ಊಟ, ಉಪಾಹಾರ ರುಚಿ ಹೆಚ್ಚಿಸಲು ವಿವಿಧ ಚಟ್ನಿ
Team Udayavani, Jul 14, 2018, 3:41 PM IST
ಗಂಜಿ, ಅನ್ನ, ವಿವಿಧ ತಿಂಡಿಗಳೊಂದಿಗೆ ಬಟ್ಟಲಿನ ಮೂಲೆಯನ್ನು ಅಲಂಕರಿಸುವ ಚಟ್ನಿ ಅಡುಗೆಯ ಸಂಭ್ರಮವನ್ನೂ ಹೆಚ್ಚಿಸುತ್ತದೆ ಮಾತ್ರವಲ್ಲ ಎಲ್ಲೋ ಸವಿದ ರುಚಿ ಮತ್ತೆ ಮತ್ತೆ ನೆನಪಾಗುವಂತೆ ಮಾಡುತ್ತದೆ. ಚಟ್ನಿ ಒಂದಿದ್ದರೆ ಸಾಕು ಬೆಳಗ್ಗಿನ ಉಪಾಹಾರ, ಸಂಜೆಯ ಸ್ನಾಕ್ಸ್ ತನ್ನ ರುಚಿಯನ್ನು ಹೆಚ್ಚಿಸಿಕೊಳ್ಳುತ್ತದೆ.
ಶುಂಠಿ
ಬೇಕಾಗುವ ಸಾಮಗ್ರಿಗಳು
.ಹಸಿ ಶುಂಠಿ- 25 ಗ್ರಾಂ
.ಕೆಂಪು ಮೆಣಸು- 4
.ಉದ್ದಿನ ಬೇಳೆ- ಅರ್ಧ ಚಮಚ
.ಹುಣಸೆಹಣ್ಣು- ಸ್ವಲ್ಪ
.ಕೊಬ್ಬರಿ- ಕಾಲು ಬಟ್ಟಲು
.ಎಣ್ಣೆ- 2 ಚಮಚ
.ಬೆಲ್ಲ- ಸ್ವಲ್ಪ
ತಯಾರಿಸುವ ವಿಧಾನ
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಶುಂಠಿಯನ್ನು ಚೆನ್ನಾಗಿ ಹುರಿದು ತೆಗೆದಿಡಿ. ಅನಂತರ ಅದೇ ಎಣ್ಣೆಯಲ್ಲಿ ಒಣ ಮೆಣಸು, ಉದ್ದಿನ ಬೇಳೆಯನ್ನು ಹುರಿದು ತೆಗೆದಿಡಿ. ತಣ್ಣಗಾದ ಅನಂತರ ಎಲ್ಲ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ರುಬ್ಬಿದರೆ ಶುಂಠಿ ಚಟ್ನಿ ರೆಡಿ.
ಪುದೀನ
ಬೇಕಾಗುವ ಸಾಮಗ್ರಿಗಳು
. ಪುದೀನ ಎಲೆ- 2 ಬಟ್ಟಲು
.ಹಸಿ ಮೆಣಸು- 2
.ಹುರಿಕಡಲೆ- 1 ಚಮಚ
.ನಿಂಬೆ ರಸ- 1 ಚಮಚ
.ಸಕ್ಕರೆ- 1 ಚಮಚ
.ಉಪ್ಪು- ರುಚಿಗೆ
ತಯಾರಿಸುವ ವಿಧಾನ
ಒಂದು ಚಮಚ ಎಣ್ಣೆ ಬಿಸಿ ಮಾಡಿ ಪುದೀನ ಎಲೆಯನ್ನು ಹುರಿದು ತಣ್ಣಗೆ ಮಾಡಿ. ಒಂದು ಬಾಣಲೆಯಲ್ಲಿ ಮೆಣಸನ್ನು ಹುರಿಯಿರಿ. ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ ಸ್ವಲ್ಪ ನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಕೊನೆಗೆ ನಿಂಬೆ ರಸ ಸೇರಿಸಿದರೆ ಪುದೀನ ಚಟ್ನಿ ರೆಡಿ.
ಸಿಹಿ ಕುಂಬಳಕಾಯಿ
ಬೇಕಾಗುವ ಸಾಮಗ್ರಿಗಳು
.ಸಿಪ್ಪೆ ತೆಗೆದ ಕುಂಬಳಕಾಯಿ- 1 ಬಟ್ಟಲು
. ಹಸಿಮೆಣಸು-2
.ಬಿಳಿ ಎಳ್ಳು- 2 ಚಮಚ
. ಒಣ ಕೊಬ್ಬರಿ- ಕಾಲು ಬಟ್ಟಲು
.ಹುಣಸೆ- ಸ್ವಲ್ಪ
. ಬೆಲ್ಲ- ಸ್ವಲ್ಪ
.ಉಪ್ಪು- ರುಚಿಗೆ
.ಎಣ್ಣೆ- 2 ಚಮಚ
ತಯಾರಿಸುವ ವಿಧಾನ
ಎಣ್ಣೆ ಬಿಸಿ ಮಾಡಿ ಸಿಪ್ಪೆಯನ್ನು ಹುರಿದು ಎಳ್ಳು, ಹಸಿ ಮೆಣಸು, ಕರಿಬೇವು ಹುರಿದು ತಣ್ಣಗಾದ ಅನಂತರ ಹುಣಸೆ ಕೊಬ್ಬರಿ, ಉಪ್ಪು, ಬೆಲ್ಲ ಸೇರಿಸಿ ತರಿತರಿಯಾಗಿ ರುಬ್ಬಿಕೊಂಡರೆ ಸಿಹಿ ಕುಂಬಳಕಾಯಿ ಚಟ್ನಿ ಸಿದ್ಧ.
ಸಿಹಿ ಚಟ್ನಿ
ಬೇಕಾಗುವ ಸಾಮಗ್ರಿಗಳು
.ಹುಣಸೆ ಹಣ್ಣು- ಅರ್ಧ ಬಟ್ಟಲು
.ನೀರು- ಒಂದು ಬಟ್ಟಲು
.ಬೆಲ್ಲ- 200 ಗ್ರಾಂ
.ಚಾಟ್ ಮಸಾಲೆ- 1 ಚಮಚ
.ಒಣ ಮೆಣಸಿನ ಪುಡಿ- 1 ಚಮಚ
.ಜೀರಿಗೆ- 1 ಚಮಚ
.ಉಪ್ಪು- ರುಚಿಗೆ
ತಯಾರಿಸುವ ವಿಧಾನ
ಹುಣಸೆ ಮತ್ತು ಬೆಲ್ಲವನ್ನು 2 ಗಂಟೆ ನೀರಿನಲ್ಲಿ ನೆನೆಸಿ. ಚೆನ್ನಾಗಿ ಹಿಂಡಿ ಸೋಸಿಟ್ಟುಕೊಳ್ಳಿ. ಇದಕ್ಕೆ ಸ್ವಲ್ಪ ಚಾಟ್ ಮಸಾಲೆ, ಒಣ ಮೆಣಸಿನ ಪುಡಿ, ಜೀರಿಗೆ, ಉಪ್ಪು ಸೇರಿಸಿ 4- 5 ನಿಮಿಷ ಕುದಿಸಿದರೆ ಸಿಹಿ ಚಟ್ನಿ ಸವಿಯಲು ಸಿದ್ಧ.
ಪೇರಳೆ, ಒಣದ್ರಾಕ್ಷಿ
ಬೇಕಾಗುವ ಸಾಮಗ್ರಿಗಳು
.ಸಣ್ಣದಾಗಿ ಕತ್ತರಿಸಿದ ಪೇರಳೆ ಹಣ್ಣು- 3- 4
.ಸಕ್ಕರೆ - ಅರ್ಧ ಕಪ್
.ಬಿಳಿ ವಿನಿಗರ್- 2 ಚಮಚ
.ವಿನಿಗರ್- 1 ಚಮಚ
.ಹೆಚ್ಚಿದ ಈರುಳ್ಳಿ – ಅರ್ಧ ಕಪ್
.ಶುಂಠಿ – ಒಂದು ಇಂಚು
.ಬೆಳ್ಳುಳ್ಳಿ ಎಸಳು- 3
.ಮೆಣಸಿನ ಹುಡಿ- 1 ಚಮಚ
.ಒಣದ್ರಾಕ್ಷಿ- ಅರ್ಧ ಕಪ್
.ಲವಂಗ- 2
.ಚಕ್ಕೆ- ಒಂದು ಇಂಚು ಉದ್ದದ 2 ತುಂಡು
.ಉಪ್ಪು- ರುಚಿಗೆ
ಮಾಡುವ ವಿಧಾನ
ದೊಡ್ಡ ಪಾತ್ರೆಯಲ್ಲಿ ಬಿಳಿ ವಿನೆಗರ್ ಮತ್ತು ಸಕ್ಕರೆ ಹಾಕಿ ಒಲೆ ಮೇಲೆ ಇಟ್ಟು ಕುದಿಸಿ. ಇದಕ್ಕೆ ಉಳಿದ ಸಾಮಗ್ರಿಗಳನ್ನು ಹಾಕಿ ಒಂದು ಗಂಟೆ ಕಾಲ ಸಣ್ಣ ಉರಿಯಲ್ಲಿ ಬೇಯಿಸಿ. (ಬೇಯುವಾಗಲೇ ಸಾಮಗ್ರಿಗಳೆಲ್ಲ ಮಿಶ್ರಣವಾಗಬೇಕು). ಅನಂತರ ಒಲೆಯಿಂದ ಇಳಿಸಿ ತಣಿಯಲು ಬಿಡಿ. ಬಳಿಕ ಅದನ್ನು ಚೆನ್ನಾಗಿ ಮ್ಯಾಶ್ ಮಾಡಿದರೆ ಪೇರಳೆ- ಒಣ ದ್ರಾಕ್ಷಿ ಚಟ್ನಿ ಸವಿಯಲು ಸಿದ್ಧ. ಬಳಿಕ ಇದನ್ನು ಮುಚ್ಚಳ ಬಿಗಿಯಾಗಿರುವ ಜಾರ್ ಗೆ ಹಾಕಿ 3- 4 ವಾರಗಳ ಕಾಲ ಸಂಗ್ರಹಿಸಿಡಬಹುದು.
ಸೋಯಾ
ಬೇಕಾಗುವ ಸಾಮಗ್ರಿಗಳು
.ಸೋಯಾ ಕಾಳು- 1 ಚಮಚ
.ಉದ್ದಿನ ಬೇಳೆ- 1 ಚಮಚ
.ಒಣ ಮೆಣಸು- 4
.ಹುಣಸೆಹಣ್ಣು- ಸ್ವಲ್ಪ
.ಕರಿಬೇವು- 2 ಎಲೆ
. ಉಪ್ಪು- ರುಚಿಗೆ
.ಸಾಸಿವೆ- ಸ್ವಲ್ಪ
.ಎಣ್ಣೆ- ಸ್ವಲ್ಪ
.ಇಂಗು- ಚಿಟಿಕೆ
.ಬೆಳ್ಳುಳ್ಳಿ- 2 ಎಸಳು
.ತೆಂಗಿನಕಾಯಿ ತುರಿ- 2 ಕಪ್
ಮಾಡುವ ವಿಧಾನ
ಬಾಣಲೆಯಲ್ಲಿ ಸೋಯಾ, ಉದ್ದಿನ ಬೇಳೆಯನ್ನು ಬೇರೆಬೇರೆಯಾಗಿ ಕೆಂಪಗೆ ಹುರಿದು ತೆಗೆದಿಡಿ. ಒಣ ಮೆಣಸು,
ಕರಿಬೇವು, ಇಂಗು, ಬೆಳ್ಳುಳ್ಳಿಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಹುಣಸೆ ಹಣ್ಣು ಸ್ವಲ್ಪ ಬಿಸಿ ಮಾಡಿ ನೀರಿನಲ್ಲಿ
ನೆನೆಸಿಡಿ. ಮಿಕ್ಸಿಯಲ್ಲಿ ತೆಂಗಿನ ತುರಿ, ಹಣಸೆ, ಉಪ್ಪು ಮತ್ತು ಎಲ್ಲ ಸಾಮಗ್ರಿಗಳನ್ನು ಹಾಕಿ ರುಬ್ಬಿ. ಅಗತ್ಯವಿದ್ದರೆ ನೀರು ಸೇರಿಸಿ. ಚಟ್ನಿಯ ಹದಕ್ಕೆ ಕಲಸಿ. ಎಣ್ಣೆ, ಸಾಸಿವೆ, ಕರಿಬೇವಿನ ಒಗ್ಗರಣೆ ಮಾಡಿ ಚಟ್ನಿಗೆ ಬೆರೆಸಿ.
ಕೆಂಪು ಮೆಣಸು
ಬೇಕಾಗುವ ಸಾಮಗ್ರಿಗಳು
.ಕರಿಬೇವು- ಕಾಲು ಬಟ್ಟಲು
.ಕೊತ್ತಂಬರಿ- ಕಾಲು ಬಟ್ಟಲು
.ಈರುಳ್ಳಿ- 2 ಹೆಚ್ಚಿದ್ದು
.ಮೆಣಸು- 6-7
.ಬೆಲ್ಲ- ನಿಂಬೆ ಗಾತ್ರದ್ದು
.ಹುಣಸೆ- ಸ್ವಲ್ಪ
.ಬೆಳ್ಳುಳ್ಳಿ- 4- 5 ಎಸಳು
.ಉಪ್ಪು- ರುಚಿಗೆ
.ಎಣ್ಣೆ- ಕಾಲು ಬಟ್ಟಲು
.ಮೆಂತೆ- ಕಾಲು ಚಮಚ
. ಜೀರಿಗೆ- ಅರ್ಧ ಚಮಚ
ಮಾಡುವ ವಿಧಾನ
ಜೀರಿಗೆ, ಮೆಂತೆ, ಮೆಣಸನ್ನು ಹುರಿದು ಪುಡಿ ಮಾಡಿ. ಅರ್ಧ ಬಟ್ಟಲು ನೀರಿನಲ್ಲಿ ಬೆಲ್ಲ, ಹುಣಸೆಯನ್ನು ನೆನೆಸಿಡಿ. ಹುರಿದು ಪುಡಿ ಮಾಡಿಟ್ಟ ಸಾಮಗ್ರಿಗಳಿಗೆ ಹುರಿದ ಈರುಳ್ಳಿ, ಕೊತ್ತಂಬರಿ, ಕರಿಬೇವು ಸೇರಿಸಿ. ಬೆಲ್ಲ, ನೀರಿನೊಂದಿಗೆ ಬೆಳ್ಳುಳ್ಳಿ, ಉಪ್ಪು ಹಾಕಿ ರುಬ್ಬಿಕೊಳ್ಳಿ. ಎಣ್ಣೆ ಬಿಸಿ ಮಾಡಿ ರುಬ್ಬಿದ ಚಟ್ನಿಗೆ ಹಾಕಿ ಚೆನ್ನಾಗಿ ಹುರಿದರೆ ಕೆಂಪು ಮೆಣಸಿನ ಚಟ್ನಿ ಸವಿಯಲು ಸಿದ್ಧ
ವಿದ್ಯಾ ಕೆ. ಇರ್ವತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.