ್ತದೆ. ಶ್ರಮವೂ ಕಡಿಮೆ. ಸಮಯವೂ ಉಳಿತಾಯವಾಗುತ್ತದೆ ಎಂದು ಎಲ್ಲರೂ ವಾಷಿಂಗ್ ಮೆಷಿನ್ ಮೊರೆಹೋಗುತ್ತಾರೆ.
ಒತ್ತಡದ ಜೀವನದಲ್ಲಿ ಬಟ್ಟೆ ಒಗೆದುಕೊಂಡು ಕುಳಿತುಕೊಳ್ಳುವಷ್ಟು ತಾಳ್ಮೆ, ಸಮಯ ಯಾರಿಗೂ ಇರುವುದಿಲ್ಲ. ಹೀಗಾಗಿ ಎಲ್ಲರೂ ವಾಷಿಂಗ್ ಮೆಷಿನ್ ಉತ್ತಮ ದಾರಿ ಎಂದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲೂ ಅದಕ್ಕೆ ತಕ್ಕಂತೆ ವಿವಿಧ ಬ್ರ್ಯಾಂಡ್, ವಿನ್ಯಾಸ , ಗುಣಲಕ್ಷಣಗಳುಳ್ಳ ಹಲವು ಮೆಷಿನ್‌ಗಳು ದೊರೆಯು ತ್ತವೆ. ಅದೆಷ್ಟು ದುಡ್ಡು ಕೊಟ್ಟಾದರೂ ಮನೆಗೆ ವಾಷಿಂಗ್ ಮೆಷಿನ್ ಬೇಕು ಎನ್ನುತ್ತಾರೆ ಬಹುತೇಕ ಮಂದಿ. ಆದರೆ ಆ ಮೆಷಿನ್‌ನ ಸೂಕ್ತ ನಿರ್ವಹಣೆ ಮಾಡುವುದರಲ್ಲಿ ಹಿಂದೆ ಉಳಿಯುತ್ತಾರೆ. ಮೆಷಿನ್ ಕೈಕೊಟ್ಟಾಗ ತಲೆಕೆಡಿಸಿಕೊಳ್ಳುವ ಬದಲು ಸರಿ ಇದ್ದಾಗ ಅದರ ನಿರ್ವಹಣೆಯನ್ನು ಉತ್ತಮವಾಗಿ ಮಾಡಿದರೆ ಮುಂದೆ ಸಮಸ್ಯೆ ಎದುರಾಗುವುದಿಲ್ಲ.
ವಾಷಿಂಗ್ ಮೆಷಿನ್ ನಿರ್ವಹಣೆ ಹೇಗೆ?
ವಾಷಿಂಗ್ ಮೆಷಿನ್‌ನ ಬುಶ್‌ನಲ್ಲಿ ಲೀಕೇಜ್ ಪ್ರಾರಂಭವಾದರೆ ಆದರಲ್ಲಿ ಕರ್ಕಶ ಸ್ವರ ಬರಲು ಪ್ರಾರಂಭವಾಗುತ್ತದೆ. ಕೂಡಲೇ ಬುಶ್ ಬದಲಾಯಿಸಿಕೊಂಡರೆ ಉತ್ತಮ. ಇಲ್ಲವಾದಲ್ಲಿ ಮೆಷಿನ್ ಗೆ ಹೆಚ್ಚಿನ ಹಾನಿಯಾಗುವ ಸಾಧ್ಯತೆ ಇದೆ. ಅಲ್ಲದೆ ಬುಶ್ ಬದಲಾಯಿಸಿಕೊಳ್ಳುವುದು ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಆದರೆ ಬುಶ್ ಬದಲಾಯಿಸದೆ ಇದ್ದಲ್ಲಿ ಅದರಿಂದ ಮೆಷಿನ್‌ನ ವಿವಿಧ ಭಾಗಗಳಿಗೆ ಆಗುವ ಹಾನಿಯನ್ನು ಸರಿಪಡಿಸಲು ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ. ಮೆಷಿನ್‌ನ ಕೆಪಾಸಿಟಿಗಿಂತ ಹೆಚ್ಚು ಬಟ್ಟೆ ಹಾಕಿ ನೀರು ಕಡಿಮೆ ಹಾಕಿದರೆ ಮೋಟಾರ್ ಬರ್ನ್ ಆಗುವ ಸಾಧ್ಯತೆ ಇದೆ. ಅದ್ದರಿಂದ ಅದರ ಕೆಪಾಸಿಟಿಯಷ್ಟೇ ಬಟ್ಟೆಗಳನ್ನು ಒಗೆಯಲು ಹಾಕಿ. ಬಟ್ಟೆಗಿಂತ ಒಂದು ಇಂಚು ಹೆಚ್ಚು ನೀರು ಹಾಕಿದಾಗ ಯಾವುದೇ ಸಮಸ್ಯೆಯಾಗುವುದಿಲ್ಲ. ಬಟ್ಟೆಗಳನ್ನು ಮೆಷಿನ್‌ಗೆ ಹಾಕುವ ಮುನ್ನ ಬಟ್ಟೆಗಳನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಇಲ್ಲವಾದಲ್ಲಿ ಅದರಲ್ಲಿರುವ ನಾಣ್ಯಗಳು, ಪಿನ್‌ನಂತಹ ವಸ್ತುಗಳಿಂದಾಗಿ ಮೆಷಿನ್‌ನ ಡ್ರೈನ್ ಪಂಪ್ ಬ್ಲಾಕ್ ಆಗಿ ಪಂಪ್ ಡಾಮೇಜ್ ಆಗುವ ಸಾಧ್ಯತೆ ಇರುತ್ತದೆ.
ಸಮಯಕ್ಕೆ ಸರಿಯಾಗಿ ಮೆಷಿನ್‌ನ ಫಿಲ್ಟರ್ ಕ್ಲೀನ್ ಮಾಡುತ್ತಿರಬೇಕು. ಮಾಡದಿದ್ದರೆ ಕೊಳೆ ತುಂಬಿ ಮೆಷಿನ್‌ಗೂ ಹಾನಿಯಾಗುವ ಸಾಧ್ಯತೆ ಹೆಚ್ಚು. ಡ್ರೈನ್ ಪೈಪ್‌ನ್ನು ಎತ್ತರದಲ್ಲಿರಿಸಿದರೆ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೆ ಮೆಷಿನ್‌ನ ಕೆಲಸ ನಿಧಾನವಾಗುತ್ತದೆ. ಆದ್ದರಿಂದ ಸರಿಯಾದ ಸ್ಥಳದಲ್ಲಿ ಪೈಪ್‌ನ್ನು ಜೋಡಿಸಿಕೊಳ್ಳಿ. ತೊಳೆಯುವುದಕ್ಕಾಗಿ ಮೆಷಿನ್‌ಗೆ ಬೆಡ್‌ಶೀಟ್ ಹಾಕಿ ಸರಿಯಾದ ಬಟನ್ ಸೆಟ್ ಮಾಡದೆ ಹೋದರೆ ಬಟ್ಟೆ ಶುಚಿಯಾಗುವುದಿಲ್ಲ. ಹಾಗಾಗಿ ಬಟ್ಟೆಯನ್ನು ಹಾಕುವಾಗ ಅದಕ್ಕೆ ಸೂಕ್ತವಾಗುವ ಸಿಸ್ಟಮ್ ಸೆಟ್ ಮಾಡಿಕೊಳ್ಳಬೇಕು. ಇದರಿಂದ ಮೆಷಿನ್‌ಗೂ ಯಾವುದೇ ತೊಂದರೆ ಇರುವುದಿಲ್ಲ.
ಬಟ್ಟೆಯನ್ನು ಒಮ್ಮೆ ಸ್ವಲ್ಪ ಕೈಯಿಂದ ಒಗೆದು ಹಾಕಿದರೆ ಒಳ್ಳೆಯದು. ಯಾಕೆಂದರೆ ಆವಾಗ ವಿದ್ಯುತ್ ಹೆಚ್ಚು ವ್ಯರ್ಥವಾಗುವುದಿಲ್ಲ. ಬಟ್ಟೆಯೂ ಹೆಚ್ಚು ಶುಚಿಯಾಗಲು ಸಾಧ್ಯ. ಹೆಚ್ಚಾಗಿ ಎಲ್ಲರೂ ವಾಷಿಂಗ್ ಮೆಷಿನ್ ಅನ್ನು ಬಾತ್‌ರೂಮ್‌ನಲ್ಲಿ ಇಡುತ್ತಾರೆ. ಇದು ನೀವು ಮಾಡುವ ದೊಡ್ಡ ತಪ್ಪು. ಮೆಷಿನ್‌ಗೆ ನೀರು ಬಿದ್ದರೆ ಅದರ ಕಂಟ್ರೋಲ್ ಬೋರ್ಡ್ ಬರ್ನ್ ಹಾಗೂ ಕೆಲವು ಪ್ರಮುಖ ಭಾಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ನೀರು ಬೀಳದ ಜಾಗದಲ್ಲಿ ಇಡುವುದು ಒಳ್ಳೆಯದು. ಆರು ತಿಂಗಳಿಗೊಮ್ಮೆ ಕ್ಲೀನಿಂಗ್ ಪೌಡರ್ ಹಾಕಿ ಅದರ ಟಬ್ ಕ್ಲೀನ್ ಮಾಡುವ ಹವ್ಯಾಸ ಇಟ್ಟುಕೊಳ್ಳಬೇಕು. ಟೆಕ್ನೀಶಿಯನ್ ಇದ್ದರೂ ಅವರು ಮೆಷಿನ್‌ನ ಒಳಭಾಗ ಕ್ಲೀನ್ ಮಾಡಲ್ಲ. ಹಾಗಾಗಿ ನೀವೇ ಪೌಡರ್ ಹಾಕಿ ಶುಚಿ ಮಾಡಿಕೊಳ್ಳಿ.
– ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.