ಅಂದದ ಮನೆಗೊಂದು ಚೆಂದದ ಬುಕ್‌ಶೆಲ್ಫ್
Team Udayavani, Sep 7, 2019, 5:07 AM IST
ಭಾರೀ ಖರ್ಚು ಮಾಡಿ ದೊಡ್ಡ ಮನೆ ಕಟ್ಟಿದರೆ ಸಾಲದು, ಮನೆಯನ್ನು ಅಷ್ಟೇ ಚೆನ್ನಾಗಿ ಅಲಂಕರಿಸಲೂ ತಿಳಿದಿರಬೇಕು. ಅಲಂಕಾರ ಎಂದರೆ ಪೀಠೊಪಕರಣ, ಪೈಂಟಿಂಗ್, ಕಲಾಕೃತಿಗಳು ಎಂದು ದುಬಾರಿ ಬೆಲೆಯ ವಸ್ತುಗಳನ್ನೆಲ್ಲ ತಂದು ತುಂಬಿಸುವುದಿಲ್ಲ. ಮನೆಯಲ್ಲಿ ನಮ್ಮ ಅಭಿರುಚಿಗೊಪ್ಪುವ ವಸ್ತುಗಳನ್ನು ಒಪ್ಪಓರಣವಾಗಿಟ್ಟುಕೊಂಡು ಆನಂದಿಸುವುದು. ಹೀಗೆ ಆನಂದ ಕೊಡುವ ವಸ್ತುಗಳಲ್ಲಿ ಬುಕ್‌ಶೆಲ್ಫ್ ಕೂಡಾ ಒಂದು.
ಅಂದವಾದ ಬುಕ್‌ಶೆಲ್ಫ್ ಮಾಡಿಕೊಂಡರೆ ಅದು ಮನೆಗೊಂದು ವಿಶಿಷ್ಟವಾದ ನೋಟವನ್ನು ಕೊಡುತ್ತದೆ ಅದರೊಂದಿಗೆ ನಮ್ಮ ಆಸಕ್ತಿ ಅಭಿರುಚಿಗಳನ್ನು ಕೂಡ ವ್ಯಕ್ತಪಡಿಸುತ್ತದೆ.
ಪುಸ್ತಕವೊಂದು ಜೊತೆಗಿದ್ದರೆ ಉತ್ತಮವಾದ ಗೆಳೆಯನೊಬ್ಬ ಜೊತೆಗಿದ್ದಂತೆ ಎನ್ನುತ್ತೇವೆ. ಅದೇ ರೀತಿ ಚೆಂದದ ಬುಕ್‌ಶೆಲ್ಫ್ ಮನೆಯಲ್ಲಿದ್ದರೆ ಮನೆಯಲ್ಲಿ ಖಾಯಂ ಆಗಿ ಓರ್ವ ಗೆಳೆಯ ಇದ್ದಂತೆ.
ವ್ಯಕ್ತಿತ್ವದ ಪ್ರತಿಬಿಂಬಿ: ನಮ್ಮ ವ್ಯಕ್ತಿತ್ವವನ್ನು ಮನೆಯಲ್ಲಿರುವ ಬುಕ್‌ಶೆಲ್ಫ್ ಪ್ರತಿಬಿಂಬಿಸುತ್ತದೆ. ನಮ್ಮ ಹವ್ಯಾಸ ಮತ್ತು ಆಸಕ್ತಿಗಳ ಪ್ರತಿರೂಪ ನಾವು ಹೊಂದಿರುವ ಬುಕ್‌ಶೆಲ್ಫ್. ಇಷ್ಟದ ಬಣ್ಣ ಹಾಗೂ ಶೈಲಿ ಮತ್ತು ಬಜೆಟ್‌ಗೆ ಹೊಂದುವ ಬುಕ್‌ಶೆಲ್ಫ್ನ್ನು ಖರೀದಿಸಿ ಮನೆಯಲ್ಲಿ ಇಷ್ಟವಾದ ಸ್ಥಳವನ್ನು ಆಯ್ಕೆಮಾಡಿಕೊಂಡು ಚಿಕ್ಕದಾದ ಗ್ರಂಥಾಲಯವನ್ನು ಮಾಡಿಕೊಂಡಿಕೊಳ್ಳಿ.
ಜೀವಂತಿಕೆಯ ಪ್ರತೀಕ: ಪೀಠೊಪಕಾರಣಗಳು ನಿರ್ಜೀವಿಗಳು. ಆದರೆ ಬುಕ್‌ಶೆಲ್ಫ್ ಜೀವಂತಿಕೆ ಇರುವ ಕ್ರಿಯಾಶೀಲತೆಯಿಂದ ಕೂಡಿರುವ ಒಂದು ಪಿಠೊಪಕರಣ. ಇದು ಮನೆಯಲ್ಲಿರುವವರ ಅಭಿರುಚಿ ಹಾಗೂ ಚಿಂತನೆಗಳು ಪ್ರದರ್ಶಿಸುತ್ತದೆ.
•ಪೂರ್ಣಿಮಾ ಪೆರ್ಣಂಕಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.