UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ


Team Udayavani, Jan 12, 2025, 5:20 PM IST

16

ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹೊಸ ವರ್ಷ ಎಂಬುದು ನಮಗೆಲ್ಲ ತಿಳಿದ ಸಂಗತಿಯೇ ಆಗಿದೆ. ಹಾಗಿದ್ದರೂ ಕ್ಯಾಲೆಂಡರ್‌ ಬದಲಾವಣೆಯ ಜತೆಗೆ ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಅನುಕರಣೆ ಸ್ವಲ್ಪ ಮಟ್ಟಿಗೆ ಮಾಡಿದರೆ ಅದು ತಪ್ಪೇನು ಆಗಲಾರದು. ಅದರಂತೆ ಈ ವರ್ಷ ಆರಂಭಕ್ಕು ಮುನ್ನವೇ ಕೆಲವು ನಿರೀಕ್ಷೆಗಳು ಇದ್ದೇ ಇರಲಿದೆ. ಕೈ ಗೂಡದ ಅನೇಕ ಕೆಲಸ ಕಾರ್ಯಗಳು ಈ ಬಾರಿಯಾದರು ಈಡೇರಲಿ, ಸುಖ ದುಃಖಗಳನ್ನು ಒಂದೇ ಪ್ರಕಾರವಾಗಿ ಸ್ವೀಕರಿಸುವ ಮನೋಭಾವ ಸೃಷ್ಟಿಯಾಗಬೇಕಿದೆ. ಹೊಸ ವರ್ಷದ ಕೆಲವು ನಿರ್ಣಯಗಳಲ್ಲಿ ಈ ಬಾರಿ ಒಂದನ್ನು ಅಗತ್ಯವಾಗಿ ನಾವೆಲ್ಲ ಪಾಲಿಸಲೇಬೇಕಿದೆ.

ಮೊಬೈಲ್‌ ಮತ್ತು ಇತರ ಗ್ಯಾಜೆಟ್‌ ಬಳಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು ಹೀಗೆ ಮೊಬೈಲ್‌ ದಾಸರಾಗುವವರಿಗೆ ಈಡೀ ಪ್ರಪಂಚವೇ ಯಾಂತ್ರಿಕವಾಗಿ ಕಾಣುತ್ತಿದೆ. ಸಂಬಂಧ, ಭಾವನೆ ಇವುಗಳ ಮೌಲ್ಯ ಕಡಿಮೆಯಾಗುತ್ತಿದೆ. ಓದುವುದು, ಕುಟುಂಬಕ್ಕಾಗಿ ಸಮಯ ನೀಡುವುದು ಎಲ್ಲವೂ ಕೂಡ ಇಂದು ಅಪರೂಪವೆನಿಬಿಟ್ಟಿದೆ. ಇದಕ್ಕೆಲ್ಲ ಮುಖ್ಯ ಕಾರಣ ನಾವು ಮೊಬೈಲ್‌ ಹಾಗೂ ಇತರ ಗ್ಯಾಜೆಟ್‌ ಬಳಕೆ ಮಾಡುವುದಾಗಿದೆ.

ನಾನು ಕರಕುಶಲ ಮತ್ತು ಕೈಮಗ್ಗದ ವಸ್ತು ಪ್ರದರ್ಶನ ಮತ್ತು ಮಾರಾಟಕ್ಕೆ ಅಕಸ್ಮಾತಾಗಿ ಹೋಗಿದ್ದೆ. ಅಲ್ಲಿ ಮಣ್ಣಿನ ಮಡಿಕೆ, ಪಾತ್ರೆ, ಕೈಮಗ್ಗದ ಸೀರೆ, ತೆಂಗಿನ ಗರಿಯಿಂದ ಮಾಡಿದ ಅಲಂಕಾರಿಕ ವಸ್ತು ಎಲ್ಲವು ಇತ್ತು. ನನಗೇಕೋ ಕೈಮಗ್ಗದ ಸೀರೆ ತಗೋಬೇಕು ಅಂತ ಮನಸಾಯಿತು. ಆದರೆ ನನ್ನ ಹತ್ತಿರ ಮೊಬೈಲ್‌ ಮಾತ್ರ ಇತ್ತು. ಪರ್ಸನಲ್ಲಿ ಹಣ ಇಟ್ಟುಕೊಂಡಿರಲಿಲ್ಲ ಯಾಕೆಂದರೆ ಗೂಗಲ್‌ ಪೇ ಇರುತ್ತದೆಂಬ ಉದಾಸಿನದಿಂದ. ಆದರೆ ಮೊಬೈಲ್‌ ಚಾರ್ಜ್‌ ಪೂರ್ತಿ ಖಾಲಿಯಾಗಿ ಮೊಬೈಲ್‌ ಸ್ವಿಚ್‌ ಆಫ್ ಆಯಿತು. ಎ.ಟಿ.ಎಂ ಇಂದ ಹಣ ತರುವಷ್ಟು ಸಮಯ ಇರಲಿಲ್ಲ. ಎಲ್ಲವನ್ನ ಗಮನಿಸುತ್ತ ಇದ್ದ ಸೀರೆ ಮಾರಲು ನಿಂತಿದ್ದ ಹುಡುಗ ‘ನೀವು ಸೀರೆ ತೆಗೆದುಕೊಂಡು ಹೋಗಿ ಅನಂತರ ಗೂಗಲ್‌ ಪೇ ಮಾಡಿ’ ಎಂದು ಹೇಳಿದ. ನಾನು ಯಾರೋ ಏನೋ, ಅವನು ಯಾರೋ ಏನೋ, ಪರಿಚಯವೇ ಇಲ್ಲ. ಬೇಡ ಎಂದೆ, ಅದಕ್ಕೆ ಅವನು ‘ಪರವಾಗಿಲ್ಲ ನನ್ನ ಮೊಬೈಲ್‌ ನಂಬರ್‌ ತೆಗೆದುಕೊಳ್ಳಿ, ಸೀರೆ ತೆಗೆದುಕೊಂಡು ಹೋಗಿ, ಮನೆಗೆ ಹೋದಮೇಲೆ ಗೂಗಲ್‌ಪೇ ಮಾಡಿ’ ಎಂದ. ನನಗೆ ಬೇರೆ ಎಲ್ಲಿಯೂ ಕೈಮಗ್ಗದ ಸೀರೆ ಸಿಗದ ಕಾರಣ ಆಯ್ತು ಅಂದು ತೆಗೆದುಕೊಂಡು ಬಂದೆ. ನನಗೋ ಅವರಿಗೆ ಹಣ ಕಳಿಸುವ ತನಕ ತೃಪ್ತಿಯೇ ಇಲ್ಲ. ಮರೆಗುಳಿಯಾದ ನನಗೆ, ಎಲ್ಲಿ ಮರೆಯುತ್ತೇನೋ ಎಂಬ ಭಯ.

ಮನೆಗೆ ಬಂದು ಮೊಬೈಲ್‌ಅನ್ನು ಚಾರ್ಜ್‌ಗೆ ಇಟ್ಟು, ನೆನಪಿನಿಂದ ಸೀರೆಯ ಹಣವನ್ನು ಆ ಹುಡುಗನಿಗೆ ತಲುಪಿಸಿದೆ. ಧನ್ಯವಾದಗಳು ಅಂತ ಸಂದೇಶ ಕಳುಹಿಸಿದೆ. ಆದರೂ, ನನಗೇಕೋ ಆಶ್ಚರ್ಯ! ಪರಿಚಯವೇ ಇಲ್ಲದವರು ಹೇಗೆ ನಂಬಿಕೆಯಿಂದ ಕೊಟ್ಟರು ಅಂತ. ಅದರಲ್ಲೂ ಈನ ಕಾಲದಲ್ಲಿ ನಂಬಿಕೆ ಎಂಬ ಪದಕ್ಕೆ ಅರ್ಥಹುಡುಕುವಾಗ ಅಪರಿಚಿತ ನನಗೆ ಸಹಾಯ ಮಾಡಿದ್ದು ಆಶ್ಚರ್ಯ ಪಡುವ ವಿಚಾರವಾಯಿತು. ಅದಕ್ಕೆ ಪರಿಚಯ ಇಲ್ಲದಿದ್ದರೂ ಹಣ ನೀಡದೇ, ಸೀರೆ ಕೊಟ್ಟದ್ದಕ್ಕೆ ಧನ್ಯವಾದಗಳು ಎಂದು ಪುನಃ ಸಂದೇಶ ಕಳುಹಿಸಿದೆ. ಆತ ಹೇಳಿದ, ‘ನಂಬಿಕೆಯೇ ದೇವರು’. ಆಹಾ ಎಂಥ ಮಾತು ಅಲ್ಲವೇ. ಎಲ್ಲರ ಮೇಲು ನಂಬಿಕೆ ಇಡಬೇಕು. ನಮ್ಮನ್ನು ಯಾರಾದರೂ ನಂಬುತ್ತಾರೆ ಎಂದರೆ ಅವರಿಗೆ ಸುಳ್ಳು ಹೇಳುವುದು, ಮೋಸ ಮಾಡುವುದು ಎಲ್ಲ ಮಾಡಬಾರದು. ನಿಜಕ್ಕೂ ಈ ಮಾತು ಹೃದಯ ತುಂಬಿ ಬಂತು. ಇಂತಹ ನಂಬಿಕೆಯ ಸಂಬಂಧಗಳನ್ನು ಕಾಪಾಡಿಕೊಳ್ಳಬೇಕು ಎಂಬ ನೆಲೆಯಲ್ಲಿ ನಾನು ಹೊಸ ವರ್ಷವನ್ನು ನಿರೀಕ್ಷಿಸುತ್ತಿದ್ದೇನೆ.

ಕವಿತ ಎಸ್‌., ಮಣಿಪಾಲ

ಟಾಪ್ ನ್ಯೂಸ್

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

13

UV Fusion: ಬದಲಾವಣೆ ಜಗದ ನಿಯಮ

12(1

UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ

11

UV Fusion: ಸಮಯ ಪಾಲನೆ ಅನುಸರಿಸೋಣ

10

UV Fusion: ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.