ಮೆಂತ್ಯೆ ಸೊಪ್ಪಿನ ಪರೋಟಾ
Team Udayavani, Dec 21, 2019, 4:07 AM IST
ಅತ್ಯಧಿಕ ವಿಟಮಿನ್ ಹೊಂದಿರುವ ಮೆಂತ್ಯ ಸೊಪ್ಪು ಸೇವನೆಯಿಂದ ದೇಹಕ್ಕೆ ತಂಪು, ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ರಕ್ತದ ಒತ್ತಡ ನಿಯಂತ್ರಿಸಲು ಸಹಕಾರಿ, ಎದೆ ಹಾಲು ಉತ್ಪತ್ತಿಗೆ ಸಹಕಾರಿಯಾಗಿದೆ. ಕೊಲೆಸ್ಟ್ರಾಲ್ ನಿವಾರಣೆಗೆ ಉಪಯುಕ್ತವಾಗಿದೆ.
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು -ಅರ್ಧ ಕಪ್
ಮೆಂತ್ಯೆ ಸೊಪ್ಪು-ಒಂದು ಕಟ್ಟು
ಬೆಳ್ಳುಳ್ಳಿ-ಒಂದು (ಸಣ್ಣಗೆ ಹೆಚ್ಚಿ ರುವ)
ಶುಂಠಿ -ಒಂದು (ಸಣ್ಣಗೆ ಹೆಚ್ಚಿ ರುವ)
ಖಾರದ ಪುಡಿ-ಒಂದು ಚಮಚ
ಅರಶಿ ನ-ಒಂದು ಚಿಟಿಕೆ
ರುಚಿಗೆ ತಕ್ಕಷ್ಟು -ಉಪ್ಪು
ನೀರು ಮತ್ತು ಎಣ್ಣೆ
ಮಾಡುವ ವಿಧಾನ
ಮೊದಲಿಗೆ ಮೆಂತ್ಯೆ ಸೊಪ್ಪನ್ನು ಚೆನ್ನಾಗಿ ಹೆಚ್ಚಿ ಕೊಳ್ಳಿ, ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು , ಹೆಚ್ಚಿದ ಮೆಂತ್ಯೆ ಸೊಪ್ಪು, ಖಾರದ ಪುಡಿ, ಬೆಳ್ಳುಳ್ಳಿ, ಶುಂಠಿ, ಉಪ್ಪು ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಒಂದು ಕಾವಲಿ ಬಿಸಿಗಿಟ್ಟು ಬಳಿಕ ಚಪಾತಿಯಂತೆ ಲಟ್ಟಿಸಿ ಕಾಯಿಸಿದರೆ ಬಿಸಿ ಬಿಸಿ ಮೆಂತ್ಯೆ ಸೊಪ್ಪಿನ ಪರೋಟಾ ಸವಿಯಲು ಸಿದ್ದ.
- ವಿಜಿತಾ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shirva: ಹಿಂದೂ ಜೂನಿಯರ್ ಕಾಲೇಜು ದಶಮಾನೋತ್ಸವ: ಕೊಲ್ಲಿ ರಾಷ್ಟ್ರದಲ್ಲಿ ಸಮಾಲೋಚನಾ ಸಭೆ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.