ಕರಾವಳಿಯಲ್ಲಿ “ಪೆಪ್ಪೆರೆರೆ ಪೆರೆರೆರೆ’ !


Team Udayavani, Oct 17, 2019, 5:00 AM IST

f-13

ರಂಗಭೂಮಿ, ತುಳು ಸಿನೆಮಾ ಹಾಗೂ ಕಿರುತೆರೆ ಮೂಲಕ ಹೆಸರು ಮಾಡಿದ ಕರಾವಳಿ ಹುಡುಗ ಶೋಭರಾಜ್‌ ಪಾವೂರು ಇದೀಗ ತುಳು ಸಿನೆಮಾ ಮೂಲಕ ಪ್ರೇಕ್ಷಕರ ಮುಂದೆ ಎದುರಾಗುತ್ತಿದ್ದಾರೆ. ತುಳುವಿನಲ್ಲಿ ಹೊಸ ಮ್ಯಾನರಿಸಂ ಹುಟ್ಟುಹಾಕಿದ ಶೋಭರಾಜ್‌ ಈ ಬಾರಿ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ನಟನೆಯ ಮೂಲಕವೂ ಸುದ್ದಿ ಮಾಡುತ್ತಿದ್ದಾರೆ.
ಇದಿಷ್ಟು ಅವರ ಕನಸಿನ ಸಿನೆಮಾ “ಪೆಪ್ಪೆರೆರೆ ಪೆರೆರೆರೆ’ಯ ವಿಷಯ. ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಎಲ್ಲೆಲ್ಲೂ ಹವಾ ಎಬ್ಬಿಸಿರುವ ಕೆಲವೇ ಕೆಲವು ಸಿನೆಮಾಗಳ ಪೈಕಿ ಶೋಭರಾಜ್‌ ಅವರ “ಪೆಪ್ಪೆರೆರೆ ಪೆರೆರೆರೆ’ ಸಿನೆಮಾ ಹೆಚ್ಚು ನಿರೀಕ್ಷೆ ಮೂಡಿಸಿದೆ.

ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಪ್ರಚಾರ ಕಾಣುತ್ತಿರುವ ಈ ಸಿನೆಮಾದ ಬಗ್ಗೆ ಶೋಭರಾಜ್‌, ಸಾಯಿಕೃಷ್ಣ, ಚೈತ್ರಾ ಶೆಟ್ಟಿ ಅವರ ವಿಭಿನ್ನ ಪ್ರಚಾರ ಶೈಲಿಯು ಗಮನಸೆಳೆಯುತ್ತಿದೆ. ಇದಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಅಂದಹಾಗೆ ಸಿನೆಮಾದ ಕೆಲಸವೆಲ್ಲ ಪೂರ್ಣವಾಗಿ ಈಗ ಬಿಡುಗಡೆಯ ತವಕದಲ್ಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಎರಡು ತಿಂಗಳೊಳಗೆ ಮಂಗಳವಾದ್ಯದ ಸ್ವರ ಮೊಳಗಲಿದೆ. ನಮ್ಮನ್ನು ಕಾಡುವ ಬಹುತೇಕ ಸಮಸ್ಯೆಗಳಿಗೆ ನಾವೇ ಕಾರಣ ಎಂಬ ಸಂದೇಶದೊಂದಿಗೆ ಸಿನೆಮಾ ರೆಡಿಯಾಗಿದೆ.

ಶೋಭರಾಜ್‌ ಪಾವೂರು ನಿರ್ದೇಶನ-ನಟನೆಯ ಈ ಸಿನೆಮಾದಲ್ಲಿ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರ್‌, ಸತೀಶ್‌ ಬಂದಲೆ, ಸಾಯಿಕೃಷ್ಣ, ದೀಪಕ್‌ ರೈ ಪಾಣಾಜೆ, ಜೆ.ಪಿ. ತೂಮಿನಾಡು, ಚೈತ್ರಾ ಶೆಟ್ಟಿ, ಮೈತ್ರಿ ಕಶ್ಯಪ್‌, ಪಿಂಕಿ ರಾಣಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ವಿಶೇಷವೆಂದರೆ ತೆಲಿಕೆದ ಬೊಳ್ಳಿ ದೇವದಾಸ್‌ ಕಾಪಿಕಾಡ್‌ ಅವರು ವಿಶೇಷ ಪಾತ್ರದಲ್ಲಿ ಈ ಸಿನೆಮಾದಲ್ಲಿ ಅಭಿನಯಿಸಲಿದ್ದಾರೆ.

ಶೋಭರಾಜ್‌ ಅವರು ತುಳು ರಂಗಭೂಮಿಯಲ್ಲಿ ಅರಳಿದ ಪ್ರತಿಭೆ. ಬಳಿಕ ಸಿನೆಮಾ ಮತ್ತು ಕಿರುತೆರೆಯಲ್ಲಿ ಅವರು ಮಾಡಿರುವ ಸಾಧನೆ ಉಲ್ಲೇಖನೀಯ. ಈ ಹಿಂದೆ “ಏಸ’ ಎಂಬ ಸಿನೆಮಾದಲ್ಲಿ ದುಡಿದು ಅದರಲ್ಲೇ ತನ್ನ ಪ್ರತಿಭೆಯನ್ನು ತೋರಿಸಿದವರು. ಕಥೆ, ಸಂಭಾಷಣೆಯಲ್ಲೂ ಕೈಯಾಡಿಸಿದ್ದಾರೆ. ಏಸಕ್ಕೂ ಇವರದ್ದೇ ಕಥೆ. ಅದೊಂದು ಯಕ್ಷಗಾನ ಕಲಾವಿದನನ್ನು ಕೇಂದ್ರೀಕರಿಸಿ ಹೆಣೆದ ಕಥೆ. ಈ ಸಿನೆಮಾ ಸ್ಟಾರ್‌ ಮಾನ್ಯತೆಯನ್ನೂ ಪಡೆದಿತ್ತು.

ಶೋಭರಾಜ್‌ ಅವರು ನಿರ್ದೇಶನದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗುರು ಬಾಯಾರ್‌ ಸಂಗೀತದಲ್ಲಿ ಮೂಡಿ ಬಂದಿರುವ ನಾಲ್ಕು ಹಾಡುಗಳು ಈ ಸಿನೆಮಾದಲ್ಲಿದೆ. ಹಾಡುಗಳ ಸಾಹಿತ್ಯ ಶಶಿರಾಜ್‌ ಕಾವೂರು ಹಾಗೂ ಉಮೇಶ್‌ ಮಿಜಾರು ಅವರದ್ದು. ಹಾಡುಗಳಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.

ದಿನೇಶ್‌ ಇರಾ

ಟಾಪ್ ನ್ಯೂಸ್

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

15-uv-fusion

Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.