UV Fusion: ಬದಲಾವಣೆ ಜಗದ ನಿಯಮ


Team Udayavani, Jan 12, 2025, 4:57 PM IST

13

ಸಹಜವಾಗಿ ನಾವು ಈ ಸಾಲನ್ನ ಯಾರದ್ದೊ ಮಾತಿನ ನಡುವೆ ಕೇಳಿರುತ್ತೇವೆ ಅಥವಾ ನಾವೆ ಆಗಾಗ ಬಳಸುತ್ತಿರುತ್ತೇವೆ ಕೂಡ. ಬದಲಾವಣೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಕ್ಷಣಮಾತ್ರದಲ್ಲಿ ಆಗುತ್ತಿದೆ. ಆದರೆ ಎಲ್ಲ ವಿಚಾರಗಳಲ್ಲಿಯೂ ಅಲ್ಲ. ಯಾವುದೇ ಬದಲಾವಣೆಯ ಸ್ವೀಕಾರ ಅಥವಾ ಅದಕ್ಕೆ ಒಗ್ಗಿಕೊಳ್ಳುವಿಕೆ ನಗರ ಪ್ರದೇಶದಲ್ಲಿನ ಜನರಲ್ಲಿ ಬಹಳ ಕಡಿಮೆ ಸಮಯದಲ್ಲಿ ಆಗತ್ತೆ. ಆದರೆ ಅದೇ ಬದಲಾವಣೆಯ ಸ್ವೀಕಾರ ಅಥವಾ ಒಗ್ಗಿಕೊಳ್ಳುವಿಕೆ ಗ್ರಾಮೀಣ ಭಾಗದ ಜನರಲ್ಲಿ ಅಷ್ಟೆ ಸುಲಭವಾಗಿ ಆಗುತ್ತಾ? ಇಲ್ಲ. ಆದರೂ ಕೂಡ ಇತ್ತೀಚಿನ ದಿನಗಳಲ್ಲಿ ನಮ್ಮ ಹಳ್ಳಿಗಳಲ್ಲಿ ಆಗ್ತಾ ಇರುವಂತಹ ಕೆಲವೊಂದಷ್ಟು ಬದಲಾವಣೆಗಳು ನಿಜವಾಗ್ಲೂ ನಿಟ್ಟುಸಿರು ಬಿಡುವಂತಹ ರೀತಿಯಲ್ಲಿ ಇವೆ. ಅದರಲ್ಲೂ ವಿಶೇಷವಾಗಿ ಹೆಣ್ಣಿನ ಆಯ್ಕೆಗಳಿಗೆ ಸಂಬಂಧಿಸಿದಂತೆ.

ಅನಾದಿಕಾಲದಿಂದಲೂ ಸಮಾಜ ಜೀವಿಯಾಗಿ ಬದುಕುತ್ತಿರುವಂತಹ ಮನುಷ್ಯ ತನ್ನ ಬದುಕಿನ ಬಹುಪಾಲು ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ‘ಸಮಾಜ’ದ ಬಗ್ಗೆ ಕ್ಷಣಕ್ಕಾದರು ಯೋಚನೆ ಮಾಡೇ ಮಾಡ್ತಾನೆ. ಇನ್ನು ಹೆಣ್ಣು ಮಕ್ಕಳ ವಿಚಾರದಲ್ಲಿ ಸಮಾಜದ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ವಿವರಿಸುವ ಅಗತ್ಯವೇ ಇಲ್ಲ. ಏನೇ ಬದಲಾವಣೆಗಳಾದರು ಕೂಡ ಸಮಾಜ, ಜನರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಜತೆ ಜತೆಗೆ ಅದಕ್ಕೆ ವಿರೋಧವೆಂಬಂತೆ ಹೆಣ್ಣು ತನ್ನ ಪಾತ್ರವನ್ನು ಕಾಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುತ್ತಿದ್ದಾಳೆ.

ವಿದ್ಯಾಭ್ಯಾಸದ ಸಲುವಾಗಿ ಕೆಲವು ವರ್ಷಗಳಿಂದ ಊರನ್ನು ಬಿಟ್ಟು ಹೊರಗಿದ್ದ ನನಗೆ ವಾಪಸ್‌ ಬಂದ ಅನಂತರ ಊರಿನ ಒಳಗೆ ಆಗಿರುವಂತಹ ಕೆಲವು ವ್ಯತ್ಯಾಸಗಳು, ಬಹಳ ದೃಢವಾಗಿ ನಿಂತಿದ್ದ ಒಂದಷ್ಟು ಹೆಣ್ತನದ ನಿಲುವುಗಳು ಗಮನಾರ್ಹವಾದ ಸಂಗತಿಗಳಾಗಿ ಕಂಡವು. ಅವುಗಳಲ್ಲಿ, ಮತಾಂತರದ ಭೂತವನ್ನು ವಿರೋಧಿಸಿ ಗಂಡನಿಗೆ ಎದುರಾಗಿ ನಿಂತು ತನ್ನ ಧರ್ಮಕ್ಕಾಗಿ ಬದುಕುತ್ತಿರುವ ಹೆಣ್ಣು. ಮಕ್ಕಳಿಗಾಗಿ ದುಡಿದು ಕಷ್ಟಪಡುವ ಮಹಿಳೆಯರು, ಸಮಾಜದ ಸಂಕೋಲೆಯನ್ನು ಕಿತ್ತೆಸೆದು ಸ್ವಾವಲಂಬಿ ಜೀವನವನ್ನು ಅರಸಿ ಹೊರಟಿರೊ ಹೆಣ್ಣು ತನ್ನ ರಾಶಿ ಆಸೆ, ಕನಸುಗಳನ್ನು ಗುಡಿಸಿ ಮೂಲೆಯ ಕಸವಾಗಿದ್ದ ಹುಡುಗಿ. ಆವತ್ತೂಂದಿನ ತನ್ನ ಕಾಲೇಜಿನವರು ತನ್ನನ್ನ ಉತ್ತಮ ಭಾಷಣಗಾರ್ತಿ ಎಂದು ಗುರುತಿಸಿ ಬಹುಮಾನ ನೀಡಿರುವುದಾಗಿ ಬಹಳ ಖುಷಿಯಿಂದ ತನ್ನ ಅಮ್ಮನ ಬಳಿ ಹೇಳುತ್ತಿರುವುದು ಕಿವಿಗೆ ಬಿತ್ತು. ತತ್‌ಕ್ಷಣಕ್ಕೆ ನನಗೆ ಆಶ್ಚರ್ಯದ ಜತೆಗೆ ಈ ವರೆಗೂ ಬರೀ ಜನರ ನಿಂದನೆಗಳನ್ನು ಕೇಳಿ ಕೇಳಿ ಕಿವುಡಿಯಾಗಿದ್ದ ಇವಳು ಇಷ್ಟೊಳ್ಳೆ ಮಾತುಗಾರ್ತಿ, ಭಾಷಣಗಾರ್ತಿ ಹೇಗಾದ್ರು ಅನ್ನೊ ಪ್ರಶ್ನೆ ಮೂಡಿತ್ತು. ಬಹುಶಃ ಅಷ್ಟು ವರ್ಷಗಳಿಂದ ಮೌನದ ಹಿಂದೆ ಅವಿತು ಕತ್ತಲಲ್ಲಿ ಅಳುತ್ತಿದ್ದ ಅವಳೆಲ್ಲಾ ಮಾತುಗಳು ನಾಳೆಯೆಂಬ ಕನಸಿನ ಬೆಳಕನ್ನು ಕಂಡ ಕೂಡಲೇ ಧುಮ್ಮಿಕ್ಕಿ ಪ್ರವಾಹದಂತೆ ಹರಿದಿರಬಹುದು ಎನಿಸಿತು.

ಇಷ್ಟಲ್ಲದೆ ಸಮಾಜ ತುಂಬಾ ಗೌರವಪೂರ್ವಕವಾಗಿ ಅವಳಿಗೆ ನೀಡಿದ್ದ ‘ವಿಧವೆ’ ಎಂಬ ಹಣೆಪಟ್ಟಿ ಜಾಗದಲ್ಲಿ ಹೊಸ ಬಾಸಿಂಗ ಕಟ್ಟೊ ದಿಟ್ಟ ನಿರ್ಧಾರವನ್ನೂ ಮಾಡಿರುವುದಾಗಿ ತಿಳಿದಾಗ, ಜೀವ ಹಾಗೆಯೇ ಜೀವನದ ಉಳಿಯುವಿಕೆಗಾಗಿ ಅಗತ್ಯವಾದ ಬದಲಾವಣೆಯ ಗಾಳಿ ಹಳ್ಳಿಯ ಹೆಣ್ಣು ಮಕ್ಕಳ ಉಸಿರಾಟವನ್ನು ಮತ್ತಷ್ಟು ಸರಾಗವಾಗಿಸುತ್ತದೆ ಎಂಬ ಭರವಸೆ ಮೂಡಿಸಿತು. ಮೊದಲೇ ಹೇಳಿದ ಹಾಗೆ ನಮ್ಮ ಹಳ್ಳಿಗಳಲ್ಲಿ ಬದಲಾವಣೆಯ ಸ್ವೀಕಾರ ಅಷ್ಟು ಸುಲಭದ ಮಾತಲ್ಲ. ನೇರವಾದ ಪ್ರತಿರೋಧಗಳು ಕಂಡು ಬರದೇ ಇದ್ದರು ಸಹಾ ಜನರ ಒಂದಷ್ಟು ಟೀಕೆ ಟಿಪ್ಪಣಿಗಳು, ಜಗಲಿ ಕಟ್ಟೆಯ ಪಂಚಾಯ್ತಿಗಳು, ದೂಷಣೆಗಳು ತಪ್ಪಿದ್ದಲ್ಲ. ಇವುಗಳನ್ನೂ ದಾಟಿ ಗ್ರಾಮೀಣ ಭಾಗದ ಹೆಣ್ಣು ಕೂಡ ತನ್ನ ಜೀವನದ ಆಯ್ಕೆಗಳತ್ತ ಹೆಜ್ಜೆ ಇಡುತ್ತಿರುವುದು ನಿರಾಳತೆ ಭಾವವನ್ನು ತಂದಿದೆ. ಇಂತಹ ನಿರಾಳತೆಯ ಭಾವದೊಂದಿಗೆ ಹೊಸ ವರ್ಷವನ್ನು ನಾನು ಉನ್ನತವಾಗಿರಲಿ ಎಂದು ನಿರೀಕ್ಷಿಸುತ್ತೇನೆ. 2025ರ ವರ್ಷ ಪ್ರತಿಯೊಬ್ಬರ ಬದುಕಲ್ಲಿ ಕೂಡ ಹೊಸ ಅನ್ವೇಷಣೆಯ ಯುಗವಾಗಲಿ. ವಿಜ್ಞಾನ, ಸಂಶೋಧನೆ, ಶಿಕ್ಷಣ, ತಂತ್ರಜ್ಞಾನ ಎಲ್ಲ ಕ್ಷೇತ್ರದಲ್ಲಿ ದೇಶ ಅಭಿವೃದ್ಧಿ ಹೊಂದಿದಂತೆ ಅದರ ಹಿಂದೆ ಹೆಣ್ಣು- ಗಂಡು ಎಂಬ ತಾರತಮ್ಯವಿಲ್ಲದೆ ದೇಶದ ಪ್ರಗತಿಗೆ ನಾವೆಲ್ಲ ಶ್ರಮಿಸಬೇಕು ಎಂಬುದು ನನ್ನ ನಿರೀಕ್ಷೆಯಾಗಿದೆ.

ರಶ್ಮಿ ಮೈಸೂರು

ಟಾಪ್ ನ್ಯೂಸ್

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

UV Fusion: ನಂಬಿಕೆಯೊಂದಿಗೆ ವರ್ಷದ ಆಗಮನ

14

UV Fusion: ಗೆದ್ದ ಗೆಲುವನ್ನು ಗಟ್ಟಿತನದಲ್ಲಿ ನಿಭಾಯಿಸುವುದು ಒಂದು ಕಲೆ!

12(1

UV Fusion: ನವ ವರುಷ ನವೋಲ್ಲಾಸ; ನಿರ್ಧಾರಗಳಿಗೆ ಬದ್ಧರಾಗಿರಿ

11

UV Fusion: ಸಮಯ ಪಾಲನೆ ಅನುಸರಿಸೋಣ

10

UV Fusion: ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.