UV Fusion: ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು…


Team Udayavani, Jan 14, 2025, 5:58 PM IST

13

ನಗು ಎಂಬುದು ಎಷ್ಟೊಂದು ಸರಳ ವಸ್ತು. ಅದು ಸುಲಭವೂ ಹೌದು, ದುರ್ಲಭವೂ ಹೌದು. ಮನುಷ್ಯನ ಬಳಿ ಅದೆಷ್ಟೋ ಆಸ್ತಿ, ಅಂತಸ್ತು ಇದ್ದರೂ ಕೊನೆಗೆ ಆತ ಹುಡುಕಾಡುವುದು ಪ್ರೀತಿಗೆ, ಒಲವಿಗೆ. ಬೇರೆ ಬೇರೆ ರೀತಿಯಲ್ಲಿ ಒಲವನ್ನು ಗುರುತಿಸಬಹುದು, ಪ್ರದರ್ಶಿಸಲೂಬಹುದು ಅದರಲ್ಲೊಂದು ಪರಿ ಈ ನಗು.

ಕೆಲವು ಉದಾಹರಣೆಗಳೆಂದರೆ ಇಷ್ಟಪಡುವ ಹುಡುಗ/ಹುಡುಗಿ ನಮ್ಮನ್ನು ನೋಡಿ ತುಸುವೇ ನಕ್ಕರು ಆ ದಿನ ಪೂರ್ತಿ ಆನಂದ ಸಾಗರ. ದಾರಿಯಲ್ಲಿ ಹೋಗುತ್ತಾ ಯಾರಾದರೂ ನೋವಿನಲ್ಲಿರುವವರಿಗೆ ಮಂದಹಾಸ ಬೀರಿದರೆ ಅದೂ ಒಂದು ತೆರನಾದ ಸಾಂತ್ವನ. ಯಾರೋ ಅಪರಿಚಿತರು ನಮ್ಮನ್ನು ನೋಡಿ ಹಿತವಾಗಿ ನಕ್ಕರೆ ಯಾರಿರಬಹುದು ಎಂದೆನಿಸಿದರು ಒಮ್ಮೆಗೆ ಖುಷಿ ನೀಡುತ್ತದೆ. ಅಹಿತವಾಗಿ ನಕ್ಕರೆ ಅಲ್ಲಿಂದ ಕಾಲು ಕೀಳುವುದು ಒಳಿತು!

ಆದರೆ ನಮ್ಮೆಲ್ಲರಲ್ಲಿ ಹೆಚ್ಚಿನವರು ಇತ್ತೀಚೆಗೆ ನಗುವುದನ್ನೇ ಮರೆತಿದ್ದೇವೆ. ಯಾವುದೋ ಚಿಂತೆಯಲ್ಲಿ ಮುಳುಗಿ ಗಂಭೀರವಾಗಿರುತ್ತೇವೆ. ಇದಕ್ಕೆ ನಮ್ಮಲ್ಲಿ ಒಂದೊಳ್ಳೆ ಮಾತಿದೆ, ಏನು ಮಾರಾಯ ಆಕಾಶ ತಲೆ ಮೇಲೆ ಬಿದ್ದ ಹಾಗೆ ಇದೀಯ? ಎಂದು. ಜೀವನದ ಜಂಜಾಟದ ನಡುವೆ ನಗು ಎಲ್ಲೋ ಕಳೆದು ಹೋಗಿರುತ್ತದೆ. ಹೀಗೆ ಹೇಳಿದ ಮಾತ್ರಕ್ಕೆ ಸುಖಾ ಸುಮ್ಮನೇ ಸಂದರ್ಭ ನೋಡದೆ ನಗುತ್ತಿದ್ದರೆ ಕರಾವಳಿ ಜನ ಕಂಕನಾಡಿಗೆ ಒಮ್ಮೆ ಭೇಟಿ ನೀಡಿ ಎಂದು ತಮಾಷೆ ಮಾಡುತ್ತಾರೆ.

ನಮ್ಮ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯದ ಮೇಲೆ ಅವಲಂಭಿತವಾಗಿದೆ. ಮನಸ್ಸು ಆನಂದದಿಂದ ಇದ್ದರೆ ನಮ್ಮ ಆರೋಗ್ಯವೂ ಸುಸ್ಥಿರ. ನಗು-ಸಂತೋಷ ತುಂಬಿಕೊಂಡಿದ್ದರೆ ಆಯಸ್ಸು ಹೆಚ್ಚಾಗುತ್ತದೆಯಂತೆ! ಕನ್ನಡ ಚಿತ್ರರಂಗದ ಸೂರ್ಯವಂಶ ಸಿನೆಮಾವನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೇವೆ. ಅಲ್ಲಿ ಎಸ್‌. ನಾರಾಯಣ್‌ ಅವರು ಆತ್ಮಾನಂದ ಎಂದು ಹೆಸರು ಇಟ್ಟುಕೊಂಡಿರುವುದಕ್ಕೆ ಉತ್ತಮ ವಿವರಣೆ ನೀಡುತ್ತಾರೆ. ಆತ್ಮವನ್ನು ಆನಂದವಾಗಿರಿಸಿಕೊಂಡರೆ ಆರೋಗ್ಯವಾಗಿರುತ್ತೇವೆ. ಹಾಲು ನೀಡುವ ಹಸುವಿಗೆ ಹುಲ್ಲು ಹಾಕಿ ಚೆನ್ನಾಗಿ ಪೋಷಣೆ ಮಾಡುತ್ತೇವೆ. ಹಾಗಿದ್ದರೆ ದೇಹದ ಮೂಲ ಆತ್ಮ. ಅದಕ್ಕೆ ಆನಂದವನ್ನಾದರೂ ನೀಡದಿದ್ದರೆ ಹೇಗೆ? ಎನ್ನುತ್ತಾರೆ.

ಇನ್ನು ಬದುಕಿನಲ್ಲಿ ಬಹಳ ಸಮಸ್ಯೆ ಇದೆ ನಗಲು ಸಾಧ್ಯವೇ ಇಲ್ಲ ಎಂಬುವವರು ಓ ಬದುಕೇ ನೀನೆಷ್ಟು ಸುಂದರ ಎಂಬ ಡಾ| ಯಂಡಮೂರಿ ವೀರೇಂದ್ರನಾಥ್‌ ಅವರು ಬರೆದಿರುವ ಯತಿರಾಜ್‌ ವೀರಂಬುದಿ ಅವರಿಂದ ಕನ್ನಡಕ್ಕೆ ಅನುವಾದ ಪುಸ್ತಕ ಓದಬೇಕು. ಇಲ್ಲಿ ಪುಸ್ತಕವನ್ನು ಹೊಗಳುತ್ತಿಲ್ಲ, ನಗುವಿನ ಪ್ರಾಮುಖ್ಯತೆ ತಿಳಿಯಲು ಸಹಕಾರಿ ಈ ಪುಸ್ತಕ. ಅವರು ಪುಸ್ತಕದಲ್ಲಿ ಹೇಳಿರುವ ನನ್ನ ನೆಚ್ಚಿನ ಸಾಲುಗಳಲ್ಲೊಂದು “ನಿನ್ನನ್ನು ನೀನು ಕನ್ನಡಿಯಲ್ಲಿ ನೋಡಿ ಹಿತವಾಗಿ ನಗು. ನಿನ್ನನ್ನು ನೋಡಿ ನೀನೇ ನಗದಿದ್ದರೆ ಯಾವ ಹಂದಿ, ನಾಯಿಯು ನಿನ್ನನ್ನು ನೋಡಿ ನಗುವುದಿಲ್ಲ.’ ಇದರ ಅರ್ಥ ನಮ್ಮನ್ನು ನೋಡಿ ನಾವು ನಕ್ಕಾಗ ನಮ್ಮೊಳಗೆ ಆತ್ಮವಿಶ್ವಾಸ, ನಿರಳತೆ ಸಿಗುತ್ತದೆ. ಅದು ನಮ್ಮ ಮುಖದಲ್ಲಿ ಪ್ರತಿಬಿಂಬಿಸಿದಾಗ ಇತರರು ನಮ್ಮೆಡೆಗೆ ಮಂದಹಾಸ ಬೀರುತ್ತಾರೆ. ಆತ್ಮವಿಶ್ವಾಸ ಹೆಚ್ಚಿಸುವ ಸಾಧನ ನಗು.

ನಗು ಎಷ್ಟು ಮುಖ್ಯವಾಗುತ್ತದೆ ಎಂಬುದಕ್ಕೆ ಎರಡು ನಿದರ್ಶನ ನೀಡುತ್ತೇನೆ. ಕಾಲೇಜಿನ ಆಫೀಸಿಗೆ ಹೋದಾಗ ಅಲ್ಲಿನ ಇಬ್ಬರು ಸಿಬಂದಿ ಸದಾ ಹಸನ್ಮುಖರಾಗಿ ವಿಷಯ ವಿಚಾರ ವಿನಿಮಯ ಮಾಡುತ್ತಾರೆ. ನಮಗೂ ಸಂತೋಷ. ಅದೇ ಹೋದ ಕೂಡಲೇ ಗುಮ್ಮನಂತೆ ಕೂತಿದ್ದರೆ ಯಾರಪ್ಪ ಇವರ ಬಳಿ ಹೇಗೆ ಮಾತಾಡೋದು ಎಂಬ ಯೋಚನೆ ನಮಗಾಗುತ್ತದೆ. ತರಗತಿಯಲ್ಲಿ ಶಿಕ್ಷಕರು ತೀರ ಗಂಭೀರವಾಗಿ ಬಂದು ಪಾಠ ಮಾಡಿ ಹೋದರೆ ವಿದ್ಯಾರ್ಥಿಗಳು ಬೆಲ್‌ ಹೊಡೆಯುವುದನ್ನು ಕಾಯುತ್ತಿರುತ್ತಾರೆ. ಅದೇ ಹಿತ-ಮಿತವಾಗಿ ನಗುತ್ತಾ ಇದ್ದರೆ ವಿದ್ಯಾರ್ಥಿಗಳಿಗೂ ಶಿಕ್ಷಕರಲ್ಲಿ ಆಸಕ್ತಿ ಬಂದು ತರಗತಿಯಲ್ಲೂ ಆಸಕ್ತಿ ಮೂಡುತ್ತದೆ.

ಉತ್ತಮ ಸಾರ್ವಜನಿಕ ಸಂವಹನಕ್ಕೆ, ಸ್ನೇಹ ಸಂಬಂಧಕ್ಕೆ, ವೃತ್ತಿಪರತೆಗೆ ನಗು ಅಗತ್ಯ. ದಿನ ನಿತ್ಯ ಜೀವನದಲ್ಲೂ ಹೆಂಡತಿ ಬಳಿ ಏನೇ ಇವತ್ತು ಅಡುಗೆ ಎಂದು ಕೇಳುವುದಕ್ಕೂ, ನಗುತ್ತಾ ಮೇಡಂ ಇವತ್ತು ಏನು ವಿಶೇಷ ಎನ್ನುವುದಕ್ಕೂ ವ್ಯತ್ಯಾಸವಿದೆ. ಹೀಗೆ ಹೇಳಿದ ತತ್‌ಕ್ಷಣ ವಿಶೇಷ ಖಾದ್ಯ ಇಲ್ಲದಿದ್ದರೂ ಹೆಂಡತಿ ಇಂಪ್ರಸ್‌ ಆಗಿ ವಿಶೇಷ ಖಾದ್ಯ ತಯಾರಿಸುವ ಸಾಧ್ಯತೆ ಹೆಚ್ಚು. ಇದೆಲ್ಲ ಸರಳ ಮನೋವಿಜ್ಞಾನ.

ಪುಟ್ಟ ಮಗುವಿನ ಮುಗ್ಧ ನಗು ನೋಡಿದರೆ ಅರಿವಿಲ್ಲದೆ ನಮ್ಮ ಮುಖ ಅರಳುತ್ತದೆ. ಇದೆಲ್ಲದರ ಮಧ್ಯೆ, ನಮ್ಮ ನಗು ಒಬ್ಬರಿಗೆ ಹಿತವನ್ನುಂಟು ಮಾಡುವಂತಿರಬೇಕು ವಿನಃ ಗಾಬರಿ, ಅಭದ್ರತೆ ಉಂಟುಮಾಡಬಾರದೆಂಬ ಎಚ್ಚರಿಕೆ ನಮಗಿರುವುದು ಮುಖ್ಯ.

ನಗುವಿಗೆ ನಾವು ಊಹಿಸಲೂ ಸಾಧ್ಯವಿಲ್ಲದ ಶಕ್ತಿ ಇದೆ. ಆನಂದದಿಂದ ಇರುವ ಮನಸ್ಸು ನೆಮ್ಮದಿ ಕಂಡುಕೊಳ್ಳುತ್ತದೆ. ಸಮಸ್ಯೆ ಬರುತ್ತದೆ, ಹೋಗುತ್ತದೆ. ನಗುವಿನಿಂದಲೇ ಅದನ್ನು ನಿಭಾಯಿಸೋಣ. ನಮ್ಮ ನಗು ಇನ್ನೊಬ್ಬರಿಗೆ ಸಂತಸ ಉಂಟು ಮಾಡಿದರೆ ಅದರಿಂದ ನಮಗೆ ಇನ್ನಷ್ಟು ಸಂತೋಷ ಸಿಗುತ್ತದೆ. ಅದರಿಂದ ನಮಗೇ ಲಾಭ ಹೊರತು ನಷ್ಟವಿಲ್ಲ. ಹಾಗಾಗಿ ನಗೋಣ, ನಗುವನ್ನು ಹಂಚೋಣ. ಜೀವನವೆಂಬ ಕಡಲಲ್ಲಿ ನಗುವಿನ ಅಲೆ ತುಂಬಿದರೆ ಚೆಂದ.

ಟಾಪ್ ನ್ಯೂಸ್

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Motherhood: ತಾಯ್ತನದ ಪ್ರೀತಿ..

12-uv-fusion

Mother: ಅಮ್ಮಾ ನಿನಗೂ ಅವಕಾಶ ಸಿಗಬೇಕಿತ್ತು!

11-uv-fusion

UV Fusion: ದುಡುಕಿನ ತೊಡಕುಗಳಿಗೆ ತಾಳ್ಮೆಯೇ ಮದ್ದು

12

UV Fusion: ನಿಮ್ಮೊಳಗಿರಲಿ ಜೀವಕಳೆ

11

UV Fusion: ಬದುಕಿನ ಪರಿಪೂರ್ಣತೆಗೆ ಅಕ್ಷರವೇ ಬೆಳಕು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.