ಒಂದು ಚಪಾತಿ ಏಳು ಬಗೆ
Team Udayavani, Jan 19, 2020, 4:22 AM IST
ಪ್ರತಿದಿನ ಅಸ್ವಾದಿಸಲ್ಪಡುವ ಆಹಾರಗಳಲ್ಲಿ ಚಪಾತಿ ಒಂದು. ಇದನ್ನು “ಇಂಡಿಯನ್ ಬ್ರೆಡ್’ ಎಂದು ಕರೆಯುತ್ತಾರೆ. ಸಂಪೂರ್ಣ ಗೋಧಿ ಹಿಟ್ಟಿನಿಂದ ಮಾಡುವ ಚಪಾತಿ ಇತರ ದೇಶಗಳಲ್ಲೂ ಖ್ಯಾತಿ ಪಡೆದಿದೆ. ಚಪಾತಿಯನ್ನು ಮತ್ತಷ್ಟು ರುಚಿಯನ್ನಾಗಿ ಮಾಡಲು ಗ್ರೇವಿಗಳನ್ನು ತಯಾರಿಸಲಾಗುತ್ತದೆ. ಮಾಮೂಲಿ ಬಳಸುವ ಸಾಮಗ್ರಿಗಳಿಂದ ಗ್ರೇವಿ ಅಥವಾ ಕುರ್ಮಾ ಇದ್ದರೆ ಹೊಸ ರುಚಿಯ ಅಡುಗೆ ಯಾಗುತ್ತದೆ. ಹಾಗಾಗಿ ಚಪಾತಿ ಜತೆ ತಿನ್ನಲು ಬೇಗನೆ ನಾವು ತಯಾರಿಸಬಹುದಾದ 7 ಬಗೆಯ ಸ್ವಾದಿಷ್ಟವಾದ ಕುರ್ಮಾ ಮತ್ತು ಗ್ರೇವಿಗಳನ್ನು ಇಲ್ಲಿ ಸುಶ್ಮಿತಾ ಜೈನ್ ನೀಡಿದ್ದಾರೆ.
ಚಪಾತಿ ಸರ್ವರೂ ಒಪ್ಪುವ ಒಂದು ಉಪಾಹಾರ. ಹಾಗೆಯೇ ಎಲ್ಲರೊಂದಿಗೆ ಹೊಂದಿಕೊಳ್ಳುವ ಅದರ ಸ್ವಭಾವವೂ ಕಾರಣ. ಯಾರೊಂದಿಗೂ ಗ್ರೂಪ್ ಫೋಟೋ ನಿಲ್ಲಲು ಚಪಾತಿಯ ತಕರಾರಿಲ್ಲ. ಅದಕ್ಕೆಂದೇ ಇಲ್ಲಿ ಚಪಾತಿ ಮತ್ತು ಏಳು ಮಂದಿ ಗೆಳತಿಯರ ಕಥೆ ಕೊಟ್ಟಿದ್ದೇವೆ.
ಭಿಂಡಿ ಕುರ್ಮಾ
ಸಾಮಗ್ರಿ: ಬೆಂಡೆಕಾಯಿ-250 ಗ್ರಾಂ., ಜೀರಿಗೆ ಪುಡಿ-1/2 ಟೀ ಚಮಚ, ದನಿಯಾ ಪುಡಿ 1 ಟೀ ಚಮಚ, ಗಸಗಸೆ ಪುಡಿ-1 ಟೀ ಚಮಚ, ಅಚ್ಚ ಖಾರದ ಪುಡಿ- 3 ಟೀ ಚಮಚ, ಇಂಗು-1 ಚಿಟಿಕೆ, ಕರಿಮೆಣಸಿನಪುಡಿ -1 ಚಿಟಿಕೆ, ತಾಜಾ ಮೊಸರು-ಕಾಲು ಕಪ್, ಉಪ್ಪು -ರುಚಿಗೆ ತಕ್ಕಷ್ಟು, ಅರಿಶಿಣ ಪುಡಿ-1/4 ಟೀ ಚಮಚ, ತೆಂಗಿನ ತುರಿ -2 ಚಮಚ, ಏಲಕ್ಕಿ ಪುಡಿ-1 ಚಿಟಿಕೆ, ಚಕ್ಕೆ ಪುಡಿ-1 ಚಿಟಿಕೆ, ನಿಂಬೆರಸ-1/2 ಚಮಚ
ವಿಧಾನ: ಬೆಂಡೆಕಾಯಿ ತೊಳೆದು, ಸಣ್ಣದಾಗಿ ಕಟ್ ಮಾಡಿ, ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ ಪುಡಿ, ಇಂಗು ತೆಂಗಿನ ತುರಿ ದನಿಯಾ ಪುಡಿ, ಗಸಗಸೆ ಪುಡಿ, ಅರಿಶಿಣ, ಹಸಿ ಮೆಣಸಿನಕಾಯಿ, ಮೊಸರು ಸೇರಿಸಿ ಎಣ್ಣೆ ಮೇಲೆ ತೇಲುವವರೆಗೆ ಬೇಯಿಸಿ, ಬೆಂಡೆಕಾಯಿಯನ್ನು ಸ್ವಲ್ಪ ಎಣ್ಣೆ ನಿಂಬೆರಸ ಹಾಕಿ ಹುರಿಯಿರಿ. ಅನಂತರ ಪ್ಯಾನ್‌ಗೆ ಹಾಕಿ ಅಚ್ಚ ಖಾರದ ಪುಡಿ ಲವಂಗ, ಚಕ್ಕೆ, ಕರಿಮೆಣಸಿನ ಪುಡಿ ಸೇರಿಸಿ ಕೊನೆಯಲ್ಲಿ ಉಪ್ಪು ಸೇರಿಸಿ, 5 ನಿಮಿಷ ಕುದಿಸಿ, ಚಪಾತಿ ಜತೆ ಬಿಸಿಯಾಗಿ ಬಡಿಸಿ.
ಪಾಲಕ್ ಪನೀರ್
ಅಗತ್ಯ ಸಾಮಗ್ರಿ: ಪಾಲಕ್ ಸೊಪ್ಪು -2 ಕಟ್ಟು, ಪನೀರ್ – 100 ಗ್ರಾಂ, ಹಸಿಮೆಣಸು – 6-8, ಟೊಮೇಟೊ – 2 ( ಚಿಕ್ಕ ಗಾತ್ರದ್ದು), ಈರುಳ್ಳಿ – 2, ಗರಂ ಮಸಾಲೆ – 1 ಚಮಚ, ಗಸಗಸೆ – 2-3 ಚಮಚ, ಗೋಡಂಬಿ- 8-10, ಶುಂಠಿ ಬೆಳ್ಳುಳ್ಳಿ ಗೊಜ್ಜು – 1 ಚಮಚ
ವಿಧಾನ: ಮೊದಲಿಗೆ ಶುಚಿಗೊಳಿಸಿದ ಪಾಲಕ್ ಸೊಪ್ಪು ಹಾಗೂ ಹಸಿಮೆಣಸನ್ನು 2-3 ನಿಮಿಷದಷ್ಟು ನೀರಿನಲ್ಲಿ ಬೇಯಿಸಿ ರುಬ್ಬಿಟ್ಟುಕೊಳ್ಳಿ. ಗೋಡಂಬಿ ಮತ್ತು ಗಸಗಸೆಯ ಪೇಸ್ಟ್ ತಯಾರಿಸಿಕೊಳ್ಳಿ. ಪನೀರನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಟ್ಟುಕೊಳ್ಳಿ. ಬಳಿಕ ಬಾಣಲೆಗೆ ಎಣ್ಣೆ ಹಾಕಿ ಕಾದನಂತರ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಗೊಜ್ಜು ಹಾಕಿ ಬಾಡಿಸಿಕೊಳ್ಳಿ, ನಂತರ ಇದಕ್ಕೆ ಟೊಮೇಟೊ, ಗರಂ ಮಸಾಲೆ ಹಾಕಿ, ರುಬ್ಬಿದ 2 ಮಿಶ್ರಣ ಹಾಕಿ, ಸ್ವಲ್ಪ ನೀರು, ರುಚಿಗೆ ತಕ್ಕಶು ಉಪ್ಪು ಹಾಕಿ ಕುದಿಯಲು ಶುರುವಾದಾಗ, ಪನೀರ್‌ತುಂಡುಗಳನ್ನು ಹಾಕಿ ಕುದಿಸಿದರೆ ಪಾಲಕ್ ಪನೀರ್‌ಮಸಾಲೆ ಸಿದ್ದ. ಇದನ್ನು ಪೂರಿ, ಚಪಾತಿಯ ಜತೆ ಸವಿಯಲು ಚೆನ್ನಾಗಿರುತ್ತದೆ.
ಸ್ವೀಟ್ ಕಾರ್ನ್ ಚಟ³ಟಾ ಮಸಾಲಾ ಗ್ರೇವಿಟ
ಸಾಮಗ್ರಿಗಳು
ಸ್ವೀಟ್ ಕಾರ್ನ್, ಬೆಣ್ಣೆ, ಟೊಮೇಟೊ, ಈರುಳ್ಳಿ, ಮೆಣಸು, ಶುಂಠಿ, ಗೋಡಂಬಿ, ತೆಂಗಿನಕಾಯಿ, ಜೀರಿಗೆ, ಮೆಣಸಿನ ಕಾಯಿ, ಅಚ್ಚ ಖಾರಪುಡಿ, ದನಿಯಾ ಪುಡಿ, ಗರಂ ಮಸಾಲ, ಟೊಮೇಟೊ ಕ್ಯೂರಿ, ನಿಂಬೆರಸ, ಕೊತ್ತಂಬರಿ ಸೊಪ್ಪು, ಎಣ್ಣೆ ಮತ್ತು ಉಪ್ಪು.
ವಿಧಾನ: ಕುಕ್ಕರ್‌ನಲ್ಲಿ ಸ್ವೀಟ್ ಕಾರ್ನ್ ಅನ್ನು ಬೇಯಿಸಿಟ್ಟುಕೊಳ್ಳಿ. ಬೆಣ್ಣೆ- 2 ಚಮಚ, ಟೊಮೇಟೊ – 2, ಈರುಳ್ಳಿ- 1, ಮೆಣಸು 5-6, ಶುಂಠಿ, ಗೋಡಂಬಿ 7-8, ತೆಂಗಿನಕಾಯಿ – 1 ಕಪ್ ಎಲ್ಲವನ್ನು ಸೇರಿಸಿ ನುಣ್ಣಗೆ ಮಿಕ್ಸ್ ಮಾಡಿಕೊಳ್ಳಿ. ಬಾಣಲೆಗೆ ಎಣ್ಣೆ 1 ಚಮಚ, ಬೆಣ್ಣೆ – 1 ಚಮಚ ಹಾಕಿ ಬಿಸಿಯಾದ ನಂತರ ಟೊಮೇಟೊ-1, ಈರುಳ್ಳಿ -1, ಮೆಣಸಿನಕಾಯಿ-2ನ್ನು ಚೆನ್ನಾಗಿ ಬಾಡಿಸಿಕೊಳ್ಳಿ. ಇದಕ್ಕೆ ರುಬ್ಬಿಕೊಂಡಿರುವ ಮಸಾಲೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ.
ಹಸಿವಾಸನೆ ಹೋದ ನಂತರ ಸ್ವೀಟ್ ಕಾರ್ನ್ ಅನ್ನು ಸೇರಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಹಾಕಿ. ಸ್ವಲ್ಪ ಅಚ್ಚ ಖಾರ ಮೆಣಸಿನ ಪುಡಿ, ಗರಂ ಮಸಾಲೆ, ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಟೊಮೇಟೊ ಕ್ಯೂರಿ ಹಾಕಿ 2 ನಿಮಿಷ ಬೇಯಿಸಿ. ಸ್ವಲ್ಪ ನಿಂಬೆರಸ, ಕೊತ್ತಂಬರಿ ಸೊಪ್ಪು, ಬೆಣ್ಣೆ ಹಾಕಿ, ಬಿಸಿಯಾದ ಚಪಾತಿ ಜತೆಗೆ ರುಚಿಕರವಾದ ಸ್ವೀಟ್ ಕಾರ್ನ್ ಚಟ³ಟಾ ಮಸಾಲಾ ಗ್ರೇವಿ ಸವಿಯಲು ಸಿದ್ಧ.
ದಾಲ್ ಫ್ರೈ
ಸಾಮಗ್ರಿಗಳು: ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆ, ಟೊಮೇಟೊ, ಈರುಳ್ಳಿ , ಹಸಿಶುಂಠಿ ಮತ್ತು ಬೆಳ್ಳುಳ್ಳಿ, ಸಾಸಿವೆ, ಮೆಂತ್ಯೆ, ಅರಿಶಿನ, ಕೆಂಪು ಮೆಣಸಿನ ಪುಡಿ ಗರಂ ಮಸಾಲ ಪುಡಿ, ಉಪ್ಪು, ತುಪ್ಪ , ನಿಂಬೆ ರಸ, ಕೊತ್ತಂಬರಿ ಸೊಪ್ಪು
ವಿಧಾನ: ಮೊದಲಿಗೆ ತೊಗರಿ ಬೇಳೆ, ಕಡ್ಲೆ ಬೇಳೆ, ಹೆಸರು ಬೇಳೆಗಳನ್ನು ಹದಿನೈದು ನಿಮಿಷ ನೀರಿನಲ್ಲಿ ನೆನಸಿ ಕುಕ್ಕರಿನಲ್ಲಿ ಹಾಕಿ ಎರಡು ಸೀಟಿ ತೆಗೆದು ಬೇಯಿಸಿಡಬೇಕು. ಅನಂತರ ಒಗ್ಗರಣೆ ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿಕೊಂಡು, ಸಾಸಿವೆ, ಮೆಂತ್ಯೆ ಒಗ್ಗರಿಸಿ ಬೇಳೆಗೆ ಹಾಕಬೇಕು. ಪ್ರತ್ಯೇಕವಾಗಿ ಎರಡು ಚಮಚ ತುಪ್ಪವನ್ನು ಬಿಸಿ ಮಾಡಿ, ಸಣ್ಣಗೆ ಹೆಚ್ಚಿಟ್ಟ ಬೆಳ್ಳುಳ್ಳಿ, ಹಸಿ ಶುಂಟಿ, ಈರುಳ್ಳಿ, ಟೊಮೇಟೊವನ್ನು ಚೆನ್ನಾಗಿ ಹುರಿದು ಬೇಳೆಗೆ ಹಾಕಬೇಕು.
ಖಾರ ಪುಡಿ, ಗರಂ ಮಸಾಲ ಪುಡಿ, ಅರಿಶಿನ ಉಪ್ಪು ಹಾಗೂ ಬೇಕಾದಲ್ಲಿ ಸ್ವಲ್ಪ ನೀರನ್ನು ಅರ್ಧ ಬೆಂದ ಬೇಳೆಗೆ ಸೇರಿಸಿ, ಕುಕ್ಕರಿನಲ್ಲಿ ಒಂದು ಸೀಟಿ ಕೂಗಿಸಿ ಕೊತ್ತಂಬರಿ ಸೊಪ್ಪು ಉದುರಿಸಿದರೆ ರುಚಿ ರುಚಿಯಾದ ದಾಲ್ ರೆಡಿ.
ಪನೀರ್‌ಟಿಕ್ಕಾ ಗ್ರೇವಿ ಸೂಪರ್
ಸಾಮಗ್ರಿಗಳು: 1/4 ಕಪ್ ಗಟ್ಟಿ ಮೊಸರು, 1/2 ಚಮಚ ಮೆಣಸಿನ ಪುಡಿ, 1/2 ಚಮಚ ಕೊತ್ತಂಬರಿ ಪುಡಿ, ಸ್ವಲ್ಪ ಅರಿಶಿಣ ಪುಡಿ, ಸ್ವಲ್ಪ ಗರಂ ಮಸಾಲ, ಅರ್ಧ ಚಮಚ ಶುಂಠಿ-ಬೆಳ್ಳುಳ್ಳಿ ಪೇ ಸ್ಟ್, ಅರ್ಧ ಚಮಚ ನಿಂಬೆರಸ, ಸ್ವಲ್ಪ ಉಪ್ಪು, 1 ಚಮಚ ಎಣ್ಣೆ .
ವಿಧಾನ: ಈ ಎಲ್ಲಾ ಸಾಮಗ್ರಿಗಳನ್ನು ಮೊಸರಿನೊಂದಿಗೆ ಚೆನ್ನಾಗಿ ಮಿಕ್ಸ್ ಮಾಡಿ. ಜತೆಗೆ ದೊಡ್ಡದಾಗಿ ಕತ್ತರಿಸಿದ ಈರುಳ್ಳಿ ಹಾಗೂ ಕ್ಯಾಪ್ಸಿಕಂ ಅನ್ನು ಮಿಕÕ… ಮಾಡಿಟ್ಟ ಮೊಸರು ಮಿಶ್ರಣಕ್ಕೆ ಹಾಕಿ, ಮುಂದಿನ ಹಂತವಾಗಿ ಕತ್ತರಿಸಿದ ಪನೀರ್ ತುಂಡುಗಳನ್ನು ಆ ಮಿಶ್ರಣಕ್ಕೆ ಸೇರಿಸಿ ಅರ್ಧ ಗಂಟೆ ಇಡಿ.
ಅನಂತರ ತವಾವನ್ನು ಉರಿ ಮೇಲೆ ಇಟ್ಟು ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ, ಮೊಸರು ಮಿಶ್ರಣದಲ್ಲಿ ಹಾಕಿಟ್ಟ ಪನ್ನೀರ್, ಕ್ಯಾಪ್ಸಿಕಂ ಹಾಗೂ ತುಂಡು ಮಾಡಿದ ಈರುಳ್ಳಿಗಳನ್ನು ತವಾದಲ್ಲಿ ಹಾಕಿ ರೋಸ್ಟ್ ಮಾಡಿ ಒಂದು ತಟ್ಟೆಯಲ್ಲಿ ಹಾಕಿ. ಅನಂತರ ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಕಂದು ಬಣ್ಣ ಬರುವವರೆಗೆ ಈರುಳ್ಳಿಯನ್ನು ಫ್ರೈ ಮಾಡಿ.
ಟೊಮೇಟೊ ಪೇಸ್ಟ್, ಗೋಡಂಬಿ ಪೇಸ್ಟ್, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಹಾಗೂ ಪನೀರ್‌ಹಾಕಿಟ್ಟಿದ್ದ ಮೊಸರಿನ ಮಿಶ್ರಣದ ಜತೆಗೆ ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. 10 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ, ಮಿಶ್ರಣ ಸ್ವಲ್ಪ ಗಟ್ಟಿ ರೀತಿಯಾದ ಮೇಲೆ ರೋಸ್ಟ್ ಮಾಡಿದ ಪನೀರ್‌ಹಾಕಿ ಮಿಕ್ಸ್ ಮಾಡಿದರೆ “ಪನೀರ್ ಟಿಕ್ಕಾ ಗ್ರೇವಿ’ ರೆಡಿ.
ಆಲೂಮೇಥಿ ಕುರ್ಮಾ
ಸಾಮಗ್ರಿ: 6 ಬೇಯಿಸಿದ ಆಲೂ, 3 ಕಟ್ಟು ಮೆಂತ್ಯ ಸೊಪ್ಪು, ಸಾಸಿವೆ-1/4 ಚಮಚ, ಉದ್ದಿನ ಬೇಳೆ-1 ಚಮಚ, ಅಚ್ಚಖಾರದ ಪುಡಿ-2 ಚಮಚ, ಅರಿಶಿಣ ಪುಡಿ-1/4 ಚಮಚ, ಎಣ್ಣೆ-1/4 ಕಪ್, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ : ಬೇಯಿಸಿದ ಆಲೂ ಸಿಪ್ಪೆ ತೆಗೆದು ಕತ್ತರಿಸಿಕೊಳ್ಳಿ, ಬಾಣಲೆಗೆ ಎಣ್ಣೆ ಸಾಸಿವೆ ಹಾಕಿ ತೊಳೆದು ಕತ್ತರಿಸಿದ ಮೆಂತ್ಯದ ಸೊಪ್ಪು ಹಾಕಿ 5 ನಿಮಿಷ ಬೇಯಿಸಿ, ಇದಕ್ಕೆ ಕತ್ತರಿಸಿ ಇಟ್ಟುಕೊಂಡ ಆಲೂ, ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕಲಸಿ 2 ನಿಮಿಷ ಬಾಡಿಸಿ, ಇದು ಚಪಾತಿ ಜತೆ ತಿನ್ನಲು ರುಚಿ.
ಅಣಬೆ ಬಟಾಣಿ ಗ್ರೇವಿ
ಸಾಮಗ್ರಿ: ಈರುಳ್ಳಿ 2 (ಕತ್ತರಿಸಿದ್ದು), ಜೀರಿಗೆ ಅರ್ಧ ಚಮಚ, ಟೊಮೇಟೊ 2-3(ಕತ್ತರಿಸಿದ್ದು), ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲ, ಜೀರಿಗೆ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಹಸಿಮೆಣಸು 2(ಕತ್ತರಿಸಿದ್ದು)
ವಿಧಾನ: ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಹಾಗೂ ಸ್ವಲ್ಪ ಉಪ್ಪು ಹಾಕಿ 5 ನಿಮಿಷ ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಅನಂತರ ಟೊಮೇಟೊ ಬೆಂದು ಪೇಸ್ಟ್ ರೀತಿ ಆದ ಬಳಿಕ ಗರಂ ಮಸಾಲಾ, 1 ಚಮಚ ಮೆಣಸಿನ ಪುಡಿ, 1 ಚಮಚ ಕೊತ್ತಂಬರಿ ಪುಡಿ, ಅರ್ಧ ಚಮಚ ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿ, ಅನಂತರ 1/4 ಗ್ಲಾಸ್ ನೀರು ಹಾಕಿ, ನಂತರ ಬಟಾಣಿ ಹಾಗೂ ಅಣಬೆ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಸಾಧಾರಣ ಉರಿಯಲ್ಲಿ 10 ನಿಮಿಷ ಬೇಯಿಸಿ. ಅನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಅಣಬೆ ಗ್ರೇವಿ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Dharmasthala: ದೇವರ ದರ್ಶನ ಇನ್ನಷ್ಟು ಸುಲಲಿತ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.