ದೇಶ-ವಿದೇಶದಲ್ಲೂ “ಜಬರ್ದಸ್ತ್ ಶಂಕರ’ನ ಮಹಿಮೆ

Team Udayavani, Nov 7, 2019, 3:39 AM IST

qq-21

ಕೋಸ್ಟಲ್‌ವುಡ್‌ನ‌ ಬಹುನಿರೀಕ್ಷಿತ ಸಿನೆಮಾ “ಜಬರ್ದಸ್ತ್ ಶಂಕರ’ ಈ ವಾರ ಬಿಡುಗಡೆಯ ಸಂಭ್ರಮದಲ್ಲಿದೆ. ಕರಾವಳಿಯಲ್ಲಿ ಗಿರಿಗಿಟ್‌ ಮೂಡಿಸಿದ ಅಬ್ಬರದಿಂದಾಗಿ ಸದ್ಯ ಜಬರ್ದಸ್ತ್ ಶಂಕರ ಸಿನೆಮಾವೂ ದೇಶ-ವಿದೇಶದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಕೋಸ್ಟಲ್‌ವುಡ್‌ನ‌ಲ್ಲಿ ಡೈನಾಮಿಕ್‌ ಹೀರೋ ಆಗಿ ಗುರುತಿಸಿಕೊಂಡಿರುವ ಅರ್ಜುನ್‌ ಕಾಪಿಕಾಡ್‌ ಜಬರ್ದಸ್ತ್ ಶಂಕರನಾಗಿ ವಿಭಿನ್ನ ಲುಕ್‌ನಲ್ಲಿ ಸಿನಿ ಪ್ರಿಯರ ಮುಂದೆ ಎಂಟ್ರಿಯಾಗಲಿದ್ದಾರೆ. ತುಳು ಮತ್ತು ಕನ್ನಡದ ಸುಮಾರು 15ರಷ್ಟು ಸಿನೆಮಾಗಳಲ್ಲಿ ನಟಿಸಿರುವ ಅರ್ಜುನ್‌ಗೆ ಈ ಸಿನೆಮಾ ವಿಭಿನ್ನ ಹಾಗೂ ಬಹುನಿರೀಕ್ಷಿತ.

ಇದೊಂದು ವಿಭಿನ್ನ ಕಥೆಯ ಸಿನೆಮಾ. ಹೊಸ ಪರಿಕಲ್ಪನೆಯಲ್ಲಿ ಮೇಕಿಂಗ್‌ ಮಾಡಲಾಗಿದೆ. ಕಥೆ, ಚಿತ್ರಕಥೆ, ಸಾಹಿತ್ಯ, ನಿರ್ದೇಶನ ಎಲ್ಲವೂ ದೇವದಾಸ್‌ ಕಾಪಿಕಾಡ್‌ ಅವರದ್ದು. ನಾನು ನಟ ಹಾಗೂ ಸಹನಿರ್ದೇಶಕನಾಗಿಯೂ ಕೆಲಸ ಮಾಡಿದ್ದೇನೆ. ಸುಜೀತ್‌ ನಾಯಕ್‌ರ ಸಂಕಲನ, ಮಣಿಕಾಂತ್‌ ಕದ್ರಿ ಸಂಗೀತ ಈ ಚಿತ್ರಕ್ಕಿದೆ. ಜಲನಿಧಿ ಫಿಲ್ಮ್ನಡಿ ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌ ಹಾಗೂ ರಾಜೇಶ್‌ ಕುಡ್ಲ ಈ ಸಿನೆಮಾ ನಿರ್ಮಿ ಸಿದ್ದಾರೆ. ಸಿದ್ದು ಹಾಗೂ ಉದಯ ಬಲ್ಲಾಳ್‌ ಛಾಯಾಚಿತ್ರಗ್ರಹಣ ಮಾಡಿದ್ದಾರೆ. ಮಾಸ್‌ ಮಾದ ಅವರ ಸಾಹಸ ಹಾಗೂ ಸ್ಟಾರ್‌ ಗಿರಿ, ವಿನಾಯಕ್‌ ಪಿಳ್ಳೆ ನೃತ್ಯ ನಿರ್ದೇಶನವಿದೆ ಎನ್ನುತ್ತಾರೆ ಅರ್ಜುನ್‌ ಕಾಪಿಕಾಡ್‌.

ಅಂದಹಾಗೆ, ಸಿನೆಮಾದ ತಾರಾಗಣದಲ್ಲಿ ಅರ್ಜುನ್‌ ಕಾಪಿಕಾಡ್‌, ನೀತಾ ಅಶೋಕ್‌, ರಾಶಿ, ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌, ಸಾಯಿಕೃಷ್ಣ ಕುಡ್ಲ, ಗೋಪಿನಾಥ್‌ ಭಟ್‌, ಚೇತನ್‌ ರೈ, ಸುನಿಲ್‌ ನೆಲ್ಲಿಗುಡ್ಡೆ, ಲಕ್ಷ್ಮಣ್‌ ಕುಮಾರ್‌ ಮಲ್ಲೂರು, ಅರುಣ್‌ ಬಿ.ಸಿ. ರೋಡ್‌, ಮಿಮಿಕ್ರಿ ಶರಣ್‌, ತಿಮ್ಮಪ್ಪ ಕುಲಾಲ್‌, ಸುರೇಶ್‌ ಕುಲಾಲ್‌, ಚಂದ್ರಹಾಸ್‌ ಮಾಣಿ, ಹರೀಶ್‌ ಆಲದಪದವು, ಗಾಳಿಪಟ ಹರೀಶ್‌ ಮೊದಲಾದವರು ಸಿನೆಮಾದಲ್ಲಿದ್ದಾರೆ. ಕಥೆ ಹಾಗೂ ಕಾಮಿಡಿ ಎರಡನ್ನೂ ಜತೆಯಾಗಿ ಇದರಲ್ಲಿ ಹೆಣೆಯಲಾಗಿದ್ದು, ಕೋಸ್ಟಲ್‌ವುಡ್‌ನ‌ಲ್ಲಿ ಇದೊಂದು ವಿನೂತನ ಪ್ರಯೋಗ ಎನ್ನುವುದು ಚಿತ್ರತಂಡದ ಅಭಿಪ್ರಾಯ.

ಇನ್ನು ಅರ್ಜುನ್‌ ಕಾಪಿಕಾಡ್‌ ಅವರು ತೆಲಿಕೆದ ಬೊಳ್ಳಿ, ರಂಗ್‌, ಚಾಲಿಪೋಲಿಲು, ಒರಿಯನ್‌ ತೂಂಡ ಒರಿಯಗಾಪುಜಿ, ಮಧುರ ಸ್ವಪ್ನ (ಕನ್ನಡ), ದಂಡ್‌, ಚಂಡಿಕೋರಿ, ಬರ್ಸ, ಯೋಗರಾಜ್‌ ಭಟ್‌ ಅವರ ಮುಗುಳು ನಗೆ (ಕನ್ನಡ), ಅರೆ ಮರ್ಲೆರ್‌, ಏರಾ ಉಲ್ಲೆರ್‌ಗೆ, ಕರ್ಣೆ ಮೊದಲಾದ ಸಿನೆಮಾಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡದಲ್ಲಿ ತೆರೆಕಾಣಲಿರುವ “ಮಾಲ್ಗುಡಿ ಡೇಸ್‌’, ತುಳುವಿನ “ರಾಹುಕಾಲ ಗುಳಿಗಕಾಲ’ ಚಿತ್ರದಲ್ಲಿಯೂ ನಟಿಸಿದ್ದಾರೆ.

-  ದಿನೇಶ್‌ ಇರಾ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.