ಬೇಸಗೆಯ ಸಂಗಾತಿ ಲೈಟ್‌ವೇಯ್ಟ್ ಕಲರ್‌ಫುಲ್ ಬಟ್ಟೆಗಳು
Team Udayavani, Apr 18, 2017, 7:52 PM IST
ಬೇಸಗೆ ಶುರುವಾಗಿದೆ. ಇನ್ನೆನ್ನಿದ್ದರೂ ಕಾಟನ್, ಖಾದಿ ಬಟ್ಟೆಗಳಿಗೆ ಹೆಚ್ಚಿನ ಆದ್ಯತೆ. ಇವುಗಳಲ್ಲೂ ಹಾಟ್‌ಫೆವರೇಟ್ ಕಲರ್‌ಫುಲ್ ಬಟ್ಟೆಗಳ ಆಯ್ಕೆ ಹೇಗೆ ಗೊತ್ತಾ…? ನಿಮ್ಮ ವಾರ್ಡ್‌ರೋಬ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ಲೈಟ್ ವೇಯ್ಟ್ ಮತ್ತು ಕಲರ್‌ಫುಲ್ ಬಟ್ಟೆಗಳು ಈ ಬೇಸಗೆಯಲ್ಲಿ ನಿಮ್ಮ ಸಂಗಾತಿಯಾಗಲಿ.
ಡೆನಿಮ ಶರ್ಟ್ ಜತೆ ಹಳದಿ ಬಣ್ಣದ ಸ್ಲೀವ್ ಲೆಸ್ ಟೀ ಶರ್ಟ್ ಹಾಕಿ ಪ್ರಿಂಟೆಡ್ ಲೆಗಿಂಗ್ ತೊಡುವುದು ಈ ಬೇಸಗೆಯ ಟ್ರೆಂಡಿಂಗ್ ಔಟ್‌ಫಿಟ್. ಆದ್ದರಿಂದ ಈ ಕಾಂಬಿನೇಶನ್ನಲ್ಲೇ ಎಕ್ಸಪೆರಿಮೆಂಟ್ ಮಾಡಿ ಹಳದಿ ಬಣ್ಣದ ಬದಲಿಗೆ ತಿಳಿ ಹಸಿರು, ತಿಳಿ ನೀಲಿ ಅಥವಾ ಕೇಸರಿ ಬಣ್ಣದ ಟೀ ಶರ್ಟ್ ಹಾಕಿ ಅದೇ ಬಣ್ಣದ ಪ್ರಿಂಟ್ ಇರೋ ಲೆಗಿಂಗ್ ಹಾಕಿ ನೋಡಿ. ಈ ಲುಕ್‌ಗೆ ಸಾಲಿಡ್ ಕಲರ್ ಪಾದರಕ್ಷೆ ಹಾಕಿಕೊಳ್ಳಿ. ಕಂದು ಬಣ್ಣದ ಸ್ನೀಕರ್ಸ್ ತುಂಬ ಚೆನ್ನಾಗಿ ಕಾಣುತ್ತದೆ. ಲೇಸ್ ಕಟ್ಟುವ ಅಗತ್ಯವಿಲ್ಲದ ಶೂಸ್ ಕೊಂಡರೆ ಉತ್ತಮ. ಇಲ್ಲವಾದರೆ ಶೂಸ್ ಜತೆ ಸಾಕ್ಸ್ ಕೂಡ ಹಾಕಬೇಕಾಗುತ್ತೆ. ಇದು ಬೇಸಗೆಯಲ್ಲಿ ಅಸಾಧ್ಯವಾದ ಮಾತೇ ಸರಿ.
ಕಾಟನ್ ಬಟ್ಟೆ ಬೇಸಗೆಯಲ್ಲಿ ನಮ್ಮನ್ನು ತಂಪಾಗಿರಿಸುತ್ತೆ. ಅಲ್ಲದೆ ಬೆವರನ್ನು ಹೀರಿ ನಮ್ಮನ್ನು ಯಾವತ್ತೂ ಡ್ರೈಯಾಗಿರಿಸುತ್ತೆ. ಟ್ರೆಡಿಷನಲ್ ಮತ್ತು ಇಂಡಿಯನ್ ಉಡುಪುಗಳನ್ನು ತೊಡಲು ಇಷ್ಟಪಡುವವರು ಖಾದಿ ಬಟ್ಟೆಯ ಕುರ್ತಾ, ಲಂಗ, ಸೀರೆ, ಚೂಡಿದಾರ್ ಅಥವಾ ಸಲ್ವಾರ್ ಕಮೀಜ್ ಉಡುವುದು ಉತ್ತಮ. ಅದರಲ್ಲೂ ಪೇಸ್ಟಲ ಬಣ್ಣಗಳು, ಅಂದರೆ ಬಳಪದ ಕಡ್ಡಿಯ ಬಣ್ಣಗಳು (ತಿಳಿ ಬಣ್ಣಗಳು) ಕಣ್ಣಿಗೂ ತಂಪು ದೇಹಕ್ಕೂ ತಂಪು. ಪೇಸ್ಟಲ ಶೇಡ್‌ನ ಬಣ್ಣದ ಶರ್ಟ್‌ಗಳ ಜತೆ ಫ್ರೋರಲ್ ಪ್ರಿಂಟ್ ಇರೋ ಬಿಳಿ ಬಣ್ಣದ ಸ್ಲಿಮ್‌ಫಿಟ್ ಪ್ಯಾಂಟ್, ಲೆಗಿಂಗ್ ಚೆನ್ನಾಗಿ ಕಾಣಿಸುತ್ತವೆ. ಪೇಸ್ಟಲ ಶೇಡ್ ಟಾಪ್ ಜತೆ ಕಪ್ಪು ಬಣ್ಣದ ಪ್ಯಾಂಟ್ ಚೆನ್ನಾಗಿ ಕಾಣಿಸುವುದಿಲ್ಲ. ಆದ್ದರಿಂದ ಬಿಳಿ, ಕಂದು, ಆಫ್ ವೈಟ್ ಅಥವಾ ತಿಳಿ ನೀಲಿ ಬಣ್ಣದ ಸ್ಕರ್ಟ್, ಪ್ಯಾಂಟ್ ಮತ್ತು ಶಾರ್ಟ್ಸ್ ಹಾಕಿಕೊಳ್ಳಬೇಕು.
ಇಂಡಿಯನ್ ಪ್ರಿಂಟ್ ಇರುವ ಪಲಾಝೊ, ಹಾರೆಮ ಪ್ಯಾಂಟ್ ಅಥವಾ ಸ್ಕರ್ಟ್ ಹಾಕುವುದಾದರೆ ಅದಕ್ಕೆ ತಕ್ಕ ಟಾಪ್ ಹಾಕಬೇಕು. ಪ್ರಿಂಟೆಡ್ ಪ್ಯಾಂಟ್‌ಗೆ ಅದೇ ಬಣ್ಣ ಅಥವಾ ಬೇರೆ ಬಣ್ಣದ ಪ್ಲೇನ್ ಟಾಪ್ ಹಾಕಬಹುದು. ಲೂಸ್ ಪ್ಯಾಂಧಿಟ್‌ಗೆ ಲೂಸ್ ಶರ್ಟ್ ಹಾಕಬಾರದು. ಬದಲಿಗೆ ಫಿಟ್ಟಿಂಗ್ ಇರುವ ಟೀ ಶರ್ಟ್ ಹಾಕಿ ಅದರ ಮೇಲೆ ಲೂಸ್ ಶರ್ಟ್ ಅಥವಾ ಶ್ರಗ್ ಹಾಕಿಕೊಳ್ಳಬಹುದು. ಒಂದು ವೇಳೆ ಲೂಸ್ ಶರ್ಟ್ ಹಾಕುವುದಾದರೆ ಸ್ಕಿನ್ನಿ ಅಥವಾ ಸ್ಲಿಮ್‌ಫಿಟ್ ಪ್ಯಾಂಟ್ ಧರಿಸಬೇಕು. ಪ್ರಿಂಟೆಡ್ ಸ್ಕರ್ಟ್, ಹಾರೆಮ, ಪಲಾಝೊ, ಲೆಗಿಂಗ್, ಪ್ಯಾಂಟ್ ಹಾಕುವಾಗ ಪ್ಲೇನ್ ಟಾಪ್ ತೊಡಬೇಕು. ಅಂತೆಯೇ ಪ್ರಿಂಟೆಡ್ ಟಾಪ್ ಹಾಕುವಾಗ ಪ್ಲೇನ್ ಸ್ಕರ್ಟ್ ಅಥವಾ ಪ್ಯಾಂಟ್ ಹಾಕಬೇಕು.
ಬಿಳಿ ಶರ್ಟ್ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟೇ ಸರಿಯಾದ ಕಾಂಬಿನೇಶನ್. ಆದರೆ ಬಿಳಿ ಟಾಪ್ ಜತೆ ಸ್ಕರ್ಟ್/ ಲಂಗ ಹಾಕುವುದಾದರೆ ಕೆಂಪು, ಹಸಿರು, ಕೇಸರಿ ಸೇರಿದಂತೆ ಯಾವುದೇ ಗಾಢ ಬಣ್ಣಗಳನ್ನು ಧರಿಸಬಹುದು. ಆಫ್ ಶೋಲ್ಡರ್ ಅಥವಾ ಸ್ಲೀವ್‌ಲೆಸ್ ಬಟ್ಟೆ ಧರಿಸುವಾಗ ಸನ್ ಸ್ಕ್ರೀನ್ ಹಚ್ಚಲು ಮರೆಯಬೇಡಿ. ಮನೆಯಿಂದ ಹೊರ ಹೋಗುವ 20 ನಿಮಿಷಗಳ ಮುನ್ನ ಸನ್ ಸ್ಕ್ರೀನ್ ಹಚ್ಚಿರಿ. ಇಲ್ಲವಾದರೆ ಬಿಸಿಲಿನಿಂದಾಗಿ ಕೈ ಮತ್ತು ಮೈಯ ಬಣ್ಣ ಬದಲಾಗುತ್ತೆ. ಅಲ್ಲದೆ ಚರ್ಮ ಸಂಬಂಧಿತ ಸಮಸ್ಯೆಗಳೂ ಬರುವ ಸಾಧ್ಯತೆ ಇವೆ. ನಿಮ್ಮ ವಾರ್ಡ್‌ರೋಬ್‌ನ 2, 3 ಸ್ಕಾರ್ಫ್ಗಳು ಇರಲಿ. ಪ್ಲೇನ್ ಸ್ಕಾರ್ಫ್ ಗಳ ಬದಲಿಗೆ ಫ್ರೋರಲ್ ಪ್ಯಾಟರ್ನ್, ಅನಿಮಲ ಪ್ರಿಂಟ್ ಮತ್ತು ಇಂಡಿಯನ್ ಡಿಸೈನ್‌ನ ವೆರೈಟಿ ಇರಲಿ. ಆಗ ಬೋರಿಂಗ್ ಬಟ್ಟೆ ಜತೆ ಸ್ಕಾರ್ಫ್ ತೊಟ್ಟಾಗ ಉಡುಪು ಚೆನ್ನಾಗಿಯೇ ಕಾಣುತ್ತೆ. ಸ್ಕಾರ್ಫ್ ಕೇವಲ ಕತ್ತಿಗೆಯಷ್ಟೇ ಅಲ್ಲ… ತಲೆ, ಕೈಗೆ ಮತ್ತು ಸಾರೊಂಗ್ ಥರ ಸೊಂಟಕ್ಕೂ ಕಟ್ಟಿಕೊಂಡು ಫ್ಯಾಷನ್ ಸ್ಟೇಟ್ಮೆಂಟ್ ಮಾಡಬಹುದು!
– ಅದಿತಿ ಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.