ಅಡಿಕೆ ಧಾರಣೆ ಅಲ್ಪ ಏರಿಕೆ
Team Udayavani, Aug 11, 2019, 5:00 AM IST
ಕಳೆದ ವಾರ ಹೊಸ ಅಡಿಕೆ 5 ರೂ. ಏರಿಸಿಕೊಂಡು 245 ರೂ.ಗೆ ಹಾಗೂ ಹಳೆ ಅಡಿಕೆ 2 ರೂ.ಏರಿಕೆಗೊಂಡು 282 ರೂ.ಗೆ ಖರೀದಿಯಾಗಿತ್ತು. ಈ ವಾರ ಹಳೆ ಅಡಿಕೆ 3 ರೂ.ಗೆ ಏರಿಕೆಗೊಂಡು 285 ರೂ. ಗೆ ಮಾರಾಟವಾಗಿದೆ.
ಡಬಲ್ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.
ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ.
ರಬ್ಬರ್ ಸ್ಥಿರ
ಹಿಂದಿನ ವಾರ 141.5 ರೂ.ಗೆ ಖರೀದಿಯಾಗಿದ್ದ ರಬ್ಬರ್ ಕಳೆದ ವಾರ 10 ರೂ. ಏರಿಕೆಗೊಂಡು 151 ರೂ.ಗೆ ಖರೀದಿ ನಡೆಸಿತ್ತು. ಅನಂತರ 146.5 ರೂ.ಗೆ ಖರೀದಿಯಾಗಿತ್ತು. ಕಳೆದ ವಾರ 145 ರೂ.ಗೆ ಇಳಿಕೆ ಕಂಡಿತ್ತು. ಈ ವಾರದ ಅದೇ ಧಾರಣೆ ಮುಂದುವರಿದಿದೆ. ಆರ್ಎಸ್ಎಸ್4 ದರ್ಜೆ 145.5 ರೂ., ಆರ್ಎಸ್ಎಸ್5 ದರ್ಜೆ 139 ರೂ., ಲಾಟ್ 127.5 ರೂ.ನಲ್ಲಿ ಖರೀದಿ ನಡೆಸಿದೆ. ಸ್ಕಾಪ್ 1 ದರ್ಜೆ 84 ರೂ. ಹಾಗೂ ಸ್ಕಾಪ್ 2 ದರ್ಜೆ 76 ರೂ.ನಲ್ಲಿ ಖರೀದಿ ನಡೆಸಿವೆ.
ತೆಂಗು ಧಾರಣೆ ಸಾಧಾರಣ
ಈ ವಾರ ಹೊಸ ತೆಂಗಿನ ಕಾಯಿ 24-25 ರೂ.ಗೆ ಖರೀದಿಯಾದರೆ ಹಳೆಯ ತೆಂಗಿನಕಾಯಿ 25-26 ರೂ. ತನಕ ಖರೀದಿಯಾಗಿದೆ.ಕೊಕ್ಕೋ ಯಥಾಸ್ಥಿತಿ ಕಳೆದ ಕೆಲ ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರವೂ 45-50 ರೂ. ಗೆ ಖರೀದಿಯಾಗಿದೆ.
- ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.