ತರಕಾರಿ ರವೆ ರೋಸ್ಟ್
Team Udayavani, Mar 1, 2020, 12:46 AM IST
ರವೆಯಿಂದ ಇಡ್ಲಿ, ದೋಸೆ ಮಾಡಿ ರುಚಿ ನೋಡಿದ್ದೀರಿ. ಆದರೆ ಸಂಜೆಯ ಲಘು ಉಪಾಹಾರಕ್ಕೆ ರವೆಯಿಂದ ಏನಾದರೂ ಮಾಡಬಹುದಾ ಎಂದು ಆಲೋಚಿಸಿದರೆ ಏನ್ ಮಾಡಬಹುದು ಎಂಬ ಚಿಂತೆ ಎಲ್ಲರನ್ನೂ ಕಾಡತೊಡಗುತ್ತದೆ. ಅದಕ್ಕಾಗಿ ಇಲ್ಲಿದೆ ಒಂದು ಸುಲಭ ಐಡಿಯಾ.
ರವೆಯಿಂದ ವಿವಿಧ ಬಗೆಯ ತರಕಾರಿಗಳನ್ನು ಸೇರಿಸಿ ರುಚಿರುಚಿಯಾದ ಟೋಸ್ಟ್ ತಯಾರಿಸಬಹುದು.ರವೆಯಲ್ಲಿ ವಿಟಮಿನ್ ಎ, ಬಿ, ಸಿ, ಕ್ಯಾಲಿÏಯಂ, ಕಬ್ಬಿಣ ಮತ್ತು ಸೋಡಿಯಂ ಗುಣಗಳಿರುವುದರಿಂದ ಆರೋಗ್ಯಕರವಾದ ಟೋಸ್ಟ್ ಅನ್ನು ಸುಲಭವಾಗಿ ಮಾಡಬಹುದು. ಫ್ರೆಂಚ್ ಶೈಲಿಯ ಈ ರೋಸ್ಟ್ ಅನ್ನು ಕಾಫಿ, ಟೀ ಯೊಂದಿಗೆ ಸವಿಯಲು ಹಿತವಾಗಿರುತ್ತದೆ. ಒಮ್ಮೆ ಸವಿದರೆ ಮತ್ತೆಮತ್ತೆ ತಿನ್ನಬೇಕು ಎನ್ನುವ ಬಯಕೆಯನ್ನು ಕೆರಳಿಸುವ ಈ ತಿಂಡಿ ಅತಿಥಿಗಳಿಗೂ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.
ಬೇಕಾದ ಸಾಮಗ್ರಿಗಳು
ಬ್ರೆಡ್ ಸ್ಲೆಸ್- 8- 10, ಸೂಜಿ ರವೆ- 150 ಗ್ರಾಂ, ಮೊಸರು- 100 ಗ್ರಾಂ, ನೀರು- ಅಗತ್ಯಕ್ಕೆ ತಕ್ಕಷ್ಟು, ಕಪ್ಪು ಕಾಳುಮೆಣಸು- ಅರ್ಧ ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ- 1 ಚಮಚ, ದೊಡ್ಡ ಗಾತ್ರದ ಈರುಳ್ಳಿ- 1 ಹೆಚ್ಚಿರುವುದು, ದೊಡ್ಡ ಗಾತ್ರದ ಟೊಮೊಟೊ- 1 ಹೆಚ್ಚಿರುವುದು, ಹಸಿಮೆಣಸು – ಸ್ವಲ್ಪ, ಕ್ಯಾಪ್ಸಿಕಂ- ಅರ್ಧ ಕಪ್, ಕೊತ್ತಂಬರಿ ಸೊಪ್ಪು- ಅಗತ್ಯಕ್ಕೆ ತಕ್ಕಷ್ಟು, ಬೆಣ್ಣೆ ಅಥವಾ ತುಪ್ಪ ಅಗತ್ಯಕ್ಕೆ ತಕ್ಕಷ್ಟು ತೆಗೆದಿಟ್ಟಿರಿ.
ವಿಧಾನ: ಒಂದು ಬೌಲ್‌ನಲ್ಲಿ ಮೊಸರು, ಕರಿಮೆಣಸು, ಸೂಜಿ ರವೆ, ಉಪ್ಪು, ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ 10 ನಿಮಿಷಗಳ ಕಾಲ ಮಿಶ್ರಗೊಳ್ಳಲು ಬಿಡಿ. ಹೆಚ್ಚಿಕೊಂಡ ಈರುಳ್ಳಿ, ಟೊಮೇಟೋ, ಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಇದಕ್ಕೆ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಈ ಮಿಶ್ರಣವನ್ನು ಬ್ರೆಡ್ ಸ್ಲೆ„ಸ್ ಮೇಲೆ ಹಾಕಿ ಪ್ಯಾನ್‌ನಲ್ಲಿ ತುಪ್ಪ ಅಥವಾ ಬೆಣ್ಣೆಯನ್ನು ಹಾಕಿ ಬ್ರೆಡ್ ಸ್ಲೆ„ಸ್ ಅನ್ನು ಎರಡೂ ಬದಿಯಲ್ಲೂ ಹೊಂಬಣ್ಣ ಬರುವವರೆಗೆ ರೋಸ್ಟ್ ಮಾಡಿಕೊಳ್ಳಿ. ಅನಂತರ ತ್ರಿಭುಜಾಕೃತಿಯಲ್ಲಿ ಕತ್ತರಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
ಇದರ ಪೋಷಕಾಂಶವನ್ನು ಇನ್ನೂ ಹೆಚ್ಚಿಸ ಬೇಕಿದ್ದರೆ ಹೆಚ್ಚಿನ ತರಕಾರಿಯನ್ನೂ ಸೇವಿಸಬಹುದು. ಆದರೆ ಬ್ರೆಡ್‌ನ ಎರಡೂ ಬದಿ ಅತಿಯಾಗಿ ಮಿಶ್ರಣವನ್ನು ಸೇರಿಸದಿರಿ. ಜತೆಗೆ ಎರಡೂ ಬದಿ ಚೆನ್ನಾಗಿ ಬೇಯಬೇಕು. ಆಗ ಮಾತ್ರ ಅದರ ರುಚಿ ಹೆಚ್ಚಾಗುವುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.