ಮೀನು ಖಾದ್ಯ ವೈವಿಧ್ಯ
Team Udayavani, Sep 22, 2018, 12:56 PM IST
ಒಮೆಗಾ- 3 ಹಾಗೂ ಅನೇಕ ಖನಿಜಾಂಶ, ಪೋಷಕಾಂಶಗಳನ್ನು ಹೊಂದಿರುವ ಮೀನು ಖಾದ್ಯ ಕರಾವಳಿ ಭಾಗದಲ್ಲಿ ಚಿರಪರಿಚಿತ ಮಾತ್ರವಲ್ಲ ಹೆಚ್ಚಿನವರಿಗೆ ಬಹುಪ್ರಿಯವೂ ಹೌದು. ಮೀನಿನ ಗಸಿ, ಫ್ರೈ, ಸಾಂಬಾರು ಮಾಡಿ ಮಾತ್ರ ಗೊತ್ತಿರುವವರು ಅಪರೂಪಕ್ಕೊಮ್ಮೆ ಅಥವಾ ವಿಶೇಷ ಸಂದರ್ಭದಲ್ಲಿ ಮೀನಿನಿಂದಲೂ ವಿವಿಧ ಖಾದ್ಯಗಳನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು.
ಬಂಗುಡೆ ಮೀನು ರಸಂ
ಬೇಕಾಗುವ ಸಾಮಗ್ರಿಗಳು
. ಬಂಗುಡೆ ಮೀನು – 4
. ಹಚ್ಚಿದ ಈರುಳ್ಳಿ -ಒಂದು ಕಪ್
. ಹಚ್ಚಿದ ಟೊಮೆಟೊ-ಒಂದು ಕಪ್
. ಕೆಂಪು ಮಣಸಿನ ಪುಡಿ – ಅರ್ಧ ಚಮಚ
. ಧನಿಯ ಪುಡಿ- ಅರ್ಧ ಚಮಚ
. ಜೀರಿಗೆ- ಕಾಲು ಚಮಚ
. ಸಾಸಿವೆ- ಕಾಲು ಚಮಚ
. ಉಪ್ಪು-ರುಚಿಗೆ
. ಎಣ್ಣೆ-ಅಗತ್ಯಕ್ಕೆ
ಮಾಡುವ ವಿಧಾನ
ಮೀನನ್ನು ಚೆನ್ನಾಗಿ ತೊಳೆದು ಚಿಕ್ಕ ತುಂಡುಗಳನ್ನಾಗಿಸಿ. ದಪ್ಪ ತಳದ ಬಾಣಲೆಯಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿ ಮಾಡಿ ಬಳಿಕ ಜೀರಿಗೆ, ಸಾಸಿವೆ, ಅರಿಸಿನ ಪುಡಿ, ಒಣಮೆಣಸು, ಈರುಳ್ಳಿ, ಟೊಮೆಟೋ ಹಾಕಿ ಹುರಿಯಬೇಕು. ಟೊಮೆಟೋ ಕರಗಿ ಈರುಳ್ಳಿ ಕೆಂಪಗಾದ ಬಳಿಕ ಒಂದು ಲೋಟ ನೀರು ಸೇರಿಸಿ ಕುದಿಸಿ. ಬಳಿಕ ಮೀನಿನ ತುಂಡುಗಳನ್ನು ಹಾಕಿ ಉಪ್ಪು ಸೇರಿಸಿ. ಸಣ್ಣ ಉರಿಯಲ್ಲಿ ಬೇಯಿಸಿ.
ಫಿಶ್ ಟಿಕ್ಕಾ
ಬೇಕಾಗುವ ಸಾಮಗ್ರಿಗಳು
. ಮುಳ್ಳಿಲ್ಲದ ಮೀನು- ಅರ್ಧ ಕೆ.ಜಿ.
. ಶುಂಠಿ ಮತ್ತು ಬೆಳ್ಳುಳ್ಳಿ- 2 ಚಮಚ
. ಅರಿಸಿನ ಪುಡಿ-1 ಚಮಚ
. ಕೊತ್ತಂಬರಿ ಪುಡಿ-1 ಚಮಚ
. ಮೆಣಸಿನ ಪುಡಿ-1 ಚಮಚ
. ತಂದೂರಿ ಪುಡಿ-1 ಚಮಚ
. ಮೊಸರು- 2 ಚಮಚ
. ನಿಂಬೆ ರಸ- 2 ಚಮಚ
. ಕಡಲೆಹಿಟ್ಟು- 1ಚಮಚ
. ಎಣ್ಣೆ- 2 ಚಮಚ
. ರುಚಿಗೆ ತಕ್ಕ ಉಪ್ಪು
. ಹಸಿ ಮೆಣಸಿನ ಕಾಯಿ- 4
. ಈರುಳ್ಳಿ- 1 (ಈರುಳ್ಳಿ ಮತ್ತು
. ಹಸಿ ಮೆಣಸಿನಕಾಯಿ ಪೇಸ್ಟ್ ಮಾಡಿ)
ಮಾಡುವ ವಿಧಾನ
ಮೀನನ್ನು ಸ್ವಚ್ಛಗೊಳಿಸಿ ಅದಕ್ಕೆ ಉಪ್ಪು, ಅರಿಸಿನ ಪುಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್‌ನೊಂದಿಗೆ ಮಿಕ್ಸ್ ಮಾಡಿ ಅರ್ಧ ಗಂಟೆ ಇಡಬೇಕು. ಅನಂತರಮೊಸರಿಗೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ತಂದೂರಿ ಪುಡಿ, ಕಡಲೆ ಹಿಟ್ಟು, ನಿಂಬೆ ರಸ, ಸ್ವಲ್ಪ ಉಪ್ಪು ಹಾಕಿ ಮಿಕ್ಸ್ ಮಾಡಬೇಕು. ಮೈಕ್ರೋವೇವ್‌ನ್ನು 300 ಡಿಗ್ರಿಗೆ ಬಿಸಿ ಮಾಡಿ ಮೀನನ್ನು ಮೊಸರಿನ ಮಿಶ್ರಣದಲ್ಲಿ ಅದ್ದಿ ಗ್ರಿಲ್‌ಗೆ ಚುಚ್ಚಿ ಈರುಳ್ಳಿ, ಹಸಿ ಮೆಣಸಿನ ಕಾಯಿ ಪೇಸ್ಟ್, ಎಣ್ಣೆ ಸವರಿ 15 ನಿಮಿಷ ಬೇಯಿಸಿದರೆ ಫಿಶ್ ಟಿಕ್ಕಾ ರೆಡಿ.
ಬಾಳೆಎಲೆ ಮೀನು ಕರಿ
ಬೇಕಾಗುವ ಸಾಮಗ್ರಿಗಳು
. ಮೀನಿನ ದೊಡ್ಡ ತುಂಡು -10
. ದೊಡ್ಡ ಸಾಸಿವೆ- 2 ಚಮಚ (ಬಿಸಿ ನೀರಿನಲ್ಲಿ ನೆನೆ ಹಾಕಿರಬೇಕು).
. ಚಿಕ್ಕ ಸಾಸಿವೆ- 1 ಚಮಚ (ಬಿಸಿ ನೀರಿನಲ್ಲಿ ನೆನೆ ಹಾಕಿರಬೇಕು).
. ತುರಿದ ತೆಂಗಿನಕಾಯಿ-ಅರ್ಧ ಕಪ್
. ಅರಿಸಿನ ಪುಡಿ-1 ಚಮಚ
. ಹಸಿ ಮೆಣಸಿನ ಕಾಯಿ-3 ಅಥವಾ 4
. ಸಕ್ಕರೆ- 1 ಚಮಚ
. ನಿಂಬೆರಸ-1 ಚಮಚ
. ಸಾಸಿವೆ ಎಣ್ಣೆ- 1 ಚಮಚ
. ಬಾಳೆ ಎಲೆ- 1ಅಥವಾ 2
ಮಾಡುವ ವಿಧಾನ
ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದಿಡಬೇಕು. ಅನಂತರ ತೆಂಗಿನಕಾಯಿ, ಸಾಸಿವೆ, ಉಪ್ಪು, ಹಸಿಮೆಣಸು, ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಬೇಕು. ಬಳಿಕ ಸಕ್ಕರೆ, ನಿಂಬೆರಸ, ಅರಿಸಿನ ಪುಡಿ ಹಾಕಿ ಮತ್ತೊಮ್ಮೆ ರುಬ್ಬಬೇಕು. ರುಬ್ಬಿದ ಮಿಶ್ರಣಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಮೀನಿನ ತುಂಡುಗಳನ್ನು ಅದರಲ್ಲಿ ಒಂದೂವರೆ ಗಂಟೆ ಕಾಲ ಇಡಬೇಕು. ಅನಂತರ ಬಾಳೆ ಎಲೆ ಸ್ವಲ್ಪ ಬಿಸಿ ಮಾಡಿ ಅದನ್ನು 8- 10 ತುಂಡುಗಳನ್ನಾಗಿ ಕತ್ತರಿಸಿ ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ ಅನಂತರ ಮಸಾಲೆ ಜತೆ ಮಿಶ್ರಣ ಮಾಡಿದ್ದ ಮೀನಿನ ತುಂಡುಗಳನ್ನು ತೆಗೆದು ಎಲೆ ಮೇಲೆ ಹಾಕಿ ಮಡಚಬೇಕು. ಒಂದು ಪಾತ್ರೆಯಲ್ಲಿ ಅರ್ಧದಷ್ಟು ನೀರು ಹಾಕಿ ಕುದಿಸಿ. ಅನಂತರ ಅದರ ಮೇಲೆ ಒಂದು ತಟ್ಟೆ ಇಟ್ಟು (ನೀರಿನಲ್ಲಿ ಮುಳುಗಬಾರದು) ಆ ತಟ್ಟೆ ಮೇಲೆ ಬಾಳೆಎಲೆಯಲ್ಲಿ ಮಡಚಿದ ಮೀನಿನ ತುಂಡುಗಳನ್ನು ಇಟ್ಟು ಪಾತ್ರೆಯ ಬಾಯಿ ಮುಚ್ಚಿ ಮೀನು ಹಬೆಯಲ್ಲಿ ಬೇಯುವಂತೆ ಮಾಡಬೇಕು.
ಮೊಸರು ಮೀನು ಕರಿ
ಬೇಕಾಗುವ ಸಾಮಗ್ರಿಗಳು
. ಮೀನು- 1 ಕೆ.ಜಿ.
. ಮೊಸರು- ಎರಡು ಕಪ್
. ಮೈದಾ- ಅರ್ಧ ಕಪ್
. ಈರುಳ್ಳಿ ಪೇಸ್ಟ್- 2 ಚಮಚ
. ಬೆಳ್ಳುಳ್ಳಿ-ಶುಂಠಿ ಪೇಸ್ಟ್- 1 ಚಮಚ
. ಟೊಮೆಟೊ (ಚಿಕ್ಕದಾಗಿ ಕತ್ತರಿಸಿದ್ದು)- 1
. ಖಾರದ ಪುಡಿ- ಅಗತ್ಯಕ್ಕೆ ತಕ್ಕಷ್ಟು
. ಅರಿಸಿನ ಪುಡಿ- ಅರ್ಧ ಚಮಚ
. ಜೀರಿಗೆ- ಅರ್ಧ ಚಮಚ
. ಕೊತ್ತಂಬರಿ ಪುಡಿ- ಅರ್ಧ ಚಮಚ
. ಹಸಿ ಮೆಣಸಿನ ಕಾಯಿ- 1
. ಉಪ್ಪು- ರುಚಿಗೆ
. ಚಕ್ಕೆ- 1
. ಏಲಕ್ಕಿ- 1
. ಎಣ್ಣೆ- 1 ಚಮ ಚ
. ನೀರು
ಮಾಡುವ ವಿಧಾನ
ಮೀನಿನ ತುಂಡುಗಳನ್ನು ಶುಚಿ ಮಾಡಿ ಅದನ್ನು ಮೈದಾ ಹಿಟ್ಟಿನಲ್ಲಿ ಹೊರಳಾಡಿಸಿ ಅನಂತರ ತವಾದಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಕಂದುಬಣ್ಣ ಬರುವವರೆಗೆ ಕರಿಯಬೇಕು. ಮತ್ತೊಂದು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಅರ್ಧ ಚಮಚ ಎಣ್ಣೆ ಹಾಕಿ. ಅದಕ್ಕೆ ಏಲಕ್ಕಿ, ಚಕ್ಕೆ ಹಾಕಿ ಹುರಿಯಬೇಕು. ಅನಂತರ ಶುಂಠಿ, ಈರುಳ್ಳಿ, ಬೆಳ್ಳುಳ್ಳಿ, ಹಸಿ ಮೆಣಸಿನ ಕಾಯಿ, ಅರಿಸಿನ ಪುಡಿ, ಖಾರದ ಪುಡಿ, ಕೊತ್ತಂಬರಿ, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಟೊಮೆಟೊ ಹಾಕಿ 2 ನಿಮಿಷ ಹುರಿಯಿರಿ. ಇದಕ್ಕೆ ಮೊಸರು ಹಾಕಿ ಸಾರು ಸ್ವಲ್ಪ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೀನಿನ ತುಂಡುಗಳನ್ನು ಹಾಕಿ ಕಡಿಮೆ ಉರಿಯಲ್ಲಿ 15 ನಿಮಿಷ ಬೇಯಿಸಿದರೆ ರುಚಿಕರ ಮೀನಿನ ಕರಿ ತಯಾರಾಗುತ್ತದೆ.
ಫ್ರೈಡ್ ರೈಸ್
ಬೇಕಾಗುವ ಸಾಮಗ್ರಿಗಳು
. ಮುಳ್ಳಿಲ್ಲದ ಮೀನು-ಅರ್ಧ ಕೆ.ಜಿ.
. ಬೇಯಿಸಿದ ಅಕ್ಕಿ-3 ಕಪ್
. ಹೆಚ್ಚಿದ ದೊಣ್ಣೆ ಮೆಣಸು-2 ಕಪ್
.ಹೆಚ್ಚಿದ ಈರುಳ್ಳಿ-3
.ಹೆಚ್ಚಿದ ಎಲೆಕೋಸು-ಅರ್ಧ ಕಪ್
.ಮೀನಿನ ಸಾಸ್- 1 ಚಮಚ
.ಚಿಲ್ಲಿ ಸಾಸ್-2 ಚಮಚ
.ಬೆಳ್ಳುಳ್ಳಿ-4 ಎಸಳು
.ಸೋಯಾ ಸಾಸ್-3 ಚಿಕ್ಕ ಚಮಚ
.ಕ್ಯಾರೆಟ್-2 ಹೆಚ್ಚಿದ್ದು
.ಕಾಳುಮೆಣಸಿನ ಪುಡಿ-1 ಚಮಚ
.ಮೆಕ್ಕೆ ಜೋಳದ ಹಿಟ್ಟು- 1 ಚಮಚ
.ಎಣ್ಣೆ ಕರಿಯಲು
. ಉಪ್ಪು-ರುಚಿಗೆ
ಮಾಡುವ ವಿಧಾನ
ಮೀನನ್ನು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಸೋಯಾ ಸಾಸ್, ಫಿಶ್ ಸಾಸ್, ಚಿಲ್ಲಿ ಸಾಸ್, ಕಾಳುಮೆಣಸಿನ ಪುಡಿಗಳೊಂದಿಗೆ ಬೆರೆಸಿ ಹದಿನೈದು ನಿಮಿಷ ಬಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮೀನಿಗೆ ಮೆಕ್ಕೆಜೋಳದ ಹಿಟ್ಟು ಹಾಕಿ ಮಿಶ್ರಣ ಮಾಡಿ ಎಣ್ಣೆಯಲ್ಲಿ ಹಾಕಿ ನಸುಕಂದು ಬಣ್ಣ ಬರುವಷ್ಟು ಕರಿಯಬೇಕು. ಬೆಳ್ಳುಳ್ಳಿ ಎಸಳುಗಳನ್ನು ಎಣ್ಣೆಯಲ್ಲಿ ಕೊಂಚ ಕೆಂಪಗಾಗುವವರೆಗೆ ಹುರಿಯಬೇಕು. ಅನಂತರ ಎಣ್ಣೆಯಲ್ಲಿ ಈರುಳ್ಳಿ, ದೊಣ್ಣೆ ಮೆಣಸು, ಕ್ಯಾರೆಟ್ ಗಳನ್ನು ಹುರಿಯಿರಿ. ಕರಿದ ಮೀನಿನ ತುಂಡುಗಳೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ ಈಗ ಬೆಂದ ಅನ್ನವನ್ನು ಈ ಮಿಶ್ರಣಕ್ಕೆ ಹಾಕಿ ಕಲಸಬೇಕು.
ಕಟ್ಲೆಟ್
ಬೇಕಾಗುವ ಸಾಮಗ್ರಿಗಳು
. ದೊಡ್ಡ ಮೀನು-1 ಕೆ.ಜಿ.
.ಹೆಚ್ಚಿದ ಈರುಳ್ಳಿ- 2
.ಹಸಿ ಮೆಣಸು- 2 ಅಥವಾ 3
.ಕರಿಬೇವಿನ ಎಲೆ- 7- 8
.ಶುಂಠಿ- 2 ಚಮಚ (ಚಿಕ್ಕದಾಗಿ ಕತ್ತರಿಸಿದ್ದು)
. ಬೆಳ್ಳುಳ್ಳಿ-1 ಚಮಚ
.ಅರಿಸಿನ ಪುಡಿ- ಕಾಲು ಚಮಚ
.ಕರಿಮೆಣಸಿನ ಪುಡಿ- ಅರ್ಧ ಚಮಚ
.ಗರಂ ಮಸಾಲಾ- ಅರ್ಧ ಚಮಚ
. ಬ್ರೆಡ್ ಚೂರು-ಅರ್ಧ ಕಪ್
. ಎಣ್ಣೆ-ಅರ್ಧ ಕಪ್
.ಲವಂಗ- 2
.ಏಲಕ್ಕಿ- 1
.ಆಲೂಗಡ್ಡೆ- 2
.ಮೊಟ್ಟೆ- 3
ಮಾಡುವ ವಿಧಾನ
ಮಸಾಲೆ ಸಾಮಗ್ರಿಗಳನ್ನು 3- 4 ನಿಮಿಷ ಹುರಿದು ತಣ್ಣಗಾಗಲು ಇಡಬೇಕು. ಬಳಿಕ ನುಣ್ಣಗೆ ಪುಡಿಮಾಡಿ. ಮೀನನ್ನು ಸ್ವಚ್ಛಗೊಳಿಸಿ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಮೀನಿನಲ್ಲಿರುವ ನೀರಿನಂಶ ಹೋಗಲು ನೀರು ಸೋರಿ ಹೋಗುವಂತೆ ಪಾತ್ರೆಯಲ್ಲಿ ಇಡಿ. ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಕರಿ ಬೇವಿನ ಎಲೆ ಹಾಕಿ ಕಡಿಮೆ ಉರಿಯಲ್ಲಿ 3- 4 ನಿಮಿಷ ಹುರಿಯಬೇಕು. ಅನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದು ಅದಕ್ಕೆ ಅರಿಸಿನ, ಕರಿ ಮೆಣಸಿನ ಪುಡಿ, ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ. ಮೀನು ಹಾಕಿ ಉಪ್ಪು ಬೆರೆಸಿ. ಮೀನಿನಲ್ಲಿರುವ ನೀರಿನಂಶ ಸಂಪೂರ್ಣ ಬತ್ತುವವರೆಗೆ ಬೇಯಿಸಿ. ಅನಂತರ ಪಾತ್ರೆಯನ್ನು ಉರಿಯಿಂದ ಇಳಿಸಿ ತಣಿಯಲು ಬಿಡಿ. ಅವುಗಳಿಂದ ಮೊಟ್ಟೆಯಾಕಾರದ ಉಂಡೆ ಕಟ್ಟಿ ಇಡಿ. ಒಂದು ಪಾತ್ರೆಯಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಚೆನ್ನಾಗಿ ಕದಡಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಮೀನಿನ ಉಂಡೆಯನ್ನು ಮೊಟ್ಟೆಗೆ ಅದ್ದಿ ಬ್ರೆಡ್ ಚೂರಲ್ಲಿ ಹೊರಳಾಡಿಸಿ ಕಂದು ಬಣ್ಣ ಬರುವವರೆಗೆ ಕರಿದರೆ ಮೀನಿನ ಕಟ್ಲೆಟ್ ಸಿದ್ಧ.

ಜಯಾನಂದ ಅಮೀನ್ ಬನ್ನಂಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.