ಪ್ರಕೃತಿಯ ಮಡಿಲಲ್ಲೊಂದು ಮನಸೆಳೆವ “ವಿಭೂತಿ ಫಾಲ್ಸ್’
Team Udayavani, Feb 6, 2020, 4:18 AM IST
ವಿಭೂತಿ ಜಲಪಾತವು ಶಿರಸಿ ಪಟ್ಟಣಕ್ಕೆ ಹತ್ತಿರದಲ್ಲಿದೆ. ಅಕ್ಟೋಬರ್‌ನಿಂದ ಜನವರಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ . ಪ್ರವೆಶದ್ವಾರದಿಂದ ಕೊಂಚ ದೂರ ನಡೆಯಬೇಕಿರುವುದರಿಂದ ಇದು ಚಾರಣ ಪ್ರಿಯರ ನೆಚ್ಚಿನ ತಾಣವೂ ಹೌದು. ಜಲಪಾತದ ಬಳಿ ನೀರಿನ ಹರಿವಿನಿಂದ ಕಲ್ಲುಗಳ ಮೇಲೆ ಪಾಚಿ ಕಟ್ಟಿರುವುದರಿಂದ ತುಸು ಜಾಗೃತೆ ವಹಿಸಲೇ ಬೇಕು.
ಸುತ್ತಲೂ ಹಸುರಿನಿಂದ ಕೂಡಿದ ಕಾಡು ಅದರ ನಡುವೆ ಜುಳು ಜುಳು ಎನ್ನುವ ನಿನಾದ. ಆಕಾಶಕ್ಕೆ ಮುತ್ತಿಡುವಂತೆ ತೋರುವ ಎತ್ತರದ ಮರಗಳು. ಮನವನ್ನು ಪ್ರಫುಲ್ಲಗೊಳಿಸುವ ಹಕ್ಕಿಗಳ ಚಿಲಿಪಿಲಿ ನಿನಾದ. ಮರದ ಬೇರುಗಳೇ ಅಡ್ಡಲಾಗಿ ಮಲಗಿ ಮೆಟ್ಟಿಗಳನ್ನು ಮಾಡಿ ಸ್ವಾಗತಿಸುವ ಭಾವ. ಬಿರು ಬಿಸಿಲಿಗೆ ಚಪ್ಪರದಂತೆ ನೆರಳಿನಿಂದ ಕೂಡಿದ ಪುಟ್ಟ ದಾರಿ ಹೀಗೆ ಹೊಸದೊಂದು ಪ್ರಪಂಚಕ್ಕೆ ಕರೆದೊಯ್ಯುವಂತೆ ಅನುಭವವಾಗುವುದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಜಲಪಾತಕ್ಕೆ ಸಾಗುವ ಮಾರ್ಗ. ವಿಭೂತಿಯಂತಹ ಬೆಳ್ಳಗಿನ ಬಣ್ಣದಿಂದ ಕೂಡಿದ ಜಲರಾಶಿಯನ್ನು ನೋಡುತ್ತಿದ್ದರೆ ಮಂತ್ರಮುಗ್ಧರಾಗುವುದಂತೂ ಸುಳ್ಳಲ್ಲ.
ಕಾಲ್ನಡಿಗೆಯ ಚಾರಣ
ಪಶ್ಚಿಮ ಘಟ್ಟಗಳಲ್ಲಿ ಅಡಗಿರುವ ಸುಂದರವಾದ ಜಲಪಾತ ಇದಾಗಿದೆ. ಅಕ್ಟೋಬರ್‌ನಿಂದ ಜನವರಿಯವರೆಗೆ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ವಾಗಿದೆ. ಯಾಣ ದಿಂದ ಸುಮಾರು 20 ಕಿ.ಮೀ. ಕಡಿದಾದ ರಸ್ತೆ ಯಲ್ಲಿ ಸಾಗಬೇಕು. ಪ್ರವೇಶ ದ್ವಾರ ದಲ್ಲಿ ಟಿಕೆಟ್ ಪಡೆದು ಕಾಲ್ನಡಿಗೆ ಯಲ್ಲಿ ಸಾಗಬೇಕು. ಸುಮಾರು 15 ರಿಂದ 20 ನಿಮಿಷಗಳ ಕಾಲ ಚಾರಣ ಮಾಡಿದರೆ, ಕಣ್ಮನ ಸೆಳೆಯುವ ವಿಭೂತಿ ಜಲಪಾತ ಕಾಣಸಿಗುತ್ತದೆ.
ಹಚ್ಚಹಸುರಿನ ಪರಿಸರ
ಮನಸ್ಸಿಗೆ ಮಂದಹಾಸ ನೀಡುವ ಈ ಫಾಲ್ಸ್‌ಗೆ ನೀರನ್ನು ಇಷ್ಟಪಡುವವರಷ್ಟೇ ಅಲ್ಲ, ಚಾರಣ ಪ್ರಿಯರು ಕೂಡ ಹೋಗಬಹುದು. ಏದುಸಿರು ಬಿಡುತ್ತ¤ ನಡೆಯುವ ಈ ಚಾರಣದ ದಾರಿಯಲ್ಲಿ ಆಯಾಸ ನಿವಾರಿಸಲೆಂದು ಮಾಡಿಟ್ಟ ಬೆಂಚುಗಳು, ದಣಿವಾದರೆ ಕುಳಿತುಹೋಗಿ ಎಂದು ಹೇಳುವಂತೆ ಭಾಸವಾಗುತ್ತದೆ. ಮಾತ್ರವಲ್ಲದೆ ಸಾಗುವ ದಾರಿಯಲ್ಲಿ ಕಾಣಸಿಗುವ ಭತ್ತದ ಗದ್ದೆಗಳು ಒತ್ತಡದಿಂದ ಕೂಡಿದ್ದ ಮನಕ್ಕೆ ನಿರಾಳತೆಯನ್ನು ನೀಡಿ ದಾರಿ ಸಾಗುವುದೇ ತಿಳಿಯದಂತೆ ಮಾಡುತ್ತದೆ. ಸುತ್ತಲೂ ಹಚ್ಚಹಸುರಿನ ಪರಿಸರ ಎಂಥಹವರ ಮನವನ್ನೂ ಕರಗಿಸುವಂತಿದೆ. ಹೀಗೆ ಚಾರಣದಲ್ಲಿ ಸಾಗುವುದು ಹೊಸ ಅನುಭವಕ್ಕೆ ತೋರಣ ಎನ್ನಬಹುದು.
ನೈಸರ್ಗಿಕ ಕೊಳ
ಕಲ್ಲು ಬಂಡೆಗಳ ಮೇಲೆ ಹಂತ ಹಂತವಾಗಿ ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇದು ನೈಸರ್ಗಿಕ ಕೊಳವನ್ನು ಸೃಷ್ಟಿಸಿದ ಕಾರಣ ಯಾವ ಭಯವಿಲ್ಲದೆ ಈಜು ಪ್ರಿಯರು ವಿಹರಿಸಬಹುದು. ಆದರೆ ಸದಾ ಕಾಲ ನೀರಿನ ಹರಿವಿನಿಂದ ಕಲ್ಲುಗಳ ಮೇಲೆ ಪಾಚಿ ಕಟ್ಟಿರುವುದರಿಂದ ಜಾರುವಿಕೆ ಇರುತ್ತದೆ. ಆದ್ದರಿಂದ ಜೋಪಾನವಾಗಿ ನಡೆಯುವುದನ್ನು ಮರೆಯಬಾರದು.
ಫೋಟೋ ಕ್ಲಿಕ್ಕಿಸಬಹುದು
ಇನ್ನು ಫೋಟೋ ಕ್ಲಿಕ್ಕಿಸುವ ಹವ್ಯಾಸ ಇರುವವರಿಗಂತು ಹೇಳಿ ಮಾಡಿಸಿದ ಜಾಗವಿದು ಎನ್ನಬಹುದು. ಸುತ್ತಲಿನ ಹಸುರು ರಾಶಿಗಳ ಜತೆಗೆ ಜಲಪಾತದ ಹಾಲಿನಂತಹ ನೊರೆಯ ಬಿಳಿಯ ಜಲಧಾರೆಯ ನಡುವೆ ನಿಂತು ಫೋಟೋ ಕ್ಲಿಕ್ಕಿಸುವುದೇ ಒಂದು ಆನಂದ. ಫಾಲ್ಸ್‌ನ ಬಳಿ ಸಮಯ ಕಳೆಯಲು ಬಯಸಿದರೆ ಕೊಂಚ ಹಿತ-ಮಿತವಾದ ಆಹಾರವನ್ನು ಕೊಂಡೊಯ್ಯುವುದು ಒಳಿತು. ಪ್ರಕೃತಿಯ ಮಧ್ಯದ ತಣ್ಣನೆಯ ಗಾಳಿಯಲ್ಲಿ ಕುಳಿತು ತಿಂಡಿ, ಊಟ ಸವಿದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನವಷ್ಟು ಸಂತಸವಾಗುತ್ತದೆ ಎನ್ನುವುದರಲ್ಲಿ ಅತಿಶಯೋಕ್ತಿ ಇಲ್ಲ.
ಮನಕ್ಕೆ ಖುಷಿ
ಜಲಪಾತ ನೋಡುವ ಕುತೂಹಲಕ್ಕೆ ಹಚ್ಚ ಹಸುರಿನಿಂದ ತುಂಬಿದ ಪ್ರಶಾಂತತೆಯ ವಾತಾವರಣದ ಮೆರುಗು ಮನವನ್ನು ಮತ್ತಷ್ಟು ಮುದಗೊಳಿಸುತ್ತದೆ. ನಿಶ್ಶಬ್ಧ ಪ್ರಕೃತಿಯ ಮಡಿಲಲ್ಲಿ ಧೋ ಎಂಬ ಜಲಪಾತದ ಸದ್ದು ಎಂತಹವರನ್ನೂ ಒಂದು ಬಾರಿ ನಿಂತು ಆಲಿಸುವಂತೆ ಮಾಡುತ್ತದೆ. ಪಟ್ಟಣಗಳಲ್ಲಿ ವಾಸಿಸುವವರಿಗೆ ಪ್ರತಿದಿನದ ಜಂಜಾಟಗಳಿಂದ ಬೇಸತ್ತಿದ್ದ ಮನಕ್ಕೆ ಖುಷಿ ಹೆಚ್ಚಿಸುವ ಜಾಗವಾಗಿದೆ.
ರೂಟ್ ಮ್ಯಾಪ್
ಯಾಣದಿಂದ ಸುಮಾರು 20 ಕಿ.ಮೀ. ಕಡಿದಾದ ರಸ್ತೆಯಲ್ಲಿ ಸಾಗಬೇಕು.
15ರಿಂದ 20 ನಿಮಿಷಗಳ ಕಾಲ ಚಾರಣ ಮಾಡಿದರೆ ವಿಭೂತಿ ಜಲಪಾತ ಕಾಣಸಿಗುತ್ತದೆ.
ಪವಿತ್ರಾ ಭಟ್ ಜಿಗಳೆಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.