ಕನ್ನಡ ಸರಕಾರಿ ಶಾಲೆಗೆ ತುಳುವಿನ ಬಣ್ಣ
Team Udayavani, Aug 23, 2018, 12:03 PM IST
ಕಿರಿಕ್ ಪಾರ್ಟಿ ಖ್ಯಾತಿಯ ಯುವ ಸಿನೆಮಾ ನಿರ್ದೇಶಕ ರಿಷಬ್ ಶೆಟ್ಟಿ ಕುಡ್ಲದವರು. ಅವರ ನಿರ್ದೇಶನದ ಕನ್ನಡ ಚಲನಚಿತ್ರ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಸಿನಿಮಾಕ್ಕೂ ಕುಡ್ಲಕ್ಕೂ ಸಂಬಂಧವಿದೆ. ಮೂಲತಃ ಇಲ್ಲಿ ಬಳಸಿರುವ ಕನ್ನಡ ಸ್ವಲ್ಪ ಕರಾವಳಿ ಭಾಗದಲ್ಲಿ ಬಳಸುವ ಮಾದರಿ. ಅದರಲ್ಲೂ ಕುಡ್ಲ ಭಾಗದಲ್ಲೇ ಬಳಸುವ ಕೆಲವು ಅಪರೂಪದ ಶಬ್ದಗಳಿಗೆ ಇಲ್ಲಿ ಸ್ಥಾನ ನೀಡಲಾಗಿದೆ.
‘ಪೆಟ್ಟಿಸ್ಟ್’ ಎಂಬ ಪದ ತುಳುನಾಡಿನಲ್ಲಿ ಭಾರೀ ಫೇಮಸ್. ಆದರೆ, ಈ ಶಬ್ದ ಜಿಲ್ಲೆಯಿಂದ ಹೊರಭಾಗದವರಿಗೆ ಅಷ್ಟೊಂದು ಪರಿಚಿತವಲ್ಲ. ಆದರೆ, ಈ ಸಿನಿಮಾದಲ್ಲಿ ಇಂಥವು ಇವೆ. ಅದೂ ಕೂಡ ಮಕ್ಕಳ ಬಾಯಿಯಲ್ಲಿ ಕೇಳುವುದೇ ಆನಂದ. ಅದರಲ್ಲೂ ‘ಒಂದು ಮೊಟ್ಟೆಯ ಕಥೆ’ ಸಿನೆಮಾದ ರಾಜ್ ಬಿ. ಶೆಟ್ಟಿ ಅವರೇ ಇದಕ್ಕೆ ಸಂಭಾಷಣೆ ಬರೆದಿದ್ದಾರೆ. ಅಭಿಜಿತ್ ಮಹೇಶ್‌ರ ಸಹಕಾರವಿದೆ.
ಇದರೊಂದಿಗೆ ಇನ್ನೂ ಇರುವ ವಿಶೇಷವೆಂದರೆ ಬಹುತೇಕ ಚಿತ್ರಣ ನಡೆದಿದ್ದು ಕುಡ್ಲ ಅಂದರೆ ಮಂಗಳೂರು ಸುತ್ತಮುತ್ತಲೇ. ಕಾಸರಗೋಡು, ಮಂಜೇಶ್ವರ, ಕುಂಬಳೆ, ಉಪ್ಪಳ, ಮುಡಿಪು ಸಮೀಪದ ಕೈರಂಗಳ ಮತ್ತು ಮಂಗಳೂರು ಮುಂತಾದೆಡೆ 68 ದಿನ ಚಿತ್ರೀಕರಣ ನಡೆದಿತ್ತು. ಜತೆಗೆ ಮೈಸೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿತ್ತು. ವಿಶೇಷವೆಂದರೆ ಸುಮಾರು 134 ವರ್ಷಗಳ ಪುರಾತನವಾದ ತುಳುನಾಡಿನ ಕೈರಂಗಳ ಶಾಲೆಗೆ ಪ್ರಾಮುಖ್ಯ ಕೊಟ್ಟಿರುವುದು. ಇಷ್ಟೇ ಅಲ್ಲ, ಇದರಲ್ಲಿ ಅಭಿನಯಿಸಿದ ಹಲವು ಕಲಾವಿದರೂ ತುಳು ಚಲನಚಿತ್ರ ಲೋಕದವರು!ತುಳುನಾಡಿನಲ್ಲೂ ಕೆಲವು ಸರಕಾರಿ ಶಾಲೆಗಳು ಮುಚ್ಚುತ್ತಿರುವ ಹೊತ್ತಿದು. ಅಂಥ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚದಂತೆ ಕಾಳಜಿ ವಹಿಸುವುದೂ ಈ ಕನ್ನಡ ಚಲನಚಿತ್ರದಲ್ಲಿ ಸಿಗಬಹುದೇನೋ ?
ವಿಶೇಷವೆಂದರೆ ಈ ಸಿನೆಮಾದಲ್ಲಿ ನಾಯಕ-ನಾಯಕಿಯರೇ ಇಲ್ಲ. ಬದಲಾಗಿ ಮಕ್ಕಳದ್ದೇ ಜೀವಾಳ. ಜತೆಗೆ ಕನ್ನಡದ ಹಿರಿಯ ನಟ ಅನಂತನಾಗ್ ಅವರೂ ವಿಶೇಷ ಪಾತ್ರ ವಹಿಸಿದ್ದಾರೆ. ಕೋಸ್ಟಲ್‌ವುಡ್‌ನಲ್ಲಿ ಮಿಂಚಿಸಿರುವ ಖ್ಯಾತ ನಟ ಪ್ರಕಾಶ್ ತೂಮಿನಾಡು, ಲಕ್ಷ್ಮಣ್ ಕುಮಾರ್ ಮಲ್ಲೂರು, ಪ್ರದೀಪ್ ಆಳ್ವಾ ಕದ್ರಿ, ಚೇತನ್ ಜಿ. ಪಿಲಾರ್, ಚಂದ್ರಹಾಸ್ ಶೆಟ್ಟಿ, ಶಶಿರಾಜ್ ಕಾವೂರ್ ಸಹಿತ ರಂಗಭೂಮಿಯ ಬಹುತೇಕ ಕಲಾವಿದರು ಅಭಿನಯಿಸಿದ್ದಾರೆ.
15 ನಿಮಿಷ ನೋ ಟೇಕ್!
ಹಂಪನಕಟ್ಟೆಯ ಮಂಗಳೂರು ವಿ.ವಿಯಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡಲಾಗಿತ್ತು. ಮೂರು ದಿನದ ಸಿದ್ಧತೆ ನಡೆಸಿ 15 ನಿಮಿಷಗಳ ಒಂದು ದೃಶ್ಯ ಯಾವುದೇ ಟೇಕ್ ಇಲ್ಲದೆ ಮೂಡಿಬಂದಿತು 10 ಪುಟಗಳ ಡೈಲಾಗ್ ಅನ್ನು ಅನಂತ್ ನಾಗ್ ಅವರು ಒಂದೇ ಟೇಕ್‌ನಲ್ಲಿ ಮುಗಿಸಿದ್ದರು. ಇದಕ್ಕಾಗಿ 28 ಸಲ ರಿಹರ್ಸಲ್ ಮಾಡಲಾಗಿತ್ತು.
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere: ಉತ್ತಮ ಹಿಂಗಾರು: ಬಂಪರ್ ಇಳುವರಿ ನಿರೀಕ್ಷೆಯಲ್ಲಿ ಬೆಳೆಗಾರರು
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.