ಕುಡ್ಲದಲ್ಲಿ ಮೋಡಿ ಮಾಡುತ್ತಿರುವ ಹಾಡು!

"ಪೆಪ್ಪೆರೆರೆ ಪೆರೆರೆರೆ'-"ಇಂಗ್ಲೀಷ್‌'

Team Udayavani, Feb 20, 2020, 5:01 AM IST

wall-9

ಸದ್ಯ ಒಂದೊಂದೇ ಹಾಡುಗಳ ಮೂಲಕ ಕೋಸ್ಟಲ್‌ವುಡ್‌ ಸುದ್ದಿಯಲ್ಲಿದೆ. ಭಿನ್ನ-ವಿಭಿನ್ನ ಸಾಹಿತ್ಯ ಹಾಗೂ ಸಂಗೀತದ ಮೂಲಕ ಕೆಲವು ಹಾಡುಗಳು ಚಿತ್ರಪ್ರೇಮಿಗಳ ಮನಸ್ಸು ಗೆಲ್ಲುತ್ತಿದೆ. ಹಾಡಿನ ಮುಖೇನವೇ ಮೋಡಿ ಮಾಡುತ್ತ ಸಿನೆಮಾದ ಇರುವಿಕೆಯನ್ನು ಎಲ್ಲೆಡೆಯೂ ವಿಸ್ತರಿಸುವ ನೆಲೆಯಲ್ಲಿ ಹಲವು ಸಿನೆಮಾಗಳು ಸದ್ಯ ಸುದ್ದಿ ಮಾಡುತ್ತಿದೆ.

ಅಂದಹಾಗೆ ಇನ್ನೇನು ಬಿಡುಗಡೆಯ ನಿರೀಕ್ಷೆಯಲ್ಲಿರುವ ಎರಡು ಸಿನೆಮಾಗಳಾದ “ಪೆಪ್ಪೆರೆರೆ ಪೆರೆರೆರೆ’ ಹಾಗೂ “ಇಂಗ್ಲೀಷ್‌’ ಸಿನೆಮಾದ ಹಾಡುಗಳು ಇದೀಗ ಕೋಸ್ಟಲ್‌ವುಡ್‌ ಅಂಗಳದಲ್ಲಿ ಸಾಕಷ್ಟು ಫೇಮಸ್‌ ಆಗಿದೆ. ಎಲ್ಲರ ಬಾಯಲ್ಲಿಯೂ ಈ ಸಿನೆಮಾದ ಹಾಡುಗಳು ಗುನುಗುನಿಸುತ್ತಿದೆ.

“ಕಥೆಯೊಂಜಿ ಮೋಕೆದ ಶುರುವಾಂಡ್‌!
ನಿಶಾನ್‌ ಹಾಗೂ ವರುಣ್‌ ನಿರ್ಮಾಣದ, ಯುವ ನಿರ್ದೇಶಕ ಶೋಭರಾಜ್‌ ಪಾವೂರು ನಿರ್ದೇಶನದ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾದ ಇತ್ತೀಚೆಗೆ ಬಿಡುಗಡೆಯಾದ ರೊಮ್ಯಾಂಟಿಕ್‌ ಹಾಡು ಸಾಕಷ್ಟು ಸದ್ದುಮಾಡುತ್ತಿದೆ. ಖಾಸಗಿ ಹೊಟೇಲ್‌ನಲ್ಲಿ ಯುವಜೋಡಿಗಳು ಸೇರಿಕೊಂಡು ಈ ಹಾಡಿನ ಬಿಡುಗಡೆ ಮಾಡಿದ್ದಾರೆ. ಶಶಿರಾಜ್‌ ರಾವ್‌ ಕಾವೂರು ಬರೆದಿರುವ ಶಮೀರ್‌ ಮುಡಿಪು ಹಾಡಿರುವ “ಕಥೆಯೊಂಜಿ ಮೋಕೆದ ಶುರುವಾಂಡ್‌… ಕನವೊಂಜಿ ರಂಗ್‌ದ ಮೊಡೆದಾಂಡ್‌’ ಹಾಡು ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿದೆ. ಓಲಾ ರಾಪಿನ ಚಿಟ್ಟೆ.. ಒವ್ವಾ ಪೂಬನ ತೋಟಾ.. ಎಂಚಿನ ಸೋಜಿಗ ಒಂಜಾವೊಂದುಂಡೂ’ ಎಂಬ ಹಾಡಿನ ಲೈನ್‌ ಮನ ಸೆಳೆಯುತ್ತಿದೆ. ಗುರು ಬಾಯಾರ್‌ ಸಂಗೀತ ನಿರ್ದೇಶನ ಮತ್ತೆ ಸಕ್ಸಸ್‌ ಬರೆದಿದೆ.

ಅಂದಹಾಗೆ, ಇದೇ ಸಿನೆಮಾದ “ಅತಳ ವಿತಳ ಶೂರ, ಮರ್ವಾಯಿ ಮಗಧೀರಾ…ಉಗುರುಡು ನೆಲ ಕೀರ.. ಕುಲಶೇಖರ’ ಹಾಡಿನ ಸದ್ದು ಇನ್ನೂ ಕಡಿಮೆ ಆಗಿಲ್ಲ ಎಂಬುದು ವಿಶೇಷ. ಉಮೇಶ್‌ ಮಿಜಾರ್‌ (ಚೋಟು) ಬರೆದಿರುವ ಈ ಹಾಡಿಗೆ ಭೋಜರಾಜ್‌ ವಾಮಂಜೂರು ಅವರ ಕಂಠಸಿರಿ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. “ತಪಲೆ ಮಂಡೆದ ಕುಪುಲುಗು ಮದಿಮಾಲೊಂಜಿ ಬೋಡುಗೆ’ ಎಂಬ ಧ್ವನಿಯೊಂದಿಗೆ ಆರಂಭವಾಗುವ ಈ ಹಾಡಿನಲ್ಲಿ ಅರವಿಂದ ಬೋಳಾರ್‌, ನವೀನ್‌ ಡಿ. ಪಡೀಲ್‌, ಭೋಜರಾಜ್‌ ವಾಮಂಜೂರು, ಸಾಯಿಕೃಷ್ಣ ಮುಂತಾದವರು ನೃತ್ಯ ಮಾಡಿದ್ದಾರೆ.

ಇಂಗ್ಲೀಷ್‌ನಲ್ಲಿ “ರಂಗ್‌ ರಂಗೋಲಿ… ಲವ್‌ ಫುಲ್‌ ಲಾಲಿ!
ತುಳು ಸಿನೆಮಾಗಳ ಪಾಲಿಗೆ ಮುಂದಿನ ತಿಂಗಳು ತೆರೆಕಾಣಲಿರುವ “ಇಂಗ್ಲೀಷ್‌’ ಸಿನೆಮಾ ಹೊಸ ನಿರೀಕ್ಷೆ ಮೂಡಿಸಿದ ಸಿನೆಮಾ ಅನಂತ್‌ನಾಗ್‌ ಸೇರಿದಂತೆ ಕರಾವಳಿಯ ಎಲ್ಲಾ ಕಲಾವಿದರು ಅಭಿನಯಿಸಿದ ಈ ಸಿನೆಮಾದ ಹಾಡು ಕೂಡ ಈಗಾಗಲೇ ಕೋಸ್ಟಲ್‌ವುಡ್‌ನ‌ಲ್ಲಿ ಸೌಂಡ್‌ ಮಾಡುತ್ತಿದೆ. ಮಂಗಳೂರು ದಸರಾ ಮೆರವಣಿಗೆ ಸಂದರ್ಭದಲ್ಲಿ ಒಂದು ಹಾಡಿನ ಬಿಡುಗಡೆ ನಡೆದಿತ್ತು. ಇದೀಗ ಮೊನ್ನೆ ತಾನೆ ಬಿಡುಗಡೆಯಾದ ಇನ್ನೊಂದು ಹಾಡು ರೊಮ್ಯಾಂಟಿಕ್‌ ಲುಕ್‌ನೊಂದಿಗೆ ಸೌಂಡ್‌ ಮಾಡುತ್ತಿದೆ.

ಲೋಕು ಕುಡ್ಲ ಬರೆದಿರುವ ಹಾಡಿಗೆ ಕದ್ರಿ ಮಣಿಕಾಂತ್‌ ಅವರ ಸಂಗೀತವಿದೆ. ಸುಪ್ರಿಯಾ ಲೋಹಿತ್‌ ಹಾಡಿರುವ “ರಂಗ್‌ ರಂಗೋಲಿ… ಲವ್‌ ಫುಲ್‌ ಲಾಲಿ’ ಎಂಬ ರೊಮ್ಯಾಂಟಿಕ್‌ ಹಾಡು ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಗುನುಗುನಿಸುತ್ತಿದೆ.

ಸೂರಜ್‌ ಶೆಟ್ಟಿ ಅವರ ನಿರ್ದೇಶನದ ಇಂಗ್ಲಿಷ್‌ ಸಿನೆಮಾವನ್ನು ಹರೀಶ್‌ ಶೇರಿಗಾರ್‌ ಹಾಗೂ ಶರ್ಮಿಳಾ ಶೇರಿಗಾರ್‌ ನಿರ್ಮಾಣ ಮಾಡಿದ್ದಾರೆ. ಭಾರಿ ಪ್ರಯತ್ನಪಟ್ಟು ಇಂಗ್ಲಿಷ್‌ ಕಲಿಯುವುದೇ ಈ ಸಿನೆಮಾದ ಪ್ರಮುಖ ವಿಷಯ. ಪರಿಶ್ರಮದಿಂದ ಏನನ್ನೂ ಮಾಡಬಹುದು ಎಂಬ ಸಂದೇಶವನ್ನೂ ಹೊಂದಿರುವ ಈ ಸಿನೆಮಾದಲ್ಲಿ ಆ ಯುವಕನು ಇಂಗ್ಲಿಷ್‌ ಕಲಿಯಲು ಪಡುವ ಪಾಡು, ಆಕೆಯ ಮನ ಗೆಲ್ಲುವುದು ಮತ್ತು ಆಕೆಯ ಮನೆಯವರನ್ನೂ ಮದುವೆಗೆ ಒಪ್ಪಿಸಲು ಸಫಲವಾಗುವವರೆಗೆ ಸಾಗುವ ಕಥೆ ಅತ್ಯಂತ ಕುತೂಹಲದಿಂದ ಕೂಡಿದೆ. ಮಾಲ್‌ನಲ್ಲಿ ವೇಷ ಹಾಕಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದ ಈತ ಏರುವ ಎತ್ತರ ಎಲ್ಲರನ್ನೂ ನಿಬ್ಬೆರಗಾಗಿಸುತ್ತದೆ.

ದಿನೇಶ್ ಇರಾ

ಟಾಪ್ ನ್ಯೂಸ್

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

HD-Kumaraswmy

Black Days: ಜಮೀರ್‌+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್‌.ಡಿ.ಕುಮಾರಸ್ವಾಮಿ

Delhi-Air

Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ

BYV-yathnal

Waqf Issue: ಕಾಂಗ್ರೆಸ್‌ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ

IT employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.