ಪಶ್ಚಿಮ  ಘಟ್ಟದ ತಪ್ಪಲಿನಲ್ಲಿ

Team Udayavani, Mar 21, 2019, 10:01 AM IST

21-march-14.jpg

ಆಧುನಿಕ, ಯಾಂತ್ರಿಕ ಜೀವನದಿಂದ ದೂರ ಇರಬೇಕೆನಿಸಿದಾಗ ಪರಿಸರದ ಮಡಿಲಲ್ಲಿ ಒಂದು ದಿನ ಕಳೆಯಬೇಕು. ಪರಿಸರವನ್ನು ಪ್ರೀತಿಸುವ ಹಾಗೂ ಪರಿಸರದ ಬಗ್ಗೆ ಕಾಳಜಿ ಇರುವ ನಮಗೆ ನಮ್ಮ ವಿದ್ಯಾರ್ಥಿಗಳಲ್ಲಿಯೂ ಸಹಿತ ಇದನ್ನು ಬೆಳೆಸಲು ಪ್ರಯತ್ನಿಸುವ ಅಸೆಯಿಂದ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆಸುವ ಐತಿಹಾಸಿಕ ಸ್ಥಳಗಳ ಪ್ರವಾಸ ಕಾರ್ಯಕ್ರಮದ ಬದಲು ಪಶ್ಚಿಮಘಟ್ಟಕ್ಕೆ ಚಾರಣವನ್ನು ಕೈಗೊಳ್ಳುವ ನಿರ್ಣಯಕೈಗೊಂಡೆವು.

ಪಶ್ಚಿಮಘಟ್ಟದ ಶೋಲಾರಣ್ಯ ಹಾಗೂ ನದಿ ಮೂಲದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂಬ ಮಹದಾಸೆಯಿಂದ ಅಧ್ಯಯನ ಚಾರಣವನ್ನು ದಕ್ಷಿಣ ಕನ್ನಡ ಜಿಲ್ಲೆಯು ಪರಿಸರವಾದಿ ದಿನೇಶ್‌ ಹೊಳ್ಳರ ನೇತೃತ್ವದಲ್ಲಿ ಸಹ್ಯಾದ್ರಿ ಸಂಚಯ ಸಹಯೋಗದೊಂದಿಗೆ ಮಾರ್ಚ್‌ 2ರಂದು ಶ್ರೀನಿವಾಸ ಬಿ.ಎಡ್‌. ಕಾಲೇಜಿನ 27 ವಿದ್ಯಾರ್ಥಿಗಳೊಂದಿಗೆ ನಾನೂ ಸೇರಿ ಕೊಂಡೆ. ಕೆಲವು ವಿದ್ಯಾರ್ಥಿಗಳಿಗೆ ಚಾರಣದ ಅನುಭವವಿದ್ದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಇದು ಮೊದಲ ಚಾರಣವಾಗಿತ್ತು.

ನಮ್ಮ ತಂಡ ದಿನೇಶ್‌ ಹೊಳ್ಳ ಹಾಗೂ ಇಬ್ಬರು ಉಪನ್ಯಾಸಕರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿರುವ 25 ವಿದ್ಯಾರ್ಥಿನಿಯರು ಹಾಗೂ ಮೂವರು ವಿದ್ಯಾರ್ಥಿಗಳೊಂದಿಗೆ ಬೆಳಗ್ಗೆ 6 ಗಂಟೆಗೆ ಖಾಸಗಿ ವಾಹನದಲ್ಲಿ ಹೊರಟು ಬೆಳ್ತಂಗಡಿಯಲ್ಲಿ ಉಪಾಹಾರವನ್ನು ಮುಗಿಸಿ, ಅಲ್ಲಿಂದ ಮಧ್ಯಾಹ್ನದ ಆಹಾರವನ್ನು ಕಟ್ಟಿಸಿಕೊಂಡು ಸುಮಾರು 10 ಗಂಟೆಗೆ ಪಶ್ಚಿಮ ಘಟ್ಟದ ತಪ್ಪಲಿಗೆ ಬಂದೆವು. ಇಲ್ಲಿನ ಕಾಜೂರಿನಿಂದ ಚಾರಣ ಆರಂಭಿಸಿದೆವು.

ಮೊದಲು 4 ಕಿ.ಮೀ. ದಟ್ಟ ಕಾಡುಗಳ ನಡುವೆ ಒಣಗಿದ ಎಲೆಗಳ ಮೇಲೆ ಹೆಜ್ಜೆಯನ್ನಿಡುತ್ತಾ ಸಾಗುವಾಗ ಬಿಸಿಲು ಏರಿದ್ದರೂ ಮರಗಳ ನೆರಳಿನ ತಂಪಿನಲ್ಲಿ ಆಯಾಸವಿಲ್ಲದೇ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ ಬೆಟ್ಟಗಳನ್ನು ಹತ್ತಿ ಇಳಿದೆವು. ಅಲ್ಲಿಂದ ಮುಂದೆ ನಮ್ಮ ಚಾರಣಕ್ಕೆ ಮೆರಗು ಬಂದದ್ದು ಮಕ್ಕಿ ಜಲಪಾತ ತಲುಪಿದಾಗ.

ಪಶ್ಚಿಮ ಘಟ್ಟದ ಕಾಡುಗಳ ಮಧ್ಯೆ ಹರಿದು ಬರುವ ಈ ಜಲಪಾತದ ನೀರಿನ ಬೋರ್ಗರೆತ ಮತ್ತು ಆಕರ್ಷಣೆ ನಮ್ಮ ವಿದ್ಯಾರ್ಥಿಗಳ ದಣಿವನ್ನು ಆರಿಸಿತ್ತು. ಸಾಕಷ್ಟು ಹೊತ್ತು ಜಲಪಾತದ ನೀರಿನಲ್ಲಿ ಅವ ರು ಆಡಿ ನಲಿದರು. ಸುಮಾರು ಒಂದು  ಗಂಟೆ ಅಲ್ಲಿ ಕಳೆದು ಅನಂತರ ಅರಣ್ಯ ರಕ್ಷಾ ಪಾಲಕರ ವಸತಿಯಲ್ಲಿ ವಿಶ್ರಮಿಸಿ, ಮಧ್ಯಾಹ್ನದ ಆಹಾರವನ್ನು ಸೇವಿಸಿ,ಯಾವುದೇ ಕಸವನ್ನು ಅಲ್ಲಿ ಬಿಡದೇ ಒಟ್ಟುಗೂಡಿಸಿ ನಮ್ಮೊಂದಿಗೆ ವಾಪಸ್‌ ತಂದೆವು.

ಚಾರಣದ ಹಾದಿಯಲ್ಲಿ ಪ್ರಕೃತಿಯನ್ನು ಆಹ್ಲಾದಿಸುವುದರೊಂದಿಗೆ ಪರಿಸರ ಪ್ರೇಮಿ ದಿನೇಶ್‌ ಹೊಳ್ಳ ಅವರು ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟದ ಮಹತ್ವದ ಬಗ್ಗೆ ಪರಿಚಯಿಸಿದರು. ಶೋಲಾ ಕಾಡು ಹಾಗೂ ಅಲ್ಲಿನ ಹುಲ್ಲುಗಾವಲು ಪ್ರದೇಶಗಳು ನಮ್ಮ ನದಿಗಳ ನೀರಿನ ಮೂಲಕ್ಕೆ ಯಾವ ರೀತಿಯಾಗಿ ಸಹಾಯ ಮಾಡುತ್ತವೆ ಎಂದು ಕಾಡಿನಲ್ಲಿ ನೀರಿನ ಸೆಲೆಗಳನ್ನು ತೋರಿಸುತ್ತಾ ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿಕೊಟ್ಟರು. ನಾವು ಹಿಂದಿರುಗುತ್ತಿರುವಾಗ ಇತ್ತೀಚಿಗಿನ ಪ್ರಕೃತಿ ವಿಕೋಪಕ್ಕೆ ಕಾರಣಗಳನ್ನು ತಿಳಿಸುತ್ತಾ, ಬಂಡೀಪುರದಲ್ಲಿ ನಡೆದ ಕಾಡ್ಗಿಚ್ಚನ್ನು ನೆನಪಿಸುತ್ತಿರುವಾಗಲೇ ನಮ್ಮ ಎದುರೇ ನಡೆದ ದುರಂತವೆಂದರೆ ನಾವು ಅರಣ್ಯ ಇಲಾಖೆಯ ಅನುಮತಿ ಪಡೆದು ಅರಣ್ಯ ಪಾಲಕರ ಜತೆ ಚಾರಣಕ್ಕೆ ಹೋಗಿರುವಾಗಲೇ ಯಾರೋ ದುಷ್ಕರ್ಮಿಗಳು ಕಾಡಿನಲ್ಲಿ ಬೆಂಕಿ ಇಟ್ಟು ಪಲಾಯನ ಮಾಡಿದ್ದರು. ಬೆಂಕಿಯನ್ನು ಕಂಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡಲೇ ಗೆಲ್ಲು ಸೊಪ್ಪಿನಿಂದ ಹರಡುವ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರು. ಆಮೇಲೆ ಅರಣ್ಯ ಪಾಲಕರು ಅರಣ್ಯ ಇಲಾಖೆಗೆ ಕರೆ ಮಾಡಿ ಬೆಂಕಿಯನ್ನು ನಂದಿಸಿದರು.

ಇದನ್ನು ನಾವು ತಡೆಯದೇ ಹೋಗಿ ದ್ದರೆ ಇಲ್ಲೂ ಒಂದು ದೊಡ್ಡ ದುರಂತ ಸಂಭವಿಸುತ್ತಿತ್ತು ಎಂಬ ವಿದ್ಯಾರ್ಥಿಗಳ ಮಾತು, ಇದಕ್ಕಾಗಿ ಒಮ್ಮತದ ಹೋರಾಟ ನಮ್ಮಲ್ಲಿ ಅಗತ್ಯ ಎಂಬ ಜಾಗೃತಿಯನ್ನು ಮೂಡಿಸುವಂತಿತ್ತು.

ಸಂಜೆ 6 ಗಂಟೆಗೆ ಬೆಟ್ಟವನ್ನು ಇಳಿದು ಬಂದಾಗ ಸೂರ್ಯಾಸ್ತವಾಗಿತ್ತು. ಸುಮಾರು 8 ಕಿ.ಮೀ. ವರೆಗೆ ಚಾರಣವನ್ನು ಆದಿನ ಪೂರೈಸಿದೆವು. ಕಾಡ್ಗಿಚ್ಚನ್ನು ಕಣ್ಣಾರೆ ಕಂಡ ಅನುಭವ ಹಾಗೂ ನೊಂದ ಮನಸ್ಸಿನೊಂದಿಗೆ ಎಲ್ಲರೂ ಪ್ರಕೃತಿಯನ್ನು ಕಾಪಾಡುವ ಪಣವನ್ನು ತೊಟ್ಟು ಅಂದಿನ ಚಾರಣವನ್ನು ಮುಕ್ತಾಯಗೊಳಿಸಿದೆವು. 

ರೂಟ್‌ ಮ್ಯಾಪ್‌
೙ ಮಂಗಳೂರಿನಿಂದ ಬೆಳ್ತಂಗಡಿಗೆ 60 ಕಿ.ಮೀ. ದೂರ.
೙ ಬೆಳ್ತಂಗಡಿ ಸಮೀಪದಲ್ಲೇ ಇದೆ ಕಾಜೂರು.
೙ಸಾಕಷ್ಟು ಬಸ್‌ ಸೌಲಭ್ಯಗಳಿವೆ.
೙ಚಾರಣ ಹೊರಡುವಾಗ ಊಟ, ಉಪಾಹಾರ, ನೀರು ಜತೆಯಲ್ಲಿರಲಿ.
೙ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಕ್ಕಿ ಜಲಪಾತ ನೋಡಬಹುದು.
೙ಮಾರ್ಗದರ್ಶಕರಿದ್ದರೆ ಪಶ್ಚಿಮ ಘಟ್ಟಕ್ಕೆ ಹೋಗುವುದು, ಬರುವುದು ಸುಲಭ.

ಡಾ| ಜಯಶ್ರೀ ಕೆ., ಮಂಗಳೂರು

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.