Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ


Team Udayavani, Nov 26, 2024, 9:18 PM IST

15-uv-fusion

ಇತ್ತೀಚಿನ ದಿನದಲ್ಲಿ ನಮ್ಮ ದಿನಚರಿ ತ್ಯಾಜ್ಯ ತೊಟ್ಟಿಯನ್ನು ಕಸ ಸಂಗ್ರಹ ಮಾಡುವ ಸಿಬಂದಿಗೆ ನೀಡುವ ಮೂಲಕ ಆರಂಭ ಆಗುತ್ತದೆ ಎಂದರೂ ತಪ್ಪಲ್ಲ. ನಿತ್ಯ ಬಳಕೆಯ ವಸ್ತುಗಳಿಂದ ಆರಂಭವಾಗುವ ಈ ಸ್ವಚ್ಛತೆಯ ಸಮಸ್ಯೆಗೆ ಪರಿಹಾರ ಕಾಣಲು ಅದೆಷ್ಟು ಹೊಸ ಹೊಸ ಯೋಜನೆಗಳು ರೂಪುಗೊಂಡರು ಕೂಡ ಮನೆ ಮನೆಯಲ್ಲಿ ಈ ಬಗ್ಗೆ ಅರಿವಾಗಬೇಕು. ನಮ್ಮ ಮನೆಗಳು ಅದರ ಸುತ್ತಲಿನ ಪರಿಸರ ಸ್ವಚ್ಚವಾಗುತ್ತಾ ಹೋದರೆ ಇಡೀ ದೇಶವೇ ಸ್ವಚ್ಛ ಭಾರತದ ಕಡೆ ಮುಖಮಾಡಿದಂತಾಗುವುದು.

ಸ್ವಚ್ಛ ಪರಿಸರದಿಂದ ನಮ್ಮ ಆರೋಗ್ಯವು ಕೂಡ ಉತ್ತಮವಾಗಿ ಇರುವ  ಹಾಗೇ ಮಾನಸಿಕ ಸ್ಥೈರ್ಯ ಇರುವುದು. ಇಂತಹ ಸ್ವಚ್ಛತೆಯ ಪಾಠವನ್ನು ಎಳೆಯ ಮಕ್ಕಳಿಗೆ ಅವರ ಪೋಷಕರು, ಹೆತ್ತವರು ತಿಳಿ ಹೇಳಬೇಕು. ಮಕ್ಕಳಿಗೆ ಪಾಠ ಬೋಧನೆ ಮಾತ್ರ ಮಾಡದೆ ಅದರ ಜತೆಗೆ ಪ್ರಾಯೋಗಿಕವಾಗಿ ಗಿಡ ನೆಡುವುದು,

ಪ್ಲಾಸ್ಟಿಕ್‌ ಬಳಕೆ ಇತಿ ಮಿತಿಯ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಬೇಕು. ಯುವ ಜನತೆಯ ಪಾಲ್ಗೊಳ್ಳುವಿಕೆ ಪರಿಸರ ದಿನಾಚರಣೆ ಬಂತೆಂದಾಗ ಸ್ವಚ್ಛತೆಯ ನೆನಪಾಗುವ ಬದಲು ನಿತ್ಯ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವುದು ಮುಖ್ಯ. ಪ್ಲಾಸ್ಟಿಕ್‌ ತ್ಯಾಜ್ಯದಲ್ಲಿಯೂ ಮೈಕ್ರೋ ಪ್ಲಾಸ್ಟಿಕ್‌ ಗಳು ಪರಿಸರಕ್ಕೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿರುವುದು ಅನೇಕರಿಗೆ ತಿಳಿದಿಲ್ಲ. ಅನೇಕ ಕಡೆ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಮಣ್ಣಿನಲ್ಲಿ ಕರಗದೆ ಕೂಡ ಸಮಸ್ಯೆ ತಂದೊಡ್ಡುತ್ತಿದೆ. ಹಾಗಾಗಿ ಇಂತಹ ವಿಚಾರಗಳ ಬಗ್ಗೆ ಜಾಗೃತವಾಗಬೇಕಿದೆ. ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಾ ಗುವ ಬಗ್ಗೆ ಯುವಜನತೆ ಎಚ್ಚೆತ್ತು ಕೊಂಡು ಪರಿಸರಕ್ಕೆ ಸಂದೇಶ ನೀಡಬೇಕು.

ಬೀಜದ ಉಂಡೆ: ಮನೆಯ ಸುತ್ತ ಮುತ್ತಲಿನ ಕಸಗಳನ್ನು ಕರಕುಶಲ ವಸ್ತುಗಳಾಗಿ ಪರಿವರ್ತಿಸಿ ದರೆ ಅಂತಹ ವಸ್ತುಗಳು ನೋಡಲು ಸುಂದರ ವಾಗುವ ಜತೆಗೆ ನಮ್ಮ ಆರೋಗ್ಯಕ್ಕೆ ಉತ್ತಮ ವಾತಾವರಣ ಸೃಷ್ಟಿ ಮಾಡುವುದು.  ನಾವು ಎಲ್ಲಿಗಾದರು ಹೊಸ ಪ್ರದೇಶಕ್ಕೆ ಪ್ರವಾಸಕ್ಕೆ ಹೋದಾಗ ಸೀಡಿಂಗ್‌ ಬಾಲ್‌ ಎಸೆದರೆ ಅದು ಕೂಡ ಪ್ರಕೃತಿಯ ಮರುಸೃಷ್ಟಿಗೆ ಸಹಕಾರಿ ಆಗಲಿದೆ. ಮಣ್ಣು ಹಾಗೂ ಗೊಬ್ಬರದ ನಡುವೆ ಗಿಡಗಳ ಬೀಜ ಮಿಶ್ರ ಮಾಡಿ ಎಸೆಯುವ ಪರಿಕಲ್ಪನೆ ನಿಜಕ್ಕೂ ಅದ್ಭುತವಾಗಿದ್ದು ಇಂತಹವುಗಳಿಗೂ ಕೂಡ ನಾವು ಬೆಂಬಲಿಗರಾಗೋಣ.

ಒಟ್ಟಾರೆಯಾಗಿ ಪ್ರಕೃತಿ ನಮಗೆ ಸಿಕ್ಕ ಒಂದು ವರವಾಗಿದ್ದು ಅದನ್ನು ಮುಂದಿನ ತಲೆಮಾರುಗಳಿಗೂ ಉಳಿಸಿಕೊಡಲು ನಾವೆಲ್ಲರೂ ಕೈಜೋಡಿಸಬೇಕು. ಬರಿಯ ಪಾಠ ಪ್ರವಚನದಲ್ಲಿ ಸ್ವಚ್ಚತೆಯ ಪಾಠ ಪಾಲಿಸುವ ಬದಲು ನಮ್ಮ ಜೀವನಕ್ಕೆ ಅವುಗಳನ್ನು ಅಳವಡಿಸಿಕೊಂಡು ನಿತ್ಯ ಮನೆಯ ವಾತಾವರಣದಲ್ಲಿ ಸ್ವಚ್ಚತೆಯ ಪರಿಪಾಠ ರೂಢಿಯಾದರೆ ಮನೆ ಮನೆಯಿಂದ ದೇಶವೇ ಸ್ವಚ್ಚವಾಗುವ ಜತೆಗೆ ಪ್ರಾಕೃತಿಕ ಸಂಪತ್ತು ಕೂಡ ಇನ್ನಷ್ಟು ಸಮೃದ್ಧವಾಗಲಿದೆ.

-ಪ್ರೀತಿ

ರುಕ್ಮಿಣಿ ಶೆಡ್ತಿ, ಸ.ಪ್ರ.ದ.

ಕಾಲೇಜು, ಬಾರಕೂರು

ಟಾಪ್ ನ್ಯೂಸ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

ವಿಷಸೇವಿಸಿ ಆತ್ಯಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ,ಚಿಕಿತ್ಸೆಗೆ ಸ್ಪಂದಿಸದೆ ಸಾವು

Draupadi Murmu addresses the joint House at the Old Parliament House

Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-uv-fusion

Bamboo: ಬಿದಿರು ಎಂದು ಮೂಗು ಮುರಿಯದಿರಿ

10-uv-fusion

Nature: ಪ್ರಕೃತಿ ಮಡಿಲಲ್ಲಿ ಒಂದು ಕ್ಷಣ

9-uv-fusion

Grandfather: ಬಡ ತಾತನ ಹೃದಯ ಶ್ರೀಮಂತಿಕೆ

8-uv-fusion

Kannada: ಕನ್ನಡ ನಾಡಲ್ಲಿ ಪ್ರತಿದಿನವೂ ನಿತ್ಯೋತ್ಸವವಿರಲಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Maharashtra; Ekmath hey to safe hey says Shivsena

Maharashtra: ಏಕ್‌ನಾಥ್‌ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Ullal: ಎಂಡಿಎಂಎ ಸಾಗಾಟ: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.