ಕೀಳರಿಮೆಯಿಂದ ಮುಕ್ತಿ ಪಡೆಯಿರಿ
Team Udayavani, Apr 1, 2019, 1:24 PM IST
ಕೀಳರಿಮೆಗಳು ಕೆಲವೊಮ್ಮೆ ಮನುಷ್ಯ ಜೀವನದ ಮೇಲೆ ಕರಿನೆರಳನ್ನು ಬೀರುತ್ತವೆ. ಇಂತಹ ಭಾವನೆಗಳು ಬೆಳೆಯುತ್ತಿರುವ ಪ್ರತಿಭೆಯ ಚಿಗುರನ್ನು ಚಿವುಟುತ್ತವೆ. ಹಾಗಾದರೆ ಏನು ಕೀಳರಿಮೆ ಅಥವ ಇನ್ ಫೀರಿಯಾರಿಟಿ ಕಾಂಪ್ಲೆಕ್ಸ್ ಎಂದರೆ? ತನ್ನ ಸಾಮರ್ಥ್ಯದ ಅರಿವಿದ್ದರೂ, ನಕಾರಾತ್ಮಕ ಭಾವನೆಯಿಂದ ಅಳೆದು ತೂಗುವುದರಿಂದ ಇಂತಹ ಸಮಸ್ಯೆ
ಸೃಷ್ಟಿಯಾಗುತ್ತದೆ. ಮನಶಾಸ್ತ್ರದಲ್ಲಿ ಉಲ್ಲೇಖೀಸಿದಂತೆ ಇಂತಹ ನಡೆ ನಮ್ಮ
ಸಂತೋಷವನ್ನು ಕಿತ್ತುಕೊಳ್ಳುತ್ತದೆ. ಬಹಳಷ್ಟು ಮಂದಿ ಇಂತಹ ಮನೋ ವೈಕಲ್ಯದಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಾವೇ ಪರಿಹಾರ ಕಂಡುಕೊಂಡರೆ ಬದುಕು ಬಂಗಾರವಾಗುವುದರಲ್ಲಿ ಅನುಮಾನ ಬೇಡ.
ಕೀಳರಿಮೆಯನ್ನು ದೂರ ಮಾಡುವುದು ಹೇಗೆ
· ಇತರರ ಸಾಧನೆಗಳನ್ನು ನಮ್ಮ ದೌರ್ಬಲ್ಯ ಎಂದು ಪರಿಗಣಿಸುವುದೇ ನಾವು ಮಾಡುವ ದೊಡ್ಡ ತಪ್ಪು. ಯಾವತ್ತಿಗೂ ಇತರರ ಸಾಧನೆಗಳು ನಮ್ಮ ದೌರ್ಬಲ್ಯವಾಗಲು ಬಿಡಬಾರದು. ಬದಲಾಗಿ ಅವುಗಳು ನಮಗೆ ಪ್ರೇರಣಾದಾಯಿಯಾದಾಗ ಮಾತ್ರ ಒಂದು ಹೆಜ್ಜೆ ಮುಂದೆ ತಲೆ ಎತ್ತಿ ನಡೆಯಲು ಸಾಧ್ಯವಾಗಬಲ್ಲುದು.
· ಯಾರಾದರೂ ನಿಮ್ಮ ಸಾಧನೆಗಳು ಅಥವ ನಿಮ್ಮ ತಪ್ಪುಗಳ ಕುರಿತಾಗಿ ಕೀಳಾಗಿ ಮಾತನಾಡಿದರೆ ಅದನ್ನೇ ಸ್ಫೂರ್ತಿಯಾಗಿ ‘ಚಾಲೆಂಜ್’ ರೂಪದಲ್ಲಿ ಪಡೆದುಕೊಳ್ಳಿ. ನಮ್ಮ ವೈಫಲ್ಯಗಳು ಯಾವತ್ತಿಗೂ ಇತರರಿಗೆ ಟೀಕಾ ವಸ್ತುವಾಗದಿರಲಿ. ಬದಲಾಗಿ ಟೀಕಾಕಾರ ಬಾಯಿ ಮುಚ್ಚಿಸುವಂತಿರಬೇಕು.
· ಇಂಗ್ಲಿಷ್‌ನಲ್ಲಿ ‘ಇನ್ ಫೀರಿಯರ್’ ಮತ್ತು ‘ಸುಪೀರಿಯರ್’ ಎಂಬ ಎರಡು ಶಬ್ದಗಳಿವೆ. ಈ ಎರಡು ಶಬ್ದಗಳಲ್ಲಿ ಯಾವುದು ನಮ್ಮ ತಲೆಯಲ್ಲಿ ಹೆಚ್ಚು ಅಚ್ಚಾಗಿರುತ್ತದೆಯೋ ಅದೇ ಪ್ರಕಾರ ನಮ್ಮ ವರ್ತನೆಗಳು ಬದಲಾಗುತ್ತದೆ. ನಮಗೆ ನಾವೆ ‘ಸುಪೀರಿಯರ್’ ಆಗಿದ್ದರೆ ಮಾತ್ರ
ಸಕಾರಾತ್ಮಕತೆ ದೀರ್ಘ ಕಾಲ ನಮ್ಮಲ್ಲಿ ಉಳಿಯಲು ಸಾಧ್ಯ.
· ನಿಮ್ಮ ಮೇಲೆ ವಿಶ್ವಾಸ ಇಟ್ಟುಕೊಳ್ಳಿ. ನಮಲ್ಲಿ ನಾವೇ ವಿಶ್ವಾಸವನ್ನು ತುಂಬಲು ವಿಫಲವಾದರೆ, ಇನ್ನು ಮತ್ತೊಬ್ಬರು ನಮ್ಮ ಮೇಲೆ ವಿಶ್ವಾಸವನ್ನು ಇಡುವುದಾದರೂ ಹೇಗೆ?
ಇದಕ್ಕಾಗಿ ನೀವು ಮಾಡುವ ಕೆಲಸ, ಸಣ್ಣದಿರಲಿ ಅಥವ ಬಹುದೊಡ್ಡ ಕೆಲಸವೇ ಆದರೂ ವಿಶ್ವಾಸದಿಂದ ಪೂರೈಸಿ. ಇದು ನಿಮ್ಮನ್ನು ಬಹುದೂರ ಕೊಂಡೊಯ್ಯುತ್ತದೆ.
· ನಿಮ್ಮ ದುಖಃ ದುಮ್ಮಾನಗಳಿಗೆ ನೀವೆ ಕಿವಿಯಾಗಲು ಪ್ರಯತ್ನಿಸಿ. ಇನ್ನೊಬ್ಬರಲ್ಲಿ ನಮ್ಮ ಸಮಸ್ಯೆಗಳು ಅಥವ ಭಾವನೆಯನ್ನು ವ್ಯಕ್ತಪಡಿಸಲು ಹಿಂಜರಿಕೆಯಾದರೆ, ನಿಮಗೆ ನೀವೆ ಕಿವಿಯಾಗಲು ಪ್ರಯತ್ನಿಸಿ.
· ನಿಮ್ಮ ಸುತ್ತ ಮುತ್ತ ಸಕಾರಾತ್ಮಕ ಧೋರಣೆ ತಳೆದಿರುವ ಜನರೇ ಇರುವಂತೆ ನೋಡಿಕೊಳ್ಳಿ. ಅವರ ಪ್ರತಿ ಮಾತುಗಳು ಸಕಾರಾತ್ಮಕತೆಯನ್ನು ತುಂಬಿರುತ್ತದೆ. ನಿಮ್ಮ ದುರ್ಬಲ ಮನಸ್ಸಿಗೆ ಅದು ಶಕ್ತಿಯನ್ನು ತುಂಬಬಲ್ಲುದು.
ನಕಾರಾತ್ಮಕ ಚಿಂತನೆಯನ್ನು ಆದಷ್ಟು ದೈನಂದಿನ ಜೀವನದಿಂದ ದೂರ ಇಡಲು ಪ್ರಯತ್ನಿಸಿ. ಅವುಗಳು ಜೀವನದ ಅಂದವನ್ನು ಕೂರೂಪವಾಗಿ ಮಾರ್ಪಡಿಸಬಹುದು.
ನೀವು ಮಾಡಿದ ಪ್ರತಿ ಕೆಲಸದಲ್ಲಿ ತೃಪ್ತಿ ಕಾಣುವುದಕ್ಕೆ ಪ್ರಯತ್ನಿಸಿ. ನಿಮ್ಮ ಕಾರ್ಯ ತೃಪ್ತಿ ನಿಮಗೆ ಖುಷಿಯನ್ನು ಧಾರೆ ಎರೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.