ವೆಸ್ಟರ್ನ್ ಟಚ್
Team Udayavani, May 3, 2019, 4:54 PM IST
ಬೇಸಗೆ ಕಾಲ ಶುರುವಾಗುತ್ತಿದ್ದಂತೆ ಶುಭಸಮಾರಂಭಗಳ ಗಡಿಬಿಡಿಯೂ ಜೋರಾಗಿ ಇರುತ್ತದೆ. ಈ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ಕೆಲವರು ಇಷ್ಟಪಟ್ಟು ಧರಿಸಿದರೆ, ಇನ್ನು ಕೆಲವರು ಕಷ್ಟಪಟ್ಟು ತೊಡುತ್ತಾರೆ. ಯಾಕೆಂದರೆ ಕೆಲವೊಂದು ಸಮಾರಂಭಗಳಲ್ಲಿ ಅದು ಕಡ್ಡಾಯ ಎನ್ನುವಂತೆ ಪಾಲನೆಯಲ್ಲಿದೆ. ಮದುವೆಗಳಲ್ಲೂ ಇತ್ತೀಚೆಗೆ ಸಾಂಪ್ರದಾಯಿಕ ಉಡುಗೆಗಳದ್ದೇ ರಾಜ್ಯಭಾರ. ಹೀಗಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಲ್ಪ ವೆರೈಟಿ ಹುಡುಕುವವರಿಗಾಗಿಯೇ ಈಗ ವೆಸ್ಟರ್ನ್ ಟಚ್ ನೀಡಿರುವ ಸಾಂಪ್ರದಾಯಿಕ ಉಡುಗೆಗಳು ಇತ್ತೀಚಿನ ಟ್ರೆಂಡ್ ಆಗುತ್ತಿದೆ. ಸಾಂಪ್ರದಾಯಿಕ ಸಮಾರಂಭಗಳಿಗೆ ಇದು ಹೊಸ ಮೆರುಗು ನೀಡುತ್ತಿದೆ.
ಕ್ರಾಪ್‌ಟಾಪ್
ಕ್ರಾಪ್‌ಟಾಪ್‌ಗ್ಳನ್ನು ಧರಿಸುವುದು ಈಗ ಸಾಮಾನ್ಯವಾದ ವಿಷಯ. ಅವುಗಳು ಎಲ್ಲ ವಯಸ್ಸಿನವರಿಗೂ ಹೊಂದಿಕೊಳ್ಳುವುದರ ಜತೆಗೆ ಎಷ್ಟೇ ಸರಳವಾಗಿದ್ದರೂ ರಿಚ್ ಲುಕ್ ನೀಡುತ್ತದೆ. ಇಂತಹ ಕ್ರಾಪ್‌ಟಾಪ್‌ಗೆ ಸಾಂಪ್ರದಾಯಿಕ ಶೈಲಿಯ ಪಲಾಝೋ ಪ್ಯಾಂಟ್ನ್ನು ಕಾಂಬಿನೇಷನ್ ಮಾಡಿ ಮದುವೆ ಸಮಾರಂಭಗಳಿಗೆ ಹಾಕಬಹುದು. ಕ್ರಾಪ್ ಟಾಪ್‌ಗ್ಳು ಕಾಟನ್ ಬಟ್ಟೆಯದ್ದಾಗಿರಲಿ. ಬೇಸಗೆಗೆ ಆರಾಮದ ಜತೆಗೆ ಸುಂದರವಾಗಿ ಕಾಣಲು ಇದು ಸಹಕಾರಿ. ಲೆಹೆಂಗಾ ಸ್ಕರ್ಟ್‌ನ ಜತೆ ಕೂಡ ಕ್ರಾಪ್‌ಟಾಪ್‌ಗ್ಳನ್ನು ಬಳಸಬಹುದು.
ಸಾರಿಯಲ್ಲಿ ಡಿಸೈನ್
ಭಾರತೀಯ ಮದುವೆಗಳು ಸೀರೆ ಇಲ್ಲದೆ ಪರಿಪೂರ್ಣವಾಗುವುದಿಲ್ಲ. ಸಾಂಪ್ರದಾಯಿಕ ಶೈಲಿಯ ಈ ಉಡುಗೆಯನ್ನು ಸ್ವಲ್ಪ ಭಿನ್ನವಾಗಿ ಧರಿಸುವುದರ ಮೂಲಕ ನಿಮ್ಮ ಅಂದವನ್ನು ಹೆಚ್ಚಿಸಬಹುದು. ಹೆಚ್ಚು ಆಡಂಬರವಿಲ್ಲದ ಸಿಂಪಲ್ ಸಾರಿಯನ್ನು ಫೋಲ್ಡ್ ಮಾಡಿ ಅಥವಾ ಸೆರಗು ಹಾಕುವ ವಿಧಾನವನ್ನು ಬದಲಾಯಿಸಿ ಉಡುವುದರಿಂದಲೂ ಸೀರೆಯ ಅಂದವನ್ನು ಹೆಚ್ಚಿಸಬಹುದು. ಸಿಂಪಲ್ ಸಾರಿಗೆ ಡಿಸೈನರ್ ಬ್ಲೌಸ್ ಕೂಡ ಮಾಡಿಕೊಳ್ಳಬಹುದು. ತೋಳುಗಳ ವಿನ್ಯಾಸಗಳೂ ಇಂದು ಟ್ರೆಂಡಿಂಗ್ ಆಗುತ್ತಿವೆ. ಕಸೂತಿಗಳೂ ಸಾರಿಗಳಲ್ಲಿ ಸ್ಥಾನ ಪಡೆಯುತ್ತಿದೆ.
ಜೀನ್ಸ್ ಧರಿಸಿ
ನಿಮಗೆ ಇತರ ಉಡುಪುಗಳಿಗಿಂತ ಜೀನ್ಸ್ ಅತೀ ಹೆಚ್ಚು ಹೊಂದಿ ಕೊಳ್ಳುತ್ತಿದ್ದರೆ ಸಮಾ ರಂಭಗಳಿಗೂ ಅದನ್ನೇ ಧರಿಸಿ. ಆದರೆ ಟಾಪ್‌ಗ್ಳ ಆಯ್ಕೆಯಲ್ಲಿ ಸ್ವಲ್ಪ ಎಚ್ಚರವಿರಲಿ. ಟೀ ಶರ್ಟ್‌ಗಳು ಬೇಡ. ಸಾಂಪ್ರದಾಯಿಕ ಡಿಸೈನ್ ಕುರ್ತಾಗಳನ್ನು ಜೀನ್ಸ್‌ನ ಜತೆಗೆ ಧರಿಸಬಹುದು. ಟಾಪ್ ಹೆಚ್ಚು ಗ್ರ್ಯಾಂಡ್ ಆಗಿದ್ದರೆ ಒಳಿತು. ಸಾರಿ ಹಾಗೂ ಜೀನ್ಸ್ ಕಾಂಬಿನೇಷನ್‌ಗಳು ಪೆನ್ಸಿಲ್ ಪ್ಯಾಂಟ್ ಸಾರಿ ಹಾಗೂ ಅನಾರ್ಕಲಿ ಪ್ಯಾಂಟ್‌ಗಳ ಜತೆ ಹೆಚ್ಚು ಹೊಂದಿಕೊಳ್ಳತ್ತವೆ. ಸಮಾರಂಭಗಳನ್ನು ನೀವಿಷ್ಟಪಟ್ಟ ಉಡುಗೆಗಳನ್ನು ಧರಿಸಿ ಹೆಚ್ಚು ಆನಂದಿಸಿರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.