ಡಿಜಿಟಲ್ ಹೆಜ್ಜೆ ವ್ಯಾಪಾರ ವೃದ್ಧಿಗೆ ಕಂಪೆನಿಗಳ ನೆರವಿನ ಹಸ್ತ
Team Udayavani, Mar 2, 2020, 5:55 AM IST
ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳು ಇಂಟರ್ನೆಟ್ ಮತ್ತು ಇ-ಕಾಮರ್ಸ್ ಸೌಲಭ್ಯಗಳ ನೆರವು ಪಡೆದುಕೊಳ್ಳಬೇಕು. ಇದರಿಂದಾಗಿ ಗ್ರಾಹಕರ ಸಂಖ್ಯೆ ಹೆಚ್ಚುತ್ತದೆ ಎನ್ನುವುದು ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ತಜ್ಞರ ವಾದ. ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳಲ್ಲಿ ಇದುವರೆಗೆ 26 ದಶಲಕ್ಷ ಸಂಸ್ಥೆಗಳು ಗೂಗಲ್ ಆ್ಯಪ್‌ನೆರವಿನಿಂದ ಡಿಜಿಟಲ್ ವ್ಯವಹಾರ ನಡೆಸಲು ಸಾಧ್ಯವಾಗಿದೆ. ಸುಮಾರು 10 ಲಕ್ಷ ಸಂಸ್ಥೆಗಳು ಗೂಗಲ್ ಮೈ ಬಿಸಿನೆಸ್ ಸೌಲಭ್ಯ ಬಳಸಿ ಜಾಲತಾಣಗಳನ್ನು ನಿರ್ಮಿಸಿಕೊಂಡಿವೆ, ಎಂದು ಗೂಗಲ್ ಸಂಸ್ಥೆಯ ವಕ್ತಾರರು ಹೇಳಿಕೊಂಡಿದ್ದಾರೆ. ಇ- ಕಾಮರ್ಸ್ ದೈತ್ಯ ಅಮೆಜಾನ್ 100 ಕೋಟಿ ಡಾಲರ್‌ಗಳನ್ನು ಖರ್ಚು ಮಾಡಿ, ಭಾರತದ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಸ್ಥೆಗಳಿಗೆ ಅಗತ್ಯ ಡಿಜಿಟಲ್ ತಂತ್ರಜ್ಞಾನ ಮತ್ತು ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ.
ಇದರಿಂದಾಗಿ 2025ರ ಹೊತ್ತಿಗೆ ಈ ಸಂಸ್ಥೆಗಳು ಭಾರತದಿಂದ ಸುಮಾರು 1000 ಕೋಟಿ ಡಾಲರ್ ಮೌಲ್ಯದ ಉತ್ಪನ್ನಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುವ ಸಾಮರ್ಥ್ಯವನ್ನು ಹೊಂದಲಿವೆ ಎನ್ನುವುದು ಅಮೆಜಾನ್ ಅಭಿಪ್ರಾಯ.
ಬಹುರಾಷ್ಟ್ರೀಯ ಸಂಸ್ಥೆ ವಾಲ್ಮಾರ್ಟ್ ಕೂಡ, ಭಾರತದ 50,000 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಡಿಜಿಟಲ್ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ನೀಡುವ ಕುರಿತು ತರಬೇತಿ, ಮಾರ್ಗದರ್ಶನ ನೀಡಿ, ಈ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಸಾಧ್ಯವಾಗುವಂತೆ ವ್ಯವಸ್ಥೆ ರೂಪಿಸುತ್ತಿದೆ. ಇವೆÇÉಾ ಒಳ್ಳೆಯ ಬೆಳವಣಿಗೆಯೇ ಆದರೆ ಇವುಗಳ ಮೊರೆ ಹೋಗುವ ಮುನ್ನ ವ್ಯಾಪಾರಸ್ಥರು ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
ಬಹುರಾಷ್ಟ್ರೀಯ ಕಂಪನಿಗಳ ನೆರವು
ಗೂಗಲ್, ವಾಲ್ಮಾರ್ಟ್, ಫೇಸುಬುಕ್, ಡೆಲ್ ಸಿಸ್ಕೋ, ಅಮೆಜಾನ್ ಹೀಗೆ ಸಾಲು ಸಾಲಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಂಸ್ಥೆಗಳಿಗೆ ನೆರವು ನೀಡಲು ಮುಂದಾಗುತ್ತಿರುವೆ. ಇದು, ಡಿಜಿಟಲ್ ಸಾಕ್ಷರತೆ ದೃಷ್ಟಿಯಿಂದ ಸ್ವಾಗತಾರ್ಹ. ಆದರೆ, ಈ ರೀತಿ ನೆರವು ಪಡೆದ ಎಲ್ಲ ಭಾರತೀಯ ಸಂಸ್ಥೆಗಳಿಗೆ ದೇಶ ವಿದೇಶಗಳಲ್ಲಿ ಹೆಚ್ಚು ಗ್ರಾಹಕರು ಸಿಗುತ್ತಾರೆ ಎನ್ನಲು ಸಾಧ್ಯವಿಲ್ಲ. ನಿಮ್ಮ ಉತ್ಪನ್ನಗಳು ಹೆಚ್ಚು ಗ್ರಾಹಕರನ್ನು ತಲುಪಲು, ಅವರ ಜಾಹೀರಾತು ಸೇವೆಯನ್ನು ಬಳಸಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು, ಆ ಸಂಸ್ಥೆಯ ಪರಿಣತರ ಸಹಾಯವನ್ನೂ ಪಡೆಯಬಹುದು. ಗ್ರಾಹಕರಿಗೆ ಯಾವ ಉತ್ಪನ್ನಗಳು ಬೇಕಾಗಿವೆ ಎಂದು ತಿಳಿಸುವ ಡೇಟಾ ವಿಶ್ಲೇಷಣೆ ಸೇವೆ, ಮತ್ತಿತರ ಮೌಲ್ಯಾಧಾರಿತ ಸೇವೆಗಳನ್ನು ಸಣ್ಣ ಮತ್ತು ಮಧ್ಯಮ ವಾಣಿಜ್ಯ ಸಂಸ್ಥೆಗಳಿಗೆ ಮಾರಾಟ ಮಾಡುವುದರ ಮೂಲಕ ಹಣ ಗಳಿಸುವ ಉದ್ದೇಶವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಇರುತ್ತದೆ.
ಸೂಕ್ತ ಬೆಲೆ ನಿಗದಿ ಪಡಿಸಿ
ಇ-ಕಾಮರ್ಸ್ ಸಂಸ್ಥೆಗಳ ಜಾಲತಾಣಗಳಲ್ಲಿ ಉತ್ಪನ್ನ ಅಥವಾ ಸೇವೆಗಳನ್ನು ಮಾರಾಟ ಮಾಡಲು ನೋಂದಣಿ ಮಾಡಿಕೊಳ್ಳುವುದು ಸುಲಭ. ಆದರೆ, ಮಾರಾಟವಾದ ಉತ್ಪನ್ನಗಳ ಮೌಲ್ಯದಲ್ಲಿ ಇ-ಕಾಮರ್ಸ್ ಸಂಸ್ಥೆಗೆ ನೀಡಬೇಕಾದ ಕಮಿಷನ್, ಸೇವಾ ಶುಲ್ಕಗಳನ್ನು ಕಳೆದು ಎಷ್ಟು ಲಾಭ ಪಡೆಯಬಹುದು ಎಂಬುದರ ಬಗ್ಗೆ ವ್ಯಾಪಾರಸ್ಥರು, ಕೈಗಾರಿಕಾ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೆಚ್ಚು ವಹಿವಾಟು ನಡೆಸುವ ಉದ್ದೇಶದಿಂದ ಮೆಗಾ ಸೇಲ್‌ಗಳನ್ನು ಇ-ಕಾಮರ್ಸ್ ಸಂಸ್ಥೆಗಳು ಭಾರತದಲ್ಲಿ ಕೂಡ ನಡೆಸುತ್ತವೆ. ಆ ಸಮಯದಲ್ಲಿ ಹೆಚ್ಚಿನ ರಿಯಾಯಿತಿಯನ್ನು ಘೋಷಿಸುವುದು ಭಾರತದ ವ್ಯಾಪಾರಸ್ಥರಿಗೆ ಅನಿವಾರ್ಯವಾಗಬಹುದು.
ಉತ್ಪನ್ನ ಮಾರಾಟದ ಜತೆಗೆ ಗ್ರಾಹಕರಿಗೆ ಉತ್ಪನ್ನವನ್ನು ತಲುಪಿಸಲು ಆಗುವ ವೆಚ್ಚವನ್ನು ಕೂಡ ಭಾರತದ ವಾಣಿಜ್ಯ ಸಂಸ್ಥೆಗಳು ನೀಡಬೇಕು ಎಂದು ಕೆಲವು ಬಾರಿ ಇ-ವಾಣಿಜ್ಯ ಸಂಸ್ಥೆಗಳು ಒತ್ತಾಯಿಸಿದ ಪ್ರಸಂಗಗಳಿವೆ. ಇನ್ನು ಯಾವುದೇ ಕಾರಣಕ್ಕಾಗಿ ಗ್ರಾಹಕ ತಾನು ಖರೀದಿಸಿದ ಉತ್ಪನ್ನವನ್ನು, ನಿರ್ದಿಷ್ಟ ಅವಧಿಯಲ್ಲಿ ಹಿಂತಿರುಗಿಸಿದರೆ, ಅದಕ್ಕೆ ಪ್ರತಿಯಾಗಿ ಹೊಸ ಉತ್ಪನ್ನವನ್ನು ನೀಡುವುದು ಅಥವಾ ಗ್ರಾಹಕನಿಗೆ ಹಣ ಹಿಂತಿರುಗಿಸುವುದು ಭಾರತದ ವಾಣಿಜ್ಯ ಸಂಸ್ಥೆಯ ಹೊಣೆಯಾಗುತ್ತದೆ. ಇಂಥ ಎಲ್ಲ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕಳೆದು, ಲಾಭ ಗಳಿಸಲು ತಮ್ಮ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿಪಡಿಸಬೇಕಾಗುತ್ತದೆ.
-ಉದಯಶಂಕರ ಪುರಾಣಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.