ರುಚಿ ರುಚಿಯಾದ ಸಿಗಡಿ ಸ್ಪೆಷಲ್
Team Udayavani, Feb 15, 2020, 6:00 AM IST
ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ ನೋಡಬೇಕು ಎನ್ನುವವರು ಈ ರೆಸಿಪಿಗಳನ್ನು ಟ್ರೈ ಮಾಡಬಹುದು.
ಒಣ ಸಿಗಡಿಯ ಚಟ್ನಿ
ಬೇಕಾಗುವ ಸಾಮಗ್ರಿಗಳು
ಒಣಗಿದ ಸಿಗಡಿ- 2 ಕಪ್
ಮೆಣಸಿನ ಹುಡಿ- 2 ಚಮಚ
ಅರಶಿನ ಹುಡಿ- 1 ಚಮಚ
ಈರುಳ್ಳಿ- 4
ಉಪ್ಪು -ರುಚಿಗೆ ತಕ್ಕಷ್ಟು
ವಿನೆಗರ್ -ಸ್ವಲ್ಪ
ಮಾಡುವ ವಿಧಾನ:
ಒಂದು ಪಾತ್ರೆಗೆ ಸ್ವಲ್ಪ ಎಣ್ಣೆ ಅದು ಬಿಸಿಯಾದ ಬಳಿಕ ಬೆಳ್ಳುಳ್ಳಿ, ಹಸಿ ಮೆಣಸು, ಶುಂಠಿ ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಬಳಿಕ ಒಂದು ದೊಡ್ಡ ಗಾತ್ರದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿ ಅದಕ್ಕೆ ಒಣಗಿದ ಸಿಗಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಅದಕ್ಕೆ ಚಿಲ್ಲಿ ಪೌಡರ್, ಅರಿಶಿನ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಂಡರೆ ರುಚಿ ರುಚಿಯಾದ ಸಿಗಡಿ ಚಟ್ನಿ ಸವಿಯಲು ಸಿದ್ಧ.
ಸಿಗಡಿ ಚಿಲ್ಲಿ
ಬೇಕಾಗುವ ಸಾಮಗ್ರಿ
ಕಾರದ ಹುಡಿ- 2ಚಮಚ
ಅರಿಶಿನ- 2 ಚಿಟಿಕೆ
ಪೆಪ್ಪರ್- ರುಚಿಗೆ ತಕ್ಕಷ್ಟು
ಗರಂ ಮಸಾಲ-1 ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ -ರುಚಿಗೆ ತಕ್ಕಷ್ಟು
ನಿಂಬೆ ಹುಳಿ- 1 ನಿಂಬೆ
ಮೇಲಿನ ಈ ಎಲ್ಲ ಪದಾರ್ಥಗಳನ್ನು
ಸರಿಯಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಬಿಡಿ
ಮಾಡುವ ವಿಧಾನ:
ಮೊದಲಿಗೆ ಸಿಗಡಿಯನ್ನು ಸರಿಯಾಗಿ ಶುಚಿಗೊಳಿಸಬೇಕು. ಕಡಾಯಿಯಲ್ಲಿ ಎಣ್ಣೆ ಬಿಸಿಮಾಡಿ ಸಿಗಡಿಯನ್ನು ಸರಿಯಾಗಿ ಕರಿಯಿರಿ. 2 ಬೆಳ್ಳುಳ್ಳಿ, ಸ್ವಲ್ಪ ಶುಂಠಿ, 4 ಮೆಣಸಿನ ಕಾಯಿ, 2 ಈರುಳ್ಳಿ, 2 ಟೊಮೇಟೊವನ್ನು ಸಣ್ಣಗೆ ಕತ್ತರಿಸಿ, ಅರ್ಧ ಚಮಚ ಸೊಯಾ ಸಾಸ್, ಕಾಲು ಚಮಚ ವಿನೆಗರ್, ಕಾಲು ಚಮಚ ಟೊಮೇಟೊ ಸಾಸ್ ಮತ್ತು ರುಚಿಗೆ ತಕ್ಕಷ್ಟು ಖಾರದ ಹುಡಿ, ಉಪ್ಪು ಹಾಕಿ ಸರಿಯಾಗಿ ಬೇಯಿಸಿ, ಈಗ ಅದಕ್ಕೆ ಕರಿದ ಸಿಗಡಿ ಹಾಕಿ ಬೇಯಿಸಿದರೆ ರುಚಿ ರುಚಿಯಾದ ಸಿಗಡಿ ಚಿಲ್ಲಿ ಸವಿಯಲು ಸಿದ್ಧ.
ಸಿಗಡಿ ರೋಸ್ಟ್
ಸಿಗಡಿ -1/2 ಕೆಜಿ
ಅರಶಿನ -ಒಂದು ಚಿಟಿಕೆ
ಖಾರದ ಪುಡಿ -2 ಚಮಚ
ನಿಂಬೆರಸ- 1ಚಮಚ
ಮೆಂತ್ಯ -ಕಾಲು ಚಮಚ
ಜೀರಿಗೆ -ಒಂದು ಚಮಚ
ಕೊತ್ತಂಬರಿ -3 ಚಮಚ
ಕರಿ ಮೆಣಸು- 4 ರಿಂದ 5
ಮೆಣಸು- 10 ರಿಂದ 15
ಬೆಳ್ಳುಳ್ಳಿ -10 ಎಸಳು
ಬೆಲ್ಲ- ಸ್ವಲ್ಪ
ಕರಿಬೇವು -ಸ್ವಲ್ಪ
ಕೊತ್ತಂಬರಿ ಸೊಪ್ಪು -ಸ್ವಲ್ಪ
ಉಪ್ಪು- ರುಚಿಗೆ ತಕ್ಕಷ್ಟು
ತುಪ್ಪ- ಬೇಕಾದಷ್ಟು
ಮಾಡುವ ವಿಧಾನ:
ಮೊದಲಿಗೆ ಸಿಗಡಿಗೆ, ಉಪ್ಪು, ಅರಿಶಿನ, ಖಾರದ ಪುಡಿ, ಉಪ್ಪು ಹಾಕಿ ನೆನೆಸಿಡಿ. ಮಸಾಲೆಗೆ ಬಾಣಲೆ ಬಿಸಿ ಮಾಡಿ ಮೆಂತ್ಯ, ಕರಿಮೆಣಸು, ಕೊತ್ತಂಬರಿ, ಜೀರಿಗೆ, ಮೆಣಸು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ, ಬಳಿಕ ಮಿಕ್ಸಿಗೆ ಹಾಕಿ ನೀರು ಹಾಕದೆ ಪುಡಿ ಮಾಡಿಕೊಳ್ಳಿ, ಅನಂತರ ಹುಣಸೆ, ಬೆಳ್ಳುಳ್ಳಿ, ಬೆಲ್ಲ, ಸ್ವಲ್ಪ ನೀರು ಹಾಕಿ ಫೈನ್ ಪೆಸ್ಟ್ ಮಾಡಿಕೊಳ್ಳಿ,
ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿಕೊಂಡು, ಕರಿಬೇವು ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ, ಬಳಿಕ ಅದೇ ತುಪ್ಪಕ್ಕೆ ನೆನೆಸಿಟ್ಟುಕೊಂಡ ಸಿಗಡಿ ಹಾಕಿ ರೋಸ್ಟ್ ಮಾಡಿಕೊಂಡು ತೆಗೆದಿಟ್ಟುಕೊಳ್ಳಿ. ಬಳಿಕ ಅದಕ್ಕೆ ಮಸಾಲೆ ಹಾಕಿ ಕುದಿಸಿ ಉಪ್ಪು ಹಾಕಿಕೊಳ್ಳಿ, ಫ್ರೈ ಮಾಡಿಕೊಂಡಿರುವ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ ಫುಲ್ ರೋಸ್ಟ್ ಮಾಡಿಕೊಳ್ಳಿ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕರಿಬೇವು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಸಿಗಡಿ ರೋಸ್ಟ್ ಸವಿಯಲು ಸಿದ್ಧ.
ಸಿಗಡಿ ಸುಕ್ಕ
ಬೇಕಾಗುವ ಸಾಮಗ್ರಿಗಳು
ಸಿಗಡಿ – ಒಂದು 1/2 ಕೆ.ಜಿ.
ಅರಿಶಿನ ಹುಡಿ- 2 ಚಿಟಿಕೆ
ಕರಿಬೇವು ಸೊಪ್ಪು- 10 ಎಸಳು
ಬೆಳ್ಳುಳ್ಳಿ- 15 ಎಸಳು
ಈರುಳ್ಳಿ- 4ರಿಂದ 5
ಸಾಸಿವೆ, ಮೆಂತೆ- 2 ಚಮಚ
ಜೀರಿಗೆ ಅರ್ಧ ಚಮಚ ಕೊತ್ತಂಬರಿ- 50 ಗ್ರಾಂ,
ಓಂ ಕಾಳು- 1 ಚಮಚ
ಕಾಳು ಮೆಣಸು- 4ರಿಂದ 5 ಕಾಳು
ಒಣ ಮೆಣಸಿನ ಕಾಯಿ -10ರಿಂದ 15
ನಿಂಬೆ ರಸ- 1 ನಿಂಬೆ
ಮಾಡುವ ವಿಧಾನ
ಎಲ್ಲ ಸೇರಿಸಿ ಗೆùಂಡರ್‌ಗೆ ಹಾಕಿ ಸರಿಯಾಗಿ ಪುಡಿ ಮಾಡಿಟ್ಟುಕೊಳ್ಳಿ, ಅನಂತರ ಪಾತ್ರೆಗೆ ಸಿಗಡಿ, ಅರಿಶಿನ, ಉಪ್ಪು, ಸ್ವಲ್ಪ ಮಸಾಲೆ, ನಿಂಬೆ ರಸ ಹಾಕಿ ಚೆನ್ನಾಗಿ ನೆನೆಸಿಡಿ.
ಕೊಬ್ಬರಿ ಸರಿಯಾಗಿ ಹುರಿದಿಟ್ಟುಕೊಳ್ಳಿ, ಈಗ ಸಿಗಡಿಯನ್ನು ಬಾಣಲೆಗೆ ಹಾಕಿ ಎಣ್ಣೆಯಲ್ಲಿ ಸರಿಯಾಗಿ ಕರಿಯಿರಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿಯಾದ ಬಳಿಕ ಸಾಸಿವೆ, ಬೆಳ್ಳುಳ್ಳಿ, ಕರಿಬೇವು ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ, ಬಳಿಕ ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ಬಳಿಕ ಫ್ರೈ ಮಾಡಿ ತೆಗೆದಿಟ್ಟ ಸಿಗಡಿಯನ್ನು ಹಾಕಿ ಮೊದಲೇ ತಯಾರಿಸಿದ ಮಸಾಲೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿಕೊಳ್ಳಿ.
ಬಳಿಕ ಹುರಿದಿಟ್ಟುಕೊಂಡಿರುವ ಕಾಯಿ ತುರಿ ಹಾಕಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸಿಗಡಿ ಸುಕ್ಕ ಸವಿಯಲು ಸಿದ್ಧ.
ಸಿಗಡಿ ಮಸಾಲ ಗ್ರೇವಿ
ಬೇಕಾಗುವ ಸಾಮಗ್ರಿಗಳು
ಸಿಗಡಿ – 1/2 ಕೆ.ಜಿ
ಈರುಳ್ಳಿ – 4
ಹಸಿರು ಮೆಣಸಿನಕಾಯಿ- 2
ಜೀರಿಗೆ- 1 ಚಮಚ
ಧನಿಯಾ ಪುಡಿ- 2 ಚಮಚ
ಗರಂ ಮಸಾಲ- 1 ಚಮಚ
ಅರಶಿನ- ಒಂದು ಚಿಟಿಕೆ
ಜೀರಿಗೆ ಪುಡಿ- 1 ಚಮಚ
ಟೊಮೇಟೊ- 2 (ಸಣ್ಣಗೆ ಹೆಚ್ಚಿದ್ದು)
ಬೆಳ್ಳುಳ್ಳಿ- 4 ಎಸಳು
ಕರಿಬೆವು -ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ನೀರು- ಬೇಕಾದಷ್ಟು
ಮಾಡುವ ವಿಧಾನ:
ಒಂದು ಬೌಲ್‌ನಲ್ಲಿ ಸಿಗಡಿಯನ್ನು ಹಾಕಿ ಅದಕ್ಕೆ ಸ್ವಲ್ಪ ಅರಿಶಿನ, ಉಪ್ಪು, ನಿಂಬೆರಸ ಹಾಕಿ ನೆನೆಯಲು ಬಿಡಿ ಬಳಿಕ ಒಂದು ಪ್ಯಾನ್‌ನಲ್ಲಿ ಎಣ್ಣೆ ಹಾಕಿ ಕಾಯಿಸಿ ಕಾದ ಬಳಿಕ ನೆನೆಸಿಟ್ಟ ಸಿಗಡಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ. ಬಳಿಕ ಒಂದು ಬಾಣಲೆ ಬಿಸಿಗಿಟ್ಟು ಬಿಸಿಯಾದ ಬಳಿಕ ಎಣ್ಣೆ ಹಾಕಿ ಬಿಸಿಯಾದ ಮೇಲೆ ಜಿರಿಗೆ ಹಾಕಿ, ಹಸುರು ಮೆಣಸಿನಕಾಯಿ ಹಾಕಿ, ಒಂದು ಚೆಕ್ಕೆ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಪ್ರೈ ಮಾಡಿ ಬಳಿಕ ಸಣ್ಣದಾಗಿ ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ, ಸಣ್ಣಗೆ ಹೆಚ್ಚಿದ ಟೊಮೊಟೋ ಹಾಕಿ ಮಿಕ್ಸ್ ಮಾಡಿಕೊಳ್ಳಿ ಜತೆಗೆ ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿಕೊಳ್ಳಿ. ಅನಂತರ ಮಸಾಲೆಗೆ ಚಿಟಿಗೆ ಅರಶಿನ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಬಳಿಕ ಎಣ್ಣೆಯಲ್ಲಿ ಫ್ರೈ ಮಾಡಿದ ಸಿಗಡಿಯನ್ನು ಹಾಕಿ ಮಿಕ್ಸ್ ಮಾಡಿ ಬಳಿಕ ಒಂದು ಲೋಟ ನೀರು ಹಾಕಿ ಕುದಿಸಿ ಬೇಕಾದಲ್ಲಿ ಮತ್ತೆ ಉಪ್ಪು ಸೇರಿಸಿ ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿದರೆ ರುಚಿಯಾದ ಸಿಗಡಿ ಮಸಾಲ ಗ್ರೇವಿ ಸವಿಯಲು ಸಿದ್ಧ.
– ವಿಜಿತಾ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.