ಅಡುಗೆಯಲ್ಲಿರಲಿ ರಾಗಿ


Team Udayavani, Sep 8, 2018, 3:39 PM IST

8-sepctember-18.jpg

ರಾಗಿ ತಿಂದವನಿಗೆ ರೋಗವಿಲ್ಲ ಎಂಬುದು ಈ ದಿನಗಳಲ್ಲಿ ಎಲ್ಲರೂ ಹೇಳುವ ಮಾತು. ರಾಗಿ ಗಂಜಿ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಮುದ್ದೆ ತಿಂದರೆ ಮಧುಮೇಹವನ್ನು ದೂರವಿಡಬಹುದು. ಅತ್ಯಧಿಕ ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್‌, ನಾರು ಹಾಗೂ ಖನಿಜಾಂಶಗಳನ್ನೊಳಗೊಂಡ ರಾಗಿ, ಆರೋಗ್ಯದ ದೃಷ್ಟಿಯಿಂದ ಉತ್ತಮ ಧಾನ್ಯ. ರಾಗಿಯಿಂದ ಸುಲಭವಾಗಿ ಮಾಡಬಹುದಾದ ಕೆಲವೊಂದು ಪಾಕ ವಿಧಾನಗಳು ಇಲ್ಲಿವೆ.

ರಾಗಿ ಪಾಯಸ
ಬೇಕಾಗುವ ಸಾಮಗ್ರಿಗಳು
ರಾಗಿ- 2 ಕಪ್‌, ತೆಂಗಿನತುರಿ- 1 ಕಪ್‌, ಗಸಗಸೆ- 3 ಚಮಚ, ತುರಿದ ಬೆಲ್ಲ- 2 ಕಪ್‌, ಹಾಲು- 3 ಕಪ್‌, ಏಲಕ್ಕಿ ಪುಡಿ- ಅರ್ಧ ಚಮಚ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಬಾದಾಮಿ- 10.

ಮಾಡುವ ವಿಧಾನ
ರಾಗಿಯನ್ನು 5- 6 ಗಂಟೆ ನೀರಿನಲ್ಲಿ ನೆನೆಸಿ ಬಸಿದು, ಗಸಗಸೆ, ತೆಂಗಿನತುರಿ ಸೇರಿಸಿ ಅರೆದು, ಶೋಧಿಸಿ ಇರಿಸಿ. ಬಾಣಲೆಯಲ್ಲಿ ಅರ್ಧ ಕಪ್‌ ನೀರು ಕಾಯಿಸಿ, ಬೆಲ್ಲದ ತುರಿ ಸೇರಿಸಿ ಕರಗಿಸಿ. ಬೆಲ್ಲ ಕರಗಿದ ಮೇಲೆ ಹಾಲು, ಅರೆದ ರಾಗಿ ಮಿಶ್ರಣ ಹಾಕಿ ಕುದಿಸಿ, ಒಲೆಯಿಂದ ಕೆಳಗಿರಿಸಿ. ತಣಿದ ಮೇಲೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ಬಾದಾಮಿ ತುಣುಕುಗಳನ್ನು ಸೇರಿಸಿದರೆ, ಪೌಷ್ಟಿಕವಾದ ರಾಗಿ ಪಾಯಸ ರೆಡಿ. 

ರಾಗಿ ಪಡ್ಡು
ಬೇಕಾಗುವ ಸಾಮಗ್ರಿಗಳು
ರಾಗಿ -1 ಕಪ್‌, ಅಕ್ಕಿ- 2 ಕಪ್‌, ಉದ್ದಿನಬೇಳೆ-1 ಕಪ್‌, ಕಡಲೆಬೇಳೆ- 2 ಚಮಚ, ತೊಗರಿ ಬೇಳೆ- 2 ಚಮಚ, ಹೆಸರುಬೇಳೆ- 2 ಚಮಚ, ಮೆಂತ್ಯೆ- 1 ಚಮಚ, ಅಕ್ಕಿ ಹಿಟ್ಟು- 3 ಚಮಚ, ಜೀರಿಗೆ ಪುಡಿ- 4 ಚಮಚ, ಕತ್ತರಿಸಿದ ಹಸಿಮೆಣಸು- 6, ಕತ್ತರಿಸಿದ ಕೊತ್ತಂಬರಿ ಸೊಪ್ಪು- 4 ಚಮಚ, ಕತ್ತರಿಸಿದ ಈರುಳ್ಳಿ- 1/2 ಕಪ್‌, ಉಪ್ಪು- ರುಚಿಗೆ, ಎಣ್ಣೆ- 1 ಕಪ್‌.

ಮಾಡುವ ವಿಧಾನ
ಎರಡು ಚಮಚ ಎಣ್ಣೆಗೆ, ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದಿಡಿ. ರಾಗಿ, ಅಕ್ಕಿ, ಮೆಂತ್ಯೆ ಹಾಗೂ ಬೇಳೆಯನ್ನು ಆರು ಗಂಟೆ ನೆನೆಸಿ, ಬಸಿದು, ಅರೆದಿಡಿ. ಅದು ಹುದುಗಿದ ಮೇಲೆ, ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಈ ಮಿಶ್ರಣಕ್ಕೆ ಹುರಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಜೀರಿಗೆ ಪುಡಿ, ಉಪ್ಪು ಸೇರಿಸಿ ಕಲಕಿ, ದೋಸೆ ಹಿಟ್ಟಿನ ಹದಕ್ಕೆ ತನ್ನಿ. ಅನಂತರ ಕಾಯಿಸಿದ ಪಡ್ಡಿನ ತವಾದ ಮೇಲೆ ಎಣ್ಣೆ ಸವರಿ, ಬಟ್ಟಲುಗಳಿಗೆ ಹಿಟ್ಟು ಹಾಕಿ ಎರಡೂ ಬದಿ ಬೇಯಿಸಿದರೆ, ಗರಿಗರಿಯಾದ ರಾಗಿ ಪಡ್ಡು, ಕಾಯಿ ಚಟ್ನಿಯೊಂದಿಗೆ ತಿನ್ನಲು ರೆಡಿ.

ರಾಗಿ ಮುತಿಯಾ
ಬೇಕಾಗುವ ಸಾಮಗ್ರಿಗಳು
ರಾಗಿ ಹಿಟ್ಟು- 2 ಕಪ್‌, ಗೋಧಿ ಹಿಟ್ಟು- 2 ಕಪ್‌, ಕಡಲೆ ಹಿಟ್ಟು- 1 ಕಪ್‌, ಕತ್ತರಿಸಿದ ಮೆಂತ್ಯೆ ಸೊಪ್ಪು- 1 ಕಪ್‌, ಕತ್ತರಿಸಿದ ಕೊತ್ತಂಬರಿ ಸೊಪ್ಪು- 4 ಚಮಚ, ಹಸಿಮೆಣಸಿನಕಾಯಿ 3- 4, ಶುಂಠಿ ತುರಿ- 1 ಚಮಚ, ಅಚ್ಚ ಖಾರದ ಪುಡಿ- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಜೀರಿಗೆ ಪುಡಿ- 3 ಚಮಚ, ಎಣ್ಣೆ- 1/4 ಕಪ್‌. ಒಗ್ಗರಣೆಗೆ- ಎಣ್ಣೆ 4 ಚಮಚ, ಸಾಸಿವೆ, ಇಂಗು- 1/4 ಚಮಚ, ಎಳ್ಳು- 3 ಚಮಚ, ಕರಿಬೇವಿನ ಎಸಳು- 8.

ಮಾಡುವ ವಿಧಾನ
ಒಗ್ಗರಣೆಯ ಸಾಮಗ್ರಿಗಳನ್ನು ಬಿಟ್ಟು, ಮಿಕ್ಕೆಲ್ಲ ಸಾಮಗ್ರಿಗಳನ್ನು ಸೇರಿಸಿ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಗಟ್ಟಿಯಾಗಿ ಕಲಸಿ. ಈ ಮಿಶ್ರಣದಿಂದ ಉಂಡೆಗಳನ್ನು ಮಾಡಿ, ಹಬೆಯಲ್ಲಿ ಹತ್ತು ನಿಮಿಷ ಬೇಯಿಸಿ. ತಣಿದ ಮೇಲೆ, ಬಿಲ್ಲೆಯಾಕಾರದಲ್ಲಿ ಒಂದು ಇಂಚಿನ ಅಳತೆಯ ತುಂಡುಗಳನ್ನು ಮಾಡಿ ಇಡಿ. ಅನಂತರ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ- ಇಂಗು- ಎಳ್ಳು- ಕರಿಬೇವು ಹಾಕಿ ಒಗ್ಗರಣೆ ಮಾಡಿ, ಬೇಯಿಸಿದ ಬಿಲ್ಲೆಗಳ ಮೇಲೆ ಹಾಕಿ ಕೈಯಾಡಿಸಿದರೆ ರುಚಿಯಾದ ರಾಗಿ ಮುತಿಯಾ ತಯಾರು.

ರಾಗಿ ನಿಪ್ಪಟು
ಬೇಕಾಗುವ ಸಾಮಗ್ರಿಗಳು
ರಾಗಿ ಹಿಟ್ಟು- 2 ಕಪ್‌, ಅಕ್ಕಿ ಹಿಟ್ಟು- 2 ಕಪ್‌, ಮೈದಾ ಹಿಟ್ಟು- 1 ಕಪ್‌, ಚಿರೋಟಿ ರವೆ- 1/2 ಕಪ್‌, ತರಿಯಾಗಿ ಪುಡಿ ಮಾಡಿದ ಹುರಿಗಡಲೆ- 2 ಚಮಚ, ತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ- 3 ಚಮಚ, ಕತ್ತರಿಸಿದ ಈರುಳ್ಳಿ- 2 ಚಮಚ, ಅಚ್ಚ ಖಾರದ ಪುಡಿ- 2 ಚಮಚ, ಇಂಗು- ಅರ್ಧ ಚಮಚ, ತರಿಯಾಗಿ ಪುಡಿ ಮಾಡಿದ ಎಳ್ಳು- ಅರ್ಧ ಚಮಚ, ಉಪ್ಪು, ವನಸ್ಪತಿ ಅಥವಾ ತುಪ್ಪ- 3 ಚಮಚ, ಕರಿಬೇವಿನ ಎಲೆ- 10.

ಮಾಡುವ ವಿಧಾನ
ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಚಿರೋಟಿ ರವೆ, ಹುರಿಗಡಲೆ, ಕಡಲೆಕಾಯಿ ಬೀಜದ ಪುಡಿಗಳನ್ನು ಸೇರಿಸಿ. ಈ ಮಿಶ್ರಣಕ್ಕೆ ಇಂಗು, ಖಾರದ ಪುಡಿ, ಎಳ್ಳು, ವನಸ್ಪತಿ, ಈರುಳ್ಳಿ, ಕರಿಬೇವು, ಉಪ್ಪು ಬೆರೆಸಿ, ನೀರಿನೊಂದಿಗೆ ವಡೆಯ ಹಿಟ್ಟಿನ ಹದಕ್ಕೆ ಗಟ್ಟಿಯಗಿ ಕಲಸಿ, ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಕರಿದರೆ ರಾಗಿ ನಿಪ್ಪಟ್ಟು ರೆಡಿ.

ರಾಗಿ ಹಿಟ್ಟಿನ ತಾಲಿಪಟ್ಟು
ಬೇಕಾಗುವ ಸಾಮಗ್ರಿಗಳು
ರಾಗಿ ಹಿಟ್ಟು- 3 ಕಪ್‌, ಅಕ್ಕಿ ಹಿಟ್ಟು- 2 ಕಪ್‌, ಕತ್ತರಿಸಿದ ಈರುಳ್ಳಿ- 1/2 ಕಪ್‌, ಕತ್ತರಿಸಿದ ಹಸಿಮೆಣಸು- 5, ತೆಂಗಿನತುರಿ- 1/2 ಕಪ್‌, ಕತ್ತರಿಸಿದ ಕರಿಬೇವು- 3- 4, ಕತ್ತರಿಸಿದ ಪುದಿನಾ ಸೊಪ್ಪು- 1 ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು- 3 ಚಮಚ, ಜೀರಿಗೆ ಪುಡಿ- 4 ಚಮಚ, ತುಪ್ಪ- 2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ- 4 ಚಮಚ.

ಮಾಡುವ ವಿಧಾನ
ರಾಗಿ, ಅಕ್ಕಿ ಹಿಟ್ಟು, ಈರುಳ್ಳಿ, ಹಸಿಮೆಣಸು, ತೆಂಗಿನತುರಿ, ಕರಿಬೇವು, ಪುದೀನಾ, ಕೊತ್ತಂಬರಿ ಸೊಪ್ಪು, ಜೀರಿಗೆ ಪುಡಿ, ತುಪ್ಪ, ಉಪ್ಪು ಬೆರೆಸಿ, ನೀರು ಹಾಕಿ ರೊಟ್ಟಿಯ ಹದಕ್ಕೆ ಕಲಸಿ. ಸಣ್ಣ ಗಾತ್ರದ ಹಿಟ್ಟನ್ನು ತೆಗೆದುಕೊಂಡು ಎಣ್ಣೆ ಸವರಿದ ತವಾದ ಮೇಲೆ, ರೊಟ್ಟಿಯ ಆಕಾರದಲ್ಲಿ ತಟ್ಟಿ. ಎಣ್ಣೆ ಹಾಕಿ, ಎರಡೂ ಬದಿ ಕಾಯಿಸಿ. ಗರಿಗರಿಯಾದ ರಾಗಿ ತಾಲಿಪಟ್ಟನ್ನು ಕಾಯಿ ಚಟ್ನಿಯೊಂದಿಗೆ ಸವಿಯಬಹುದು. 

 ಜಯಶ್ರೀ ಕಾಲ್ಕುಂದಿ

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.