UV Fusion: ಹೊಸ ಅಧ್ಯಾಯ 2025

Team Udayavani, Jan 13, 2025, 5:47 PM IST

23

ಹೊಸ ವರ್ಷ ಏನೋ ಬಂತು. ಆದರೆ ಕಣ್ಮರೆ ಆಗುತ್ತಿರುವ ಈ ದಿನಗಳು ಮರುಕಳಿಸುವುದಿಲ್ಲವೇ ಎಂದು ಮನಸ್ಸು ಮಿಡಿಯುತ್ತಿದೆ. ವರ್ಷವಿಡಿ ಅನುಭವಿಸಿದ ಸಂತೋಷ, ದುಃಖ, ನೆಮ್ಮದಿ, ಮುಂದಿನ ವರ್ಷ ಹೇಗಿರುತ್ತೋ ಯಾರು ಬಲ್ಲರು. ಹೊಸ ಶಕ್ತಿ, ಹುರುಪು, ಹೊಸ ದೃಷ್ಟಿಕೋನದೊಂದಿಗೆ ಮತ್ತೂಂದು ವರ್ಷವನ್ನು ಆಚರಿಸುವ ಸಡಗರವೂ ಹೌದು. ಇದೇ ಕಾರಣಕ್ಕೆ ಹೊಸ ವರ್ಷ ಎಂದರೆ ವಿಶ್ವದೆಲ್ಲದೆಡೆ ಸಂತಸ ಮನೆ ಮಾಡಿರುತ್ತದೆ. ಆದರೂ ಕಳೆದು ಹೋದ ದಿನಗಳನ್ನು ನಮ್ಮೆದೆಯಾಳದಲ್ಲಿ ಮುಚ್ಚಿಡೋಣ.

ಹೊಸದಾದ ಕ್ಯಾಲೆಂಡರ್‌ ಬಂದರೆ, ಹೊಸ ವರ್ಷ ಪ್ರಾರಂಭವಾಗುತ್ತದೆ. ಎಲ್ಲರಿಗೂ ನೆನಪಿರಲಿ ನಾವೆಲ್ಲರೂ ಜೀವನದಲ್ಲಿ ಪ್ರತಿ ಕ್ಷಣವನ್ನು ಆನಂದದಿಂದ ಅನುಭವಿಸಿದ್ದರೆ, ಪ್ರತಿ ದಿನವೂ ಹೊಸ ವರುಷವೇ ಆಗಿರುತ್ತೆ. ಆದರೆ ನಾವು ಮಾಡಿದ್ದ ಒಂದು ತಪ್ಪನ್ನು, ವರ್ಷವಿಡಿ ಮಾಡಬಾರದಿತ್ತು ಅಂತ ಕೊರಗುವುದರÇÉೇ ಅರ್ಧ ವರ್ಷ ಹಾರಿ ಹೋಗಿರುತ್ತದೆ.

ವರ್ಷದಿಂದ ವರ್ಷಕ್ಕೆ ಕ್ಯಾಲೆಂಡರ್‌ ಹೇಗೆ ರೂಪುಗೊಳ್ಳುತ್ತದೆಯೋ, ಹಾಗೇ ನಾವು ಕೂಡ ಬದಲಾಗಬೇಕು. ಹಿಂದಿನ ವರ್ಷದ ನೆಮ್ಮದಿಯೊಂದಿಗೆ ಮುಂದಿನ ವರ್ಷವನ್ನು ಶುರು ಮಾಡಬೇಕು. ವರ್ಷ ಪೂರ್ತಿ ಯಾರು ಸಂತೋಷದಿಂದ ಇರಲ್ಲ, ದುಃಖದಿಂದ ಇರಲ್ಲ. ಏಳು – ಬೀಳು, ಸುಖ – ದುಃಖ, ನೋವು- ನಲಿವು ಕಂಡಿರುತ್ತಾರೆ. ಆದರೆ ಅದರ ಬಗ್ಗೆ ಯೋಚನೆ ಮಾಡಬಾರದು. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವೇನು ಎಂಬಂತೆ ಆಗುತ್ತದೆ.

ಒಂದು ವರ್ಷದಲ್ಲಿ ನಾವು ಹಾಕಿಕೊಂಡ ಯೋಜನೆಯಲ್ಲಿ ಎಷ್ಟು ಯಶಸ್ವಿಯಾಗಿವೆ, ಇನ್ನೂ ಎಷ್ಟು ಅರ್ಧದಲ್ಲಿ ನಿಂತಿವೆ. ಯಾರಿಗಾದರೂ ನನ್ನಿಂದ ನೋವಾಗಿದೆಯೇ, ಯಾರನ್ನು ನಿಂದಿಸಿದ್ದಿನಾ, ಅನ್ಯಾಯ ಮಾಡಿದ್ದಿನಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಮುಂದೆ ದಿನಗಳಲ್ಲಿ ಒಬ್ಬ ವ್ಯಕ್ತಿಯನ್ನು ಅವಮಾನ ಮಾಡದೇ ಸದಾ ನಮ್ಮ ಏಳಿಗೆಯೊಂದಿಗೆ ಮತ್ತೂಬ್ಬರ ಏಳಿಗೆಯನ್ನು ಬಯಸುವ ಕಾರ್ಯವಾಗಬೇಕು.

ಒಂದು ವರ್ಷದಿಂದ ಆಗದಿರುವ ಕೆಲಸ ಈ ವರ್ಷ ಆಗಬಹುದು ಎಂಬ ಧನಾತ್ಮಕ ಮನೋಭಾವದಿಂದ ಕೆಲಸಗಳನ್ನು ಕೈಗೊಳ್ಳೋಣ. ಯಾವುದೇ ಕಾರಣಕ್ಕೂ ನನ್ನ ಗುರಿ ಬದಲಾಗಬಾರದು. ಯಾವ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೀನೊ ಅದು ಕಷ್ಟಕರ ಅಥವಾ ಸರಳವಾಗಿದೆಯೋ ಯೋಚಿಸದೇ ಆ ಗುರಿ ತಲುಪುವುದಷ್ಟೇ ನನ್ನ ಛಲವಾಗಿರಬೇಕು. ಪ್ರತಿ ಬಾರಿಯೂ ದಾರಿ ಸುಲಭವಾಗಿದ್ದರೆ ಸಾಧನೆ ದೊಡ್ಡದಾಗುವುದಿಲ್ಲ. ಆದರೆ ಕಲ್ಲು – ಮುಳ್ಳುಗಳಿರುವ ದಾರಿಯಲ್ಲಿ ನಡೆದುಕೊಂಡು ಹೋದಾಗ ನಿಜವಾದ ಸಾಧನೆಯ ಕಿರೀಟವನ್ನು ಮೂಡಿಗೆರಿಸಿಕೊಳ್ಳಲು ಸಾಧ್ಯ.

ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ. ಸಾಧಿಸುವ ಛಲ, ಧೈರ್ಯ, ಶ್ರದ್ಧೆ ನಮ್ಮಲ್ಲಿರಬೇಕು ಅಷ್ಟೇ. ಗುರಿಗಳನ್ನು ಬದಲಾಯಿಸುವ ಬದಲಾಗಿ, ಮಾರ್ಗವನ್ನು ಬದಲಾಯಿಸಿ ಸಾಕು, ಸಾಧನೆಯ ದೇಗುಲ ಸಮೀಪಸುತ್ತದೆ. ಜತೆಗೆ ವರ್ಷದಿಂದ ವರ್ಷಕ್ಕೆ ಜನರೊಡನೆ ಒಡನಾಟ ಹೆಚ್ಚುತ್ತದೆ. ಅದನ್ನು ಗೌರವಿಸಿಕೊಂಡು ಮುನ್ನಡೆಯೋಣ. ಭೂಮಿಯ ಮೇಲಿನ ಪ್ರತಿ ಜೀವಿಯನ್ನು ಪ್ರೀತಿಸಿ. ಕೋಪವನ್ನು ಬದಿಗೊತ್ತಿ ಎಲ್ಲರನ್ನೂ ನಗುನಗುತ್ತಾ ಮಾತನಾಡಿಸಿ, ಬರುವಂತಹ ಜ್ವಲಂತ ಸವಾಲು, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ. ವರ್ಷ ಮುಗಿಯುದರೊಳಗೆ ಹೊಸ ವ್ಯಕ್ತಿಗಳಾಗಿ ಹೊರಬರೋಣ. ವರ್ಷ ಪೂರ್ತಿ, ಹರ್ಷ ತುಂಬಿರಲಿ. 2024 ಕ್ಕೆ ವಿದಾಯ ಹೇಳಿ, 2025 ನ್ನು ಸ್ವಾಗತಿಸೋಣ.

ಗಂಗಾ ನೀಲಪ್ಪ ಅಮಾತೆಪ್ಪನವರ, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟ

ಟಾಪ್ ನ್ಯೂಸ್

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫ‌ಲ್ಯ: ಸುನಿಲ್‌ ಕುಮಾರ್‌

eart

Japan; ಕ್ಯುಶು ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ: ಸುನಾಮಿ ಎಚ್ಚರಿಕೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

22

UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

20

UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ

19

UV Fusion: ಸ್ನೇಹ ಜೀವಿಗಳ ವರ್ಷವಾಗಲಿ

18

UV Fusion: ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

MVA-Cong

Rift Widen: ಮೈತ್ರಿಕೂಟ ಪಾಲನೆ ಎನ್‌ಡಿಎ ನೋಡಿ ಕಲಿಯಿರಿ: ಕಾಂಗ್ರೆಸ್‌ಗೆ ಉದ್ಧವ್‌ ಬಣ ಪಾಠ

Monkey Disease: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-modi

Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.