ಓಟ್ಸ್ ಚಪಾತಿ
Team Udayavani, Jul 14, 2018, 2:55 PM IST
ದೈಹಿಕ ಶಕ್ತಿಯನ್ನು ಹೆಚ್ಚಿಸುವ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುವ, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿರಿಸಿ ದೇಹದ ತೂಕ ಇಳಿಸಲು ನೆರವಾಗುವ ಓಟ್ಸ್ ಆರೋಗ್ಯಕ್ಕೆ ಒಳ್ಳೆಯದಾದರೂ ಅದರ ರುಚಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಓಟ್ಸ್‌ನಿಂದ ಕಿಚಿಡಿ, ಲಡ್ಡು ತಿಂದಿದ್ದೇವೆ. ಆದರೆ ಓಟ್ಸ್‌ನ ಚಪಾತಿ ರುಚಿ ನೋಡಿದ್ದೀರಾ.
ಬೇಕಾಗುವ ಸಾಮಗ್ರಿಗಳು
ಓಟ್ಸ್- 1 ಕಪ್, ಗೋಧಿ ಹಿಟ್ಟು- ಒಂದುವರೆ ಕಪ್, ಜೀರಿಗೆ ಹುಡಿ- ಅರ್ಧ ಚಮಚ, ಧನಿಯಾ ಹುಡಿ- ಅರ್ಧ ಚಮಚ, ಅಚ್ಚ ಖಾರದ ಹುಡಿ- 1 ಚಮಚ, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ- 1, ಕೊತ್ತಂಬರಿ ಸೊಪ್ಪು, ಕರಿಬೇವು, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಎಣ್ಣೆ ಅಥವಾ ತುಪ್ಪ.
ಮಾಡುವ ವಿಧಾನ
ಮಿಕ್ಸಿಯಲ್ಲಿ ಓಟ್ಸ್ ಹಾಕಿ ನುಣ್ಣಗೆ ಪುಡಿಮಾಡಿ. ಓಟ್ಸ್ ಹಿಟ್ಟಿಗೆ, ಗೋಧಿ ಹಿಟ್ಟು, ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಈರುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಕಲಸಿ. ಹಿಟ್ಟು ಚಪಾತಿ ಹಿಟ್ಟಿನ ಹದಕ್ಕೆ ಇರಲಿ. ಹಿಟ್ಟನ್ನು ಕಾಲು ಗಂಟೆ ಹಾಗೇ ಬಿಟ್ಟು, ಅನಂತರ ಉಂಡೆ ಮಾಡಿಕೊಳ್ಳಿ. ಗೋಧಿ ಹಿಟ್ಟನ್ನು ಉದುರಿಸಿಕೊಂಡು ಚಪಾತಿ ಲಟ್ಟಿಸಿ. (ಹಿಟ್ಟನ್ನು ಮೊದಲು ತ್ರಿಕೋನ ಮಾಡಿ ಲಟ್ಟಿಸಿದರೆ ಮೆತ್ತಗಿರುತ್ತದೆ) ಕಾವಲಿ ಬಿಸಿ ಮಾಡಿ, ತುಪ್ಪ ಹಾಕಿ ಬೇಯಿಸಿದರೆ ಓಟ್ಸ್ ಮಸಾಲೆ ಚಪಾತಿ ರೆಡಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.