ಮಣ್ಣಿನ ಗುಣಮಟ್ಟ ಕಾಯ್ದುಕೊಂಡರಷ್ಟೇ ಉತ್ತಮ ಫಸಲಿನ ನಿರೀಕ್ಷೆ
Team Udayavani, Dec 29, 2019, 5:49 AM IST
ಜೀವರಾಶಿಯನ್ನು ಒಳಗೊಂಡಿರುವ ಭೂಮಿಯು ಸಸ್ಯಗಳಿಗೆ ಆಧಾರ ಕೊಡುವುದರ ಜತೆಗೆ, ಅವುಗಳ ಬೆಳವಣಿಗೆಗೆ ಆವಶ್ಯವಿರುವ ನೀರು ಮತ್ತು ಎಲ್ಲ ಪೋಷಕಾಂಶಗಳನ್ನು ನೀಡುತ್ತದೆ. ಇಂತಹ ಸಂದರ್ಭದಲ್ಲಿ ಮಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳುವುದೂ ಕರ್ತವ್ಯವೂ ಹೌದು.
ಕೃಷಿ ಯಾವುದೇ ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಮಣ್ಣಿನ ಗುಣವನ್ನು ಅನುಸರಿಸಿಕೊಂಡು ಮಾಡಬೇಕಾಗುತ್ತದೆ. ಮಲೆನಾಡು ಭಾಗದಲ್ಲಿ ಕೃಷಿಯ ಪ್ರಮಾಣ ಸಾಕಷ್ಟಿದ್ದರೂ ಇಲ್ಲಿನ ರೈತರು ಮಣ್ಣಿನ ಪರೀಕ್ಷಾ ಕೇಂದ್ರವನ್ನು ಅವಲಂಬಿಸದೆ ತಮ್ಮಲ್ಲಿರುವ ಕೃಷಿ ಜ್ಞಾನದ ವಿವೇಚನೆಯಲ್ಲೇ ಮಣ್ಣಿನ ಗುಣವನ್ನು ತಿಳಿದುಕೊಳ್ಳುತ್ತಿದ್ದಾರೆ.
ಮಣ್ಣಿನ ಮಾದರಿಯ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ಮಾಡಿ ಆ ಮಣ್ಣಿನ ಆರೋಗ್ಯದ ಕುರಿತು ತಿಳಿದುಕೊಳ್ಳುವುದು ಇಂದಿನ ಕೃಷಿ ಕ್ಷೇತ್ರದ ಅಗತ್ಯ. ಜೀವರಾಶಿಯನ್ನು ಒಳಗೊಂಡಿರುವ ಭೂಮಿಯು ಸಸ್ಯಗಳಿಗೆ ಆಧಾರ ಕೊಡುವುದರ ಜತೆಗೆ, ಅವುಗಳ ಬೆಳವಣಿಗೆಗೆ ಆವಶ್ಯವಿರುವ ನೀರು ಮತ್ತು ಎಲ್ಲ ಪೋಷಕಾಂಶಗಳನ್ನು ನೀಡುತ್ತದೆ. ಇಂತಹ ಸಂದರ್ಭದಲ್ಲಿ ಮಣ್ಣನ್ನು ಆರೋಗ್ಯವಾಗಿಟ್ಟುಕೊಳ್ಳುವುದೂ ಕರ್ತವ್ಯವೂ ಹೌದು.
ಕೃಷಿ ಯಾವುದೇ ಆದರೂ ನಿರೀಕ್ಷಿತ ಫಲಿತಾಂಶ ಪಡೆಯಲು ಮಣ್ಣಿನ ಗುಣವನ್ನು ಅನುಸರಿಸಿಕೊಂಡು ಮಾಡಬೇಕಾಗುತ್ತದೆ. ಮಲೆನಾಡು ಭಾಗದಲ್ಲಿ ಕೃಷಿಯ ಪ್ರಮಾಣ ಸಾಕಷ್ಟಿದ್ದರೂ ಇಲ್ಲಿನ ರೈತರು ಮಣ್ಣಿನ ಪರೀಕ್ಷಾ ಕೇಂದ್ರವನ್ನು ಅವಲಂಭಿಸದೆ ತಮ್ಮಲ್ಲಿರುವ ಕೃಷಿ ಜ್ಞಾನದ ವಿವೇಚನೆಯಲ್ಲೇ ಮಣ್ಣಿನ ಗುಣವನ್ನು ತಿಳಿದುಕೊಳ್ಳುತ್ತಿದ್ದಾರೆ.
ಪರೀಕ್ಷೆ ಹೀಗಿರಲಿ
ಜಮೀನಿನ ಮಣ್ಣನ್ನು, ಪರೀಕ್ಷೆಗೆ ಒಳಪಡಿಸಬೇಕಾದಾಗ ಆ ಜಮೀನಿನಲ್ಲಿರುವ ಎಲ್ಲ ಮಣ್ಣನ್ನು ಸಂಗ್ರಹಿಸುವುದು, ವಿಶ್ಲೇಷಣೆಗೆ ಒಳಪಡಿಸುವುದು ಕಷ್ಟಸಾಧ್ಯ. ಈ ಕಾರಣದಿಂದ ಕೆಲವು ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸುವುದು ಆವಶ್ಯಕ. ಹೀಗೆ ಸಂಗ್ರಹಿಸಿದ ಮಣ್ಣಿನ ಮಾದರಿಗಳು ಜಮೀನಿನ ಪರಿಸ್ಥಿತಿಗಳನ್ನು ಪ್ರತಿನಿಧಿಸುವ ಮಾದರಿಯಾಗಿದ್ದರೆ ಹೆಚ್ಚು ಪ್ರಯೋಜನಕಾರಿ ಎನ್ನುವುದು ಕೃಷಿ ತಜ್ಞರ ಅಭಿಮತ.
ಪ್ರಯೋಜನ
ಮಣ್ಣು ಪರೀಕ್ಷೆಯ ಆಧಾರದಲ್ಲಿ ರಾಸಾಯನಿಕ ಗೊಬ್ಬರ ಬಳಕೆಗೂ ಕ್ರಮವನ್ನು ಕಂಡುಕೊಳ್ಳಬಹುದು. ಹೈಬ್ರಿಡ್ ಮತ್ತು ಅಧಿಕ ಇಳುವರಿ ಕೊಡುವ ಸುಧಾರಿತ ತಳಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಸ್ಯ ಪೋಷಕಾಂಶಗಳನ್ನು ಬಳಸಿಕೊಳ್ಳುವ ಸಾಮರ್ಥ್ಯವಿದೆ. ಸಂಶೋಧನೆ ಆಧಾರದ ಮೇಲೆ ವಿವಿಧ ಬೆಳೆಗಳಿಗೆ ಸಾಧಾರಣ ಫಲವತ್ತೆಯ ಸನ್ನಿವೇಶದಲ್ಲಿ ಕೊಡಬೇಕಾದ ರಾಸಾಯನಿಕ ಗೊಬ್ಬರಗಳ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮೂರು ಪ್ರಧಾನ ಸಸ್ಯ ಪೋಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೊಟ್ಯಾಶ್ ದೊರೆಯುವ ಪ್ರಮಾಣವನ್ನು, ಲಘು ಪೋಷಕಾಂಶಗಳನ್ನು ನಿರ್ಧರಿಸಲಾಗುತ್ತದೆ.
ಇಲಾಖೆಯ ಮೂಲಕ ಪರೀಕ್ಷೆ
ಮಂಗಳೂರಿನ ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ. ಆದರೆ ತಾಲೂಕು ವ್ಯಾಪ್ತಿಗಳಲ್ಲಿರುವ ಕೃಷಿ ಇಲಾಖೆಗಳ ರೈತ ಸಂಪರ್ಕ ಕೇಂದ್ರದ ಮೂಲಕ ರೈತರ ಜಮೀನುಗಳಲ್ಲಿ ಜಿಪಿಎಸ್ ಮೂಲಕ ಹಂತ ಹಂತವಾಗಿ ಮಣ್ಣು ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ. ವೈಯಕ್ತಿಕ ನೆಲೆಯಲ್ಲಿ ಈ ವ್ಯವಸ್ಥೆ ಇಲ್ಲ. ಕೃಷಿ ಇಲಾಖೆಯ ಮೂಲಕ ರೈತರ ಜಮೀನುಗಳಲ್ಲಿ ಮಣ್ಣಿನ ಪರೀಕ್ಷೆ ಕಾಲ ಕಾಲಕ್ಕೆ ನಡೆಯುತ್ತದೆ.
ಹೀಗೆ ಮಾಡಬೇಡಿ
ಮಣ್ಣಿನ ಮಾದರಿಗಳನ್ನು ಸಂಗ್ರಹಿಸುವಾಗ ತಿಪ್ಪೆಗುಂಡಿ, ಬದುಗಳ ಪಕ್ಕ, ಮರದ ಕೆಳಗೆ ಮಣ್ಣು ಮಾದರಿಗಳನ್ನು ತೆಗೆಯಬಾರದು, ಮಣ್ಣಿಗೆ ಗೊಬ್ಬರ ಸೇರಿಸಿದ ಅನಂತರ ಮಾದರಿಗಳನ್ನು ತೆಗೆಯಬಾರದು, ರಸ ಗೊಬ್ಬರದ ಚೀಲಗಳಲ್ಲಿ ತುಂಬಬಾರದು. ಬೆಳೆಯ ಸಾಲುಗಳಲ್ಲಿ ಮಣ್ಣಿನ ಮಾದರಿಯನ್ನು ತೆಗೆಯಬಾರದು.
ಪರೀಕ್ಷೆಯ ಉದ್ದೇಶವಿದು
ಮಣ್ಣಿನಲ್ಲಿರುವ ಪೋಷಕಾಂಶಗಳ ಲಭ್ಯತೆಯ ಪ್ರಮಾಣ ತಿಳಿಯಲು
ಬೆಳೆಗಳಿಗೆ ಹಾಕುವ ಹಾಗೂ ಹಾಕಬೇಕಾದ ಗೊಬ್ಬರದ ಪ್ರಮಾಣ ನಿರ್ಧರಿಸಲು
ಸವಳು, ಹುಳಿ, ಕ್ಷಾರ ಮಣ್ಣುಗಳ ಕುರಿತು ತಿಳಿದುಕೊಳ್ಳಲು
ಮಣ್ಣಿಗೆ ಪೂರಕವಾದ ಬೆಳೆಯನ್ನು ನಿರ್ಧರಿಸಲು
ರಸಗೊಬ್ಬರದ ಖರ್ಚಿನಲ್ಲಿ ಉಳಿತಾಯ ಮಾಡಲು, ಅಧಿಕ ಇಳುವರಿ ಪಡೆಯಲು ಸಹಕಾರಿ
ಮಣ್ಣು ಪರೀಕ್ಷೆ ಕ್ರಮ ಹೀಗೆ
ಮಣ್ಣಿನ ಮಾದರಿಗಳ ಸಂಗ್ರಹಣೆ
ಮಣ್ಣು ಮಾದರಿಗಳ ವಿಶ್ಲೇಷಣೆ
ಹುಳಿ, ಚವುಳು, ಕ್ಷಾರ ಮಣ್ಣುಗಳಲ್ಲಿ ಸುಧಾರಣೆ ಮಾಡಲು
ಗೊಬ್ಬರ ಬಳಕೆಯ ಶಿಫಾರಸು ಮತ್ತು ಸಲಹೆಗಾಗಿ
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.