UV Fusion: ಸ್ನೇಹ ಜೀವಿಗಳ ವರ್ಷವಾಗಲಿ
Team Udayavani, Jan 13, 2025, 5:25 PM IST
ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ವ್ಯಕ್ತಿಯೋರ್ವನ ಜೀವನದ ಎಲ್ಲ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಸ್ನೇಹಿತರ ಮುಂದೆ ಮನಸ್ಸು ಹಕ್ಕಿಯಾಗುತ್ತದೆ. ಮನಸ್ಸಿನಲ್ಲಿರುವ ಭಾವನೆಗಳೆÇÉಾ ಹೊರಗೆ ಬರುತ್ತದೆ.ವ್ಯಕ್ತಿಯೋರ್ವನ ಜೀವನದ ಎಲ್ಲ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಸ್ನೇಹಿತರ ಮುಂದೆ ಮನಸ್ಸು ಹಕ್ಕಿಯಾಗುತ್ತದೆ. ಮನಸ್ಸಿನಲ್ಲಿರುವ ಭಾವನೆಗಳೆÇÉಾ ಹೊರಗೆ ಬರುತ್ತದೆ. ಅದಕ್ಕೇ ನಾವು ಯಾವುದೇ ವಿಷಯವನ್ನು ಸ್ನೇಹಿತರ ಜತೆಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಈ ಬಾರಿ ಹೊಸ ವರ್ಷಕ್ಕು ಮುನ್ನವೇ ಉತ್ತಮ ಸ್ನೇಹ ಸಂಬಂಧ ಉಳಿಸಿ ಬಾಳುವಂತಾಗಬೇಕು.
ಹೆತ್ತವರ ಮುಂದೆ ಹೇಳಿಕೊಳ್ಳಲಾಗದ ವಿಷಯಗಳೂ ಕೆಲವೊಮ್ಮೆ ಸ್ನೇಹಿತರ ಮುಂದೆ ಮುಚ್ಚುಮರೆಯಿಲ್ಲದೆ ಹೊರಗೆ ಬರುತ್ತದೆ. ಎಲ್ಲರಿಗೂ ಎಲ್ಲರೂ ಸ್ನೇಹಿತರಾಗುವುದಿಲ್ಲ. ಆದರೂ ಆ ಸ್ನೇಹ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ಕೆಲವರು ಹೆಚ್ಚು ಮಾತನಾಡುವ ವ್ಯಕ್ತಿಗಳ ಸ್ನೇಹ ಮಾಡಲು ಇಚ್ಛಿಸಿದರೆ, ಇನ್ನು ಕೆಲವರಿಗೆ ಮಿತಭಾಷಿಗಳ ಸ್ನೇಹ ಇಷ್ಟವಾಗುತ್ತದೆ. ಕೆಲವರು ಬಹು ಬೇಗನೆ ಸ್ನೇಹಿತರಾದರೆ, ಕೆಲವರು ಎಷ್ಟೇ ಹತ್ತಿರವಾಗಿದ್ದರೂ ಸ್ನೇಹದ ಕೈ ಚಾಚಿರುವುದಿಲ್ಲ. ಕೆಲವು ಸ್ನೇಹಿತರು ಎಂತಹ ಆಪತ್ಕಾಲದಲ್ಲೂ ನಿಮ್ಮ ನೆರವಿಗೆ ಧಾವಿಸುತ್ತಾರೆ, ಇನ್ನು ಕೆಲವರು ಎಷ್ಟೇ ನೆರವು ಯಾಚಿಸಿದರೂ ಕಲ್ಲು ಹೃದಯದವರಂತೆ ವರ್ತಿಸುವವರೂ ಇದ್ದಾರೆ.
ಅಂತ ಹೃದಯವಂತರು ನನ್ನ ಸ್ನೇಹಿತರು, ನನ್ನ ಸ್ನೇಹಿತರ ಬಗ್ಗೆ ನನ್ನ ಮನ ಸಣ್ಣದೊಂದು ಕವನ ಹೇಳುತ್ತಿದೆ. ನಗುವಿನಲ್ಲಿರುವ ನೋವನ್ನು ಮೌನದಲ್ಲಿರುವ ಮಾತನ್ನು ಕೋಪದಲ್ಲಿರುವ ಪ್ರೀತಿಯನ್ನು ಅರಿಯದೆ ಮಾಡಿದ ತಪ್ಪನ್ನು ಮರೆಸುವುದೇ ನಿಜವಾದ ಸ್ನೇಹ ನನ್ನ ಬದುಕಿನಲ್ಲಿ ಸಿಕ್ಕ ಅದ್ಭುತ ಪರಿಚಯ ನೀವು. ಬಹುಬೇಗನೆ ಆತ್ಮೀಯರಾದವರು. ಶಾಶ್ವತವಲ್ಲದ ಈ ಬದುಕಿನಲ್ಲಿ ಬಂದ, ಸಂಚಾರಿ ನೀವು, ಜತೆಯಾದ ಸಹಕಾರಿ ನೀವು, ನಿಮ್ಮ ಸ್ನೇಹಕ್ಕೆ ನನ್ನ ಕೊಡುಗೆ ಏನಿಲ್ಲ ಆದರೂ ನಾ ನಿಮ್ಮನ್ನು ನೆನೆಯದೆ ದಿನವಿಲ್ಲ. ಬುದ್ದ ಅಲ್ಲದಿದ್ದರೂ ನೀವು ಪ್ರಬುದ್ಧ ಸ್ನೇಹಜೀವಿ ನೀವು. ನಿಷ್ಕಲ್ಮಶ ಮನಸ್ಸು ನಿಮ್ಮದು. ಸ್ನೇಹ ಎಂಬುದು ಬಿಡಿಸಲಾಗದ ನಂಟು ಮರೆಯಲಾಗದ ಬಂಧನ ಕಾಳಜಿ ತೋರುವ ಸ್ಪಂದನ ಸ್ನೇಹವೂ ಪ್ರೀತಿಯ ಎರಡನೇ ರೂಪ ಕೈ ಹಿಡಿದು ನಡೆಯುವ ದೋಸ್ತಿ ನೀವು ಈ ಜೀವದ ಅಮೂಲ್ಯವಾದ ಆಸ್ತಿ. ನನ್ನ ಕನಸಿನ ಸ್ನೇಹಿತರು ಮುಗ್ಧ ಮನಸ್ಸಿನ ನಿಮ್ಮ ಪರಿಶುದ್ಧ ಕನಸುಗಳು ನನಸಾಗಲಿ. ಸ್ನೇಹ ಬಯಸುವ ಮನಸ್ಸಿಗೆ ಸ್ನೇಹ ಸಿಗಲಿ ಆದರೆ ಯಾವುದು ಸಿಗದಿರುವ ಮನಸ್ಸಿಗೆ ನೋವು
ಬರದಿರಲಿ. ಹೊಸ ವರುಷ ಎಲ್ಲರಿಗೂ ಹರುಷ ನೀಡಲಿ.
ಸೈನಾಜ್ ಬೇಗಮ್, ವಿವಿ, ಕೊಪ್ಪಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.