UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ
Team Udayavani, Jan 13, 2025, 5:33 PM IST
ಓಟಸ್ಪರ್ಧೆಯಲ್ಲಿ ಸಮಯ ಏನಾದ್ರೂ ಭಾಗವಹಿಸಿದರೆ ಬಹುಶಃ ಅದಕ್ಕೆ ಮೊದಲನೆಯ ಸ್ಥಾನ. ಲೆಕ್ಕ ಹಾಕುವುದಕ್ಕೂ ಬಿಡುವು ಕೊಡದೆ ಕಾಲ ಓಡ್ತಾ ಇದೆ. 2024- ಈಗಷ್ಟೇ ಹೊಸ ವರ್ಷದ ಶುಭಾಶಯಗಳು, ಈ ವರ್ಷ ಎಲ್ಲರಿಗೂ ಒಳ್ಳೆಯದು ಮಾಡಲಿ ಎಲ್ಲದು ಒಳ್ಳೆಯದೇ ಆಗಲಿ ಅಂತ ಹಾರೈಸಿದಾಗಿತ್ತು. ಆದರೆ ಅದೇ ವರ್ಷಕ್ಕೆ ಈಗ ಗುಡ್ ಬಾಯ್ ಹೇಳ್ಳೋಕೆ ದಿನ ಗಣನೆ ಆರಂಭ ಆಗಿದೆ.
ಪ್ರತಿ ವರ್ಷ ಎಷ್ಟೋ ನಿರೀಕ್ಷೆ, ಭರವಸೆ, ಕನಸುಗಳಿಂದ ಆಗಮಿಸುತ್ತದೆ. ಅವುಗಳು ನೇರವೇರಿದೆಯೋ ಇಲ್ಲವೋ ಅನ್ನೋದು ಈ ಕೊನೆಯ ಘಳಿಗೆಯಲ್ಲಿ ಮೆಲುಕು ಹಾಕಲೇ ಬೇಕು. ಅಂದುಕೊಂಡದ್ದು ಈಡೇರಿದ್ದರೂ, ಇಲ್ಲದೆ ಹೋದರೂ ಅದಕ್ಕೆ ಜವಾಬ್ದಾರಿ ನಾವೇ ಹೊರತು ಕಾಲವಲ್ಲ. ಸುಮ್ಮನೇ ಕುಳಿತು ಸಮಯವೇ ಎಲ್ಲವನ್ನು ನೋಡಿಕೊಳ್ಳುತ್ತದೆ ಎನ್ನುವುದು ತಪ್ಪು. ನಮ್ಮ ಪರಿಶ್ರಮದ ಪ್ರಮಾಣ ವಿಮರ್ಶಿಸಿಕೊಳ್ಳುವ ಸರಿಯಾದ ಸಮಯವಿದು.
ಕಳೆದು ಹೋದ ಕಾಲವಂತು ಮರಳಲು ಸಾಧ್ಯವಿಲ್ಲ. ನಮ್ಮಿಂದಾದ ತಪ್ಪುಗಳನ್ನು ತಿದ್ದಿಕೊಂಡು, ಕಹಿ ನೆನಪುಗಳನ್ನು ಈ ವರ್ಷದಲ್ಲೇ ಬಿಟ್ಟು, ಹಳೆಯ ಸಂಬಂಧದೊಂದಿಗೆ ಹೊಸ ಬೆಸುಗೆ ಹಾಕುತ್ತಾ ಬರುವ ವರ್ಷವನ್ನು ಮತ್ತೂಂದು ನೂತನ ಭರವಸೆಯಲ್ಲಿ ಆರಂಭಿಸೋಣ. ಮತ್ತೆ ಯಾವುದು ಹುಸಿಯಾಗದಂತೆ ಎಲ್ಲವನ್ನು ನಿಭಾಯಿಸಿದರಾಯಿತು. ನಿರೀಕ್ಷೆಗೂ ಮೀರಿದ ನೆಮ್ಮದಿ ಆನಂದ ಹೊಸ ವರ್ಷ ಒದಗಿಸಲ್ಲಿ ಎಂಬುದು ಎಲ್ಲರ ಆಶಯವಾಗಲಿ.
ಕೇವಲ ಸಿಹಿ ನೆನಪಿನ ಬುತ್ತಿಯನ್ನು ಮಾತ್ರ ಹೊತ್ತು ನೂತನ ವರ್ಷಕ್ಕೆ ಕಾಲಿಡೋಣ. ಪ್ರತಿ ಕ್ಷಣ ಪ್ರತಿ ದಿನ ಹೊಸ ಪಾಠ ಕಲಿಯುತ್ತ ಸಾಗುವುದೇ ಜೀವನ. ಸುಖವೋ ಕಷ್ಟವೋ ಎಲ್ಲವನ್ನು ಎಲ್ಲರೊಂದಿಗೆ ಬೆರೆತು ಕಲಿತರಾಯಿತು. ಅನುಭವಗಳ ಸಾಲಿಗೆ ಈ ವರ್ಷದ ಕೊಡುಗೆ ಅ ಧಿಕವಾಗಿದ್ದರೆ ಹೊಸ ವರ್ಷದಲ್ಲಿ ಅದಕ್ಕಿಂತ ಉತ್ತಮ ಉಡುಗರೆ ಸಿಗಲು ಸಾಧ್ಯವಿಲ್ಲ.
ಇಷ್ಟು ದಿನದ ಪ್ರಯಾಣಕ್ಕಿಂತ ಮುಂದಿನ ಜೀವನದ ಪ್ರವಾಸವನ್ನು ಸುಂದರವಾಗಿರಬೇಕು. ಬದುಕಿನುದ್ದಕ್ಕೂ ಆನಂದ ನೀಡುವ ವಿನೂತನ ನೆನಪು ಹಾಗು ಅನುಭವವನ್ನು ಈ ವರ್ಷದಲ್ಲಿ ಹೆಚ್ಚಾಗಿ ರೂಪಿಸುವ ಸಣ್ಣ ಸಾಹಸ ನಮ್ಮದಾಗಲಿ.
-ಪೂಜಾ ಹಂದ್ರಾಳ ಶಿರಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.