![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Jan 14, 2020, 4:55 AM IST
ಪತಂಜಲಿ ಮಹರ್ಷಿಗಳು ಯೋಗ ಎಂದರೆ ಯೋಗಶ್ಚಿತ್ತ ವೃತ್ತಿ ನಿರೋಧ ಎನ್ನುತ್ತಾರೆ. ಚಿತ್ತವೃತ್ತಿಯನ್ನು ನಿರೋಧಿ ಸುವುದು ಯೋಗದ ಉದ್ದೇಶ. ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬ 8 ಹಂತಗಳಿವೆ.
ಯಮವೆಂದರೆ: ಇಂದ್ರಿಯಗಳನ್ನು ಬಿಗಿಹಿಡಿ ಯುವುದು, ಕೆಲವು ಬಗೆಯ ಆಹಾರ, ಅಭ್ಯಾಸಗ ಳನ್ನು ಬಿಡುವುದು. ನಿಯಮವೆಂದರೆ: ಪಾಲನೆ, ಅನು ಷ್ಠಾನ, ಮನಸ್ಸಿನ ಪ್ರವೃತ್ತಿಗಳಿಗೆ ಸಂಬಂಧಿಸಿದ ವಿಧಿನಿ ಯಮಗಳು. ಆಸನವೆಂದರೆ: ದೇಹದ ಭಂಗಿ, ವಿನ್ಯಾಸ, ಅಂಗವಿನ್ಯಾಸ, ಸುಖವಾಗಿಯೂ ಇರಬೇಕು, ಆಸನ. ಪ್ರಾಣಾಯಾಮ: ಉಸಿರಾಟದ ಮೇಲಿನ ಹತೋಟಿ, ಒಳಗೆಳೆದುಕೊಂಡು ಉಸಿರನ್ನು ದೀರ್ಘ ಕಾಲ ಬಿಗಿಹಿಡಿಯುವುದು. ಪ್ರತ್ಯಾಹಾರ: ಇಂದ್ರೀಯಗಳನ್ನು ಅವುಗಳ ಹೊರಗಿನ ಕೆಲಸದಿಂದ ಹಿಂದಕ್ಕೆ ಸೆಳೆದು ಮನಸ್ಸಿನ ವಿವರಗಳನ್ನು ಒಂದೆಡೆ ಕೂಡಿಸುವುದು. ಧ್ಯಾನ: ಏಕಮನಸ್ಸಿನಿಂದ ಚಿತ್ತ ವೃತ್ತಿಗಳನ್ನು ಕೇಂದ್ರೀಕರಿಸುವುದು. ಧಾರಣ: ಈ ಧ್ಯಾನವನ್ನು ಹಿಡಿದು, ಅದು ಹೆಚ್ಚುವಂತೆ ಮಾಡು ವುದು. ಸಮಾಧಿ: ಹೊರಗಿನ ಎಲ್ಲ ಚಟುವಟಿಕೆಗಳ ಸಂಪರ್ಕವನ್ನು ಬಿಟ್ಟು ಮನಸ್ಸಿನ ಎಲ್ಲ ನೆಲೆಗಳನ್ನೂ ವಿವರಗಳನ್ನೂ ತನ್ನೊಳಗೇ ಇಡುವುದು.
You seem to have an Ad Blocker on.
To continue reading, please turn it off or whitelist Udayavani.