ಆಂಧ್ರದ ಸಿಹಿ ಪೂರ್ಣಮ್ ಬೂರೆಲು
Team Udayavani, Aug 31, 2019, 5:15 AM IST
ಆಂಧ್ರಪ್ರದೇಶದಲ್ಲಿ ಹಬ್ಬಗಳ ಸಂದರ್ಭ ದೇವರಿಗೆ ಸಮರ್ಪಿಸುವ ನೈವೇದ್ಯಗಳಲ್ಲಿ ಒಂದು ಪೂರ್ಣಮ್ ಬೂರೆಲು. ಎಣ್ಣೆಯಲ್ಲಿ ಕರಿದು ತಯಾರಿಸಲ್ಪಡುವ ಬೂರೆಲು ತಿಂಡಿಯನ್ನು ಆಂಧ್ರದಲ್ಲಿ ಸಾಮಾನ್ಯವಾಗಿ ವರಮಹಾಲಕ್ಷ್ಮೀ ವ್ರತ ಹಾಗೂ ನವರಾತ್ರಿ ವೇಳೆ ತಯಾರಿಸುತ್ತಾರೆ. ಹಬ್ಬಗಳ ಋತುವಿನಲ್ಲಿ ವಿಭಿನ್ನ ಸಿಹಿ ತಿಂಡಿಗಳನ್ನು ಮಾಡಲು ಬಯಸುವವರಿಗೆ ಇಲ್ಲಿದೆ ಈ ಪೂರ್ಣಮ್ ಬೂರೆಲು ರೆಸಿಪಿ..
ಬೇಕಾಗುವ ಸಾಮಗ್ರಿ
ಹಿಟ್ಟಿನ ತಯಾರಿಗೆ
ಅಕ್ಕಿ ಒಂದು ಕಪ್
ಉದ್ದಿನಬೇಳೆ ಅರ್ಧ ಕಪ್
ನೆನೆಸಲು ನೀರು ಅರ್ಧ ಕಪ್
ಉಪ್ಪು ಅರ್ಧ ಟೀಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
ಹೂರಣದ ತಯಾರಿಗೆ
ಕಡಲೆಬೇಳೆ ಒಂದು ಕಪ್
ಬೆಲ್ಲ ಒಂದು ಕಪ್
ಏಲಕ್ಕಿ ಅರ್ಧ ಟೀಸ್ಪೂನ್
ಜಾಯಿಕಾಯಿ ಹುಡಿ ಕಾಲು
ಟೀ ಸ್ಪೂನ್ (ಬೇಕಾದಲ್ಲಿ)
ಕಾಯಿತುರಿ ಕಾಲು ಕಪ್ (ಬೇಕಾದಲ್ಲಿ)
ಕರಿಯಲು ಎಣ್ಣೆ
ತುಪ್ಪ ಒಂದು
ಟೇಬಲ್‌ಸ್ಪೂನ್
ಹಿಟ್ಟಿನ ತಯಾರಿ
ಒಂದು ಕಪ್ ಅಕ್ಕಿ ಹಾಗೂ ಅರ್ಧ ಕಪ್ ಉದ್ದಿನಬೇಳೆಯನ್ನು ಚೆನ್ನಾಗಿ ತೊಳೆದು ರಾತ್ರಿ ನೀರಿನಲ್ಲಿ ನೆನೆಸಿ. ಮರುದಿನ ನೀರಿನಿಂದ ಅದನ್ನು ತೆಗೆದು ದೋಸೆ ಹಿಟ್ಟಿ ಹದಕ್ಕೆ ರುಬ್ಬಿಕೊಳ್ಳಿ. ಅನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಪಕ್ಕದಲ್ಲಿಡಿ.
ಹೂರಣದ ತಯಾರಿ
ಒಂದು ಕಪ್ ಕಡಲೆಬೇಳೆಯನ್ನು ತೊಳೆದು ಕುಕ್ಕರಿನಲ್ಲಿ ಬೇಯಿಸಿ (ಬೇಕಾದಲ್ಲಿ ಕಡಲೆಬೇಳೆ ನೆನೆಸಿಟ್ಟುಕೊಳ್ಳಬಹುದು). ಕುಕ್ಕರ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ 6 ರಿಂದ 7 ಕೂಗು ಹಾಕಿಸಿಕೊಳ್ಳಬೇಕು. ಬೇಳೆ ತಣ್ಣಗಾದ ಅನಂತರ ಮಿಕ್ಸಿಯಲ್ಲಿ ಒಂದು ಕಪ್ ಬೆಲ್ಲ, ಅರ್ಧ ಟೀಸ್ಪೂನ್ ಜಾಯಿಕಾಯಿಹುಡಿ, ಅರ್ಧ ಟೀಸ್ಪೂನ್ ಏಲಕ್ಕಿ ಹುಡಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಲು ಸಾಧ್ಯವಾಗದೇ ಇದ್ದರೆ 2ರಿಂದ 3 ಟೇಬಲ್‌ಸ್ಪೂನ್ ನೀರು ಸೇರಿಸಿಕೊಳ್ಳಬಹುದು.
ಬೂರೆಲು ಸಿದ್ಧಪಡಿಸಿಕೊಳ್ಳುವುದು
ಒಂದು ಪ್ಯಾನ್‌ಗೆ ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ಕಡಲೆಬೇಳೆ ಹಾಗೂ ಬೆಲ್ಲದ ಮಿಶ್ರಣ ಹಾಕಿ ಇದಕ್ಕೆ ಕಾಲು ಕಪ್ ತೆಂಗಿನತುರಿ ಸೇರಿಸಿಕೊಳ್ಳಬಹುದು.. ಕಡಿಮೆ ಉರಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಹುರಿದುಕೊಳ್ಳಿ. ಮಿಶ್ರಣ ಪ್ಯಾನ್‌ನ ಬದಿ ಬಿಡುತ್ತಾ ಬಂದರೆ ಸಿದ್ಧವಾಗಿದೆ ಎಂದರ್ಥ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ಅನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಒಣಗದಂತೆ ಮುಚ್ಚಿಡಿ.
ಕರಿಯಲು ಎಣ್ಣೆಯನ್ನು ಸಿದ್ಧಪಡಿಸಿಕೊಂಡು ಗ್ಯಾಸ್ ಮೇಲೆ ಇಡಿ. ಎಣ್ಣೆ ಬಿಸಿಯಾದಾಗ ಮಿಶ್ರಣದ ಉಂಡೆಯನ್ನು ಮೊದಲೇ ಸಿದ್ಧಪಡಿಸಿದ ಅಕ್ಕಿ ಹಾಗೂ ಉದ್ದಿನ ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ. ಹೀಗೆ ಮಾಡಿದರೆ ರುಚಿ ರುಚಿಯಾದ, ಗರಿಗರಿಯಾದ ಪೂರ್ಣಮ್ ಬೂರೆಲು ಸವಿಯಲು ಸಿದ್ಧ.
(ಸಂಗ್ರಹ)
ರಮ್ಯಾ ಎಂ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.