ಅನ್ನ ಉಳಿದರೆ ಚಿಂತೆ ಬೇಡ
Team Udayavani, Dec 1, 2018, 2:54 PM IST
ಕರಾವಳಿಯ ಪ್ರತಿ ಮನೆಯಲ್ಲೂ ಅನ್ನ ಮಾಡದೆ ದಿನ ಕಳೆಯುವುದೇ ಇಲ್ಲ. ಅದು ಕೆಲವೆಡೆ ಕುಚ್ಚಿಲು ಅಥವಾ ಬೆಳ್ತಿಗೆ ಅನ್ನ ಆಗಿರಬಹುದು. ಆದರೆ ಇತ್ತೀಚೆಗೆ ಮನೆಗಳಲ್ಲಿ ಅನ್ನ ಉಳಿಯುವುದು ಸಾಮಾನ್ಯವಾಗಿ ಬಿಟ್ಟಿದೆ. ಇದರಿಂದ ಮನೆ ಹೆಂಗಸರಿಗೆ ಅದನ್ನು ಏನು ಮಾಡುವುದು ಎಂದು ಮನೆಯ ಮಹಿಳೆಯರಿಗೆ ತಲೆ ನೋವು. ಆದರೆ ಉಳಿದ ಅನ್ನವನ್ನೂ ಬಿಸಾಡಲು ಆಗುವುದಿಲ್ಲ. ಹಾಗೆಂದು ಅದನ್ನು ಇಟ್ಟರೆ ಮತ್ಯಾರು ತಿನ್ನುವುದಿಲ್ಲ. ಅದಕ್ಕೋಸ್ಕರ ರಾತ್ರಿ ಉಳಿದ ಅನ್ನದಿಂದ ಪಡ್ಡು, ಪುಂಡಿ, ದೋಸೆ, ವೆರೈಟಿ ರೈಸ್ ಐಟಂಗಳನ್ನು ಮಾಡಿಕೊಂಡು ಮನೆ ಮಂದಿಗೆಲ್ಲಾ ಒಂದು ಹೊಸ ರುಚಿಯನ್ನು ತಿನ್ನಿಸಬಹುದು.
ಪಡ್ಡು
ರಾತ್ರಿ ಮಾಡಿದ ಬೆಳ್ತಿಗೆ ಅನ್ನ ಉಳಿದರೆ ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಹೊಸ ರುಚಿಯ ಪಡ್ಡುವನ್ನು ಮಾಡಿ ಬಡಿಸಬಹುದು. ಇದಕ್ಕೆ ಮನೆಯಲ್ಲಿರುವ ತರಕಾರಿ ಸಾಮಗ್ರಿಗಳು ಸಾಕು. ಹಾಗಾಗಿ ಥಟ್ಟಂತ ಮಾಡಬಹುದು. ಅನ್ನವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿ ತೆಗೆದಿಟ್ಟುಕೊಳ್ಳಿ. ಅನಂತರ ಮಿಕ್ಸಿ ಜಾರಿಗೆ ತುಂಡು ಮಾಡಿದ ಕೊಬ್ಬರಿ, 4 ಒಣ ಮೆಣಸು, ಈರುಳ್ಳಿ, ಹಸಿಮೆಣಸು, ಬೇವಿನ ಸೊಪ್ಪು ಹಾಕಿ ಸ್ವಲ್ಪ ತಿರುಗಿಸಿ ತೆಗೆದು ಪಾತ್ರೆಗೆ ಹಾಕಿಕೊಳ್ಳಿ, ಅದಕ್ಕೆ ಒಂದು ಚಮಚ ಅರಸಿನ, ಒಂದು ಕಪ್ ಚಿರೋಟಿ ರವಾ, ಜೀರಿಗೆ, ಹೆಚ್ಚಿದ ಈರುಳ್ಳಿ, ಟೊಮೇಟೊ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ, ಅನಂತರ ನೀರು ಹಾಕಿಕೊಂಡು ಪಡ್ಡು ಮಾಡಲು ಬೇಕಾದಷ್ಟು ಮಂದ ಇರಿಸಿಕೊಂಡು ಪಡ್ಡು (ಅಪ್ಪ) ಕಾವಲಿ ಹಾಕಿ ಚೆನ್ನಾಗಿ ಬೇಯಿಸಿ. ಬಿಸಿ ಬಿಸಿ ಇರುವಾಗಲೇ ತಿನ್ನಲು ಬಡಿಸಿ. ಇದಕ್ಕೆ ಪ್ರತ್ಯೇಕ ಚಟ್ನಿ, ಸಾಂಬಾರಿನ ಆವಶ್ಯಕತೆ ಇರುವುದಿಲ್ಲ.
ಬಿಸಿ ಬಿಸಿ ಪುಂಡಿ
ಜಾಸ್ತಿ ಉಳಿದ ಬೆಳ್ತಿಗೆ ಅನ್ನವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ ಅನಂತರ ಇದಕ್ಕೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಚಿರೋಟಿ ರವಾ, ಹಾಕಿ ಗಟ್ಟಿ ಹಿಟ್ಟನ್ನು ಕಲಸಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ, ಒಣ ಮೆಣಸು, ಸಾಸಿವೆ, ಜೀರಿಗೆ ಹೆಸರು ಬೇಳೆ ಹಾಕಿ ಒಗ್ಗರಣೆ ಮಾಡಿ ಅದನ್ನು ಈ ಹಿಟ್ಟಿಗೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ ಪುಂಡಿ ಗಟ್ಟಿಯ ಆಕಾ ರಕ್ಕೆ ಮಾಡಿಕೊಂಡು ಇಡ್ಲಿ ಪಾತ್ರೆಯಲ್ಲಿ ಒಂದು ಸೆಕೆ ಬೇಯಿಸಿ. ಅನಂತರ ಬಿಸಿ ಬಿಸಿ ಇರುವಾಗಲೇ ಸವಿಯಿರಿ.
ದೋಸೆ
ದೋಸೆ ಮಾಡಲು ಉಳಿದ ಬೆಳ್ತಿಗೆ ಅಥವಾ ಕುಚ್ಚಿಲು ಅನ್ನ, ರವೆಯನ್ನು ಮಿಕ್ಸಿಗೆ ಹಾಕಿ ರುಬ್ಬಿ ಕೊಳ್ಳಿ ಅನಂತರ ಅದಕ್ಕೆ ನೀರು, ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೇಟೊ, ಹಸಿ ಮೆಣಸು, ಕರಿ ಬೇವು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಮಾಡಿಕೊಂಡು ದೋಸೆ ಕಾವಲಿಗೆ ಎರೆಯಿರಿ. ಅದು ಸುಳಿಯಲು ಬಾರದಿದ್ದರೆ ನೀರು ದೋಸೆಯ ರೀತಿಯಲ್ಲಿ ಎರೆಯಿರಿ, ಆದರೆ ಅಧಿಕ ನೀರು ಸೇರಿಸುವುದು ಬೇಡ. ಬೆಳ್ತಿಗೆ ಅನ್ನದ ದೋಸೆ ಹಾಗೂ ಕುಚ್ಚಿಲು ಅನ್ನದ ದೋಸೆ ವಿಭಿನ್ನ ರುಚಿಯನ್ನು ನೀಡುತ್ತದೆ. ಇದಕ್ಕೆ ತುಪ್ಪವನ್ನು ಸೇರಿಸಿ, ಚಟ್ನಿ ಮಾಡಿಕೊಂಡು ಸವಿಯಿರಿ.
ರೈಸ್ ಐಟಂಗಳು
ಉಳಿದ ಅನ್ನದಿಂದ ತಯಾರಿಸಬಹುದಾದ ಚಿತ್ರಾನ್ನ, ಮೊಸರಾನ್ನ, ಲೆಮೆನ್ ರೈಸ್, ಟೊಮೇಟೊ ಬಾತ್ ಹೀಗೆ ಹಲವು ವಿಧಗಳನ್ನು ಮಾಡಬಹುದು. ಅನ್ನ ಒಂದೇ ಆದರೂ ರುಚಿ ಬೇರೆ ಬೇರೆ ವೆರೈಟಿ ಬ್ರೇಕ್ ಫಾಸ್ಟ್ ಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದರ ರುಚಿಯನ್ನು ಇಷ್ಟ ಪಡುವುದಂತು ಸತ್ಯ. ಹೀಗೆ ನಾನಾ ರೀತಿಯಲ್ಲಿ ಉಳಿದ ಅನ್ನವನ್ನು ಬಳಸಿ ಹೊಸ ಪ್ರಯೋಗವನ್ನು ಮಾಡಬಹುದು. ಹಾಗೆಯೇ ಇನ್ನೊಬ್ಬರಿಗೆ ತಿಳಿಸಿದರೆ ಅವರೂ ತಿಂದು ಆಸ್ವಾದಿಸುತ್ತಾರೆ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಕೊಕೇನ್, ಚರಸ್ ಸೇವನೆ; ಮೂವರ ಬಂಧನ
Raichuru: ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವು; 3 ತಿಂಗಳಿನಲ್ಲಿ 12 ಮಂದಿ ಬಲಿ
Brahmavar: ಕಂಟೈನರ್ ಢಿಕ್ಕಿ; ಬೈಕ್ ಸಹಸವಾರೆ ಸಾವು
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.