“ಪ್ರವೇಶ’ಕ್ಕೆ ಡಿಸೆಂಬರ್‌ವರೆಗೆ ಕಾಯಿರಿ!

Team Udayavani, May 2, 2019, 11:20 AM IST

0105mlr21-pravesha

ಒಂದು ಹಳ್ಳಿ. ಅಲ್ಲೊಂದು ಶಾಂತಿ ಸಾಮರಸ್ಯದ ಜೀವನ. ಜಾತಿ-ಮತ ಧರ್ಮದ ಪರಿವೆಯೇ ಇಲ್ಲದೆ ಬದುಕುವ ಜನರು. ಆಧುನಿಕ ಸ್ಪರ್ಶದ ಹೊರಜಗತ್ತಿನಿಂದ ದೂರ ನಿಂತ ಸಮಾಜವದು. ಆದರೆ, ಅಂತಹ ಊರೇ ಜಾತಿ-ಧರ್ಮದ ಆಧಾರದಲ್ಲಿ ಯಾರೂ ಊಹಿಸದ ಹಾಗೆ ಬದಲಾಗಿ ಬಿಡುತ್ತದೆ. ಯಾಕೆ ಹೀಗೆ.. ಎಂದು ಯೋಚಿಸುವ ಸಮಯದಲ್ಲಿ ಊರಿನ ಚಿತ್ರಣವೇ ಅದಲು-ಬದಲು. ಯಾಕೆಂದರೆ; ಅನ್ಯೋನ್ಯ ಬದುಕಿಗೆ ಅಲ್ಲಿ ಕೊಳ್ಳಿ ಏಟು ಬಿದ್ದಾಗಿರುತ್ತದೆ!

ಇದು “ಪ್ರವೇಶ’ ಸಿನೆಮಾದ ವನ್‌ಲೈನ್‌ ಸ್ಟೋರಿ. ಈಗಾಗಲೇ ಶೂಟಿಂಗ್‌ ಮುಗಿಸಿದ ಈ ಸಿನೆಮಾ ಈಗಾಗಲೇ ಕೊನೆಯ ಹಂತದ ಎಡಿಟಿಂಗ್‌ನಲ್ಲಿದೆ. ಹೆಚ್ಚಾ ಕಡಿಮೆ ಒಂದೆರಡುತಿಂಗಳಿನಲ್ಲಿ ಸಿನೆಮಾ ರಿಲೀಸ್‌ ಮಾಡಬೇಕು ಎಂದು ಚಿತ್ರ ತಂಡ ಒಮ್ಮೆ ಲೆಕ್ಕ ಹಾಕಿತ್ತು. ಆದರೆ, ಸದ್ಯದ ಮಾಹಿತಿ ಪ್ರಕಾರ ರಿಲೀಸ್‌ ಟೈಮ್‌ ಇನ್ನಷ್ಟು ಕಾಲ ಮುಂದೂಡಿಕೆಯಾಗಲಿದೆ. ಈಗಾಗಲೇ ತುಳುವಿನಲ್ಲಿ ಒಂದೊಂದು ಸಿನೆಮಾದವರು ಆಗಸ್ಟ್‌, ಸಪ್ಟೆಂಬರ್‌ ಎಂದು ಹೇಳುತ್ತಿರುವ ಕಾರಣದಿಂದ ಅದೇ ಕಾಲದಲ್ಲಿ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಸಿನೆಮಾ ರಿಲೀಸ್‌ ಮಾಡಿದರೆ ಯಾರಿಗೂ ಲಾಭವಿಲ್ಲ. ಹೀಗಾಗಿ ಎಲ್ಲರನ್ನೂ ಮೊದಲು ಕಳುಹಿಸಿ ಆ ಬಳಿಕ ಅಂದರೆ ಡಿಸೆಂಬರ್‌ ವೇಳೆಗೆ ರಿಲೀಸ್‌ ಮಾಡುವ ಬಗ್ಗೆ ನಿರ್ದೇಶಕರು ಲೆಕ್ಕಹಾಕಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುವ ಚೇತನ್‌ ಮುಂಡಾಡಿಯವರು ಮಾಡಿದ ಸಿನೆಮಾ ಇದಾಗಿರುವುದರಿಂದ “ಪ್ರವೇಶ’ದ ಬಗ್ಗೆ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆ ಇದೆ. ಕರ್ನಾಟಕದ ಪ್ರಾದೇಶಿಕ ಭಾಷೆಯನ್ನು ಹದವಾಗಿ ಮಿಕ್ಸ್‌ ಮಾಡಿ ರೆಡಿ ಮಾಡಿದ ಸಿನೆಮಾ. ಸಿನೆಮಾಗೆ ಚೇತನ್‌ ಅವರೇ ಕಥೆ ಬರೆದಿದ್ದು, ಅದನ್ನು ಖ್ಯಾತ ಸಿನಿ ಪತ್ರಕರ್ತ ಜೋಗಿ ಅವರು ವಿಸ್ತರಿಸಿದ್ದಾರೆ. ಹಿಂದಿನ ಪ್ರಶಸ್ತಿ ಪುರಸ್ಕೃತ “ಮದಿಪು’ ಚಿತ್ರದ ತಂಡವನ್ನೇ ಈ ಸಿನೆಮಾಕ್ಕೂ ಬಳಸಲಾಗಿದೆ.

ವಿ.ಮನೋಹರ್‌ ಅವರ ಸಂಗೀತವಿದೆ. ನಾಯಕನಾಗಿ ಪೃಥ್ವೀ ಅಂಬರ್‌ ಮತ್ತು ನಾಯಕಿಯಾಗಿ ಬಿಂದು ರಕ್ಷಿದಿ ಅವರು ನಟಿಸುತ್ತಿದ್ದಾರೆ. ಖ್ಯಾತ ರಂಗಭೂಮಿ ನಟ ಮತ್ತು ಪಡ್ಡಾಯಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದ ಚಂದ್ರಹಾಸ್‌ ಉಳ್ಳಾಲ ಅವರು ಒಂದು ಭಿನ್ನ ಮತ್ತು ವಿಶೇಷ ಪಾತ್ರದಲ್ಲಿದ್ದಾರೆ. ಅಂದಹಾಗೆ, ಚೇತನ್‌ ಇದೀಗ “ಚಾವಡಿ’ ಎಂಬ ಕನ್ನಡ ಸಿನೆಮಾ ಮಾಡುವ ಬಗ್ಗೆ ಪ್ಲ್ಯಾನ್‌ ಹಾಕಿಕೊಂಡಿದ್ದಾರೆ.

ಟಾಪ್ ನ್ಯೂಸ್

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Women’s Ashes Series: Big Fight between Australia-England

Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್‌ ಬಿಗ್‌ ಫೈಟ್‌

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

UV Fusion: ಆತ್ಮಹತ್ಯೆಗೂ ಆಯಸ್ಸು ಮುಗಿದಿರಬೇಕು

7-

UV Fusion: ಧರೆಯ ಮೇಲೊಂದು ಅಚ್ಚರಿ ಧಾರಾವಿ

6-uv-fusion

UV Fusion: ಪುಟ್ಟ ಕಂಗಳ ಕುತೂಹಲ

5-photography

Photography: ಎಲ್ಲೆಲ್ಲೂ ಫೋಟೋಗ್ರಫಿ

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Dakshina Kannada ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Mangaluru: ಒನ್‌ ನೇಶನ್‌-ಒನ್‌ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್‌

Two more children test positive for HMP virus: Number of cases in the country rises to 7

HMP: ಮತ್ತಿಬ್ಬರು ಮಕ್ಕಳಲ್ಲಿ ಎಚ್‌ಎಂಪಿ ವೈರಸ್‌: ದೇಶದಲ್ಲಿ 7ಕ್ಕೇರಿದ ಕೇಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಭಾರತದ 21 ಸ್ಪರ್ಧಿಗಳು ಭಾಗಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Gangolli; ಬೋಟ್‌ಗೆ ಮರದ ದಿಮ್ಮಿ ಢಿಕ್ಕಿ: ಅಪಾರ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.