ಭರವಸೆಯೇ ಬದುಕಿನ ಬೆಳಕು
Team Udayavani, Apr 29, 2019, 11:43 AM IST
ಬದುಕಲು ಬೇಕಿರುವುದೇನು? ಎಂದು ತರಗತಿಯಲ್ಲಿ ಗುರುಗಳೊಬ್ಬರು ಕೇಳಿದಾಗ ಒಬ್ಬ ಶಿಷ್ಯ ನೀರು, ಗಾಳಿ, ಆಹಾರ ಎಂದರೆ ಇನ್ನೊಬ್ಟಾತ ಹಣ, ಆಸ್ತಿ ಎನ್ನುತ್ತಾನೆ. ಆದರೆ ತರಗತಿಯ ಮೂಲೆಯಲ್ಲಿದ್ದ ದಡ್ಡ ವಿದ್ಯಾರ್ಥಿಯೊಬ್ಬ ನಾಳೆಯ ಬಗ್ಗೆ ಭರವಸೆ ಎನ್ನುತ್ತಾನೆ. ಆಗ ಗುರುಗಳು ಅವನ ಬಳಿ ಬಂದು
ಬೆನ್ನು ತಟ್ಟುತ್ತಾರೆ, ಶಹಬ್ಟಾಸ್ ಎನ್ನುತ್ತಾರೆ. ಕಾರಣವಿಷ್ಟೇ
ಬದುಕಿನಲ್ಲಿ ಭರವಸೆಯೇ ಇಲ್ಲದಿದ್ದರೆ ನಾವು ಬದುಕುವುದಾದರೂ ಹೇಗೆ ತಾನೇ ಸಾಧ್ಯ.
ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಎಲ್ಲರಿಗೂ ಇರುತ್ತದೆ. ಆದರೆ ಸಾಧಿಸುವ ಮಂದಿ ಕೆಲವೇ ಕೆಲವು. ಕಾರಣ ನಮಗೆ ನಮ್ಮ ಮೇಲೆ, ನಾಳೆಯ ಬಗ್ಗೆ ಭರವಸೆಯೇ ಇಲ್ಲ. ಹೀಗಿರುವಾಗ ಸಾಧಿಸುವುದಾದರೂ ಹೇಗೆ?
ಮುಂಬಯಿಯ ಪಟ್ಟಣದಲ್ಲಿ ಫುಟ್ಪಾತ್‌ನ ಕಲ್ಲು ಬೆಂಚಿನ ಮೇಲೆ ಮಲಗುತ್ತಿದ್ದ ಬಾಲಕ ಇವತ್ತು ಬಾಲಿವುಡ್‌ನ ಬಾದ್‌ಷಾ ಶಾರುಖ್ ಖಾನ್, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ರಿಲಯನ್ಸ್ ಕಂಪೆನಿಯ ಸ್ಥಾಪಕ ಧೀರೂಬಾಯಿ ಅಂಬಾನಿ, ಬಸ್ ಕಂಡೆಕ್ಟರ್ ಆಗಿದ್ದ ರಜನೀಕಾಂತ್ ಸೂಪರ್‌ಸ್ಟಾರ್, ಸೈಕಲ್ನಲ್ಲಿ ಹೋಗಿ ಮನೆಮನೆಗೂ ಪತ್ರಿಕೆ ಹಂಚುತ್ತಿದ್ದ ಅಬ್ದುಲ್ ಕಲಾಂ ವಿಜ್ಞಾನಿ, ರಾಷ್ಟ್ರಪತಿಯಾಗಿದ್ದು.. ನಾಳಿನ ಭರವಸೆಯ ಬದುಕಿನಿಂದಲೇ.
ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆದರೆ ಆ ಕಷ್ಟಗಳಿಗೆ ಹೆದರಿ ಸೋಲೊಪ್ಪಿಕೊಳ್ಳುವುದು ಯಾವ ನ್ಯಾಯ. ಎಷ್ಟೋ ಬಾರಿ ಬದುಕಿನಲ್ಲಿ ಸೋಲಲು ನಾವೇ ಕಾರಣರಾಗಿರುತ್ತೇವೆ. ಯಾಕೆಂದರೆ ನಾವು ಕಾರ್ಯ ಮಾಡುವುದಕ್ಕೆ ಮೊದಲೇ ಇದು ನನ್ನಿಂದ ಸಾಧ್ಯವಿಲ್ಲವೇನೋ ಎಂಬ ತೀರ್ಮಾನಕ್ಕೆ ಬಂದಿರುತ್ತೇವೆ. ಇನ್ನು ಕೆಲವು ಬಾರಿ ಇನ್ನೊಬ್ಬರು ನಮ್ಮನ್ನು ಸೋಲಿಸುತ್ತಾರೆ. ನಾವು ಮಾಡಬೇಕಾದ ಕೆಲಸಕ್ಕೆ ಅದು ನಿನ್ನಿಂದ ಸಾಧ್ಯವಾಗುವುದಿಲ್ಲ ಎಂದು ಬಿಡುತ್ತಾರೆ. ಅಲ್ಲಿ ನಮ್ಮ ಮೇಲಿನ ಭರವಸೆ ನಮಗೇ ಅರ್ಧದಷ್ಟು ಕುಸಿದಿರುತ್ತದೆ. ಆದರೆ ನಮ್ಮ ಮೇಲೆ, ನಾವು ಮಾಡುವ ಕಾರ್ಯದ ಮೇಲೆ ಭರವಸೆಯೊಂದಿದ್ದರೆ ಸಾಕು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ.
ಸಾಧ್ಯವಿರುವುದನ್ನು ಯೋಚಿಸೋಣ
ಜೀವನದಲ್ಲಿ ಏನು ಮಾಡುವುದಕ್ಕೆ ನಮ್ಮಿಂದ ಸಾಧ್ಯವಿಲ್ಲವೋ ಅದರ ಬಗ್ಗೆ ಯೋಚನೆ ಮಾಡುವುದಕ್ಕಿಂತ ನಮ್ಮಿಂದ ಏನು ಮಾಡಲು ಸಾಧ್ಯವಿದೆಯೋ ಅದರ ಬಗ್ಗೆ ಯೋಚನೆ ಮಾಡಬೇಕು. ಆಗ ಬದುಕಿನ ಹಾದಿ ಸರಳವಾಗುವುದು, ಭರವಸೆಯ ದಾರಿ ತೆರೆದುಕೊಳ್ಳುವುದು.
ಯಶಸ್ಸಿನ ಸೂತ್ರ
ಪರೀಕ್ಷೆಯಲ್ಲಿ ಫೇಲಾದೆ, ಸಂದರ್ಶನದಲ್ಲಿ ಕೆಲಸ ಸಿಗಲಿಲ್ಲ, ಬಿಸ್‌ನೆಸ್‌ನಲ್ಲಿ ನಷ್ಟವಾಯ್ತು… ಹೀಗೆ ಬದುಕಿನಲ್ಲಿ ಎದುರಾಗುವ ಸಣ್ಣಸಣ್ಣ ಸೋಲಿಗೂ ಅಂಜಿ ನಾವು ಕರ್ತವ್ಯದಿಂದ ಹಿಂದೆ ಸರಿಯುತ್ತೇವೆ. ಕಾರಣ ಭರವಸೆ ಎಂಬುದು ನಮ್ಮೊಳಗೆ ಇಲ್ಲದೇ ಇರುವುದು. ನಾಳೆಯ ಬಗ್ಗೆ ಭರವಸೆ ಇಟ್ಟುಕೊಂಡು ಯಾವುದೇ ಕಾರ್ಯ ಮಾಡಿದರೂ ಬದುಕಿನಲ್ಲಿ ನಾವು ಯಶಸ್ವಿಯಾಗಲು ಸಾಧ್ಯವಿದೆ.
ಭರವಸೆಯ ಹೂವು ಅರಳಲಿ
ಯಾವುದೇ ಕೆಲಸ ಮಾಡದೆ ಸುಮ್ಮನಿರುವುದು ನೆಮ್ಮದಿ ಎಂದುಕೊಳ್ಳುವವರು ತುಂಬಾ ಮಂದಿ ಇದ್ದಾರೆ. ಆದರೆ ಇದು ಭವಿಷ್ಯಕ್ಕೆ ಮಾರಕವಾಗುವುದು. ಸುಮ್ಮನೆ ಕುಳಿತರೆ ಆರೋಗ್ಯ ಸಮಸ್ಯೆ ಮಾತ್ರವಲ್ಲ ಮಾನಸಿಕ ಸಮಸ್ಯೆಯೂ ಕಾಡಲಾರಂಭಿಸುತ್ತದೆ. ಹೀಗಾಗಿ ಇವತ್ತು ಕಷ್ಟಪಟ್ಟು ದುಡಿದರೆ ನಾಳೆ ನೆಮ್ಮದಿಯಾಗಿರಬಹುದು ಎಂಬ ಭರವಸೆ ನಮ್ಮ ಮನದೊಳಗೆ ಹುಟ್ಟಿದರೆ ಸಾಕು ಅದುವೇ ನಮ್ಮ ಮುಂದಿನ ಬದುಕನ್ನು ಸುಂದರವಾಗಿಸುತ್ತದೆ.
ಭರವಸೆಯ ದೀಪ ಹಚ್ಚೋಣ
ಸದ್ಗುರು ಜಗ್ಗಿ ವಾಸುದೇವ್ ಹೇಳುವಂತೆ “ಬದುಕಿನಲ್ಲಿ ಸಮಸ್ಯೆಗಳಿಗೆ ಕೊರತೆ ಇರುವುದಿಲ್ಲ. ಅದಕ್ಕೆ ಪರಿಹಾರವನ್ನು
ಕಂಡುಕೊಳ್ಳಬೇಕು. ಯಾಕೆಂದರೆ ನಾವು ಯಾರೂ ಯಂತ್ರಗಳಲ್ಲ’. ಯಂತ್ರಗಳಾದರೆ ಸಮಸ್ಯೆಗಳನ್ನು ಪರಿಹರಿಸಲು ಎಂಜಿನಿಯರ್
ಅನ್ನೇ ಕರೆತರಬೇಕು. ಆದರೆ ನಮ್ಮ ಬದುಕಿನ ಕಷ್ಟಗಳನ್ನು ಪರಿಹರಿಸಲು ಭರವಸೆಯ ಬೆಳಕೊಂದನ್ನು ನಾವೇ ಉರಿಸಬೇಕು.
ಸವಾಲುಗಳನ್ನು ಎದುರಿಸೋಣ
ಬದುಕಿನಲ್ಲಿ ಸವಾಲುಗಳನ್ನು ಎದುರಿಸಬೇಕು. ಅದು ನಮಗೆ ಬದುಕುವುದನ್ನು ಹೇಳಿಕೊಡುತ್ತದೆ, ಗೆಲ್ಲುವುದನ್ನು ತೋರಿಸುತ್ತದೆ, ಕಷ್ಟವನ್ನು ಪರಿಚಯಿಸುತ್ತದೆ, ಇನ್ನೊಬ್ಬರಿಗೆ ಮಾರ್ಗದರ್ಶಿಯಾಗಲು ಪ್ರೇರೇಪಿಸುತ್ತದೆ ಎನ್ನುತ್ತಾರೆ ಸ್ವಾಮಿ ವಿವೇಕಾನಂದ. ಜೀವನದಲ್ಲಿ ಸವಾಲುಗಳಿಗೆ ಹೆದರಿ ಕುಳಿತರೆ ನಮ್ಮ ಸುಂದರ ಬದುಕು ನಷ್ಟವಾಗಿ ಹೋಗುವುದು.
•ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.