ಮನತಣಿಸುವ ಇಟಾಲಿಯನ್‌ ಫ‌ುಡ್‌


Team Udayavani, Feb 9, 2019, 7:31 AM IST

9-february-9.jpg

ಇಟಾಲಿಯನ್‌ ಆಹಾರವೆಂದರೆ ಎಲ್ಲರಿಗೂ ಪ್ರೀತಿ. ಆರೋಗ್ಯಆಹಾರವೆಂದೇ ಪರಿಗಣಿಸಲ್ಪಟ್ಟಿರುವ ಇಟಾಲಿಯನ್‌ ಫ‌ುಡ್‌ ನಲ್ಲೂ ನಾನಾ ವೆರೈಟಿಗಳಿವೆ. ಸ್ವಲ್ಪ ಸಿಹಿ, ಹುಳಿ ಮಿಶ್ರಿತ ಇವರ ಆಹಾರ ಕ್ರಮಕ್ಕೆ ಮನಸೋಲದವರೇ ಇಲ್ಲ. ಹೀಗಾಗಿ ಮನೆ ಮಕ್ಕಳ ಬೇಡಿಕೆಯಲ್ಲಿ ಇಟಾಲಿಯನ್‌ ಫ‌ುಡ್‌ ಕೂಡ ಸೇರಿರುತ್ತದೆ. ಇದರಲ್ಲಿ ಸುಲಭವಾಗಿ ನಾವು ಮನೆಯಲ್ಲೇ ಮಾಡಬಹುದಾದ ಕೆಲವೊಂದು ಆಹಾರ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ. ವಿಶೇಷ ಸಂದರ್ಭದಲ್ಲಿ, ನಮಗೆ ಬೇಕೆನಿಸಿದಾಗ ಟ್ರೈ ಮಾಡಿ ನೋಡಬಹುದು.

ವೆಜಿಟೇಬಲ್‌ ಲೆಸನ 
ಬೇಕಾಗುವ ಸಾಮಗ್ರಿಗಳು
••ಬೇಯಿಸಿದ ತರಕಾರಿಗಳು- 500 ಗ್ರಾಂ
••ಟೊಮೇಟೊ ಸಾಸ್‌- 2 ಕಪ್‌
••ಶುಂಠಿ ಪೇಸ್ಟ್‌- 1 ಚಮಚ
••ಉಪ್ಪು ಮತ್ತು ಸಕ್ಕರೆ- ರುಚಿಗೆ ತಕ್ಕಷ್ಟು
••ಮೆಣಸಿನ ಹುಡಿ- 1 ಚಮಚ
••ದೊಡ್ಡ ಪತ್ರೆ ಮತ್ತು ತುಳಸಿ – ತಲಾ 1
••ಆಲಿವ್‌ ಆಯಿಲ್‌- 2 ಚಮಚ
••ಬೆಣ್ಣೆ- 1 ಕಪ್‌
••ಮೈದಾ- 1ಕಪ್‌
••ಹಾಲು- 3 ಕಪ್‌
•ಲೆಸಗ್ನ ಶೀಟ್- 5
••ಚೀಸ್‌- ಸ್ವಲ್ಪ

ಮಾಡುವ ವಿಧಾನ
ಮೊದಲು ಒಂದು ಪಾತ್ರೆಗೆ ಆಲಿವ್‌ ಆಯಿಲ್‌ ಹಾಕಿ ಬಿಸಿಯಾದಾಗ ಅದಕ್ಕೆ ಶುಂಠಿ ಪೇಸ್ಟ್‌, ಟೊಮೇಟೊ ಸಾಸ್‌, ಉಪ್ಪು, ಸಕ್ಕರೆ, ಮೆಣಸಿನ ಹುಡಿ, ದೊಡ್ಡ ಪತ್ರೆ, ತುಳಸಿ ಹಾಕಿ ಸ್ವಲ್ಪ ಬಿಸಿ ಮಾಡಬೇಕು. ಒಂದು ಪಾತ್ರೆಗೆ ಬೆಣ್ಣೆಯನ್ನು ಹಾಕಿ ಅದರಲ್ಲಿ ಮೈದಾವನ್ನು ಹುರಿಯಬೇಕು. ಅನಂತರ ಅದಕ್ಕೆ ಹಾಲು ಹಾಕಿ ಕುದಿಸಿ ವೈಟ್ ಸಾಸ್‌ ತಯಾರಿಸಬೇಕು. ಬೇಯಿಸಿದ ತರಕಾರಿಗೆ ಮೊದಲು ತಯಾರಿಸಿದ ಒಗ್ಗರಣೆ, ಒಂದೂವರೆ ಕಪ್‌ ಟೊಮೇಟೊ ಸಾಸ್‌ ಹಾಗೂ 2 ಕಪ್‌ ವೈಟ್ ಸಾಸ್‌ನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಬೇಕು. ಲೆಸಗ್ನ ಶೀಟ್‌ನ ಮೇಲೆ ಈ ತರಕಾರಿ ಮಿಶ್ರಣವನ್ನು ತೆಳುವಾಗಿ ಹರಡಿ ಅದರ ಮೇಲೆ ಸ್ವಲ್ಪ ಚೀಸ್‌ ಹಾಕಬೇಕು. ಅದರ ಮೇಲೆ ಮತ್ತೂಂದು ಲೆಸಗ್ನ ಶೀಟ್ ಹಾಕಿ ಮೊದಲಿನಂತೆ ತರಕಾರಿ ಮಿಶ್ರಣವನ್ನು ಹರಡಬೇಕು. ಹೀಗೆ ಒಟ್ಟು 5 ಲೇಯರ್‌ಗಳನ್ನು ತಯಾರಿಸಿ ಅದರ ಮೇಲೆ ಟೊಮೇಟೋ ಸಾಸ್‌, ವೈಟ್ ಸಾಸ್‌ ಹಾಗೂ ಚೀಸ್‌ ಹಾಕಿ ಒವನ್‌ನನ 350 ಎಫ್- 180 ಸಿ ಟೆಂಪರೇಚರ್‌ನಲ್ಲಿ 25ರಿಂದ 30 ನಿಮಿಷ ಬೇಯಿಸಿದರೆ ವೆಜಿಟೇಬಲ್‌ ಲೆಸಗ್ನ ಸವಿಯಲು ಸಿದ್ಧ.

ಮಶ್ರೂಮ್‌ ರಿಸೊಟ್ಟೋ
ಬೇಕಾಗುವ ಸಾಮಗ್ರಿಗಳು
••ಆಲಿವ್‌ ಆಯಿಲ್‌- 1ಚಮಚ ••ಬೆಣ್ಣೆ- 25 ಗ್ರಾಂ ••ಈರುಳ್ಳಿ- 1 ••ಅಣಬೆ- 200 ಗ್ರಾಂ ••ಅಕ್ಕಿ- ಅರ್ಧ ಕಪ್‌ ••ಬೇಯಿಸಿದ ತರಕಾರಿ- 4 ಕಪ್‌ ••ಚೀಸ್‌- ಸ್ವಲ್ಪ ••ಕೊತ್ತಂಬರಿ ಸೊಪ್ಪು- ಸ್ವಲ್ಪ ••ಉಪ್ಪು- ರುಚಿಗೆ ತಕ್ಕಷ್ಟು ••ಕರಿಮೆಣಸು- ಸ್ವಲ್ಪ.

ಮಾಡುವ ವಿಧಾನ
ಪಾತ್ರೆಗೆ ಎಣ್ಣೆ ಮತ್ತು ಬೆಣ್ಣೆ ಹಾಕಿ ಅದರಲ್ಲಿ ಈರುಳ್ಳಿ ಮತ್ತು ಅಣಬೆಯನ್ನು ಮೃದುವಾಗುವವರೆಗೆ ಹುರಿಯಬೇಕು. ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ ಅಕ್ಕಿಯನ್ನು ಹಾಕಿ ಸ್ವಲ್ಪ ನೀರನಲ್ಲಿ ಬೇಯಿಸಬೇಕು.

ಕರಿಮೆಣಸು, ಕೊತ್ತಂಬರಿ ಸೊಪ್ಪು, ಉಪ್ಪನ್ನು ಹಾಕಬೇಕು. ತರಕಾರಿ ಹಾಗೂ ಅದರ ನೀರನ್ನು ಅಕ್ಕಿ ಬೇಯುತ್ತಿರುವಾಗಲೇ ಹಾಕಬೇಕು. ಅನ್ನ ಆದಮೇಲೆ ಅಣಬೆ ಹಾಗೂ ಚೀಸ್‌ ಅನ್ನು ಅದಕ್ಕೆ ಸೇರಿಸಿದರೆ ಮಶ್ರೂಮ್‌ ರಿಸೊಟ್ಟೋ ಸವಿಯಲು ಸಿದ್ಧ.

ಪಾಸ್ತಾ
ಬೇಕಾಗುವ ಸಾಮಗ್ರಿಗಳು ••ಟೊಮೇಟೊ: 1 ಕೆ.ಜಿ. ••ಆಲಿವ್‌ ಆಯಿಲ್‌: 40 ಮಿ.ಲೀ. ••ಶುಂಠಿ: 3 ತುಂಡು ••ತುಳಸಿ ಎಲೆ: ಸ್ವಲ್ಪ ••ಮೆಣಸಿನ ಹುಡಿ: ಸ್ವಲ್ಪ ••ಪಾಸ್ತಾ: 1 ಪ್ಯಾಕೆಟ್ ••ಚೀಸ್‌: ಸ್ವಲ್ಪ ••ಉಪ್ಪು: ರುಚಿಗೆ ತಕ್ಕಷ್ಟು.

ಮಾಡುವ ವಿಧಾನ
ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದಕ್ಕೆ ಶುಂಠಿ ಹಾಗೂ ಮೆಣಸಿನ ಹುಡಿ ಹಾಕಿ ಕುದಿಸಬೇಕು. ಅನಂತರ ಅದಕ್ಕೆ ಕತ್ತರಿಸಿ ಬೀಜ ತೆಗೆದ ಟೊಮೇಟೊ ಸೇರಿಸಬೇಕು. ಸೌಟು ಬಳಸಿ ಟೊಮೇಟೊವನ್ನು ಚೆನ್ನಾಗಿ ಹಿಸುಕಬೇಕು. ಅದಕ್ಕೆ ತುಳಸಿ ಸೇರಿಸಬೇಕು. ಅದು ಸಾಸ್‌ನ ರೂಪಕ್ಕೆ ಬರುವಾಗ ಒಲೆಯಿಂದ ಕೆಳಗಿಳಿಸಬೇಕು. ಒಂದು ಪಾತ್ರೆಯಲ್ಲಿ ಪಾಸ್ತಾವನ್ನು ಬೇಯಿಸಿ ಅದಕ್ಕೆ ಸ್ವಲ್ಪ ಆಲಿವ್‌ ಆಯಿಲ್‌ ಸೇರಿಸಿ ಸಾಸ್‌ನ ಜತೆ ಕಲಸಿದರೆ ಪಾಸ್ತಾ ಸವಿಯಲು ಸಿದ್ಧವಾಗುತ್ತದೆ.

ಫೊಕಶಿಯಾ ಬ್ರೆಡ್‌
ಬೇಕಾಗುವ ಸಾಮಗ್ರಿಗಳು

••ಮೈದಾ- 250 ಗ್ರಾಂ
••ಆಲಿವ್‌ ಆಯಿಲ್‌- 55- 60 ಮಿ.ಲೀ.
••ನೀರು- 135 ಮಿ.ಲೀ.
••ಸಕ್ಕರೆ- 20 ಗ್ರಾಂ
••ಉಪ್ಪು- 20 ಗ್ರಾಂ
••ಯೀಸ್ಟ್‌- 20 ಗ್ರಾಂ
••ಅಲಂಕಾರಕ್ಕೆ ಬೇಕಾಗುವ ಸಾಮಗ್ರಿಗಳು
••ಆಲಿವ್‌ ಆಯಿಲ್‌- ಅರ್ಧ ಚಮಚ
••ಚೀಸ್‌- ಅರ್ಧ ಕಪ್‌
••ಈರುಳ್ಳಿ- ಸಣ್ಣ ಗಾತ್ರದ್ದು
••ಟೊಮೇಟೊ- 3
••ಕಪ್ಪು ಓಲೀವ್‌- 15/ 20
••ತುಳಸಿ- ಸ್ವಲ್ಪ
••ಕರಿಮೆಣಸು- ಸ್ವಲ್ಪ

ಮಾಡುವ ವಿಧಾನ
ಮೊದಲು ಯೀಸ್ಟ್‌ ಅನ್ನು ಸ್ವಲ್ಪ ನೀರಿನಲ್ಲಿ ನೆನೆಸಿಡಬೇಕು. ಅದಕ್ಕೆ ಸ್ವಲ್ಪ ಸಕ್ಕರೆಯನ್ನು ಸೇರಿಸಬೇಕು. ಅದಕ್ಕೆ ಮೈದಾ ಆಲೀವ್‌ ಎಣ್ಣೆ, ನೀರು, ಸಕ್ಕರೆ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಹಿಟ್ಟು ತಯಾರಿಸಬೇಕು. 20 ನಿಮಿಷ ಹಿಟ್ಟನ್ನು ಹಾಗೇ ಬಿಡಿ. ಟೊಮೇಟೊ, ಬ್ಲ್ಯಾಕ್‌ ಒಲೀವ್‌ಗಳನ್ನು ಹೆಚ್ಚಿಟ್ಟುಕೊಳ್ಳಬೇಕು. ಒಂದು ಪ್ಯಾನ್‌ಗೆ ಸ್ವಲ್ಪ ಎಣೆ ಹಾಕಿ ಈರುಳ್ಳಿಯನ್ನು ಹುರಿಯಬೇಕು. ಅದಕ್ಕೆ ಕರಿಮೆಣಸನ್ನೂ ಸೇರಿಸಬೇಕು. ಅಗಲದ ಪಾತ್ರೆಗೆ ಸ್ವಲ್ಪ ಎಣ್ಣೆ ಹರಡಿ ಅದರ ಮೇಲೆ ಹಿಟ್ಟನ್ನು ತೆಳುವಾಗಿ ಹರಡಬೇಕು.

ಅನಂತರ ಕೈಯಿಂದ ಹಿಟ್ಟಿನ ಮೇಲೆ ತೂತುಗಳನ್ನು ಮಾಡಿ, ಅದರ ಮೇಲೆ ಹುರಿದ ಈರುಳ್ಳಿ, ಟೊಮೇಟೊ, ತುಳಸಿ, ಕರಿಮೆಣಸು, ಚೀಸ್‌ ಹಾಗೂ ಸ್ವಲ್ಪ ಎಣ್ಣೆ ಹಾಕಿ ಒವೆನ್‌ಲ್ಲಿ ಇಟ್ಟು 180 ಡಿಗ್ರಿ ಸೆ. ಬಿಸಿಯಲ್ಲಿ 20 ನಿಮಿಷ ಬೇಯಿಸಿದರೆ ಫೊಕಶಿಯಾ ಬ್ರೆಡ್‌ ತಯಾರಾಗುತ್ತದೆ.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ರಾಜ್ಯಸಭೆ ಬಹುಮತದತ್ತ ಬಿಜೆಪಿ ಚಿತ್ತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Suside-Boy

Putturu: ಬಡಗನ್ನೂರು: ನೇಣು ಬಿಗಿದು ಆತ್ಮಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.