UV Fusion: ಮನಸ್ಸಿನ ಏಕಾಗ್ರತೆಗೆ ಡಿಜಿಟಲ್‌ ಉಪವಾಸವೂ ಅನಿವಾರ್ಯ


Team Udayavani, Jan 14, 2025, 5:20 PM IST

8

ಮೊಬೈಲ್‌ ಇಲ್ಲದೇ ಜೀವನ ನಡೆಸುವುದು ಅಸಾಧ್ಯವೇ? ಎಂದು ಯಾರನ್ನಾದರೂ ಪ್ರಶ್ನಿಸಿದಾಗ ಹೌದು ಎಂದೇ ಹೇಳುತ್ತಾರೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಈ ಮೊಬೈಲ್‌ ಎಂಬ ಸಾಧನ ನಮ್ಮ ನಿತ್ಯದ ಜೀವನವನ್ನು ಅಷ್ಟೊಂದು ಪ್ರಭಾವಿಸಿದೆ ಎಂದು ಹೇಳಬಹುದು. ಮುಂದುವರೆದು, ಈ ಹಿಂದೆ ಮೊಬೈಲ್‌ ಆವಿಷ್ಕಾರವಾಗುವ ಮೊದಲು ನಮ್ಮ ದೈನಂದಿನ ಜೀವನ ಸುಖಕರವಾಗಿತ್ತಲ್ಲವೇ? ಜೀವನ ನಡೆಸುವುದಕ್ಕೆ ಏನಾದರೂ ಅಡೆತಡೆಗಳಿದ್ದವೇ? ಎಂದು ಅವಲೋಕಿಸಿದಾಗ ಯಾವ ಅಡೆತಡೆಗಳಿಲ್ಲದೇ, ಅತ್ಯಂತ ಸುಖಕರವಾದ ಸಂತೃಪ್ತಿ ಜೀವನವನ್ನು ಅಂದು ಕೂಡ ನಡೆಸುತ್ತಿದ್ದೆವು ಎಂಬುದೇ ನಮ್ಮ ಉತ್ತರವಾಗಲಿದೆ. ಹಾಗಾದರೆ ಮೊಬೈಲ್‌ ಬಳಕೆಯಲ್ಲಿ ಸಮಸ್ಯೆ ಇರುವುದೆಲ್ಲಿ? ಎಂದು ಪ್ರಶ್ನಿಸಿದಾಗ ಅದನ್ನು ಅವಶ್ಯಕತೆಗೆ ತಕ್ಕಂತೆ ಹಿತಮಿತವಾಗಿ ಬಳಸಬೇಕೆನ್ನುವುದು. ವಿಜ್ಞಾನದ ಅದ್ಭುತವಾದ ಆವಿಷ್ಕಾರಗಳು ಇಂದು ಮಾನವನ ಜೀವನವನ್ನು ಸಾಕಷ್ಟು ಪ್ರಭಾವಿಸಿವೆ. ಅದರಲ್ಲಿ ಮೊಬೈಲ್‌ ಆವಿಷ್ಕಾರವೂ ಒಂದು. ಆದರೆ ಯಂತ್ರಗಳ ಮೇಲಿನ ಅತಿಯಾದ ಅವಲಂಬನೆಯಿಂದ ಮಾತ್ರ ಹಲವಾರು ದುಷ್ಪರಿಣಾಮಗಳು ಉದ್ಭವಿಸಿದವು ಎನ್ನಬಹುದು. ಯಾವ ಸಾಧನಗಳನ್ನು ಮನುಷ್ಯ ಆವಿಷ್ಕರಿಸಿದನೋ ಅವು ಅವನ ನಿಯಂತ್ರಣದಲ್ಲಿ ರಬೇಕಾಗಿತ್ತು, ಆದರೆ ಆ ಸಾಧನಗಳಿಗೆ ದಾಸನಾಗಿ ಅವುಗಳೇ ಮನುಷ್ಯನನ್ನು ನಿಯಂತ್ರಿಸುವ ಮಟ್ಟಿಗೆ ಹೋಗಿರುವುದು ಮಾತ್ರ ನೋವಿನ ಸಂಗತಿಯಾಗಿದೆ.

ಮೊಬೈಲ್‌ ವ್ಯಸನದಿಂದಾಗಿ ಹಲವಾರು ಸಮಸ್ಯೆಗಳು ಉದ್ಭವಿಸಿದ್ದು, ಕೆಲವುಗಳನ್ನು ಹೆಸರಿಸುವುದಾದರೆ ಏಕಾಗ್ರತೆಯ ಕೊರತೆ, ಸೃಜನಶೀಲತೆಯ ಕೊರತೆ, ದೈಹಿಕ ಅನಾರೋಗ್ಯ, ನಿದ್ರಾಹೀನತೆ, ಕೆಲಸ ಕಾರ್ಯಗಳನ್ನು ಮುಂದೂಡುವುದು, ಏಕಾಂಗಿತನ ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಅದಕ್ಕೆ ಅಂತ್ಯವಿಲ್ಲವೆಂದೇ ಹೇಳಬಹುದು. ಮೊಬೈಲ್‌ ಚಾರ್ಜಿಂಗ್‌ ಇಟ್ಟಾಗ ಅದು ಪೂರ್ಣವಾಗಿ ಚಾರ್ಜ್‌ ಆಗಲು ಕೂಡ ಬಿಡದೇ ಹತ್ತು ಬಾರಿ ಹೋಗಿ ಯಾರಾದರೂ ಕರೆ ಮಡಿದ್ರಾ? ಮೆಸೇಜ್‌ ಮಾಡಿದ್ರಾ? ಎಂದು ಪರೀಕ್ಷಿಸುವುದು, ಸೋಶಿಯಲ್‌ ಮೀಡಿಯಾದಲ್ಲಿ ಯಾವುದಾದರೂ ಪೋಸ್ಟ್‌ ಮಾಡಿದಾಗ ಅದಕ್ಕೆ ಎಷ್ಟು ಲೈಕ್ಸ್‌ ಬಂದಿವೆ? ಕಮೆಂಟ್ಸ ಬಂದಿವೆ? ಎಂದು ಪದೇ ಪದೆ ನೋಡುವುದು ಇವೆಲ್ಲವೂ ಕೂಡ ಮೊಬೈಲ್‌ ವ್ಯಸನಿಗಳಾಗುತ್ತಿರುವುದರ ಸಂಕೇತಗಳೇ ಆಗಿರುತ್ತವೆ. ಒಂದು ವೇಳೆ ಲೈಕ್ಸ್‌ ಮತ್ತು ಕಮೆಂಟ್ಸ ಕಡಿಮೆಯಾದರೆ ಮಾನಸಿಕವಾಗಿ ಕುಗ್ಗಿ ಹೋಗುವುದರ ಜತೆಗೆ ಖನ್ನತೆಗೆ ಒಳಗಾಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಹಾಗಾದರೆ ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರವೆಂದರೆ ಅದುವೇ ಡಿಜಿಟಲ್‌ ಉಪವಾಸವೆಂದು ಹೇಳಬಹುದು.

ಡಿಜಿಟಲ್‌ ಉಪವಾಸವೆಂದರೆ ನಿಗದಿತ ಸಮಯದವರೆಗೆ ಡಿಜಿಟಲ್‌ ಸಾಧನಗಳು ಮತ್ತು ಇಂಟರ್ನೆಟ್‌ ಅನ್ನು ಬಳಸುವುದರಿಂದ ಸ್ವಯಂಪ್ರೇರಣೆಯಿಂದ ದೂರವಿರುವುದಾಗಿದೆ. ಯಾವುದೇ ಚಟವನ್ನು ಏಕಾಏಕಿ ಬಿಡಲಾಗದು. ಇದಕ್ಕೆ ಸಂಕಲ್ಪದ ಅಗತ್ಯವಿದೆ. ಹೀಗಾಗಿ ಈ ಅಭ್ಯಾಸವನ್ನು ಮೊದಲು ಕೆಲವು ನಿಮಿಷಗಳಿಂದ ಆರಂಭಿಸಿ ಅಗತ್ಯಕ್ಕೆ ತಕ್ಕಂತೆ ಹಲವಾರು ಗಂಟೆಗಳವರೆಗೂ ವಿಸ್ತರಿಸುತ್ತಾ ಸಾಗಬಹುದು. ಕಾಲಕ್ರಮೇಣ ವಾರದಲ್ಲಿ ಒಂದು ದಿನ ಮೊಬೈಲ್‌ ಬಳಸದೇ ಇರುವ ದೃಢ ಸಂಕಲ್ಪ ಮಾಡುವುದು. ಅಂದು ಮನೆಯ ಕುಟುಂಬದ ಸದಸ್ಯರೊಂದಿಗೆ ಬೆರೆತು ಅನ್ಯೋನ್ಯವಾಗಿ ಮಾತನಾಡಲು ನಿರ್ಧರಿಸುವುದು. ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುತ್ತದೆ ಮತ್ತು ಮಾಡುವ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಲು ಕೂಡ ಸಹಾಯ ಮಾಡುತ್ತದೆ. ಆನ್‌ಲೈನ್‌ ವಿಷಯಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವಿಕೆಯು ಹಲವಾರು ರೀತಿಯ ಆತಂಕ, ಒತ್ತಡ, ಅಸರ್ಪಕತೆಯ ಭಾವನೆಗಳಿಗೆ ಕಾರಣವಾಗಬಹುದು. ಹೀಗಾಗಿ ಅದರಿಂದ ದೂರವಿರುವುದು ನಕಾರಾತ್ಮಕ ಭಾವನೆಗಳನ್ನು ನಿವಾರಿಸಲು, ಆರೋಗ್ಯಕರ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ಡಿಜಿಟಲ್‌ ಉಪವಾಸವು ನಮ್ಮ ಕಣ್ಣುಗಳು ಮತ್ತು ಮನಸ್ಸಿಗೆ ವಿರಾಮವನ್ನು ನೀಡುವುದರಿಂದ ಸುಖಕರವಾದ ನಿದ್ರೆ ಮಾಡಲು ಸಹಾಯಕವಾಗಿದೆ. ಆ ಮೂಲಕ ದೇಹಕ್ಕೆ ಉತ್ತಮ ವಿಶ್ರಾಂತಿಯೂ ಲಭ್ಯವಾಗುತ್ತದೆ. ನೈಜ ಪ್ರಪಂಚದೊಂದಿಗೆ ನಮ್ಮನ್ನು ನಾವು ಮರು ತೊಡಗಿಸಿಕೊಳ್ಳಲು, ಮಾನವೀಯ ಸಂಬಂಧಗಳನ್ನು ಗಟ್ಟಿಯಾಗಿ ಬೆಸೆಯಲು ಉತ್ತೇಜಿಸುತ್ತದೆ. ಡಿಜಿಟಲ್‌ ಉಪವಾಸವು ನಮ್ಮನ್ನು ಹೆಚ್ಚು ಪ್ರಸ್ತುತಗೊಳಿಸುತ್ತದೆ. ಅಂದರೆ ನಮ್ಮ ಸುತ್ತಮುತ್ತಲು ನಡೆಯುವ ಹಲವಾರು ಸಣ್ಣಪುಟ್ಟ ವಿಷಯಗಳಲ್ಲಿಯೂ ಸಂತೋಷವನ್ನು ಹುಡುಕುವಂತೆ ಮಾಡುತ್ತದೆ. ಉದಾಹರಣೆಗೆ ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವುದು. ಅಂತರ್ಗತವಾಗಿರುವ ಸೃಜನಶೀಲತೆಯ ಚಿಂತನೆಗಳು ಹೊರಬರಲು ಕೂಡ ಪ್ರೇರೇಪಿಸುತ್ತದೆ. ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮನಸ್ಸು ಚಿಂತನೆ ನಡೆಸುವುದರಿಂದ ದೈಹಿಕ ಆರೋಗ್ಯವೂ ಸುಧಾರಿಸಬಲ್ಲದು. ಪುಸ್ತಕಗಳನ್ನು ಓದುವ ಹವ್ಯಾಸವೂ ವೃದ್ಧಿಯಾಗುತ್ತದೆ.

ಒಟ್ಟಾರೆಯಾಗಿ ನಾವು ಆರೋಗ್ಯವಾಗಿರಬೇಕೆಂದರೆ ಆಹಾರವನ್ನು ಮಿತಗೊಳಿಸಿ ಹೇಗೆ ಉಪವಾಸವನ್ನು ಕೈಗೊಳ್ಳುತ್ತೆವೆಯೋ ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ ಡಿಜಿಟಲ್‌ ಉಪವಾಸವೂ ಕೂಡ ಅಷ್ಟೇ ಮಹತ್ವದ ಸಂಗತಿ ಎಂಬುದನ್ನು ಮರೆಯದಿರೋಣ. ದಿನಕ್ಕೆ ಕೆಲವು ಗಂಟೆ ಅಥವಾ ವಾರಕ್ಕೊಮ್ಮೆಯಾಗಲಿ, ನಮ್ಮ ಅನುಕೂಲತೆಗೆ ತಕ್ಕಂತೆ ಸಮಯವನ್ನು ಹೊಂದಾಣಿಕೆ ಮಾಡಿಕೊಂಡು ಡಿಜಿಟಲ್‌ ಉಪವಾಸವನ್ನು ಅಳವಡಿಸಿಕೊಳ್ಳುವುದರತ್ತ ಚಿಂತಿಸೋಣ.

-ರಾಜು ಭೂಶೆಟ್ಟಿ, ಹುಬ್ಬಳ್ಳಿ

ಟಾಪ್ ನ್ಯೂಸ್

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Motherhood: ತಾಯ್ತನದ ಪ್ರೀತಿ..

12-uv-fusion

Mother: ಅಮ್ಮಾ ನಿನಗೂ ಅವಕಾಶ ಸಿಗಬೇಕಿತ್ತು!

11-uv-fusion

UV Fusion: ದುಡುಕಿನ ತೊಡಕುಗಳಿಗೆ ತಾಳ್ಮೆಯೇ ಮದ್ದು

13

UV Fusion: ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು…

12

UV Fusion: ನಿಮ್ಮೊಳಗಿರಲಿ ಜೀವಕಳೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.