UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ


Team Udayavani, Nov 20, 2024, 11:40 AM IST

11

ಪಾಡ್ದನಗಳು ತುಳುನಾಡಿನ ಜನಪದ ಸಾಹಿತ್ಯದ ಹೃದಯವಾಗಿದ್ದು, ಇವುಗಳಲ್ಲಿ ಪ್ರದೇಶದ ಜನಜೀವನ, ಆಚರಣೆಗಳು, ಪುರಾಣಗಳ ಕಥೆಗಳು ಮತ್ತು ದೈವಸಂಸ್ಕೃತಿಯ ಚಿತ್ರಣಗಳಿವೆ. ಇವು ವಾಚಿಕ ಪರಂಪರೆಯ ಮೂಲಕ ಪೀಳಿಗೆಗಳಿಂದ ಪೀಳಿಗೆಗೆ ಬಳುವಳಿ ಬಂದಿದ್ದು, ಯಾವುದೇ ರೀತಿಯ ಬರವಣಿಗೆಯ ದಾಖಲೆಗಳಿಲ್ಲದೆ, ಕೇವಲ ಗಾಯನದ ಮೂಲಕವೇ ಪಾಡ್ದನಗಳು ಜೀವಂತವಾಗಿವೆ.

ಸಾಂಪ್ರದಾಯಿಕವಾಗಿ ಇವುಗಳನ್ನು ದೈವಸ್ಥಾನಗಳಲ್ಲಿ, ದೇವಸ್ಥಾನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಹಾಡಲಾಗುತ್ತದೆ. ಪಾಡªನಗಳಲ್ಲಿ ಶೌರ್ಯ, ತತ್ವ ಮತ್ತು ಶಕ್ತಿಯ ಕಥನಗಳನ್ನು ಉಲ್ಲೇಖೀಸಲಾಗಿದೆ. ಇಷ್ಟೊಂದ ಐತಿಹಾಸಿಕ ಪರಂಪರೆ, ಮಹತ್ವವುಳ್ಳ ಈ ಪಾಡ್ದನ ಪರಂಪರೆ ಈಗ ನಿಧಾನವಾಗಿ ನಶಿಸುತ್ತಿರುವುದು ಕಳವಳಕಾರಿ ಸಂಗತಿ. ಒಂದು ಕಾಲದಲ್ಲಿ ಪ್ರತೀ ಹಬ್ಬ, ಸಮಾರಂಭದಲ್ಲಿ ಅನಿವಾರ್ಯವಾಗಿದ್ದ ಪಾಡ್ದನಗಳಿದ್ದವು, ಆದರೆ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿ ಕೇಳಿಬರುತ್ತಿವೆ. ಸಮಾಜದಲ್ಲಿನ ಬದಲಾವಣೆ, ಆಧುನೀಕರಣದ ಭರಾಟೆಯಿಂದ ಇವು ನಶಿಸುತ್ತಿದೆ ಎಂದರೆ ತಪ್ಪಿಲ್ಲ.
ಈಗಿನ ಯುವ ಪೀಳಿಗೆಗೆ ಪಾಡ್ದನಗಳ ಮಹತ್ವ ತಿಳಿದಿಲ್ಲ. ಇತ್ತೀಚಿನ ಕೆಲವು ದಶಕಗಳಲ್ಲಿ ಪಾಡ್ದನಗಳ ಕುರಿತು ಯುವಜನರಲ್ಲಿ ಆಸಕ್ತಿಯೂ ಕಡಿಮೆಯಾಗಿರುವುದು ಗೋಚರಿಸುತ್ತದೆ. ಆಧುನಿಕ ಸಂಗೀತ, ಪಾಶ್ಚಾತ್ಯ ಸಂಗೀತ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಸಂಗೀತವನ್ನು ಉತ್ಪಾದಿಸುವ ಸೌಕರ್ಯಗಳ ನಡುವೆ ಪಾಡ್ದನಗಳ ಹಳೆಯ ಸೊಗಡು ಮೂಲೆಗುಂಪುಸೇರುತ್ತಿದೆ. ಬದಲಾಗುತ್ತಿರುವ ಜೀವನಶೈಲಿ, ಸಾಮಾಜಿಕ ಬದಲಾವಣೆಗಳೂ ಪಾಡ್ದನ ಸಂಸ್ಕೃತಿಯ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎನ್ನಬಹುದು.

ಶಾಲೆ ಮತ್ತು ಕಾಲೇಜುಗಳಲ್ಲಿ ಪಾಡ್ದನಗಳ ಕುರಿತಾದ ಪಠ್ಯಗಳಿಲ್ಲದಿರುವು ದರಿಂದ ಮುಂದಿನ ಪೀಳಿಗೆಗೆ ಅದನ್ನು ದಾಟಿಸುವ ಕೆಲಸವಾಗುತ್ತಿಲ್ಲ. ಇದಲ್ಲದೆ ಪಾಡ್ದನಗಳನ್ನು ಗಾಯನ ಮಾಡುವ ಹಿರಿಯರು ಕಾಲ ವಶರಾದಂತೆ ಪಾಡ್ಡನಗಳ ಕುರಿತು ಹೊಸ ಪೀಳಿ ಕಡಿಮೆ ಆಸಕ್ತಿ ತೋರಿಸದಿರುವುದು ಈ ಸಂಸ್ಕೃತಿಯ ಜೀವಂತಿಕೆಗೆ ತೊಡಕಾಗಿದೆ.

ಕೃಷಿ, ವ್ಯವಸಾಯದ ಅವಸಾನವೂ ಪಾಡªನಗಳ ಮೇಲೆ ಪ್ರಭಾವ ಬೀರಿದೆ. ಏಕೆಂದರೆ ಪಾಡ್ದನ ಹುಟ್ಟಿದ್ದೇ ಕೃಷಿಯಿಂದ ಎನ್ನಬಹುದು. ಭತ್ತ ನಾಟಿ, ಕೊಯ್ಲು ಮುಂತಾದ ಸಂದರ್ಭಗಳಲ್ಲಿ ಪಾಡ್ದನಗಳನ್ನು ಹಾಡಲಾಗುತ್ತಿತ್ತು. ಇವುಗಳನ್ನು ಕಬಿತ/ ಕಬಿತೆ ಎನ್ನುತ್ತಾರೆ. ಕಬಿತೆ ಹಾಡುಗಳು ಸಣ್ಣ ಸಾಲುಗಳನ್ನು ಒಳಗೊಂಡಿರುತ್ತವೆ ಮತ್ತು ಸಾಮಾನ್ಯವಾಗಿ ದೇವತೆಗಳ ಸ್ತುತಿಗಾಗಿ ಬಳಸಲಾಗುತ್ತದೆ. ಅವು ಕೃಷಿ ಚಟುವಟಿಕೆಗಳ ಮಹತ್ವವನ್ನು ವರ್ಣಿಸುತ್ತವೆ. ಹೊಲಗಳಲ್ಲಿ ನೇಜಿ ನೆಡುವ ಸಂದರ್ಭದಲ್ಲಿ ಒಬ್ಟಾಕೆ ಹಿರಿಯ ಕೆಲಸಗಾರ್ತಿ ಕಬಿತೆಯನ್ನು ಹಾಡಲು ಪ್ರಾರಂಭಿಸಿದಾಗ, ಇತರರು ಪುನರಾವರ್ತಿಸುತ್ತಾರೆ ಮತ್ತು ಹಾಡುತ್ತಾರೆ. ಓ ಬೇಲೆ ಮತ್ತು ಓ ಮಂಜೊಟ್ಟಿ ಗೊನ ಕೆಲವು ಜನಪ್ರಿಯ ಭತ್ತದ ಜಾನಪದ ಹಾಡುಗಳು. ಪ್ರಸ್ತುತ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ತೀರಾ ಇಳಿಮುಖವಾಗಿದೆ. ಅದರ ಜತೆಗೆ ಗದ್ದೆಗಳಲ್ಲಿ ಕೆಲಸ ಮಾಡುವವರ ಸಂಖ್ಯೆಯೂ ಕೂಡ.

ಪ್ರಸ್ತುತ ಡಿಜಿಟಲ್‌ ಕ್ರಾಂತಿಯು ಉತ್ತುಂಗದಲ್ಲಿರುವುದರಿಂದ ಹಲವು ಸಂಘಟನೆಗಳು, ಸಂಘಗಳು ಮತ್ತು ಸಂಗೀತ ವಿಭಾಗಗಳು ಈ ಪಾಡ್ದನಗಳನ್ನು ಸಂಗ್ರಹಿಸಲು, ದಾಖಲಿಸಲು ಮತ್ತು ಹಂಚಲು ಪ್ರಯತ್ನಿಸುತ್ತಿವೆ. ಇಂತಹ ಸಂಘಟನೆಗಳು ತುಳುವಿನಲ್ಲಿ ಪಾಡ್ದನಗಳ ಪ್ರಚಾರಕ್ಕಾಗಿ ಸ್ಪರ್ಧೆಗಳು, ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ಆಯೋಜಿಸುತ್ತಿವೆ. ಸಾಮಾಜಿಕ ಮಾಧ್ಯಮಗಳು ಮತ್ತು ವೀಡಿಯೋ ಹಂಚಿಕೊಳ್ಳುವ ಇತರ ವೇದಿಕೆಗಳು ಪಾಡ್ದನಗಳನ್ನು ಸಾಮೂಹಿಕವಾಗಿ ಹರಡುವ ಪ್ರಯತ್ನ ಮಾಡಲಾಗುತಿದೆಯಾದರು, ಇವುಗಳ ಜತೆ ಪಾಡ್ದನಗಳ ಉಳಿವಿಗೆ ಇನ್ನಷ್ಟು ಕ್ರಮ ಕೈಗೊಳ್ಳುವ ಅಗತ್ಯವಿದೆ.

-ಅರ್ಚನಾ ಸಾಲ್ಯಾನ್‌, ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ಮೋಹಿನಿ

Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ಮೋಹಿನಿ

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

Hit & Run: ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

1-bagalkote

Bagalkote: ಹೇರ್ ಡ್ರೈಯರ್ ಸ್ಪೋಟಗೊಂಡು ಮಹಿಳೆಯ ಎರಡು ಕೈ ತುಂಡು

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

16

UV Fusion: ಚಿಮ್ಮಿದ ಸೇವಾಹನಿಗಳು ಮತ್ತೆ ಸಾಗರವ ಸೇರಿತು…

15

UV Fusion: ಬಣ್ಣದ ಛತ್ರಿ; ಇಲ್ಲೊಂದು ಕಥೆ

14

UV Fusion: ವಯೋಮಾನದ ಕಾಲಘಟ್ಟಕ್ಕೆ ಬದುಕಿನನುಭವದ ಸಾರ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

1-doct

Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ

Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ಮೋಹಿನಿ

Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್‌.ರೆಹಮಾನ್‌ ತಂಡದ ಸದಸ್ಯೆ ಮೋಹಿನಿ

4-panaji

Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!

3-raichur

Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.