ಹೊಸ ವರುಷದ ಸವಿ ಪಾಕ : ಗುಲಾಬ್ ಜಾಮೂನ್
Team Udayavani, Jan 2, 2017, 9:00 AM IST
ಬಾಯಲ್ಲಿ ನೀರೂರಿಸು ಟೇಸ್ಟಿಯಾದ ಗುಲಾಬ್ ಜಾಮೂನ್‌ನ್ನು ಮನೆಯಲ್ಲಿಯೇ ರುಚಿಕರವಾಗಿ ಹಾಗೂ ಸುಲಭವಾಗಿ ಹೀಗೆ ತಯಾರಿಸಬಹುದು.
ಬೇಕಾಗುವ ಸಾಮಾಗ್ರಿಗಳು:
ಮೈದಾ 1 ಕಪ್
ಖೋವಾ 1/2 ಕಪ್
ಸಕ್ಕರೆ 1 ಕಪ್
ಎಣ್ಣೆ ಅಥವಾ ತುಪ್ಪ ಕರಿಯಲು
ಏಲಕ್ಕಿ ಪುಡಿ
ಪಿಸ್ತಾ ಅಲಂಕಾರಕ್ಕೆ
ತಯಾರಿಸುವ ವಿಧಾನ:
– ಮೊದಲು ಖೋವಾವನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಅದಕ್ಕೆ 1 ಕಪ್ ಮೈದಾ ಹಿಟ್ಟನ್ನು ಹಾಕಿ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟು ತಯಾರಿಸಿ.
– ನಂತರ ಕೈಗೆ ತುಪ್ಪ ಸವರಿಕೊಂಡು ಉಂಡೆಗಳಾಗಿ ಮಾಡಿ ತುಪ್ಪ ಅಥವಾ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.
– ಇನ್ನೊಂದು ಪ್ಯಾನ್‌ನಲ್ಲಿ ಸಕ್ಕರೆ ಹಾಗು 1/2 ಕಪ್ ನೀರು ಸೇರಿಸಿ ಕುದಿಸಿ, ಸಕ್ಕರೆ ಪಾಕ ಸ್ವಲ್ಪ ಮಂದವಾಗುತ್ತ ಬಂದಂತೆ ಅದಕ್ಕೆ ಏಲಕ್ಕಿ ಪುಡಿ ಹಾಕಿ.
– ಈಗ ಕರಿದ ಉಂಡೆಗಳನ್ನು ಸಕ್ಕರೆ ಪಾಕದೊಳಗೆ ಹಾಕಿ 20 ರಿಂದ 25 ನಿಮಿಷಗಳ ಕಾಲ ನೆನೆಸಿಡಿ.
– ನಂತರ ತೆಗೆದು ಪಿಸ್ತಾದಿಂದ ಅಲಂಕರಿಸಿ ಸರ್ವ್ ಮಾಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.