ಮನೆಗೊಂದು ಸ್ಮಾರ್ಟ್‌ ಟಚ್‌


Team Udayavani, Jan 31, 2020, 5:41 AM IST

youth-31

ವೇಗವಾಗಿ ಓಡುತ್ತಿರುವ ತಂತ್ರಜ್ಞಾನವನ್ನು ಬಳಸದಿದ್ದಲ್ಲಿ ಮತ್ತಷ್ಟು ಹಿಂದುಳಿದು ಬಿಡುತ್ತಾನೆ. ಹಾಗಾಗಿ ಡಿಜಿಟಲೀಕರಣಕ್ಕೆ ಜಗತ್ತು ತೆರೆದುಕೊಂಡಂತೆ ಅದರೊಂದಿಗೆ ಪೈಪೋಟಿಗಿಳಿದು ಆವಶ್ಯಕತೆಗಳನ್ನು ತನ್ನದಾಗಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಮನುಷ್ಯ ಎಂಬ ಜೀವಿಗಿದೆ.

ಜಗತ್ತು ಆಧುನಿಕತೆಗೆ ತೆರೆದುಕೊಂಡಂತೆ ಮತ್ತು ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದಂತೆ ಇಡೀ ವಿಶ್ವವೇ ಸ್ಮಾರ್ಟ್‌ ಆಗುವತ್ತ ದಾಪುಗಾಲಿಡುತ್ತದೆ. ಮಾನವನ ದಿನನಿತ್ಯದ ಆವಶ್ಯದ ಸರಕುಗಳೂ ಸ್ಮಾರ್ಟ್‌ ಟಚಪ್‌ ಪಡೆದುಕೊಂಡು ಮನೆ ಸೇರಿವೆ. ಆವಶ್ಯಕತೆಗಳ ಬೇಡಿಕೆ ಹೆಚ್ಚಿದಂತೆಲ್ಲ ತಂತ್ರಜ್ಞಾನ ಲೋಕದಿಂದ ಪೂರೈಕೆಯೂ ಹೆಚ್ಚು ಒಂದು ರೀತಿಯಲ್ಲಿ ಮಾನವನಿಗೆ ಪೂರಕವಾದುದನ್ನೇ ಸೃಷ್ಟಿಸಿಕೊಟ್ಟರೆ, ಇನ್ನೊಂದೆಡೆ ಮನುಷ್ಯನನ್ನು ವಿಲಾಸಿಯನ್ನಾಗಿಸಿದೆ. ಜತೆಗೆ ಆಲಸಿಯನ್ನಾಗಿಯೂ ಮಾಡಿದೆ.

ಕೆಲಸ ಕಡಿಮೆ ಮಾಡುವ ಸ್ಮಾರ್ಟ್‌ಲೋಕ
ಸ್ಮಾರ್ಟ್‌ ಲೋಕದಲ್ಲಿ ಒಂದಾ ಎರಡಾ? ಸಾಲು ಸಾಲು ಸರಕುಗಳು ಸ್ಮಾರ್ಟ್‌ನೆಸ್‌ನ ಕಳೆ ಬೀರಿ ಮನೆಯೊಳಗೆ ಹೊಸ ಕಳೆ ಸೃಷ್ಟಿಸುತ್ತಿವೆ. ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಪ್ಲಗ್‌, ಸ್ಮಾರ್ಟ್‌ ಲೈಟ್‌, ಸ್ಮಾರ್ಟ್‌ ಸ್ಪೀಕರ್‌, ಸ್ಮಾರ್ಟ್‌ ಡಿಸ್‌ಪ್ಲೇ… ಹೀಗೆ ಎಲ್ಲವೂ ಸ್ಮಾರ್ಟ್‌ ಆಗಿ ಮನುಷ್ಯನ ಕೆಲಸವನ್ನು ಕಡಿಮೆ ಮಾಡುತ್ತಿವೆ. ಹೆಚ್ಚು ಮಂಜನೆ, ಹೆಚ್ಚು ಆವಶ್ಯಕತೆಗಳು, ಅಧಿಕ ಗುಣಮಟ್ಟ, ದೀರ್ಘ‌ ಬಾಳಿಕೆಯ ಸೌಲಭ್ಯದೊಂದಿಗೆ ಸ್ಮಾರ್ಟ್‌ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ.

ಸಾಂಪ್ರದಾಯಿಕ ಸ್ವಿಚ್‌, ಪ್ಲಗ್‌ಗೆ ಗುಡ್‌ ಪ್ಲಗ್‌
ಹಿಂದಿನ ಕಾಲದಿಂದಲೇ ಸಾಂಪ್ರದಾಯಿಕ ಸ್ವಿಚ್‌, ಪ್ಲಗ್‌ಗಳನ್ನು ಬಳಸಿಕೊಂಡು ಬರುತ್ತಿದ್ದೆವು. ಇದೀಗ ತಂತ್ರಜ್ಞಾನ ಕ್ಷೇತ್ರದ ವೇಗದಿಂದಾಗಿ ಈ ಸಾಂಪ್ರದಾಯಿಕ ಸ್ವಿಚ್‌, ಪ್ಲಗ್‌ಗಳಿಗೂ ಸ್ಮಾರ್ಟ್‌ ಲುಕ್‌ ಬಂದಿದೆ. ಡಿಜಿಟಲೀಕರಣದತ್ತ ವೇಗವಾಗಿ ಓಡುತ್ತಿರುವ ಇಂದಿನ ಯುಗವು ಸ್ವಿಚ್‌, ಪ್ಲಗ್‌ಗಳನ್ನೂ ಸ್ಮಾರ್ಟ್‌ ಆಗಿಸಿದೆ ಎಂದರೆ ನೀವು ನಂಬಲೇಬೇಕು. ಮನೆಯ ಅಗತ್ಯತೆಗಳನ್ನು ಪೂರೈಸಿಕೊಳ್ಳುವುದರೊಂದಿಗೆ ಮನೆಗೆ ಸ್ಮಾರ್ಟ್‌ ಲುಕ್‌ ಕೊಡಲು ಬಯಸುವ ಪ್ರತಿಯೊಬ್ಬರಿಗೂ ಸ್ಮಾರ್ಟ್‌ ಸರಕುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಿಂದ ಮನೆಯ ಅಂದವೂ ಹೆಚ್ಚುತ್ತದೆ. ಕಡಿಮೆ ಬೆಲೆ ಬಾಳುವ ಮತ್ತು ಹೆಚ್ಚು ಬೆಲೆ ಬಾಳುವ ಎರಡೂ ಮಾದರಿಯಲ್ಲಿ ಸ್ಮಾರ್ಟ್‌ ಸರಕುಗಳು ಮಾರುಕಟ್ಟೆಯಲ್ಲಿದ್ದು, ನಿಮ್ಮ ಮನೆ ತುಂಬಲು ಸಿದ್ಧವಾಗಿ ನಿಂತಿವೆ.

ಸ್ಮಾರ್ಟ್‌ ಡಿಸ್‌ಪ್ಲೇ, ಸ್ಪೀಕರ್‌
ಸ್ಮಾರ್ಟ್‌ ಪ್ಲಗ್‌, ಸ್ಮಾರ್ಟ್‌ ಟಿವಿ, ಸ್ಮಾರ್ಟ್‌ ಸ್ವಿಚ್‌, ಸ್ಮಾರ್ಟ್‌ ಲೈಟ್ಸ್‌ ಜತೆಗೆ ಸ್ಮಾರ್ಟ್‌ ಡಿಸ್‌ಪ್ಲೇ ಮತ್ತು ಸ್ಪೀಕರ್‌ ಇದ್ದರೆ ಆಯಿತು. ಒಂದು ಮನೆಗೆ ಬೇಕಾದ ದಿನನಿತ್ಯದ ಅವಶ್ಯ ಸರಕುಗಳಿಷ್ಟು ಅಗತ್ಯವು ಕೂಡಾ. ಇವಿಷ್ಟಿದ್ದರೆ ಆ ಮನೆಯೇ ಸ್ಮಾರ್ಟ್‌ ಲುಕ್‌ ಪಡೆದುಕೊಳ್ಳುತ್ತದೆ. ಡಿಸ್‌ಪ್ಲೇ ಮತ್ತು ಸ್ಪೀಕರ್‌ ಡಿವೈಸ್‌ಗಳೂ ಮನೋರಂಜನೆಯ ಸಾಧನಗಳಾಗಿ ಸ್ಮಾರ್ಟ್‌ ಆಗಿವೆ. ಹಾಡುಗಳ ಪ್ಲೇಗಾಗಿ ಸ್ಪೀಕರ್‌ಗಳು ಗುಣಮಟ್ಟದಲ್ಲಿ ದೊರೆಯುತ್ತವೆ.

ಸ್ಮಾರ್ಟ್‌ ಲೈಟ್ಸ್‌ ಸಾಂಪ್ರದಾಯಿಕ
ಬಲ್ಬ್ಗಳ ಬದಲಿಗೆ ಒಂದು ಕಾಲದಲ್ಲಿ ಎಲ್‌ಇಡಿ ಬಲ್ಬ್ಗಳು ಹವಾ ಎಬ್ಬಿಸಿದ್ದನ್ನು ನೋಡಿರಬಹುದು.
ವಿಶೇಷವೆಂದರೆ, ಬೀದಿದೀಪ ಗಳಾಗಿಯೂ ಈ ಎಲ್‌ಇಡಿ ಬಲ್ಬ್ಗಳೇ ಬಳಕೆಯಾಗುತ್ತಿವೆ. ಆದರೆ ಸ್ಮಾರ್ಟ್‌ ಯುಗಕ್ಕೆ ತೆರೆದು ಕೊಂಡಂತೆಲ್ಲ ಲೈಟ್‌ಗಳಲ್ಲಿಯೂ ಸ್ಮಾರ್ಟ್‌ನೆಸ್‌ ಬಂದಿದೆ ಎಂಬುದೂ ಅಷ್ಟೇ ಸತ್ಯ. ಎಲ್‌ಇಡಿ ಬಲ್ಬ್ ಬದಲಿಗೆ ಹೊಸ ಮಾದರಿಯ ಸ್ಮಾರ್ಟ್‌ಲೈಟ್‌ಗಳ ಬಳಕೆ ಹೆಚಚುತ್ತಿದೆ. ಎಲ್‌ಇಡಿ ಮಾದರಿಯಲ್ಲೇ ವಿದ್ಯುತ್‌ ಉಳಿಸುವ ಉಪಕರಣಗಳಾಗಿ ಈ ಸ್ಮಾರ್ಟ್‌ಲೈಟ್‌ಗಳು ಬಳಕೆಯಾಗುತ್ತಿವೆ.

ಸ್ಮಾರ್ಟ್‌ ಪ್ಲಗ್‌ಗೆ ಬೇಡಿಕೆ
ಮನೆಯ ರೂಮಿನಲ್ಲಿ ವಿದ್ಯುತ್‌ ಉಪಯೋಗಕ್ಕೆ ಸ್ಮಾರ್ಟ್‌ ಪ್ಲಗ್‌ಗಳನ್ನು ಹೊರ ಭಾಗದಿಂದ ಬಳಸಬಹುದು. ಭಿನ್ನ ವಿದ್ಯುತ್‌ ಸಾಮರ್ಥ್ಯದಲ್ಲಿ ವಿವಿಧ ಆವಶ್ಯಕತೆಗಳಿಗೆ ಅನುಗುಣವಾಗಿ ಸ್ಮಾರ್ಟ್‌ಪ್ಲಗ್‌ಗಳು ಮಾರುಕಟ್ಟೆಯಲ್ಲಿವೆ. 1200 ರೂ.ಗಳಿಂದ ಆರಂಭವಾಗುವ ಸ್ಮಾರ್ಟ್‌ ಪ್ಲಗ್‌ಗಳ ಖರೀದಿಗೆ ಮಂಗಳೂರಿನ ಮಾರುಕಟ್ಟೆಯಲ್ಲಿಯೂ ಒಲವು ಹೆಚ್ಚುತ್ತಿದೆ. ರಿಮೋಟ್‌ ಕಂಟ್ರೋಲ್‌ ಫೀಚರ್‌ ಹೊಂದರುವ ಸ್ವಿಚ್‌ಗಳು ನಿಮ್ಮ ಅಪ್ಲಯನ್ಸಸ್‌ಗಳನ್ನು ಫೋನ್‌ ಮೂಲಕ ನಿಯಂತ್ರಿಸಬಹುದಾದ ಸಾಮರ್ಥ್ಯವನ್ನೂ ಹೊಂದಿದ್ದು, ಮಾರುಕಟ್ಟೆಯಲ್ಲಿ ಈಗೀಗ ಇದಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ವಯರ್‌ಲೆಸ್‌ ಪ್ಲಗ್‌ಗಳಾಗಿದ್ದು, ಮೊಬೈಲ್‌ ಚಾರ್ಜ್‌ ಮಾಡುವುದಕ್ಕೆ ಇದೊಂದು ಉತ್ತಮ ಆಯ್ಕೆಯಾಗಿ ಪರಿಣಮಿಸುತ್ತಿದೆ.

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Devadurga

Karkala: ಅಕ್ರಮ ಮದ್ಯ ದಾಸ್ತಾನು; ಆರೋಪಿ ಸೆರೆ

Brahmavar

Malpe: ಅಸ್ವಾಭಾವಿಕ ಸಾವು; ಪ್ರಕರಣ ದಾಖಲು

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.