UV Fusion: ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು
Team Udayavani, Jan 13, 2025, 5:21 PM IST
ಇನ್ನೇನು ವರ್ಷದ ಕೊನೆಯ ದಿನಗಳು ಮುಗಿತಾ ಬಂತು, ಹೊಸ ವರ್ಷವನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೀರಿ. ಮತ್ತೂಮ್ಮೆ ನಿಮ್ಮ ಗುರಿಯನ್ನು ತಲುಪಲು ಬೇಕಾದ ಮಾರ್ಗವನ್ನು ಹಾಕಲೂ ರೆಸಲ್ಯುಶನ್ಸ್‌ಗಳನ್ನು ಹಾಕುತಿದ್ದೀರಿ, ಈ ವರ್ಷ ಮಾಡಬೇಕಾದ ಕೆಲಸಗಳು ಮತ್ತು ಕಳೆದ ವರ್ಷದ ಎಲ್ಲ ಅವಗುಣಗಳನ್ನು ಬಿಡಬೇಕು, ಕಳೆದ ದಿನಗಳಲ್ಲಿ ಏನು ಮಾಡದೆ ಇದ್ದರು ಬರುವ ವರ್ಷದ ಹೊಸ್ತಿಲಲ್ಲಿ ಎನಾದರೂ ಸಾಧಿಸಬೇಕು, ಎಂಬ ಹಂಬಲದಿಂದ ಈ ವರ್ಷವನ್ನು ಬಹಳ ಉತ್ಸಾಹದಿಂದ ಸ್ವಾಗತಿಸುತ್ತಿದ್ದೀರಿ ಅಲ್ಲವೇ.
ಒಂದು ಸಲ ನಿಮ್ಮ ಜೀವನವನ್ನು ಹಿಂದಿರುಗಿ ನೋಡಿ, ನಿಮ್ಮ ಬದುಕಲ್ಲಿ ನೀವು ಕಳೆದುಕೊಂಡ ಆತ್ಮೀಯ ಗೆಳೆಯರ ವಿಶ್ವಾಸ, ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳಿ ಕಣ್ಣಂಚಿನಲ್ಲಿ ನೀರು ತುಂಬುವುದು. ಈಗ ಹೇಳಿ ಕಳೆದ ವರ್ಷವನ್ನು ಸ್ವಾಗತಿಸುವಾಗಲೂ ನೀವು ಇದನ್ನೇ ಮಾಡಿದ್ದೀರಿ. ಆದರೆ ನೀವು ಹಾಕಿಕೊಂಡ ಹೊಸ ವರ್ಷದ ಮಾರ್ಗಸೂಚಿಗಳನ್ನು ಯಾವಾತ್ತಿಗೂ ಪಾಲಿಸಿಲ್ಲ. ಒಮ್ಮೆ ನಿಮ್ಮನ್ನೇ ನೀವು ಕೇಳಿಕೊಳ್ಳಿ ಆಗ ನಿಮಗೆ ಗೊತ್ತಾಗುವುದು ನಿಮ್ಮ ಜೀವನದಲ್ಲಿ ನಡೆಯುವ ಎಲ್ಲ ಒಳ್ಳೆಯ ಮತ್ತು ಕೆಟ್ಟ ವಿಷಯಗಳು ನಿಮ್ಮ ಮೂಲಕವೇ ಹಾದು ಹೋಗಿದೆ. ನೀವು ಅದರ ಹೊರತಾಗಿಲ್ಲ. ಯಾರದೋ ಬರುವಿಕೆಗಾಗಿ ಕಾಯುವ ನೀನು ಒಮ್ಮೆ ಆಲೋಚಿಸು ನಿನ್ನ ಬರುವಿಕೆಗಾಗಿ ಕಾಯುತ್ತಾ ಎಷ್ಟು ಜನ ಕುಳಿತುಕೊಳ್ಳಬಲ್ಲರೂ, ಈ ವರ್ಷ ನಿಜವಾದ ಎಷ್ಟು ಜನರನ್ನು ನೀವು ಸಂಪಾದಿಸಿದ್ದೀರಿ.
ಈ ವರ್ಷ ನೀವು ಇಷ್ಟ ಪಡುವ ಗೆಳೆಯರು ನಿಮ್ಮೊಂದಿಗೆ ಬಹಳ ಸಮಯ ನಿಂತಿಲ್ಲ, ಹಾಗಾಗಿ ನೀವು ಯಾರನ್ನು ಇಷ್ಟ ಪಡುವುದಿಲ್ಲವೇ, ಹೀಗಾಗಿ ಏಕಾಂಗಿಯಾಗಿ ಇರುವ ನಿರ್ಧಾರ ನೀವು ಮಾಡಿದ್ದಿರಿ. ಅದಕ್ಕಾಗಿ ಈ ವರ್ಷಕ್ಕೆ ಧನ್ಯವಾದ ಹೇಳಿ. ನಿನಗಿಂತ ಒಳ್ಳೆಯವರು ಇನ್ನಾರು ಇಲ್ಲಾ ಎಂದು ತಿಳಿಸಿದೆ, ಚುಚ್ಚು ಮಾತುಗಳಾಡಿ ಮನಸ್ಸನ್ನು ಒಡೆಯುವವರ ನಡುವೆ ನಿನ್ನ ಅವಗುಣಗಳನ್ನು ತಿಳಿದರು ಸಹ ನಿನ್ನೊಂದಿಗೆ ಮಾತನಾಡದೆ ನಿನ್ನ ಬದುಕನ್ನು ರೂಪಿಸುವ ಕೆಲವರು ನಿನ್ನ ಬದುಕಿನ ಅಸಾಮಾನ್ಯರು. ಅವರು ನಿನ್ನ ಜೀವನದ ಗುರುಗಳು, ಆದರೆ ಅವರು ಪಾಠ ಮಾಡುವಾಗ ಯಾವತ್ತಿಗೂ ಮಾತನಾಡುವುದಿಲ್ಲ. ತಿಳಿದುಕೊಳ್ಳಿ ಅವರ ಮೌನವೇ ನಿಮಗೆ ಪಾಠವಾಗಿದ್ದನ್ನು ಮರೆಯದಿರಿ. ಅವರಿಗೆ ಗೊತ್ತಿಲ್ಲದೆ ನಮ್ಮ ಜೀವನ ರೂಪಿಸಲು ಬಂದವರು ಅವರು. ಯಾರು ನಮಗೆ ಅನಿರೀಕ್ಷಿತವಾಗಿ ನಮ್ಮ ಜೀವನದಲ್ಲಿ ಬರುವುದಿಲ್ಲ ಎಲ್ಲದಕ್ಕೂ ಒಂದು ಕಾರಣ ಇದೆ, ಅದು ಹೇಗೆಂದರೆ ಒಂದು ಮರ ಹಣ್ಣನ್ನು ಕೊಡಬಹುದು ಆದರೆ ಅದರ ಎಲೆಗಳ ಕೆಲಸವೆನು. ಆ ಎಲೆಗಳ ಕೆಲಸ ಎನು ಇಲ್ಲದಿದ್ದರೂ ನೆನಪಿರಲಿ ಆ ಮರದ ಜೀವಂತಿಕೆಯನ್ನು ಅದರ ಎಲೆಗಳು ಎಷ್ಟು ಹಸಿರಾಗಿದೆ ಎಂಬುದರ ಮೇಲಿದೆ. ಅಂತಹ ಕೆಲವೇ ಕೆಲವು ವ್ಯಕ್ತಿಗಳು ಈ ವರ್ಷ ನನ್ನ ಜೀವನದಲ್ಲಿ ಪರಿವರ್ತನೆ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಅರ್ಪಿಸಿ.
ಹೇ ಕಳೆದು ಹೊಗುತ್ತಿರುವ ಈ ವರ್ಷವೇ ಅಂತಹ ಗೆಳೆಯರನ್ನು ನನ್ನ ಜೀವನದಲ್ಲಿ ಪರಿಚಯಿಸಿದ್ದಕ್ಕೆ ನಿನಗೆ ಧನ್ಯವಾದ ಮತ್ತು ಅಂತಹ ವ್ಯಕ್ತಿಗಳನ್ನು ನನ್ನ ಜೀವನದಿಂದ ದೂರ ಮಾಡಿದ ನಿನಗೆ ನನ್ನ ಧಿಕ್ಕಾರವಿದೆ. ಇಷ್ಟು ವರ್ಷಗಳನ್ನು ಸಂಪೂರ್ಣವಾಗಿ ಹಾಳು ಮಾಡಿದ ಕೀರ್ತಿ ನಮ್ಮದೇ ಆಗಿದೆ ಈ ವರ್ಷ ಆದರೂ ಅದನ್ನು ತಿದ್ದುವ. ಎನೆ ಇರಲಿ ಜೀವನ ಎಂದರೇನು? ಎಂದು ಕಲಿಸಿದ್ದಕ್ಕೆ ಹಳೆಯ ವರ್ಷಕ್ಕೆ ಧನ್ಯವಾದ ಹೇಳಿ, ಮುಂಬರುವ ಹೊಸ ವರ್ಷದ ಸವಾಲುಗಳಿಗೆ ನಗು ಮುಖದಿಂದ ಸ್ವಾಗತಿಸಿ. ಬೇರೆಯವರೊಂದಿಗೆ ನಿಮ್ಮನ್ನು ಹೊಲಿಸಬೇಡಿ ಏಕೆಂದರೆ ಬದುಕು ಎಂಬ ಪರೀಕ್ಷೆಯಲ್ಲಿ ಕಾಫಿ ಮಾಡಬೇಡಿ, ಕಾರಣ ಇಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನೆ ಪತ್ರಿಕೆ ಬದಲಿ ಇದೆ, ಕಾಫಿ ಮಾಡಿದರೆ ನೀವು ಫೇಲ್ ಆಗುವಿರಿ ಬದಲಿಗೆ ಅವರಿಂದ ಹೊಸತನ್ನು ಕಲಿಯಿರಿ. ಮತ್ತೂಮ್ಮೆ ಎಲ್ಲ ಗೆಳೆಯರಿಗೂ ಹೊಸ ವರ್ಷದ ಹಾರ್ದಿಕ ಶುಭಾಷಯಗಳು.
ಪ್ರದೀಪ ದೇವರಮನಿ, ಬುಜರಿ ಬಿ.ಇಡಿ ಕಾಲೇಜು, ಅಫಜಲಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.