ಗುಲಾಬ್ ಜಾಮೂನ್
Team Udayavani, Apr 27, 2017, 10:57 PM IST
ಬೇಕಾಗುವ ಸಾಮಗ್ರಿಗಳು
ಮೈದಾ 1 ಕಪ್
ಖೋವಾ 1/2 ಕಪ್
ಸಕ್ಕರೆ 1 ಕಪ್
ಎಣ್ಣೆ ಅಥವಾ ತುಪ್ಪ ಕರಿಯಲು
ಏಲಕ್ಕಿ ಪುಡಿ
ಪಿಸ್ತಾ ಅಲಂಕಾರಕ್ಕೆ
ತಯಾರಿಸುವ ವಿಧಾನ
ಮೊದಲು ಖೋವಾವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಅದಕ್ಕೆ 1 ಕಪ್ ಮೈದಾ ಹಿಟ್ಟನ್ನು ಹಾಕಿ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ ಹಿಟ್ಟು ತಯಾರಿಸಿ. ಕೈಗೆ ತುಪ್ಪ ಸವರಿಕೊಂಡು ಉಂಡೆಗಳಾಗಿ ಮಾಡಿ ತುಪ್ಪ ಅಥವಾ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ. ಇನ್ನೊಂದು ಪ್ಯಾನ್‌ನಲ್ಲಿ ಸಕ್ಕರೆ ಹಾಗೂ 1/2 ಕಪ್ ನೀರು ಸೇರಿಸಿ ಕುದಿಸಿ, ಸಕ್ಕರೆ ಪಾಕ ಸ್ವಲ್ಪ ಮಂದವಾಗುತ್ತ ಬಂದಂತೆ ಅದಕ್ಕೆ ಏಲಕ್ಕಿ ಪುಡಿ ಹಾಕಿ. ಈಗ ಕರಿದ ಉಂಡೆಗಳನ್ನು ಸಕ್ಕರೆ ಪಾಕದೊಳಗೆ ಹಾಕಿ 20ರಿಂದ 25 ನಿಮಿಷಗಳ ಕಾಲ ನೆನೆಸಿಡಿ. ಅನಂತರ ತೆಗೆದು ಪಿಸ್ತಾದಿಂದ ಅಲಂಕರಿಸಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.