ನವರಾತ್ರಿ ವಿಶೇಷ ಖಾದ್ಯ
Team Udayavani, Oct 6, 2018, 2:17 PM IST
ನವರಾತ್ರಿ ಎಂದರೆ ಒಂಬತ್ತು ದಿನಗಳ ಹಬ್ಬ. ಬಗೆ ಬಗೆಯ ತಿಂಡಿತಿನಿಸುಗಳೊಂದಿಗೆ ಒಂದಷ್ಟು ಖಾರ, ಮತ್ತಷ್ಟು ಸಿಹಿಯೊಂದಿಗೆ ಗರಿಗರಿ ತಿನಸುಗಳನ್ನು ಮನೆ ಮಂದಿಯೊಂದಿಗೆ ಸೇರಿ ಮಾಡಿ ಬಂದ ಅತಿಥಿಗಳಿಗೂ ಕೊಟ್ಟು ಸಂಭ್ರಮಿಸುವ ಕ್ಷಣ. ತಿಂಗಳ ಮೊದಲೇ ಅಡುಗೆ ಮನೆಯಲ್ಲಿ ಈ ಕುರಿತು ಚರ್ಚೆಗಳು, ತಯಾರಿಗಳು ನಡೆಯುತ್ತಿರುತ್ತವೆ. ಈ ಬಾರಿಯ ನವರಾತ್ರಿ ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದರೆ ಇಲ್ಲಿದೆ ಕೆಲವೊಂದು ಉತ್ತರ ಭಾರತ ಮತ್ತು ದಕ್ಷಿಣ ಭಾರತ ಶೈಲಿಯ ಕೆಲವೊಂದು ರೆಸಿಪಿಗಳು. ಈ ಅಡುಗೆಗಳನ್ನು ಮಾಡಿ ಈ ಬಾರಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಿ.
ಆಲೂಪಲಾವ್
ಬೇಕಾಗುವ ಸಾಮಗ್ರಿಗಳು
ಚಿಕ್ಕದಾಗಿ ಕತ್ತರಿಸಿದ ಆಲೂಗೆಡ್ಡೆ – 2
ಜೀರಿಗೆ -1 ಚಮಚ
ಕೊತ್ತಂಬರಿ- ಅರ್ಧ ಚಮ ಚ
ಬಾಸುಮತಿ ಅಕ್ಕಿ- ಅರ್ಧ ಕಪ್
ತುಪ್ಪ- 2 ಚಮಚ
ಬೆಳ್ಳುಳ್ಳಿ - 1- 2 ಎಸಳು
ಪಲಾವ್ ಎಲೆ- 1
ಉಪ್ಪು- ರುಚಿಗೆ
ಏಲಕ್ಕಿ- 1
ದಾಲ್ಚಿನ್ನಿ- ಸ್ವಲ್ಪ
ಶುಂಠಿ ಪೇಸ್ಟ್- 1ಚಮ ಚ
ಪುದೀನಾ ಎಲೆ- 4- 5
ಹಸಿಮೆಣಸು- 2
ಕೊತ್ತಂಬರಿ ಸೊಪ್ಪು- ಅಲಂಕಾ ರಕ್ಕೆ
ಕೆಂಪು ಮೆಣಸಿನ ಪುಡಿ- ಅರ್ಧ ಚಮಚ
ತೆಂಗಿನ ತುರಿ- ಸ್ವಲ್ಪ
ಹುಣಸೆ ಹುಳಿ ರಸ- 1 ಚಮಚ
ನೀರು- 3 ಕಪ್
ಮಾಡುವ ವಿಧಾನ
ತೆಂಗಿನ ತುರಿ, ಕೊತ್ತಂಬರಿ, ಹುಣಸೆ ರಸ , ಬೆಳ್ಳುಳ್ಳಿ, ಏಲಕ್ಕಿ, ಡಾಲ್ಚಿನ್ನಿ, ಪುದೀನಾ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಅರೆಯಿರಿ. ಬಳಿಕ ಜೀರಿಗೆ, ಶುಂಠಿ, ಪಲಾವ್ ಎಲೆ ಹಾಕಿ ತುಪ್ಪದಲ್ಲಿ ಹುರಿಯಿರಿ. ನಂತರ ಅದರಲ್ಲಿ ಅಕ್ಕಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಈಗ ನೀರು ಹಾಕಿ , ಕತ್ತರಿಸಿದ ಆಲೂಗೆಡ್ಡೆ , ಮೆಣಸಿನ ಪುಡಿ, ಉಪ್ಪು ಹಾಕಿ ಪ್ರಶರ್ ಕುಕ್ಕರ್ ನಲ್ಲಿ 3 ವಿಶಲ್ ಬರುವರೆಗೂ ಬೇಯಿಸಿ. ಈಗ ರುಚಿಕರವಾದ ಆಲೂಪಲಾವ್ ರೆಡಿ. ಆಲೂಪಲಾವ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ ಬಿಸಿಬಿಸಿ ಇರುವಾಗಲೇ ಸವಿಯಿರಿ.
ಬಾದುಷಾ
ಬೇಕಾಗುವ ಸಾಮಗ್ರಿಗಳು
ಮೈದಾ- 1 ಕಪ್
ಮೊಸರು- ಅರ್ಧ ಕಪ್
ಬೆಣ್ಣೆ- 2 ಚಮಚ
ಅಡುಗೆ ಸೋಡಾ- ಒಂದು ಚಿಟಿಕೆ
ಸಕ್ಕರೆ- 1 ಕಪ್
ನೀರು- 1 ಕಪ್
ಏಲಕ್ಕಿ ಹುಡಿ-1 ಚಿಟಿಕೆ
ಕರಿಯಲು ಎಣ್ಣೆ
ಮಾಡುವ ವಿಧಾನ
ಒಂದು ಪಾತ್ರೆಗೆ ಮೊಸರು, ಬೆಣ್ಣೆ, ಅಡುಗೆ ಸೋಡಾ, ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಅಗಲವಾದ ಬಾಯಿಯ ಪಾತ್ರೆಯಲ್ಲಿ ಮೈದಾ ಮತ್ತು ಮೊಸರಿನ ಮಿಶ್ರಣವನ್ನು ಹಾಕಿಕೊಂಡು ಹಿಟ್ಟಿನ ಹದಕ್ಕೆ ಬರಲು ಬಿಡಿ. ಹತ್ತು ನಿಮಿಷಗಳ ಕಾಲ ಹಾಗೆ ಇರಲಿ. ನೀರು ಹಾಗೂ ಸಕ್ಕರೆ ಹಾಕಿಕೊಂಡು ಸಕ್ಕರೆಯ ಸಿರಪ್ ಮಾಡಿಕೊಳ್ಳಿ. ಸಣ್ಣ ಉರಿಯಲ್ಲಿ ಇದನ್ನು ಕುದಿಸಿ ದಪ್ಪಗಿನ ಸಕ್ಕರೆ ಸಿರಪ್ ಮಾಡಿಕೊಳ್ಳಿ. ಬೆಂಕಿ ನಂದಿಸಿದ ಬಳಿಕ ಸುವಾಸನೆಗಾಗಿ ಇದಕ್ಕೆ ಏಲಕ್ಕಿ ಹುಡಿಯನ್ನು ಹಾಕಿ. ಹತ್ತು ನಿಮಿಷದ ಬಳಿಕ ಮೈದಾ ಹಿಟ್ಟನ್ನು ತೆಗೆದು ಕೈಯಿಂದ ಬಾದುಷಾ ಆಕೃ ತಿಗೆ ತಟ್ಟಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಇದರಲ್ಲಿ ಬಾದುಷಾವನ್ನು ಕರಿಯಿರಿ. ಬಾದುಷಾವು ಕಂದು ಬಣ್ಣಕ್ಕೆ ತಿರುಗಿದಾಗ ಹೊರಗೆ ತೆಗೆದು 2-3 ನಿಮಿಷ ಹಾಗೆ ಇಡಿ. ರಾತ್ರಿಯೀಡಿ ಸಕ್ಕರೆ ಪಾಕದಲ್ಲಿ ಬಾದುಷಾವನ್ನು ನೆನೆಯಲು ಬಿಡಿ. ಮರು ದಿನ ಬಾದಾಮಿ, ಗೋಡಂಬಿಯ ಚೂರುಗಳಿಂದ ಅಲಂಕರಿಸಿ ಸವಿಯಿರಿ.
ಗೋಡಂಬಿ ಗ್ರೇವಿ
ಬೇಕಾಗುವ ಸಾಮಗ್ರಿಗಳು
ಮಖಾನ (ಲೋಟಸ್ ಸೀಡ್, ಫಾಕ್ಸ್ ನಟ್)- 2 ಚಮಚ
ಗೋಡಂಬಿ (ಪೇಸ್ಟ್ )- 50 ಗ್ರಾಂ
ಶುಂಠಿ ಪೇಸ್ಟ್ – 2 ಚಮಚ
ಕತ್ತರಿಸಿದ ಟೊಮೆಟೊ, ಕೊತ್ತಂಬರಿ
ಹಸಿ ಬಟಾಣಿ- 2 ಚಮಚ
ಕತ್ತರಿಸಿದ ಶುಂಠಿ- ಅರ್ಧ ಚಮಚ
ಅರಿಸಿನ, ಕೆಂಪುಮೆಣಸಿನ ಪುಡಿ ಮತ್ತು ಗರಂ ಮಸಾಲ- ಅಗತ್ಯಕ್ಕೆ ತಕ್ಕ ಷ್ಟು
ಜೀರಿಗೆ, ಸಾಸಿವೆ- ತಲಾ ಅರ್ಧ ಚಮಚ
ಉಪ್ಪು- ರುಚಿಗೆ
ಬೆಣ್ಣೆ ಮತ್ತು ಕೆನೆ- ಅರ್ಧ ಕಪ್
ಎಣ್ಣೆ- 2 ಚಮಚ
ಮಾಡುವ ವಿಧಾನ
ಲೋಟಸ್ ಸೀಡ್ (ಮಖಾನ) ಅನ್ನು ಕೆಂಪಗಾಗುವವರೆಗೂ ಚೆನ್ನಾಗಿ ಹುರಿದು ತಣ್ಣಗಾದ ಅನಂತರ ಕೆಲವು ಸಮಯ ನೀರಿನಲ್ಲಿ ನೆನೆಸಬೇಕು. ಹಸಿ ಬಟಾಣಿಯನ್ನೂ ನೆನೆಸಬೇಕು. ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಕಾಯಿಸಿ ಅದಕ್ಕೆ ಜೀರಿಗೆ, ಸಾಸಿವೆಯನ್ನು ಹಾಕಬೇಕು. ಅನಂತರ ಶುಂಠಿ ಪೇಸ್ಟ್ ಹಾಕಿ ಕೆಲವು ಸೆಕೆಂಡ್ ಬಳಿಕ ಕತ್ತರಿಸಿದ ಟೊಮೇಟೊ, ರುಚಿಗೆ ತಕ್ಕಷ್ಟು ಉಪ್ಪು, ಅರಿಸಿನ, ಕೆಂಪುಮೆಣಸಿನ ಪುಡಿ ಮತ್ತು ಗರಂ ಮಸಾಲ ಪುಡಿ ಹಾಕಿ ಸಣ್ಣ ಉರಿಯಲ್ಲಿ 3- 4 ನಿಮಿಷ ಬೇಯಿಸಬೇಕು. ಬಳಿಕ ಈ ಮಿಶ್ರಣಕ್ಕೆ ಗೋಡಂಬಿ ಪೇಸ್ಟ್ ಸೇರಿಸಿ ಒಂದು ಕಪ್ ನೀರು ಬೆರೆಸಬೇಕು. ಅದು ಕುದಿಯಲು ಆರಂಭಿಸಿದ ಅನಂತರ ಚೆನ್ನಾಗಿ ಸೌಟಿ ನಲ್ಲಿ ತಿರುಗಿಸಿ 5 ನಿಮಿಷ ಬೇಯಲು ಬಿಡಬೇಕು. ಈಗ ನೆನೆಸಿಟ್ಟಿದ್ದ ಮಖಾನ ಮತ್ತು ಹಸಿ ಬಟಾಣಿಯನ್ನು ಗ್ರೇವಿಗೆ ಬೆರೆಸಿ ಚೆನ್ನಾಗಿ ಕದಡಬೇಕು. ಅನಂತರ ಅದಕ್ಕೆ ಕೆನೆ ಬೆರೆಸಿ 2 ನಿಮಿಷದ ಬಳಿಕ ಉರಿಯನ್ನು ಆರಿಸಬೇಕು. ಕೊನೆಗೆ ಗ್ರೇವಿ ಮೇಲೆ ಬೆಣ್ಣೆ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಗೋಡಂಬಿ ಗ್ರೇವಿ ತಿನ್ನಲು ರೆಡಿ.
ಸಾಬುದಾನಿ ಪಾಯಸ
ಬೇಕಾಗುವ ಸಾಮಗ್ರಿಗಳು
ಸಣ್ಣ ಗಾತ್ರದ ಸಬ್ಬಕ್ಕಿ- 1 ಕಪ್
ಹಾಲು- 2 ಕಪ್
ಬೆಲ್ಲ ಅಥವಾ ಸಕ್ಕರೆ- ಅರ್ಧ ಕಪ್
ಏಲಕ್ಕಿ ಪೌಡರ್- 1 ಚಮಚ
ಒಣದ್ರಾಕ್ಷಿ 10
ಬಾದಾಮಿ- 10
ಗೋಡಂಬಿ- 10
ವನಸ್ಪತಿ- 1ಚಮಚ
ಕೇಸರಿ- 1 ಚಮಚ
ಮಾಡುವ ವಿಧಾನ
ಸಣ್ಣ ಗಾತ್ರದ ಸಬ್ಬಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ. ಬಳಿಕ ಹಾಲು ಕಾಯಿಸಿಡಿ. ಅನಂತರ ಬೆಲ್ಲ ಅಥವಾ ಸಕ್ಕರೆಯ ಪಾನಕ ತಯಾರಿಸಿಟ್ಟುಕೊಳ್ಳಿ. ಬೆಲ್ಲದ ಪಾಕವನ್ನು ಹಾಲಿನೊಂದಿಗೆ ಬೆರೆಸಿ, ಎರಡು ನಿಮಿಷ ಕುದಿಸಿ. ಅನಂತರ ಈ ಮಿಶ್ರಣಕ್ಕೆ ಸಬ್ಬಕ್ಕಿ ಹಾಕಿ 10- 12 ನಿಮಿಷ ಬೇಯಿಸಿ. ವನಸ್ಪತಿಯನ್ನು ಬಿಸಿ ಮಾಡಿ ಅದಕ್ಕೆ ಜೀರಿಗೆ ಪುಡಿ, ಒಣದ್ರಾಕ್ಷಿ ಹಾಕಿ ಹುರಿದು ಅದನ್ನು ಕುದಿಯುತ್ತಿರುವ ಮಿಶ್ರಣಕ್ಕೆ ಹಾಕಿ. ಇದಕ್ಕೆ ಈಗ ಕೇಸರಿಯನ್ನು ಬೆರೆಸಿದರೆ ಬಣ್ಣದ ಜತೆಗೆ ಸುವಾಸನೆಯು ದೊರೆಯುವುದು. ಸಿದ್ಧವಾದ ಸಬ್ಬಕ್ಕಿ ಪಾಯಸವನ್ನು 2 ಗಂಟೆಗಳ ಕಾಲ ಆರಲು ಬಿಟ್ಟು ಅನಂತರ ಸವಿಯಬಹುದು.
ಶಂಕರ ಪೋಳಿ
ಬೇಕಾಗುವ ಸಾಮಗ್ರಿಗಳು
ಮೈದಾ – 4 ಕಪ್
ಸಕ್ಕರೆ – 1 ಕಪ್
ಹಾಲು- ಅರ್ಧ ಕಪ್
ಏಲಕ್ಕಿ ಪುಡಿ- 1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಬೆಣ್ಣೆ- ಅರ್ಧ ಕಪ್
ಮಾಡುವ ವಿಧಾನ
ಸಕ್ಕರೆ ಮತ್ತು ಹಾಲು ಬೆರಸಿಕೊಂಡು ಸ್ವಲ್ಪ ದಪ್ಪಗಾಗುವರೆಗೂ ಕಾಯಿಸಿಕೊಳ್ಳಬೇಕು. ಅದು ಕೆಂಪಗೆ ಆಗುತ್ತಾ ಬರುವಾಗ ಒಲೆಯಿಂದ ಇಳಿಸಿ ತಣಿಯಲು ಬಿಡಿ. ಇನ್ನೊಂದು ಕಡೆ ಬೆಣ್ಣೆಯನ್ನು ಕರಗಿಸಿಕೊಳ್ಳಿ. ಮತ್ತೊಂದು ಬಟ್ಟಲಿನಲ್ಲಿ ಮೈದಾಹಿಟ್ಟು, ಏಲಕ್ಕಿ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿಕೊಳ್ಳಬೇಕು, ಅದಕ್ಕೆ ಬೆಣ್ಣೆಹಾಕಿ. ಬಳಿಕ ಇದಕ್ಕೆ ಹಾಲು ಮತ್ತು ಸಕ್ಕರೆಯ ಪಾಕ ವನ್ನು ಹಾಕಬೇಕು. ಅದನ್ನು ಚೆನ್ನಾಗಿ ಕಲಸಿಕೊಂಡು ಮುದ್ದೆಯಾಗಿ ಮಾಡಿ, ಅನಂತರ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಕಾದ ಎಣ್ಣೆಯಲ್ಲಿ ಕರಿದರೆ ಶಂಕರ ಪೋಳಿ ಸವಿಯಲು ಸಿದ್ಧ.
ಸಾಬುದಾನಿ ವಡೆ
ಬೇಕಾಗುವ ಸಾಮಗ್ರಿಗಳು
ಬೇಯಿಸಿದ ಆಲೂಗಡ್ಡೆ- 2
ಸಾಬುದಾನಿ- 1 ಕಪ್ ನೆನೆಹಾಕಿದ
ಹುರಿದು ತರಿತರಿಯಾಗಿ ಪುಡಿ ಮಾಡಿದ ಕಡಲೆಕಾಯಿ ಬೀಜ- ಅರ್ಧ ಕಪ್
ಮೆಣಸಿನ ಕಾಯಿ- ಸಣ್ಣಗೆ ಹಚ್ಚಿದ್ದು ಖಾರಕ್ಕೆ ತಕ್ಕಷ್ಟು.
ಕೊತ್ತಂಬರಿ ಸೊಪ್ಪು- ಸ್ವಲ್ಪ
ಹಿಂಗು- ಸ್ವಲ್ಪ
ಜೀರಿಗೆ- 1 ಚಮ ಚ
ಉಪ್ಪು- ರುಚಿಗೆ ತಕ್ಕ ಷ್ಟು
ಜಜ್ಜಿದ ಶುಂಠಿ- ಸ್ವಲ್ಪ
ಅರಿ ಸಿ ನ- ಚಿಟಿಕೆ
ನಿಂಬೆ ರಸ- ಅರ್ಧ ಚಮಚ
ಮಾಡುವ ವಿಧಾನ
ಸಾಬೂದಾನಿಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ. ಅನಂತರ ಸಾಬೂದಾನಿ ಸಹಿತ ಎಲ್ಲ ಸಾಮಗ್ರಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ ಚೆನ್ನಾಗಿ ಕಲಸಬೇಕು. ಕಲಸುವಾಗ ತುಂಬಾ ನೀರು ಮಾಡಬೇಡಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಸಾಬೂದಾನಿ ಮಿಶ್ರಣದಿಂದ ವಡೆ ರೀತಿ ತಟ್ಟಿ ಬಿಸಿ ಎಣ್ಣೆಯಲ್ಲಿ ಹಾಕಿ ಕರಿಯಿರಿ. ಸ್ವಲ್ಪ ಕಂದು ಬಣ್ಣ ಬರುವಾಗ ತೆಗೆದರೆ ವಡೆ ರೆಡಿ.
ನುಚ್ಚಿನುಂಡೆ
ಬೇಕಾಗುವ ಸಾಮಗ್ರಿಗಳು
ಕಡಲೆ ಬೇಳೆ- ಅರ್ಧ ಕಪ್ (4 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
ತುರಿದ ತೆಂಗಿನ ಕಾಯಿ- ಅರ್ಧ ಕಪ್
ಹೆಚ್ಚಿದ ಈರುಳ್ಳಿ- ಅರ್ಧ ಕಪ್
ಇಂಗು- ಸ್ವಲ್ಪ
ಕತ್ತರಿಸಿದ ಹಸಿ ಮೆಣಸು- 2- 3
ಜೀರಿಗೆ ಪುಡಿ- ಅರ್ಧ ಚಮಚ
ಶುಂಠಿ ಪೇಸ್ಟ್- 1ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು- 2 ಚಮಚ
ಕರಿಬೇವು- 6- 7
ಉಪ್ಪು- ರುಚಿಗೆ ತಕ್ಕಷು
ಮಾಡುವ ವಿಧಾನ
ಕೊತ್ತಂಬರಿ ಸೊಪ್ಪು ಮತ್ತು ಈರುಳ್ಳಿ ಬಿಟ್ಟು ಉಳಿದೆಲ್ಲ ಸಾಮಾಗ್ರಿಗಳನ್ನು ಜರಿಜರಿಯಾಗಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಹೆಚ್ಚು ನೀರು ಹಾಕ ಬೇಡಿ. ಉಂಡೆ ಕಟ್ಟುವ ಹಾಗೆ ಸ್ವಲ್ಪ ಗಟ್ಟಿಯಾಗಿ ಇರಲಿ. ಆ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿಯನ್ನು ಬೆರೆಸಿ ಕಡುಬಿನಷ್ಟು ಆಕಾರದ ಉಂಡೆ ಕಟ್ಟಿ. ಅದನ್ನು ಕಡಬುು ಬೇಯಿಸುವ ಹಾಗೆ 15- 20 ನಿಮಿಷ ಹಬೆ ಯಲ್ಲಿ ಬೇಯಿಸಿದರೆ ನುಚ್ಚಿನುಂಡೆ ಸವಿಯಲು ಸಿದ್ಧ. ಇದನ್ನು ತಿನ್ನಲು ರುಚಿಯಾಗಿರುತ್ತದೆ.
ತುಪ್ಪದ ಅವಲಕ್ಕಿ
ಬೇಕಾಗುವ ಸಾಮಗ್ರಿಗಳು
ತೆಳು ಅವಲಕ್ಕಿ – 3 ಬಟ್ಟಲು
ಈರುಳ್ಳಿ – 1
ಹಸಿ ಮೆಣಸು- 3
ತುಪ್ಪ -3 ಚಮಚ
ಸಾಸಿವೆ -ಅರ್ಧ ಚಮಚ
ಜೀರಿಗೆ -ಅರ್ಧ ಚಮಚ
ಕೊಬ್ಬರಿ ತುರಿ – ಅರ್ಧ ಬಟ್ಟಲು
ನಿಂಬೆ ರಸ- ಅರ್ಧ ಹೋಳು
ಸಕ್ಕರೆ -ರುಚಿಗೆ ತಕ್ಕಷ್ಟು
ಉಪ್ಪು -ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು
ಕರಿಬೇವು- 3
ಇಂಗು – ಸ್ವಲ್ಪ
ಮಾಡುವ ವಿಧಾನ
ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಕತ್ತರಿಸಿದ ಹಸಿ ಮೆಣಸು ಹಾಕಿ ಒಗ್ಗರಣೆ ಕೊಡಿ. ಅನಂತರ ಅವಲಕ್ಕಿ, ಕತ್ತರಿಸಿದ ಈರುಳ್ಳಿ, ಉಪ್ಪು, ಸಕ್ಕರೆ, ನಿಂಬೆ ರಸ, ಹಸಿ ಕೊಬ್ಬರಿ ತುರಿ, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈಗ ತುಪ್ಪದ ಅವಲಕ್ಕಿ ಸವಿಯಲು ಸಿದ್ಧ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಉದುರಿಸಿ. ಮೊಸರು ಹಾಕಿ ತಿನ್ನಬಹುದು.
ವಿದ್ಯಾ ಕೆ. ಇರ್ವತ್ತೂರು/ ಶಿವಸ್ಥಾವರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.