ಭೂಲೋಕದ ವೈಕುಂಠ ವೆಲ್ಲೂರು ಸ್ವರ್ಣ ದೇಗುಲ


Team Udayavani, Oct 18, 2018, 2:28 PM IST

18-october-17.gif

ವೆಲ್ಲೂರಿನ ಶ್ರೀ ಮಹಾಲಕ್ಷ್ಮೀ  ದೇವಸ್ಥಾನ ನೋಡಬೇಕು ಎನ್ನುವ ಆಸೆ ಬಹುದಿನಗಳಿಂದ ಇತ್ತಾದರೂ ಇತ್ತೀಚೆಗೆ ತಿರುಪತಿಯಿಂದ ಹಿಂದಿರುಗುವಾಗ ವೆಲ್ಲೂರಿನ ಸ್ವರ್ಣದೇವಾಲಯವನ್ನು ನೋಡುವ ಅವಕಾಶ ಒದಗಿಬಂತು. ಭೂಲೋಕದ ಸ್ವರ್ಗದಂತಿರುವ ಈ ದೇವಾಲಯವನ್ನು ನೋಡಲು ಎರಡು ಕಣ್ಣುಗಳೂ ಸಾಲವು ಎಂಬ ಭಾವ ಉಂಟಾಯಿತು.

ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಸಹೋದ್ಯೋಗಿಗಳು, ಮಿತ್ರರು ಹಾಗೂ ಕುಟುಂಬ ಸದಸ್ಯರನ್ನೊಳಗೊಂಡ 31 ಮಂದಿಯ ನಮ್ಮ ತಂಡ ತಿರುಪತಿ- ವೆಲ್ಲೂರು ಪ್ರವಾಸಕ್ಕೆ  ಮಂಗಳೂರಿನ ರೈಲು ನಿಲ್ದಾಣದಲ್ಲಿ ಸಜ್ಜಾಗಿ ನಿಂತೆವು. ಚೆನ್ನೈ ಎಕ್ಸ್‌ ಪ್ರಸ್‌ ರೈಲಿನಲ್ಲಿ ಸಂಜೆ ಹೊರಟ ನಾವು ಮರುದಿನ ಮುಂಜಾನೆ ತಮಿಳುನಾಡಿನ ಕಾಟ್ಪಾಡಿ ಜಂಕ್ಷನ್‌ ತಲುಪಿದೆವು.

ಕಾಟ್ಪಾಡಿಯಿಂದ ತಿರುಪತಿಗೆ ರೈಲಿನಲ್ಲಿ ಸುಮಾರು 14 ಗಂಟೆ ಪ್ರಯಾಣದ ಬಳಿಕ ನಾವು ಮೊದಲೇ ಕಾದಿರಿಸಿದ ವಸತಿಗೃಹದಲ್ಲಿ ಶೌಚ ಕಾರ್ಯಗಳನ್ನು ಮುಗಿಸಿ ಶ್ರೀ ವೆಂಕಟ್ರಮಣನ ದರ್ಶನಕ್ಕೆ ತಿರುಮಲ ಬೆಟ್ಟದೆಡೆ ತೆರಳಿದೆವು. ಸಪ್ತಗಿರಿವಾಸ ಶ್ರೀ ತಿರುಮಲೇಶನ ದರ್ಶನ ಭಾಗ್ಯ ಪಡೆದು ಪುನೀತರಾದ ನಾವು ಮರುದಿನ ಪದ್ಮಾವತಿ ಹಾಗೂ ಗೋವಿಂದರಾಜ ದೇವಸ್ಥಾನ ಸಂದರ್ಶಿಸಿ, ನಿಗದಿಪಡಿಸಿದ ಬಸನ್ನೇರಿ ಸಾಗಿದ್ದು ವೆಲ್ಲೂರು ಶ್ರೀ ಮಹಾಲಕ್ಷ್ಮೀ  ದೇವಸ್ಥಾನದ ಕಡೆಗೆ. ತಮಿಳುನಾಡಿನ ವೆಲ್ಲೂರು ಬಳಿಯ ಶ್ರೀಪುರಂನಲ್ಲಿದೆ ಅತ್ಯಂತ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ ಶ್ರೀ ಮಹಾಲಕ್ಷ್ಮೀ ಸ್ವರ್ಣ ದೇಗುಲ.

ತಿರುಪತಿಯಿಂದ ಸುಮಾರು 120 ಕಿ.ಮೀ. ದೂರದಲ್ಲಿರುವ ಈ ದೇವಸ್ಥಾನಕ್ಕೆ ತಿರುಪತಿಯಿಂದ ಬಸ್‌ನಲ್ಲಿ ಸುಮಾರು ಮೂರು ಗಂಟೆಯ ಪ್ರಯಾಣ. ಹೊರಭಾಗಕ್ಕೆ ಸ್ವರ್ಣವನ್ನು ಬಳಸಿ ನಿರ್ಮಿಸಲಾದ ಈ ದೇವಸ್ಥಾನದ ಅನನ್ಯ ಸೌಂದರ್ಯವನ್ನು ನಿಜಕ್ಕೂ ವರ್ಣಿಸಲು ಅಸಾಧ್ಯ!.

ನಕ್ಷತ್ರಾಕಾರದ ಹಾದಿಯಲ್ಲಿ ಪ್ರದಕ್ಷಿಣೆ ಬಂದು ಈ ದೇವಸ್ಥಾನದ ಚೆಲುವನ್ನು ಕಂಡಾಗ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ. ಸುಮಾರು 100 ಎಕರೆ ವ್ಯಾಪಿಸಿರುವ ಈ ಪ್ರದೇಶ ಪ್ರಕೃತಿ ಸೌಂದರ್ಯ ನಡುವೆ ಕಂಗೊಳಿಸುತ್ತಿದೆ. ಹಚ್ಚ ಹಸುರಿನ ಸುಂದರ ಉದ್ಯಾನದ ನಡುವಿನಲ್ಲಿ ಎತ್ತರದಿಂದ ಧುಮುಕುವ ಕೃತಕ ಜಲಧಾರೆ, ಅಲ್ಲಲ್ಲಿ ಶಿಲಾಬಾಲಿಕೆಯರು, ಮಂಗಳ ವಸ್ತುಗಳನ್ನು ಹಿಡಿದು ನಿಂತ ಚೆಲುವು, ವಿವಿಧ ತೀರ್ಥ ಕುಂಡಗಳು, ಶಿಲಾ ಮಂಟಪಗಳು, ಎಲ್ಲಿ ನೋಡಿದರಲ್ಲಿ ಶಂಖ-ಚಕ್ರಗಳ ಕಲಾಕೃತಿಗಳು- ಇವೆಲ್ಲವನ್ನೂ ನೋಡಿ ಕಣ್ತುಂಬಿಕೊಳ್ಳುವಾಗ ಈ ಧಾರ್ಮಿಕ ಕ್ಷೇತ್ರ ಭೂಲೋಕದ ವೈಕುಂಠ ಎಂದು ಕರೆಯುತ್ತಿರುವುದು ಅತಿಶಯೋಕ್ತಿಯಾಗದು. ಪ್ರಧಾನ ಗರ್ಭಗುಡಿಯ ಮುಂಭಾಗದಲ್ಲಿರುವ ಮಹಾಲಕ್ಷ್ಮೀಯ ಮತ್ತೂಂದು ಚಿನ್ನದ ಮೂರ್ತಿಗೆ ಸ್ವಯಂ ಅಭಿಷೇಕ ಮಾಡುವ ಸೌಭಾಗ್ಯವೂ ನಮ್ಮೆಲ್ಲರಿಗೆ ದೊರೆಯಿತು.

ಇತಿಹಾಸದಲ್ಲೇನಿದೆ?
ಶ್ರೀಪುರಂನ ನಾರಾಯಣೀ ಪೀಠದ ಶ್ರೀ ಶಕ್ತಿ ಅಮ್ಮನವರೇ ಈ ಅಪೂರ್ವ ಸ್ವರ್ಣ ದೇಗುಲದ ನಿರ್ಮಾತೃ. ಹಾಗಾಗಿಯೇ ಇಲ್ಲಿ ಅಂಬಿಕೆ ನಾರಾಯಣೀ ದೇವಿ ಶ್ರೀಶಕ್ತಿ ಅಮ್ಮನಾಗಿ ಭೂಲೋಕದಲ್ಲಿ ಅವತಾರ ತಾಳಿದರು ಎಂದು ಸ್ಥಳೀಯರು ನಂಬುತ್ತಾರೆ. ಅಪ್ರತಿಮ ಆಧ್ಯಾತ್ಮಿಕ ಸಾಧಕರಾಗಿರುವ ಶ್ರೀ ಶಕ್ತಿ ಅಮ್ಮನವರ ಅಸಾಧಾರಣ ಕಲ್ಪನಾ ಶಕ್ತಿಯಿಂದ ಮೂಡಿ ಬಂದಿರುವ ಈ ದೇವಸ್ಥಾನವನ್ನು ಇಷ್ಟೊಂದು ಆಕರ್ಷಕವಾಗಿ ನಿರ್ಮಿಸಲು 1500 ಕಿಲೋ ಶುದ್ಧ ಚಿನ್ನ ಬಳಸಲಾಗಿದೆಯಂತೆ. ಶ್ರೀ ಮಹಾಲಕ್ಷ್ಮೀಯ ದಿವ್ಯ ದರ್ಶನ ಭಾಗ್ಯ ಪಡೆಯಲು ನಕ್ಷತ್ರಾಕಾರದ ಉದ್ದನೆಯ ಮಂಟಪದಲ್ಲಿ ಸಾಗುವಾಗ ಕನ್ನಡ ಭಾಷೆ ಸಹಿತ ವಿವಿಧ ಭಾಷೆಗಳಲ್ಲಿ ಶ್ರೀ ಶಕ್ತಿ ಅಮ್ಮನ ಸ್ವರ್ಣ ವಾಕ್ಯಗಳಿರುವ ಫ‌ಲಕಗಳನ್ನು ಅಲ್ಲಲ್ಲಿ ನಾವು ಗಮನಿಸಬಹುದು.

ಶ್ರೀ ಮಹಾಲಕ್ಷ್ಮೀ ಯ ದರ್ಶನ ಪಡೆದು ಹೊರ ಬಂದಾಗ ನಮ್ಮೆಲ್ಲರಲ್ಲೂ ವಿಶಿಷ್ಟ ಆಧ್ಯಾತ್ಮಿಕ ಅನುಭೂತಿ. ದೇಗುಲದ ಒಳಾಂಗಣದಲ್ಲಿ ಮೊಬೈಲ್‌ ಫೋನ್‌ ನಿಷೇಧವಾದ್ದರಿಂದ ಹೊರಭಾಗದಲ್ಲಿ ನಾವೆಲ್ಲ ಫೋಟೋ ಕ್ಲಿಕ್ಕಿಸಿ ಸಂತೃಪ್ತರಾ ದೆವು. ಬಳಿಕ ಬಸ್‌ನಲ್ಲಿ ಕಾಟ್ಪಡಿ ರೈಲು ನಿಲ್ದಾಣಕ್ಕೆ ಬಂದು ಸೇರಿದೆವು. ಹೊಟೇಲ್‌ ನಲ್ಲಿ ಪ್ಯಾಕ್‌ ಮಾಡಿ ತಂದಿದ್ದ ಊಟವನ್ನು ರೈಲಿನಲ್ಲೇ ಸವಿದು, ಪ್ರವಾಸವನ್ನು ಮೆಲುಕು ಹಾಕುತ್ತಾ ಸುಮಧುರ ನೆನಪಿನೊಂದಿಗೆ ಮರುದಿನ ಬೆಳಗ್ಗೆ 9 ಗಂಟೆಗೆ ಮಂಗಳೂರಿಗೆ ತಲುಪಿದೆವು.

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಚೆನ್ನೈಗೆ ತೆರಳುವ ರೈಲಿನಲ್ಲಿ ಕಾಟ್ಪಾಡಿಗೆ ಸುಮಾರು 14 ಗಂಟೆಗಳ ಪ್ರಯಾಣ.
· ಕಾಟ್ಪಾಡಿ ಜಂಕ್ಷನ್‌ ನಿಂದ 10 ಕಿ.ಮೀ. ದೂರದಲ್ಲಿದೆ ವೆಲ್ಲೂರು ದೇವಸ್ಥಾನ.
· ಸಾಕಷ್ಟು ಬಸ್‌, ಖಾಸಗಿ ವಾಹನ ಸೌಲಭ್ಯಗಳಿವೆ.
· ಮೊದಲೇ ವಸತಿ ಗೃಹ ಕಾಯ್ದಿರಿಸಿದರೆ ಸಮಸ್ಯೆಯಿಲ್ಲ.

 ಸತೀಶ್‌ ಶೆಟ್ಟಿ,
ಕೊಡಿಯಾಲ್‌ಬೈಲ್‌

ಟಾಪ್ ನ್ಯೂಸ್

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

IPL 2025: Here’s what all ten teams look like after the mega auction

IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

5-uv-fusion

UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

ಹೊಸಪೇಟೆ: ಸ್ಕ್ಯಾನ್‌ ಮಾಡಿ, ಹಂಪಿ ಕಂಬಗಳ ಸಪ್ತ ಸ್ವರ ಕೇಳಿ

6-uv-fusion

Opportunities: ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಚತುರತೆ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ

7-gundlupete

Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Pakistan: ಪಾಕ್‌ ಸೇನೆ ಮತ್ತು ಇಮ್ರಾನ್‌ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್‌ ಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.