ಆರೋಗ್ಯ ಪೂರಕ ಸಿರಿಧಾನ್ಯ ಖಾದ್ಯ
Team Udayavani, Nov 9, 2019, 5:21 AM IST
ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ. ಆರೋಗ್ಯಪೂರ್ಣವಾಗಿರಲು ಸಿರಿಧಾನ್ಯಗಳ ಸೇವನೆ ಉತ್ತಮ. ಸಿರಿಧಾನ್ಯಗಳಲ್ಲಿ ದೇಹಾರೋಗ್ಯವನ್ನು ಹೆಚ್ಚಿಸುವ ಪೌಷ್ಟಿಕಾಂಶಗಳಿವೆ. ಇವುಗಳಿಂದ ತಯಾರಿಸಲ್ಪಡುವ ಹಲವು ಖಾದ್ಯಗಳು ಈ ವಾರದ ವಿಶೇಷತೆ.
ನವಣೆ ಮಸಾಲ ಕಿಚಡಿ
ಬೇಕಾಗುವ ಸಾಮಗ್ರಿ
ನವಣೆ: ಅರ್ಧಕಪ್
ಹೆಸರು ಬೇಳೆ: ಅರ್ಧಕಪ್
ಟೊಮೇಟೊ: ನಾಲ್ಕು
ಹಸಿ ಬಟಾಣಿ: ಅರ್ಧಕಪ್
ಜೀರಿಗೆ, ದನಿಯಾ ಹುಡಿ: ಸ್ವಲ್ಪ
ದಪ್ಪ ಈರುಳ್ಳಿ: ಒಂದು
ಹಸಿಮೆಣಸು: ಒಂದು
ಖಾರದ ಪುಡಿ: ಒಂದು ಚಮಚ
ಅರಶಿನ: ಸ್ವಲ್ಪ
ಕರಿಬೇವು: ಸ್ವಲ್ಪ
ಶುಂಠಿ, ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ
ಕೊತ್ತಂಬರಿ ಸೊಪ್ಪು: ಸ್ವಲ್ಪ
ಕ್ಯಾರೆಟ್: ಒಂದು
ಉಪ್ಪು: ರುಚಿಗೆ ತಕ್ಕಷ್ಟು
ಎಣ್ಣೆ: ಸ್ವಲ್ಪ
ಒಣಮೆಣಸು: ಎರಡು
ಮಾಡುವ ವಿಧಾನ
ಮೊದಲು ಒಂದು ಕುಕ್ಕರ್‌ಗೆ ನವಣೆ, ಹೆಸರು ಬೇಳೆ, ಹಸಿಮೆಣಸು, ಅರಶಿನ, ಖಾರದ ಪುಡಿ ಮತ್ತು ಉಪ್ಪು ಹಾಕಿ ಮೂರು ವಿಷಲ್ ಆದ ಅನಂತರ ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ ಹಾಕಬೇಕು. ಒಣಮೆಣಸು ಈರುಳ್ಳಿ, ಕರಿಬೇವು ಹಾಕಿ ಕೆಂಬಣ್ಣಬರುವವರೆಗೆ ಹುರಿಯಬೇಕು. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕ್ಯಾರೆಟ್, ಬಟಾಣಿ, ಟೊಮೇಟೊ, ಖಾರದಪುಡಿ, ಅರಶಿನ, ದನಿಯಾಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಈ ಮಸಾಲೆಯನ್ನು ನವಣೆಗೆ ಸೇರಿಸಿಕೊಂಡು ಸ್ವಲ್ಪ ನೀರು ಹಾಕಿ ಕುದಿಸಬೇಕು. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ನವಣೆ ಮಸಾಲ ಕಿಚಡಿ ಸವಿಯಲು ಸಿದ್ಧವಾಗುತ್ತದೆ.
ರಾಗಿ ಇಡ್ಲಿ
ಬೇಕಾಗುವ ಸಾಮಗ್ರಿ
ರಾಗಿ ಹಿಟ್ಟು: ಒಂದು ಕಪ್
ದಪ್ಪ ರವೆ: ಒಂದು ಕಪ್
ಬಾಂಬೆ ರವೆ: ಒಂದು ಕಪ್
ಮೊಸರು: ಒಂದು ಕಪ್
ಬೇಕಿಂಗ್ ಸೋಡಾ: ಕಾಲು ಚಮಚ
ಮಾಡುವ ವಿಧಾನ
ಒಂದು ಪಾತ್ರೆ ತೆಗೆದುಕೊಂಡು ರಾಗಿಹಿಟ್ಟು, ದಪ್ಪ ರವೆ, ಬಾಂಬೆ ರವ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಬೆರೆಸದೆ ಮೊದಲು ಮಿಶ್ರ ಮಾಡಬೇಕು. ಅನಂತರ ಅದಕ್ಕೆ ಮೊಸರು ಹಾಕಿ ಚೆನ್ನಾಗಿ ಕಲಸಿಕೊಳ್ಳಿ ಅಗತ್ಯವಿದ್ದಷ್ಟು ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 20 ನಿಮಿಷ ಬಿಡಬೇಕು. ಆ ಬಳಿಕ ಬೇಕಿಂಗ್ ಸೋಡ ಹಾಕಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ರಾಗಿ ಇಡ್ಲಿ ಸವಿಯಲು ಸಿದ್ಧವಾಗುತ್ತದೆ.
ಜೋಳ ಹಲ್ವಾ
ಬೇಕಾಗುವ ಸಾಮಗ್ರಿ
ಜೋಳ: ಮೂರು ಕಪ್
ತುಪ್ಪ: ಒಂದು ಚಮಚ
ಮಿಲ್ಕ್: ಎರಡು ಕಪ್
ಸಕ್ಕರೆ: ಒಂದು ಕಪ್
ಏಲಕ್ಕಿ ಹುಡಿ: ಒಂದು ಚಮಚ
ಕೇಸರಿ: ಚಿಟಿಕೆ
ಗೋಡಂಬಿ, ದ್ರಾಕ್ಷಿ: ಸ್ವಲ್ಪ
ಮಾವಾ, ಖೋಯಾ: ಅರ್ಧಕಪ್
ಮಾಡುವ ವಿಧಾನ
ಮೊದಲು ಜೋಳವನ್ನು ಚೆನ್ನಾಗಿ ಅರೆಯ ಬೇಕು. ಒಂದು ಪಾತ್ರೆಗೆ ತುಪ್ಪ ಹಾಕಿ ಅರೆದ ಜೋಳದ ಮಿಶ್ರಣವನ್ನು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು. ಬೇಕಿದ್ದಲ್ಲಿ ತುಪ್ಪ ಹಾಕಬೇಕು. ಅನಂತರ ಅದಕ್ಕೆ ಹಾಲು, ಸಕ್ಕರೆ ಹಾಕಿ ಚೆನ್ನಾಗಿ ಬೇಯಿಸಬೇಕು. ಅನಂತರ ಅದಕ್ಕೆ ಏಲಕ್ಕಿ ಹುಡಿ, ಗೋಡಂಬಿ ದ್ರಾಕ್ಷಿ ಹಾಕಿಕೊಳ್ಳಬೇಕು. ಖೋಯಾ ಹಾಕಿ ಚೆನ್ನಾಗಿ ಮಿಶ್ರ ಮಾಡಿದರೆ ಜೋಳದ ಹಲ್ವಾ ಸಿದ್ಧವಾಗುತ್ತದೆ.
ಊದಲು ಉಪ್ಪಿಟ್ಟು
ಬೇಕಾಗುವ ಸಾಮಗ್ರಿ
ಊದಲು (ಒಂದು ಗಂಟೆ ನೆನೆಸಿಟ್ಟ): ಒಂದು ಕಪ್
ಕ್ಯಾರೆಟ್: ಅರ್ಧಕಪ್
ಬೀನ್ಸ್: ಅರ್ಧ ಕಪ್
ಆಲೂಗಡ್ಡೆ: ಅರ್ಧ ಕಪ್
ಈರುಳ್ಳಿ: ರ್ಧ ಕಪ್
ಟೊಮೇಟೊ: ಕಾಲು ಕಪ್
ಉದ್ದಿನ ಬೇಳೆ: ಒಂದು ಚಮಚ
ಕಡ್ಲೆಬೇಳೆ: ಒಂದು ಚಮಚ
ಶೇಂಗಾ: ಕಾಲು ಕಪ್
ಹಸಿಮೆಣಸು: ಮೂರು
ಕೊತ್ತಂಬರಿ: ಸ್ವಲ್ಪ
ಕರಿಬೇವು: ಸ್ವಲ್ಪ
ಅರಶಿನ: ಸ್ವಲ್ಪ
ಸಾಸಿವೆ: ಅರ್ಧ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಜೀರಿಗೆ: ಅರ್ಧ ಚಮಚ
ತುಪ್ಪ: ಎರಡು ಚಮಚ
ಮಾಡುವ ವಿಧಾನ
ಒಂದು ಪಾತ್ರೆಯನ್ನು ಬಿಸಿಮಾಡಿ ಅದಕ್ಕೆ ತುಪ್ಪ ಹಾಕಿ ಉದ್ದಿನ ಬೇಳೆ, ಕಡ್ಲೆಬೇಳೆ, ಶೇಂಗಾ ಹಾಕಿ ಹುರಿದುಕೊಳ್ಳಬೇಕು. ಕೆಂಬಣ್ಣ ಬರುವಾಗ ಸಾಸಿವೆ, ಜೀರಿಗೆ ಹಾಕಬೇಕು. ಅನಂತರ ಹಸಿಮೆಣಸು, ಕ್ಯಾರೆಟ್, ಬೀನ್ಸ್, ಈರುಳ್ಳಿ, ಆಲೂಗಡ್ಡೆ ಹಾಕಿ ಬಾಡಿಸಿಕೊಳ್ಳಬೇಕು. ಅದಕ್ಕೆ ಅರಶಿನ, ಕರಿಬೇವು, ಟೊಮೇಟೊ ಹಾಕಬೇಕು. ಇದನ್ನು ಸ್ವಲ್ಪ ಬಿಸಿ ಮಾಡಿ ಎರಡು ಕಪ್ ನೀರು, ಉಪ್ಪು ಹಾಕಿ ಬಿಸಿ ಮಾಡಿ. ಅನಂತರ ಅದಕ್ಕೆ ನೆನೆಸಿಟ್ಟ ಊದಲು ಹಾಕಿ ತಳ ಹಿಡಿಯದಂತೆ ಬೇಯಿಸಿಕೊಳ್ಳಬೇಕು. ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಊದಲು ಉಪ್ಪಿಟ್ಟು ಸವಿಯಲು ಸಿದ್ಧವಾಗುತ್ತದೆ.
ಸಾಮೆ ಅಕ್ಕಿ ಪಲಾವ್
ಬೇಕಾಗುವ ಸಾಮಗ್ರಿ
ಸಾಮೆ ಅಕ್ಕಿ: ಒಂದೂವರೆ ಕಪ್
ಕ್ಯಾರೆಟ್: ಒಂದು
ಬಟಾಣಿ: ಒಂದು ಕಪ್
ಟೊಮೇಟೊ: ಒಂದು
ಬೀನ್ಸ್: ನಾಲ್ಕು
ಈರುಳ್ಳಿ: ಒಂದು
ಕ್ಯಾಪ್ಸಿಕಂ: ಒಂದು
ಏಲಕ್ಕಿ, ಲವಂಗ, ಚಕ್ಕೆ: ಸ್ವಲ್ಪ
ತುಪ್ಪ: ಎರಡು ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ನಿಂಬೆ ರಸ: 1ಚಮಚ
ಪಲಾವ್ ಮಸಾಲ: ಮೂರು ಚಮಚ
ಶುಂಠಿ ಬೆಳ್ಳುಳ್ಳಿ ಪೇಸ್ಟ್: ಒಂದು ಚಮಚ
ಮಾಡುವ ವಿಧಾನ
ಒಂದು ಕುಕ್ಕರ್‌ಗೆ ತುಪ್ಪ ಹಾಕಿ ಬಿಸಿಯಾದಾಗ ಅದಕ್ಕೆ ಏಲಕ್ಕಿ, ಲವಂಗ, ಚಕ್ಕೆಯನ್ನು ಹಾಕಿ ಸಾಮೆ ಅಕ್ಕಿಯನ್ನು ಹಾಕಿ ಮೂರು ಗ್ಲಾಸ್‌ನಿàರು, ಲಿಂಬೆ ರಸ, ಉಪ್ಪು ಹಾಕಿ ಕುಕ್ಕರ್‌ನಲ್ಲಿ ಎರಡು ವಿಷಲ್ ಬೇಯಿಸಿಕೊಳ್ಳಬೇಕು. ಒಂದು ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಈರುಳ್ಳಿ ಹಾ ಗೂ ಇತರ ತರಕಾರಿ ಪಲಾವ್ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಉಪ್ಪು ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಅನಂತರ ಇದಕ್ಕೆ ಬೇಯಿಸಿದ ಅನ್ನವನ್ನು ಹಾಕಿದರೆ ಪಲಾವ್ ಸಿದ್ಧವಾಗುತ್ತದೆ.
– ಸಂಗ್ರಹ: ಸುಶ್ಮಿತಾ ಶೆಟ್ಟಿ ಸಿರಿಬಾಗಿಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.