UV Fusion: ಹೊಸ ಕ್ಯಾಲೆಂಡರ್ ವರ್ಷಕ್ಕೆ ಸ್ವಾಗತ
Team Udayavani, Jan 13, 2025, 4:51 PM IST
ಹಳೆ ಕ್ಯಾಲೆಂಡರ್ ವರ್ಷವು ಮುಗಿದು ಹೊಸ ಕ್ಯಾಲೆಂಡರ್ ವರ್ಷ ಪ್ರಾರಂಭವಾಗುವ ಸಮಯ ಅಥವಾ ದಿನವಾಗಿದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್ ಮುಗಿದು ಜನವರಿ ಒಂದರಿಂದ ಹೊಸ ಕ್ಯಾಲೆಂಡರ್ ವರ್ಷ ಶುರುವಾಗುತ್ತದೆ. ಅನೇಕ ಸಂಸ್ಕೃತಿಗಳು ಈ ಹೊಸ ವರ್ಷವನ್ನು ನಾನಾ ರೀತಿಯಲ್ಲಿ ಆಚರಣೆ ಮಾಡುತ್ತಾರೆ. ಪಾಶ್ಚಾತ್ಯದವರು ಹೊಸ ವರ್ಷವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಇತರ ಸಂಸ್ಕೃತಿಗಳು ತಮ್ಮ ಸಾಂಪ್ರದಾಯಿಕ ಅಥವಾ ಧಾರ್ಮಿಕ ಹೊಸ ವರ್ಷದ ದಿನವನ್ನು ತಮ್ಮದೇ ಆದ ಪದ್ಧತಿಯ ಪ್ರಕಾರ ಆಚರಿಸುತ್ತಾರೆ. ನಮ್ಮ ಭಾರತೀಯ ಸಂಸ್ಕೃತಿ ಪದ್ಧತಿಯ ಪ್ರಕಾರ ಯುಗಾದಿ ಹಬ್ಬದ ದಿನವನ್ನು ಹೊಸ ವರ್ಷ ದಿನವನ್ನಾಗಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ.
ಹಳೆಯ ನೆನಪುಗಳು, ಕೆಟ್ಟ ಘಟನೆಗಳು ಎಲ್ಲವನ್ನೂ ಸಹ ಹಳೆ ಕ್ಯಾಲೆಂಡರ್ ವರ್ಷಕ್ಕೆ ಅಂತ್ಯಗೊಳಿಸಿ, ಏನೇ ಇದ್ದರೂ ಎಲ್ಲವನ್ನು ಮರೆತು ಹೊಸ ಯೋಚನೆಗಳನ್ನು ಮಾಡುತ್ತಾ, ಹೊಸ ಹೊಸ ಯೋಜನೆಯನ್ನು ಹಾಕುತ್ತಾ , ಹೊಸ ಕ್ಯಾಲೆಂಡರ್ ವರ್ಷಕ್ಕೆ ಕಾಲಿಡಬೇಕಾಗಿದೆ. ನಾವು ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಓದುವಾಗ ಹೊಸ ವರ್ಷ ಬಂತೆಂದರೆ ತುಂಬಾ ಖುಷಿಯಿಂದ ಓಡಾಡುತ್ತಿದ್ದೆವು. ಅಂಗಡಿಗಳಿಂದ ಗ್ರೀಟಿಂಗ್ ಕಾರ್ಡ್ ಗಳನ್ನು ತಂದು ಅದರ ಮೇಲೆ ಕವನಗಳನ್ನು ಬರೆದು ಚಾಕೋಲೇಟ್ಗಳನ್ನು ಅದರೊಳಗೆ ಇಟ್ಟು ಎಲ್ಲ ಸ್ನೇಹಿತರಿಗೂ, ನೆಚ್ಚಿನ ಗುರುಗಳಿಗೆ ಹಂಚುವ ಮೂಲಕ ಸಂಭ್ರಮಿಸುತ್ತಿದ್ದೆವು. ಅಬ್ಟಾ ಎಷ್ಟು ಅದ್ಭುತವಾಗಿರುತ್ತಿತ್ತು ಆ ಸಮಯ ಹಾಗೂ ಇದರ ಜತೆಗೆ ಹಿರಿಯರು ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕೇಕ್ಗಳನ್ನು ತಂದು ಕತ್ತರಿಸುವ ಮೂಲಕ ಹೊಸ ಕ್ಯಾಲೆಂಡರ್ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದರು. ಈಗಲೂ ಸಹ ಇಂತಹ ಆಚರಣೆಗಳು ನಡೆಯುತ್ತಿವೆ.
ನಾವು ಏನೇ ಕೆಟ್ಟದ್ದನ್ನು ಮಾಡಿದ್ದರೂ, ಮಾಡುತ್ತಿದ್ದರೂ ಅದನ್ನು ಈ ವರ್ಷಕ್ಕೆ ಅಂತ್ಯಗೊಳಿಸಿ ಒಳ್ಳೆಯ ವಿಚಾರಗಳನ್ನು, ಒಳ್ಳೆಯತನವನ್ನು ಮೈಗೂಡಿಸಿಕೊಳ್ಳೋಣ. ಕೆಲವರಿಗೆ ಒಂದು ಹೊತ್ತು ಸಹ ತಿನ್ನಲು ಆಹಾರ ಇರುವುದಿಲ್ಲ, ದೇವರು ನಮಗೆ ಕೊಟ್ಟಿರುವುದನ್ನು ಸರಿಯಾಗಿ ಉಪಯೋಗಿಸಿಕೊಂಡು ಆಹಾರವನ್ನು ವೇಸ್ಟ್ ಮಾಡದೆ ನಮ್ಮ ಕೈಲಾದಷ್ಟು ಇತರರಿಗೆ ಹಂಚಿ ತಿನ್ನುವ ಮೂಲಕ ಇಂದು ಈ ಕ್ಷಣ ನಾವು ಬದುಕಿದ್ದೇವೆ ಎಂಬುದಷ್ಟೇ ಸತ್ಯ, ನಾಳೆ ಇರುತ್ತೇವೋ ಇಲ್ಲವೋ ಗೊತ್ತಿಲ್ಲ ಆದ್ದರಿಂದ ಎಲ್ಲರ ಜತೆ ಸಹಬಾಳ್ವೆಯಿಂದ, ಸ್ನೇಹ, ಪ್ರೀತಿ, ವಿಶ್ವಾಸ, ಸಂತೋಷದಿಂದ ಜೀವನ ಸಾಗಿಸಬೇಕೆಂಬುವ, ಯಾರನ್ನೂ ಅಷ್ಟು ಸುಲಭವಾಗಿ ನಂಬಬಾರದೆನ್ನುವ ಮೈಂಡನ್ನು ಸೆಟ್ ಮಾಡಿಕೊಂಡು 2024ಕ್ಕೆ ಗುಡ್ ಬೈ ಹೇಳಿ 2025ನೆಯ ಹೊಸ ಕ್ಯಾಲೆಂಡರ್ ವರ್ಷವನ್ನು ಖುಷಿಯಿಂದ ಬರಮಾಡಿಕೊಳ್ಳೋಣ.
-ಸಂಗೀತಶ್ರೀ ಶಿವಕುಮಾರ್ ಅರೆಯೂರು ಭೋವಿಪಾಳ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KFD: ಈ ವರ್ಷದ ಮೊದಲ ಪ್ರಕರಣ ಪತ್ತೆ; ಇಬ್ಬರಿಗೆ ಪಾಸಿಟಿವ್
Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ
Jammu and Kashmir; ಪ್ರಧಾನಿ ಮೋದಿ ಹೊಗಳಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ
Shirva: ರಸ್ತೆ ಬದಿ ಕಸ ಎಸೆದವನಿಂದಲೇ ಕಸ ಹೆಕ್ಕಿಸಿದ ಶಿರ್ವ ಗ್ರಾ.ಪಂ. ಸದಸ್ಯೆ
Hosanagar; ಚಕ್ರಾನಗರ ಬಿಳಗಿನ ಮನೆಯಲ್ಲಿ ನಿಧಿ ಶೋಧ: ಬೃಹತ್ ನಿಲುವುಗಲ್ಲು ಧ್ವಂಸ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.