ಮೆಂತೆ ಪಲಾವ್
Team Udayavani, Feb 15, 2020, 5:59 AM IST
ಬೇಕಾಗುವ ಸಾಮಗ್ರಿ
ಬಾಸ್ಮತಿ ಅಕ್ಕಿ- 1 ಕಪ್
ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್
ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್.
ನೀರುಳ್ಳಿ- 1ರಿಂದ 2
ಶುಂಠಿ- 3
ಬೆಳ್ಳುಳ್ಳಿ- 2
ಹಸಿರು ಮೆಣಸಿನಕಾಯಿ – 3
ಅರಿಶಿನ ಪುಡಿ- ಚಿಟಿಕೆ
ಕೆಂಪು ಮೆಣಸಿನ ಪುಡಿ- 1 ಚಮಚ
ಕೊತ್ತಂಬರಿ ಪುಡಿ- 1 ಚಮಚ
ನೀರು -2 ಕಪ್
ಎಣ್ಣೆ-2ರಿಂದ 3 ಚಮಚ
ಉಪ್ಪು -ರುಚಿಗೆ ತಕ್ಕಷ್ಟು
ಜೀರಿಗೆ- ಸ್ವಲ್ಪ
ಏಲಕ್ಕಿ ಸ್ವಲ್ಪ
ದಾಲಿcನ್ನಿ-1
ಲವಂಗ-3 ರಿಂದ 4
ಮಾಡುವ ವಿಧಾನ
1 ಕಪ್ ಬಾಸ್ಮತಿ ಅಕ್ಕಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಅನಂತರ ಅಕ್ಕಿಯನ್ನು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ. ಬಳಿಕ ಕುಕ್ಕರ್‌ನಲ್ಲಿ 2ರಿಂದ 3 ಚಮಚ ಎಣ್ಣೆಯನ್ನು ಬಿಸಿ ಮಾಡಿ, ಅನಂತರ 1/2 ಕಪ್ ತೆಳುವಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ ಕಾಯಿಸಿ ಮಗುಚಿ ಅನಂತರ ಪುಡಿಮಾಡಿದ ಶುಂಠಿ, ಬೆಳ್ಳುಳ್ಳಿ, ಮೆಣಸಿನಕಾಯಿ ಪೇಸ್ಟ್ ಸೇರಿಸಿ ಮಗಚುತ್ತಾ ಇರಿ. ನುಣ್ಣಗೆ ಕತ್ತರಿಸಿದ ಸುಮಾರು 2ಕಪ್ ಮೆಂತೆ ಎಲೆಗಳು ಹಾಕಿಕೊಂಡು ಕಡಿಮೆ ಬೆಂಕಿ ಉರಿಯಲ್ಲಿ 3 ರಿಂದ 4 ನಿಮಿಷಗಳ ಕಾಲ ಹುರಿದುಕೊಳ್ಳಿ. ಅನಂತರ ಕತ್ತರಿಸಿದ ಮಿಶ್ರಣ ತರಕಾರಿಗಳನ್ನು ಸೇರಿಸಿಕೊಂಡು, 1/4 ಚಮಚ ಅರಿಶಿನ ಪುಡಿ, 1/2 ಚಮಚ ಕೆಂಪು ಮೆಣಸಿನ ಪುಡಿ ಮತ್ತು 1/2 ಟೀಸ್ಪೂನ್ ಕೊತ್ತಂಬರಿ ಪುಡಿ ಸೇರಿಸಿ. ಮತ್ತೆ ಚೆನ್ನಾಗಿ ಬೆರೆಸಿಕೊಳ್ಳಿ. ಈಗ ನೆನೆಸಿದ ಬಾಸ್ಮತಿ ಅಕ್ಕಿ ಸೇರಿಸಿ, 2 ಕಪ್ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, 2ರಿಂದ 3 ಸೀಟಿ ಹೊಡೆಯಲು ಬಿಡಬೇಕು. ಸ್ವಲ್ಪ ಸಮಯದ ಅನಂತರ ಪಲಾವನ್ನು ತೆಗೆದು ಪಾತ್ರೆಗೆ ಹಾಕಿಕೊಂಡರೆ ಬಿಸಿಬಿಸಿಯಾದ ಪಲಾವ್ ಸವಿಯಲು ಸಿದ್ಧ.
- ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.